AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2025ರಲ್ಲಿ ಭಾರತದ ಬಿಲಿಯನೇರ್​ಗಳ ಪಟ್ಟಿ; ಯಾರು ಅತಿ ಶ್ರೀಮಂತರು, ಯಾರ ಶ್ರೀಮಂತಿಕೆ ಹೆಚ್ಚು ಏರಿದ್ದು?

Bloomberg billionaires index for India 2025: ಬ್ಲೂಮ್​ಬರ್ಗ್ ಬಿಲಿಯನೇರ್ ಇಂಡೆಕ್ಸ್​ನಲ್ಲಿ ಈ ಬಾರಿ ಹಲವು ಭಾರತೀಯರು ಸ್ಥಾನ ಪಡೆದಿದ್ದಾರೆ. ಮುಕೇಶ್ ಅಂಬಾನಿ ಆಸ್ತಿಮೌಲ್ಯ 2025ರಲ್ಲಿ ಕಡಿಮೆ ಆದರೂ ಅವರೇ ಈಗಲೂ ಭಾರತದ ನಂ. 1 ಶ್ರೀಮಂತ. ಉಕ್ಕು ಉದ್ಯಮಿ ಲಕ್ಷ್ಮೀ ಮಿಟ್ಟಲ್ ಆಸ್ತಿ ಮೌಲ್ಯ ಈ ವರ್ಷ ಶೇ. 70ರಷ್ಟು ಏರಿದೆ.

2025ರಲ್ಲಿ ಭಾರತದ ಬಿಲಿಯನೇರ್​ಗಳ ಪಟ್ಟಿ; ಯಾರು ಅತಿ ಶ್ರೀಮಂತರು, ಯಾರ ಶ್ರೀಮಂತಿಕೆ ಹೆಚ್ಚು ಏರಿದ್ದು?
ಲಕ್ಷ್ಮೀ ಮಿಟ್ಟಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 26, 2025 | 1:35 PM

Share

ನವದೆಹಲಿ, ಡಿಸೆಂಬರ್ 26: ಈ ವರ್ಷ ಭಾರತದ ಬಿಲಿಯನೇರ್​ಗಳಿಗೆ (Indian billionaires) ಮಿಶ್ರಾನುಭವ ಮತ್ತು ಮಿಶ್ರಫಲ ಸಿಕ್ಕಿದೆ. ಕೆಲ ಬಿಲಿಯನೇರ್​ಗಳ ಶ್ರೀಮಂತಿಕೆ 2025ರಲ್ಲಿ ಗಣನೀಯವಾಗಿ ಏರಿದೆ. ಕೆಲವರಿಗೆ ಇಳಿಮುಖವಾಗಿದೆ. ಕೆಲವರ ಬ್ಯುಸಿನೆಸ್ ಹೆಚ್ಚಿದೆ, ಕೆಲವರ ಷೇರುಗಳ ಮೌಲ್ಯ ಕುಸಿದಿದೆ. ಮಾರುಕಟ್ಟೆಯ ಸಂಚಲನ, ಜಾಗತಿಕ ಪರಿಸ್ಥಿತಿಯ ಏರಿಳಿತಗಳು ಶ್ರೀಮಂತಿಕೆ ಮೇಲೆ ಪ್ರಭಾವ ಬೀರಿವೆ.

ಶ್ರೀಮಂತಿಕೆಯಲ್ಲಿ ಅತಿ ಏರಿಕೆ ಕಂಡಿದ್ದು ಲಕ್ಷ್ಮೀ ಮಿಟ್ಟಲ್

2025ರಲ್ಲಿ ಭಾರತೀಯ ಬಿಲಿಯನೇರ್​ಗಳ ಪೈಕಿ ಸಿರಿತನ ಅತಿ ಹೆಚ್ಚು ಏರಿದ್ದು ಉಕ್ಕು ಉದ್ಯಮಿ ಲಕ್ಷ್ಮೀ ಮಿಟ್ಟಲ್ ಅವರದ್ದು. ಈ ಒಂದೇ ವರ್ಷದಲ್ಲಿ ಅವರ ಆಸ್ತಿಮೌಲ್ಯ ಶೇ. 59ರಷ್ಟು ಏರಿದೆ. ಆರ್ಸೆಲರ್​ಮಿಟ್ಟಲ್ ಕಂಪನಿಯ ಛೇರ್ಮನ್ ಆಗಿರುವ ಲಕ್ಷ್ಮೀ ಮಿಟ್ಟಲ್ ಅವರ ಒಟ್ಟು ನಿವ್ವಳ ಆಸ್ತಿಮೌಲ್ಯ 31.2 ಬಿಲಿಯನ್ ಡಾಲರ್​ಗೆ ಏರಿದೆ. ಇವರ ಕಂಪನಿಯ ಷೇರುಗಳು ಈ ವರ್ಷ ಶೇ. 70ರಷ್ಟು ಏರಿದ ಪರಿಣಾಮವಾಗಿ ಲಕ್ಷ್ಮೀ ಮಿಟ್ಟಲ್ ಸಿರಿತನ ಕೂಡ ಏರಿದೆ.

ಇದನ್ನೂ ಓದಿ: ಇನ್ಫೋಸಿಸ್​ನಲ್ಲಿ ಭರ್ಜರಿ ಸಂಬಳ; ಎಂಟ್ರಿ ಲೆವೆಲ್​ನಲ್ಲೇ 21 ಲಕ್ಷ ರೂ ಸ್ಯಾಲರಿ ಆಫರ್

ರಾಯಲ್ ಎನ್​ಫೀಲ್ಡ್ ಬುಲೆಟ್ ಬೈಕ್​ಗಳನ್ನು ತಯಾರಿಸುವ ಏಚರ್ ಮೋಟರ್ಸ್ ಕಂಪನಿಯ ಸಂಸ್ಥಾಪಕ ವಿಕ್ರಮ್ ಲಾಲ್ ಅವರ ಶ್ರೀಮಂತಿಕೆ ಶೇ. 42ರಷ್ಟು ಏರಿದೆ. ಇವರ ಮೋಟರ್​ಸೈಕಲ್​ಗಳು ಈ ವರ್ಷ ಉತ್ತಮ ಸೇಲ್ ಆಗಿವೆ. ಅಲ್ಟ್ರಾ ಪ್ರೀಮಿಯಮ್ ಸೆಗ್ಮೆಂಟ್​ನಲ್ಲಿ ರಾಯಲ್ ಎನ್​ಫೀಲ್ಡ್ ಶೇ. 81ರಷ್ಟು ಮಾರುಕಟ್ಟೆ ಪ್ರಾಬಲ್ಯ ಹೊಂದಿದೆ. ಹಾಗೆಯೇ, ಕಮರ್ಷಿಯಲ್ ವಾಹನಗಳ ಮಾರಾಟದಲ್ಲೂ ಕಂಪನಿ ಉತ್ತಮ ಪ್ರಗತಿ ಕಂಡಿದೆ. ಪರಿಣಾಮವಾಗಿ ಏಚರ್ ಮೋಟರ್ಸ್​ನ ಷೇರುಬೆಲೆ ಈ ವರ್ಷ ಉತ್ತಮವಾಗಿ ಏರಿದೆ.

ಮುಕೇಶ್ ಅಂಬಾನಿಯೇ ನಂಬರ್ ಒನ್

ಮುಕೇಶ್ ಅಂಬಾನಿ ಅವರ ಆಸ್ತಿಮೌಲ್ಯ ಈ ವರ್ಷ ಏರಿಕೆ ಆಗಿದ್ದು ಶೇ. 7.5 ಮಾತ್ರವೇ. ಆದರೂ ಕೂಡ ಅಂಬಾನಿ ಅವರೇ ಭಾರತದ ಅತಿದೊಡ್ಡ ಶ್ರೀಮಂತರಾಗಿ ಮುಂದುವರಿದಿದ್ದಾರೆ. ಗೌತಮ್ ಅದಾನಿ ಅವರ ಆಸ್ತಿಮೌಲ್ಯ ಇಳಿಮುಖವಾದರೂ ಅವರು ಎರಡನೇ ಅತಿದೊಡ್ಡ ಶ್ರೀಮಂತರಾಗಿದ್ದಾರೆ. ಇಲ್ಲಿ ಕೆಳಗೆ ಭಾರತದ ಬಿಲಿಯನೇರ್​ಗಳ ಪಟ್ಟಿ ಇದೆ:

ಇದನ್ನೂ ಓದಿ: ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣ ಎಷ್ಟು ಗೊತ್ತಾ? ಅನ್​ಕ್ಲೇಮ್ಡ್ ಡೆಪಾಸಿಟ್ ಮರಳಿಪಡೆಯುವುದು ಹೇಗೆ?

ಭಾರತದ ಬಿಲಿಯನೇರ್​ಗಳ ಪಟ್ಟಿ (2025 ಬ್ಲೂಮ್​ಬರ್ಗ್ ಇಂಡೆಕ್ಸ್)

  1. ಮುಕೇಶ್ ಅಂಬಾನಿ: 107 ಬಿಲಿಯನ್ ಡಾಲರ್
  2. ಗೌತಮ್ ಅದಾನಿ: 84.5 ಬಿಲಿಯನ್ ಡಾಲರ್
  3. ಶಿವ ನಾದರ್: 38.5 ಬಿಲಿಯನ್ ಡಾಲರ್
  4. ಶಾಪೂರ್ ಮಿಸ್ತ್ರಿ: 35.7 ಬಿಲಿಯನ್ ಡಾಲರ್
  5. ಸಾವಿತ್ರಿ ಜಿಂದಾಲ್: 31.3 ಬಿಲಿಯನ್ ಡಾಲರ್
  6. ಲಕ್ಷ್ಮೀ ಮಿಟ್ಟಲ್: 31.2 ಬಿಲಿಯನ್ ಡಾಲರ್
  7. ಸುನೀಲ್ ಮಿಟ್ಟಲ್: 30 ಬಿಲಿಯನ್ ಡಾಲರ್
  8. ಅಜೀಮ್ ಪ್ರೇಮ್​ಜಿ: 27.8 ಬಿಲಿಯನ್ ಡಾಲರ್
  9. ದಿಲೀಪ್ ಶಾಂಘವಿ: 25.7 ಬಿಲಿಯನ್ ಡಾಲರ್
  10. ಕುಮಾರಮಂಗಲಂ ಬಿರ್ಲಾ: 22.9 ಬಿಲಿಯನ್ ಡಾಲರ್
  11. ರಾಧಾಕೃಷ್ಣ ದಮಾನಿ: 16.6 ಬಿಲಿಯನ್ ಡಾಲರ್
  12. ಉದಯ್ ಕೋಟಕ್: 16.1 ಬಿಲಿಯನ್ ಡಾಲರ್
  13. ಸೈರಸ್ ಪೂನವಾಲ: 14.8 ಬಿಲಿಯನ್ ಡಾಲರ್
  14. ಕೆ.ಪಿ. ಸಿಂಗ್: 14.4 ಬಿಲಿಯನ್ ಡಾಲರ್
  15. ರವಿ ಜೈಪುರಿಯಾ: 12.6 ಬಿಲಿಯನ್ ಡಾಲರ್
  16. ವಿಕ್ರಮ್ ಲಾಲ್: 12.4 ಬಿಲಿಯನ್ ಡಾಲರ್
  17. ನುಸ್ಲಿ ವಾಡಿಯಾ: 10.8 ಬಿಲಿಯನ್ ಡಾಲರ್
  18. ಮುರಳಿ ದಿವಿ: 10.5 ಬಿಲಿಯನ್ ಡಾಲರ್
  19. ಮಂಗಲ್ ಪ್ರಭಾತ್ ಲೋಧಾ: 9.33 ಬಿಲಿಯನ್ ಡಾಲರ್
  20. ರಾಹುಲ್ ಭಾಟಿಯಾ: 9.28 ಬಿಲಿಯನ್ ಡಾಲರ್
  21. ಪಂಕಜ್ ಪಟೇಲ್: 8.44 ಬಿಲಿಯನ್ ಡಾಲರ್
  22. ಇಂದರ್ ಜೈಸಿಂಘಾನಿ: 8.12 ಬಿಲಿಯನ್ ಡಾಲರ್
  23. ಸುಧೀರ್ ಮೆಹತಾ: 7.82 ಬಿಲಿಯನ್ ಡಾಲರ್
  24. ಸಮೀರ್ ಮೆಹತಾ: 7.82 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ