ಚೀನಾದ ಗೊಡವೆ ಸಾಕು; ವಿರಳ ಭೂಖನಿಜಗಳಿಗಾಗಿ ಆಸ್ಟ್ರೇಲಿಯಾ ಜೊತೆ ಭಾರತ ಮಾತುಕತೆ

India in talks with Australia for rare earth minerals: ರೇರ್ ಅರ್ಥ್ ಮ್ಯಾಗ್ನೆಟ್, ರೇರ್ ಅರ್ಥ್ ಮಿನರಲ್​ಗಳಿಗಾಗಿ ಆಸ್ಟ್ರೇಲಿಯಾ ಜೊತೆ ಭಾರತ ಮಾತುಕತೆ ನಡೆಸುತ್ತಿದೆ. ಅಲ್ಲಿರುವ ಕೆಲ ರೇರ್ ಅರ್ಥ್ ಬ್ಲಾಕ್​​ಗಳನ್ನು ಬಳಸುವ ಸಂಬಂಧ ಎರಡೂ ದೇಶಗಳ ಮಧ್ಯೆ ಮಾತುಕತೆ ಆಗುತ್ತಿದೆ ಎನ್ನಲಾಗುತ್ತಿದೆ. ಈ ವಿಶೇಷ ಖನಿಜಗಳು ಹೇರಳವಾಗಿ ಲಭ್ಯವಿವೆಯಾದರೂ ಅವನ್ನು ಹೊರತೆಗೆದು ಸಂಸ್ಕರಿಸುವ ಕಾರ್ಯ ಬಹಳ ಕಠಿಣ ಎನಿಸಿದೆ.

ಚೀನಾದ ಗೊಡವೆ ಸಾಕು; ವಿರಳ ಭೂಖನಿಜಗಳಿಗಾಗಿ ಆಸ್ಟ್ರೇಲಿಯಾ ಜೊತೆ ಭಾರತ ಮಾತುಕತೆ
ವಿರಳ ಭೂ ಖನಿಜ

Updated on: Jul 08, 2025 | 7:09 PM

ನವದೆಹಲಿ, ಜುಲೈ 8: ಆಸ್ಟ್ರೇಲಿಯಾದಿಂದ ವಿರಳ ಭೂ ಖನಿಜಗಳನ್ನು (Rare Earth Materials) ಪಡೆಯಲು ಭಾರತ ಪ್ರಯತ್ನಿಸುತ್ತಿದ್ದು, ಈ ಸಂಬಂಧ ಆ ದೇಶದೊಂದಿಗೆ ಮಾತುಕತೆ ನಡೆಸುತ್ತಿದೆ. ಈ ವಿಚಾರವನ್ನು ಆಸ್ಟ್ರೇಲಿಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ರೇರ್ ಅರ್ಥ್ ಬಗ್ಗೆ ಅವು (ಭಾರತ ಮತ್ತು ಆಸ್ಟ್ರೇಲಿಯಾ) ಮಾತುಕತೆ ನಡೆಸುತ್ತಿವೆ. ಬ್ಲಾಕ್​​ಗಳು ಲಭ್ಯ ಇವೆ. ಭಾರತವು ಮುಂಚಿತವಾಗಿ ಬ್ಲಾಕ್ ಪಡೆದು ಕೆಲ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶ ಇದೆ’ ಎಂದು ನ್ಯೂ ಸೌತ್ ವೇಲ್ಸ್ ಸರ್ಕಾರದ ಟ್ರೇಡ್ ಮತ್ತು ಇನ್ವೆಸ್ಟ್​​ಮೆಂಟ್ ಕಮಿಷನರ್ ಮಾಲಿನಿ ದತ್ (Malini Dutt) ಹೇಳಿದ್ದಾರೆ.

ಆಟೊಮೊಬೈಲ್, ರಿನಿವಬಲ್ ಎನರ್ಜಿ, ಎಲೆಕ್ಟ್ರಾನಿಕ್ಸ್ ಇತ್ಯಾದಿ ಪ್ರಮುಖ ಕ್ಷೇತ್ರಗಳಿಗೆ ಈ ವಿರಳ ಭೂ ಖನಿಜಗಳು ಅಗತ್ಯ ಇವೆ. ವಿಶ್ವದ ಶೇ. 80ರಷ್ಟು ರೇರ್ ಅರ್ಥ್ ವಸ್ತುಗಳು ಚೀನಾದಿಂದಲೇ ರಫ್ತಾಗುತ್ತವೆ. ಕಳೆದ ಒಂದು ವರ್ಷದಿಂದ ಚೀನಾ ಈ ವಿರಳ ಭೂ ಖನಿಜಗಳ ಮೇಲೆ ನಿರ್ಬಂಧ ಇಟ್ಟಿದೆ. ಕೆಲ ತಿಂಗಳಿಂದ ಈ ನಿರ್ಬಂಧ ಹೆಚ್ಚು ಬಿಗಿಗೊಂಡಿದೆ. ಭಾರತದ ವಿವಿಧ ಉದ್ಯಮಗಳು, ಅದರಲ್ಲೂ ವಾಹನ ಉದ್ಯಮ ಈ ಖನಿಜಗಳಿಲ್ಲದೇ ಉತ್ಪಾದನೆ ನಿಲ್ಲಿಸುವ ಹಂತಕ್ಕೆ ಬಂದಿವೆ.

ಇದನ್ನೂ ಓದಿ: ತಡಬಡಾಯಿಸುತ್ತಿರುವ ಬಾಂಗ್ಲಾದೇಶ; ಟ್ರಂಪ್ ಟ್ಯಾರಿಫ್​ನಿಂದ ಬಾಂಗ್ಲಾಗೆ ಭಾರೀ ಹೊಡೆತ; ಭಾರತಕ್ಕೆ ಎಷ್ಟು ಲಾಭ?

ಇದನ್ನೂ ಓದಿ
ಟ್ರಂಪ್ ಟ್ಯಾರಿಫ್​​ನಿಂದ ಬಾಂಗ್ಲಾ ತತ್ತರ; ಭಾರತಕ್ಕೆ ಲಾಭ
ಅದಾನಿ ಪವರ್ ಸಾಮರ್ಥ್ಯ 18,150 ಮೆ.ವ್ಯಾ.ಗೆ ಏರಿಕೆ
ಟ್ರಂಪ್ ಟ್ಯಾರಿಫ್​​ನಿಂದ ಸದ್ಯ ಭಾರತ ಬಚಾವ್
ವಿಶ್ವಬ್ಯಾಂಕ್ ಗಿನಿ ಇಂಡೆಕ್ಸ್​​ನಲ್ಲಿ ಭಾರತಕ್ಕೆ 4ನೇ ಸ್ಥಾನ

ಈ ವಿರಳ ಭೂ ಖನಿಜಗಳ ವಿಶೇಷತೆ ಏನು?

ಲಾಂತೇನಂ, ಸೆರಿಯಂ, ನಿಯೋಡಿಯಂ, ಪ್ರೋಮೆತಿಯಮ್, ಲೂಟೆಟಿಯಂ, ಗ್ಯಾಡೋಲಿನಿಯಮ್ ಇತ್ಯಾದಿ 17 ವಸ್ತುಗಳನ್ನು ರೇರ್ ಅರ್ಥ್ ಎಲಿಮೆಂಟ್ಸ್ ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ವಿಶೇಷವಾದ ಮ್ಯಾಗ್ನೆಟಿಕ್, ಲೂಮಿನಿಸೆಂಟ್ ಮತ್ತು ಎಲೆಕ್ಟ್ರೋಕೆಮಿಕಲ್ ಗುಣಗಳಿರುತ್ತವೆ.

ಬಹಳ ಸಣ್ಣ ಗಾತ್ರದ, ಆದರೆ ಶಕ್ತಿಶಾಲಿ ಮ್ಯಾಗ್ನೆಟ್​ಗಳನ್ನು ತಯಾರಿಸಲು ಇವು ಅತ್ಯವಶ್ಯಕವಾಗಿವೆ. ಪ್ರಬಲ ಲೇಸರ್, ಕೆಪಾಸಿಟರ್ ಇತ್ಯಾದಿಗಳನ್ನು ತಯಾರಿಸಲು ಈ ರೇರ್ ಅರ್ಥ್ ಮೆಟೀರಿಯಲ್​ಗಳು ಬೇಕು.

ಇದನ್ನೂ ಓದಿ: ಆದಾಯ ಸಮಾನತೆಯಲ್ಲಿ ಭಾರತಕ್ಕೆ 4ನೇ ಸ್ಥಾನ; ವಿಶ್ವಬ್ಯಾಂಕ್ ಗಿನಿ ಇಂಡೆಕ್ಸ್​​ನಲ್ಲಿ ಅಮೆರಿಕ, ಚೀನಾಗಿಂತಲೂ ಭಾರತ ಮುಂದು

ಚೀನಾದಲ್ಲಿ ಮಾತ್ರವೇ ಈ ವಿರಳ ಖನಿಜಗಳು ಲಭ್ಯ ಇರುವುದು?

ವಿರಳ ಭೂ ಖನಿಜ ಹೆಸರಿಗೆ ಮಾತ್ರ ವಿರಳ. ಆದರೆ, ಭೂಮಿಯ ವಿವಿಧೆಡೆ ಇವುಗಳು ಲಭ್ಯ ಇವೆ. ಚಿನ್ನ, ಕಲ್ಲಿದ್ದಲು ಇತ್ಯಾದಿ ಗಣಿಗಳಲ್ಲಿ ಇರುವಂತೆ ಒಂದೇ ಕಡೆ ಇರದೇ ಇವು ಚದುರಿ ಹೋಗಿರುತ್ತವೆ. ಹೀಗಾಗಿ, ಇದನ್ನು ಹೆಕ್ಕಿ ತೆಗೆಯುವುದು ಬಹಳ ಕಷ್ಟ. ಕಷ್ಟ ಮಾತ್ರವಲ್ಲ, ಆ ಪ್ರಕ್ರಿಯೆಯಿಂದ ಸಾಕಷ್ಟು ಪರಿಸರ ಮಾಲಿನ್ಯ ಆಗುತ್ತದೆ.

ಚೀನಾ ಬಹಳ ವರ್ಷಗಳಿಂದ ಈ ಖನಿಜಗಳನ್ನು ಹೊರತೆಗೆಯುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಒಳ್ಳೆಯ ತಂತ್ರಜ್ಞಾನ ಹೊಂದಿದೆ. ದೊಡ್ಡ ಪ್ರಮಾಣದಲ್ಲಿ ಖನಿಜಗಳನ್ನು ಹೊರತೆಗೆಯುವ ಸಾಮರ್ಥ್ಯ ಇದೆ. ಹೀಗಾಗಿ, ವಿಶ್ವಕ್ಕೆ ಬೇಕಾದ ಶೇ. 80ಕ್ಕೂ ಅಧಿಕ ವಿರಳ ಭೂ ಖನಿಜಗಳು ಚೀನಾದಿಂದಲೇ ಸರಬರಾಜಾಗುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ