ನವದೆಹಲಿ, ಜುಲೈ 8: ಅತಿಹೆಚ್ಚು ಬಿಲಿಯನೇರ್ಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತಕ್ಕಿಂತ ಜಿಡಿಪಿಯಲ್ಲಿ ಮೇಲಿರುವ ಜರ್ಮನಿ ಮತ್ತು ಜಪಾನ್ ದೇಶದಲ್ಲಿ ಕುಬೇರರ ಸಂಖ್ಯೆ ಕಡಿಮೆ ಇದೆ. ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎನಿಸಿದ ಜಪಾನ್ ದೇಶವು ಬಿಲಿಯನೇರ್ಗಳ ಸಂಖ್ಯೆಯಲ್ಲಿ 16ನೇ ಸ್ಥಾನದಲ್ಲಿದೆ. ನಿರೀಕ್ಷೆಯಲ್ಲಿ ಅಮೆರಿಕದಲ್ಲಿ ಅತಿಹೆಚ್ಚು ಬಿಲಿಯನೇರ್ಗಳಿದ್ದಾರೆ. ಅಮೆರಿಕದಲ್ಲಿನ ಅರ್ಧದಷ್ಟು ಬಿಲಿಯನೇರ್ಗಳು ಚೀನಾದಲ್ಲಿದ್ದಾರೆ. ಫೋರ್ಬ್ಸ್ ಪಟ್ಟಿ ಪ್ರಕಾರ ಭಾರತದಲ್ಲಿ 200 ಮಂದಿ ಬಿಲಿಯನೇರ್ಸ್ ಇದ್ದಾರೆ. ಅಮೆರಿಕ ಮತ್ತು ಚೀನಾದಲ್ಲಿ ಕ್ರಮವಾಗಿ 813 ಮತ್ತು 406 ಬಿಲಿಯನೇರ್ಸ್ ಇದ್ದಾರೆ.
ನೂರಕ್ಕಿಂತ ಹೆಚ್ಚು ಬಿಲಿಯನೇರ್ಸ್ ಹೊಂದಿರುವ ದೇಶಗಳ ಸಂಖ್ಯೆ ಐದು ಮಾತ್ರ. ಈ ಐವರ ಪಟ್ಟಿಯಲ್ಲಿ ಜರ್ಮನಿ ಮತ್ತು ರಷ್ಯಾ ಸೇರಿವೆ. ಅಭಿವೃದ್ಧಿಶೀಲ ದೇಶಗಳ ಪೈಕಿ ಅತಿ ಹೆಚ್ಚು ಕುಬೇರರು ಇರುವುದು ಚೀನಾ ಮತ್ತು ಭಾರತದಲ್ಲೇ. ಬ್ರೆಜಿಲ್ ದೇಶದಲ್ಲಿ 69 ಬಿಲಿಯನೇರ್ಸ್ ಇದ್ದು ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ನ ಎಕ್ಸ್ ಅಕೌಂಟ್ನಲ್ಲಿ ಟಾಪ್ 40 ಪಟ್ಟಿ ಪ್ರಕಟವಾಗಿದೆ.
ಇದನ್ನೂ ಓದಿ: ಲೈಫ್ ಇನ್ಷೂರೆನ್ಸ್ ಪಾಲಿಸಿ ಸರೆಂಡರ್ ಮಾಡಬೇಕೆನ್ನುವವರ ಗಮನಕ್ಕೆ; ಎಲಿಪ್ ಸ್ಕೀಮ್ ಬಗ್ಗೆ ತಿಳಿಯಿರಿ
Countries with the most billionaires:
1. 🇺🇸 United States: 813
2. 🇨🇳 China: 406
3. 🇮🇳 India: 200
4. 🇩🇪 Germany: 132
5. 🇷🇺 Russia: 120
6. 🇮🇹 Italy: 73
7. 🇧🇷 Brazil: 69
8. 🇭🇰 Hong Kong SAR: 67
9. 🇨🇦 Canada: 67
10. 🇬🇧 United Kingdom: 55
11. 🇫🇷 France: 53
12. 🇹🇼 Taiwan: 51
13. 🇦🇺…— World of Statistics (@stats_feed) July 6, 2024
ಇದನ್ನೂ ಓದಿ: ಜೂನ್ನಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಖಾತೆ ರಚನೆ; ಷೇರುಪೇಟೆಯತ್ತ ಮುಗಿಬಿದ್ದ ಹೊಸಬರು
ದಕ್ಷಿಣ ಏಷ್ಯನ್ ಭಾಗದಲ್ಲಿ ಭಾರತ ಬಿಟ್ಟರೆ ಹೆಚ್ಚು ಬಿಲಿಯನೇರ್ಗಳಿರುವುದು ಪಾಕಿಸ್ತಾನದಲ್ಲೇ. ಭಾರತದಲ್ಲಿ 200 ಇದ್ದರೆ ಪಾಕಿಸ್ತಾನದಲ್ಲಿ ಇರುವುದು ನಾಲ್ವರೇ. ಶಾಹಿದ್ ಖಾನ್ 11.6 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಪಾಕಿಸ್ತಾನದ ಅತಿ ಶ್ರೀಮಂತ ಎನಿಸಿದ್ದಾರೆ. ಮಿಯಾನ್ ಮುಹಮ್ಮದ್ ಮನ್ಶಾ, ಅನ್ವರ್ ಪರ್ವೆಜ್ ಮತ್ತು ನಾಸಿರ್ ಶೋನ್ ಅವರು ಇತರ ಮೂವರು ಬಿಲಿಯನೇರ್ಸ್ ಆಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ