ಭಾರತ ಈಗ ಗ್ಲೋಬಲ್ ಬ್ಯಾಕ್ ಆಫೀಸ್ ಮಾತ್ರವೇ ಅಲ್ಲ, ವಿಶ್ವದರ್ಜೆ ಪ್ರಾಡಕ್ಟ್ ನೀಡುವ ದೇಶವಾಗಿದೆ: ಪ್​ರಸಾದ್ ಷಣ್ಮುಗಂ

Indian IT Product Revolution: ಒಂದು ಕಾಲದಲ್ಲಿ ತಾಂತ್ರಿಕ ಬೆಂಬಲಕ್ಕೆ ಸೀಮಿತವಾಗಿದ್ದ ಭಾರತೀಯ ಐಟಿ ಕ್ಷೇತ್ರ, ಈಗ ವಿಶ್ವದರ್ಜೆಯ ಸಾಫ್ಟ್‌ವೇರ್ ಉತ್ಪನ್ನಗಳನ್ನು ನಿರ್ಮಿಸುವತ್ತ ಸಾಗಿದೆ. KGiSL ನ 'ಡಾಲ್ಫಿನ್' ವೇದಿಕೆ ಷೇರು ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಿದೆ. ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡುವ ತಂತ್ರಜ್ಞಾನ ಆವಿಷ್ಕಾರಗಳು ಮುಖ್ಯ. ಮಧ್ಯಮ ಗಾತ್ರದ ಟೆಕ್ ಕಂಪನಿಗಳತ್ತ ಜಾಗತಿಕ ಹೂಡಿಕೆದಾರರ ಒಲವು ಹೆಚ್ಚಿದೆ, ಇದು ಭಾರತದ 'ಉತ್ಪನ್ನ ಆಧಾರಿತ' ಐಟಿ ಬೆಳವಣಿಗೆಗೆ ಪೂರಕವಾಗಿದೆ.

ಭಾರತ ಈಗ ಗ್ಲೋಬಲ್ ಬ್ಯಾಕ್ ಆಫೀಸ್ ಮಾತ್ರವೇ ಅಲ್ಲ, ವಿಶ್ವದರ್ಜೆ ಪ್ರಾಡಕ್ಟ್ ನೀಡುವ ದೇಶವಾಗಿದೆ: ಪ್​ರಸಾದ್ ಷಣ್ಮುಗಂ
ಭಾರತದ ನಕ್ಷೆ
Image Credit source: Shutterstock

Updated on: Jun 02, 2026 | 5:59 PM

ನವದೆಹಲಿ, ಜೂನ್ 2: ಒಂದು ಕಾಲದಲ್ಲಿ ಭಾರತವನ್ನು ಕೇವಲ ಜಾಗತಿಕ ಕಂಪನಿಗಳಿಗೆ ಕಡಿಮೆ ವೆಚ್ಚದಲ್ಲಿ ತಾಂತ್ರಿಕ ಬೆಂಬಲ ನೀಡುವ (Support Centre) ದೇಶ ಎಂದು ನೋಡಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಭಾರತೀಯ ಕಂಪನಿಗಳು ಜಾಗತಿಕ ಮಟ್ಟದ ವಿಶ್ವದರ್ಜೆಯ ಸಾಫ್ಟ್‌ವೇರ್ ಉತ್ಪನ್ನಗಳನ್ನು (World-Class Products) ಸ್ವತಃ ಭಾರತದಲ್ಲೇ ನಿರ್ಮಿಸುತ್ತಿವೆ ಎಂದು ಕೆಜಿಐಎಸ್ಎಲ್ ಸಿಇಒ ಪ್ರಸಾದ್ ಷಣ್ಮುಖಂ (Prassadh Shanmugam) ತಿಳಿಸಿದ್ದಾರೆ. ಬಿಸಿನೆಸ್ ಟುಡೇ (Business Today) ಪತ್ರಿಕೆಯ ‘ಹಿಡನ್ ಜೆಮ್ಸ್ ಆಫ್ ಇಂಡಿಯನ್ ಬಿಸಿನೆಸ್’ (Hidden Gems of Indian Business) ವಿಶೇಷ ಸಂವಾದದಲ್ಲಿ ಭಾಗವಹಿಸಿ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಭಾರತೀಯ ಐಟಿ ರಂಗವು ಕೇವಲ ವಿದೇಶಿ ಕಂಪನಿಗಳ ಆದೇಶದಂತೆ ಕೆಲಸ ಮಾಡುವ ಮತ್ತು ಗ್ರಾಹಕ ಸೇವೆ (Customer Support) ನೀಡುವ ಕೇಂದ್ರವಾಗಿತ್ತು. ಆದರೆ ಈಗ ಭಾರತೀಯ ಉದ್ಯಮಗಳು ಕೇವಲ ಸೇವೆ ನೀಡುವುದಕ್ಕೆ ಸೀಮಿತವಾಗದೆ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಬೌದ್ಧಿಕ ಆಸ್ತಿ ಮತ್ತು ಸಾಫ್ಟ್‌ವೇರ್ ಉತ್ಪನ್ನಗಳನ್ನು ಸೃಷ್ಟಿಸುತ್ತಿವೆ ಎಂದು ಷಣ್ಮುಗಂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪ್ಲಂಬರ್, ಎಲೆಕ್ಟ್ರಿಶಿಯನ್​ಗೂ ತಪ್ಪೋದಿಲ್ಲವಂತೆ ಎಐ ಕಂಟಕ; ಕೃತಕ ಬುದ್ಧಿಮತ್ತೆ ಪ್ಲಂಬಿಂಗ್ ಕೆಲಸ ಹೇಗೆ ಮಾಡುತ್ತೆ?

ಷೇರು ಮಾರುಕಟ್ಟೆಯಲ್ಲಿ ‘ಡಾಲ್ಫಿನ್’ ಸಂಚಲನ

KGiSL ಕಂಪನಿಯು ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ (BFSI) ವಲಯದ ಮೇಲೆ ಹೆಚ್ಚು ಗಮನ ಹರಿಸಿದೆ. ಕಂಪನಿಯ ಪ್ರಮುಖ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಆದ ‘ಡಾಲ್ಫಿನ್’ (Dolphin), ಭಾರತದ ಇಡೀ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ದೊಡ್ಡ ಕ್ರಾಂತಿ ಮಾಡಿದೆ. ಪ್ರಸ್ತುತ ಭಾರತದ ಮುಂಚೂಣಿ ಷೇರು ಮಾರುಕಟ್ಟೆಗಳಾದ ಎನ್‌ಎಸ್‌ಇ (NSE) ಮತ್ತು ಬಿಎಸ್‌ಇ (BSE) ನಲ್ಲಿ ನಡೆಯುವ ಒಟ್ಟು ವ್ಯವಹಾರದ ಬರೋಬ್ಬರಿ ಶೇ. 35 ರಷ್ಟು ಪ್ರಮಾಣವನ್ನು (ವಲ್ಯೂಮ್) ಅನ್ನು ಈ ಒಂದೇ ಪ್ಲಾಟ್‌ಫಾರ್ಮ್ ನಿರ್ವಹಿಸುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.

ಕಂಪನಿಗಳ ತಾಂತ್ರಿಕ ಆವಿಷ್ಕಾರಗಳು ಯಾವಾಗಲೂ ಗ್ರಾಹಕರ ಅಗತ್ಯತೆಗಳಿಗೆ ತಕ್ಕಂತೆ ಇರಬೇಕು. ಕೇವಲ ತಂತ್ರಜ್ಞಾನದ ಪ್ರದರ್ಶನಕ್ಕಾಗಿ ಆವಿಷ್ಕಾರ ಮಾಡುವುದಕ್ಕಿಂತ, ಅದು ಗ್ರಾಹಕರ ಬಿಜಿನೆಸ್ ಸಮಸ್ಯೆಗಳನ್ನು ಪರಿಹರಿಸುವಂತಿರಬೇಕು ಎಂದು ಪ್ರಸಾದ್ ಒತ್ತು ನೀಡಿದ್ದಾರೆ.

ಇದನ್ನೂ ಓದಿ: ಇದು ರಿಯಲ್ ಸ್ಟೋರಿ..! ಆಟೋ, ಟೆಂಪೋ ಓಡಿಸುತ್ತಿದ್ದ ವ್ಯಕ್ತಿ ಏರ್ಲೈನ್ಸ್ ಕಂಪನಿಯ ಮಾಲೀಕನಾದ ಕಥೆ

ಮಧ್ಯಮ ಕ್ರಮಾಂಕದ ಕಂಪನಿಗಳತ್ತ ಹೂಡಿಕೆದಾರರ ಒಲವು

ಇದೇ ಸಂವಾದದಲ್ಲಿ ಭಾಗವಹಿಸಿದ್ದ ಇವೈ ಇಂಡಿಯಾ (EY India) ಸಂಸ್ಥೆಯ ಕಾರ್ತಿಕ್ ಹೆಚ್ ಅವರು ಮಾತನಾಡುತ್ತಾ, ಜಾಗತಿಕ ಹೂಡಿಕೆದಾರರು ಈಗ ಮಧ್ಯಮ ಗಾತ್ರದ (Mid-market) ತಂತ್ರಜ್ಞಾನ ಕಂಪನಿಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಂತಹ ಕಂಪನಿಗಳಲ್ಲಿ ಹೂಡಿಕೆಯ ರಿಸ್ಕ್ ಕಡಿಮೆ ಇರುತ್ತದೆ ಮತ್ತು ಇವು ವೇಗವಾಗಿ ದೊಡ್ಡ ಮಟ್ಟಕ್ಕೆ ಬೆಳೆಯುವ (Scalable) ಸಾಮರ್ಥ್ಯ ಹೊಂದಿರುತ್ತವೆ ಎಂದು ಹೇಳಿದ್ದಾರೆ.

ಒಟ್ಟಾರೆ, ಭಾರತೀಯ ಐಟಿ ರಂಗವು ‘ಸರ್ವಿಸ್’ ಮಾತ್ರವೇ ಇದ್ದ ಮಾಡಲ್​ನಿಂದ ‘ಉತ್ಪನ್ನ’ (Product-based) ಮಾಡಲ್ ಕಡೆಗೆ ಯಶಸ್ವಿಯಾಗಿ ಹೆಜ್ಜೆ ಇಡುತ್ತಿದೆ ಎಂಬುದಕ್ಕೆ KGiSL ನಂತಹ ಕಂಪನಿಗಳ ಬೆಳವಣಿಗೆಯೇ ಸಾಕ್ಷಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:22 pm, Tue, 2 June 26

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us