ಬಜೆಟ್​ಗೆ ಮುನ್ನ ರೈಲ್ವೆ ಕ್ಷೇತ್ರದ ಷೇರುಗಳ ಬೆಲೆ ಭರ್ಜರಿ ಏರಿಕೆ; ಕಾರಣ ಇಲ್ಲಿದೆ…

Railway stocks growth: ಕೇಂದ್ರ ಬಜೆಟ್ ಜುಲೈ 23ರಂದು ಮಂಡನೆ ಆಗುತ್ತಿದೆ. ಇದರ ಮೇಲೆ ಹಲವು ಅಪೇಕ್ಷೆ ಮತ್ತು ನಿರೀಕ್ಷೆಗಳಿವೆ. ಈ ಮಧ್ಯೆ ರೈಲ್ವೆ ವಲಯದ ವಿವಿಧ ಸಂಸ್ಥೆಗಳು ಷೇರು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಆರ್​ವಿಎನ್​ಎಲ್, ರೈಲ್​ಟೆಲ್, ಐಆರ್​ಎಫ್​ಸಿ ಮೊದಲಾದ ಷೇರುಗಳ ಬೆಲೆ ಗಣನೀಯವಾಗಿ ಹೆಚ್ಚಿವೆ. ಕಳೆದ ವರ್ಷವೂ ಇವು ಮಲ್ಟಿಬ್ಯಾಗರ್ ಸ್ಟಾಕ್ ಎನಿಸಿದ್ದವು.

ಬಜೆಟ್​ಗೆ ಮುನ್ನ ರೈಲ್ವೆ ಕ್ಷೇತ್ರದ ಷೇರುಗಳ ಬೆಲೆ ಭರ್ಜರಿ ಏರಿಕೆ; ಕಾರಣ ಇಲ್ಲಿದೆ...
ರೈಲ್ವೆ
Follow us
|

Updated on:Jul 08, 2024 | 4:00 PM

ನವದೆಹಲಿ, ಜುಲೈ 8: ರೈಲ್ವೆ ಕಂಪನಿಗಳ ಷೇರುಬೆಲೆ ಗಣನೀಯವಾಗಿ ಹೆಚ್ಚುತ್ತಿದೆ. ರೈಲ್ ವಿಕಾಸ್ ನಿಗಮ್ (ಆರ್​ವಿಎನ್​ಎಲ್), ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಶನ್ (ಐಆರ್​ಎಫ್​ಸಿ) ಷೇರುಗಳು ಸೋಮವಾರ ಹೊಸ ಎತ್ತರಕ್ಕೆ ಏರಿವೆ. ಬೇರೆ ರೈಲ್ವೆ ಸ್ಟಾಕ್​​ಗಳೂ ಬೇಡಿಕೆ ಪಡೆದಿವೆ. ಆರ್​ವಿಎನ್​ಎಲ್​ನ ಷೇರು ಬೆಲೆ ಶೇ. 15 ರಷ್ಟು ಹೆಚ್ಚಾಗಿ 563 ರೂ ತಲುಪಿದೆ. ಐಆರ್​ಎಫ್​ಸಿ ಷೇರುಬೆಲೆ ಶೇ. 9ರಷ್ಟು ಹೆಚ್ಚಾಗಿ 202 ರೂ ತಲುಪಿದೆ. ಟೆಕ್ಸ್​ಮಾಕೋ ರೈಲ್ ಅಂಡ್ ಎಂಜಿನಿಯರಿಂಗ್ ಷೇರು ಬೆಲೆ ಕೂಡ ಗರಿಷ್ಠ ಎತ್ತರಕ್ಕೆ ಹೋಗಿದೆ. ರೈಲ್​ಟೆಲ್ ಸಂಸ್ಥೆಯ ಷೇರು ಬೆಲೆ ದಾಖಲೆಯ 559 ರೂ ಮಟ್ಟ ಮುಟ್ಟಿದೆ.

ಇರ್​ಕಾನ್ ಇಂಟರ್ನ್ಯಾಷನಲ್ ಅಂಡ್ ಓರಿಯೆಂಟಲ್ ರೈಲ್ ಇನ್​ಫ್ರಾಸ್ಟ್ರಕ್ಚರ್ ಸಂಸ್ಥೆ (Ircon International and Oriental Rail Infrastructure) ಮತ್ತು ಆರ್​ಐಟಿಇಸ್ (RITES) ಸಂಸ್ಥೆಯ ಷೇರು ಬೆಲೆ ಕ್ರಮವಾಗಿ ಶೇ. 6.64 ಮತ್ತು ಶೇ. 4.5ರಷ್ಟು ಹೆಚ್ಚಾಗಿದೆ. ಐಆರ್​ಸಿಟಿಸಿ ಷೇರುಬೆಲೆ ಕೂಡ ಇಂದು ಸೋಮವಾರದ ವಹಿವಾಟಿನಲ್ಲಿ ಶೇ. 2ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಆಯುಷ್ಮಾನ್ ಭಾರತ್ ಸ್ಕೀಮ್: ಇನ್ಷೂರೆನ್ಸ್ ಮೊತ್ತ ಹೆಚ್ಚಿಸಲು ಮತ್ತು ಹೆಚ್ಚು ಜನರಿಗೆ ತಲುಪಿಸಲು ಯತ್ನ ಸಾಧ್ಯತೆ

ರೈಲ್ವೆ ಸ್ಟಾಕ್​ಗಳ ಬೆಲೆ ಯಾಕೆ ಹೆಚ್ಚುತ್ತಿದೆ?

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 50 ಹೊಸ ಅಮೃತ್ ಭಾರತ್ ರೈಲುಗಳ ಉತ್ಪಾದನೆ ಮಾಡುವ ಯೋಜನೆಯನ್ನು ಪ್ರಕಟಿಸಿದ್ದು ಷೇರು ಮಾರುಕಟ್ಟೆಯಲ್ಲಿ ರೈಲ್ವೆ ಸ್ಟಾಕ್​ಗಳಿಗೆ ಭಾರೀ ಬೇಡಿಕೆ ಕುದುರಿಸಿದೆ.

ಅಲ್ಲದೇ ಮುಂಬರುವ ಕೇಂದ್ರ ಬಜೆಟ್​ನಲ್ಲಿ ರೈಲ್ವೆ ಸೌಕರ್ಯ ವ್ಯವಸ್ಥೆ ಸುಧಾರಿಸಲು ಹೆಚ್ಚು ಗಮನ ಕೊಡಲಾಗುವುದು ಎಂಬ ನಿರೀಕ್ಷೆ ಇದೆ. ರೈಲು ಟ್ರ್ಯಾಕ್​ಗಳ ಅಭಿವೃದ್ಧಿ, ಎಲೆಕ್ಟ್ರಿಫಿಕೇಶನ್, ರೋಲಿಂಗ್ ಸ್ಟಾಕ್ ಉತ್ಪಾದನೆ ಇತ್ಯಾದಿ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಬಜೆಟ್​ನಲ್ಲಿ ಹೆಚ್ಚು ಹಣ ನಿಯೋಜಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Union Budget 2024: ಜು. 22ಕ್ಕೆ ಸಂಸತ್ ಅಧಿವೇಶ, ಜು.23ಕ್ಕೆ ಬಜೆಟ್ ಮಂಡನೆ: ​​ ಸಚಿವ ಕಿರಣ್ ರಿಜಿಜು

ಮೋದಿ 3.0 ಸರ್ಕಾರ ಬಂದ ಬಳಿಕ ಹಲವು ನಿರೀಕ್ಷೆಗಳು ಮುಂದುವರಿದಿವೆ. ರೈಲ್ವೇಸ್ ಮಾತ್ರವಲ್ಲ, ರಕ್ಷಣಾ ವಲಯ, ವಿದ್ಯುತ್ ಉತ್ಪಾದನೆ ವಲಯದತ್ತ ಸರ್ಕಾರದ ಗಮನ ಹೆಚ್ಚಬಹುದು. ಈ ನಿಟ್ಟಿನಲ್ಲಿ ಈ ವಲಯದ ಕಂಪನಿಗಳಿಗೆ ಷೇರು ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಕಳೆದ ವರ್ಷವೂ ರೈಲ್ವೆ ಸ್ಟಾಕ್​ಗಳು ಸಖತ್ತಾಗಿ ಏರಿದ್ದವು. ಐಆರ್​ಎಫ್​ಸಿ ಷೇರುಬಲೆ ಶೇ. 505ರಷ್ಟು ಹೆಚ್ಚಿತ್ತು. ಆರ್​ವಿಎನ್​ಎಲ್, ರೈಲ್​ಟೆಲ್ ಷೇರುಗಳು ಶೇ. 300ರಷ್ಟು ಏರಿದ್ದವು. ಇತರ ರೈಲ್ವೆ ಷೇರುಗಳೂ ಕೂಡ ಗಣನೀಯವಾಗಿ ಏರಿಕೆ ಕಂಡಿದ್ದವು. ಈ ಭರ್ಜರಿ ಓಟ ಈ ವರ್ಷವೂ ಮುಂದುವರಿಯುವುದು ಬಹುತೇಕ ಖಚಿತ ಎಂಬಂತಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Mon, 8 July 24

ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ