ಭಾರತದ ಉದ್ಯಮಗಳು ಜಾಗತಿಕ ಅವಕಾಶಗಳನ್ನು ಉಪಯೋಗಿಸಿಕೊಂಡು ಬೆಳೆಯಬೇಕು: ಬಜೆಟೋತ್ತರ ವೆಬನಾರ್ನಲ್ಲಿ ಪ್ರಧಾನಿ ಮೋದಿ ಕರೆ
Narendra Modi speaks at Post budget webinar: ಸರ್ಕಾರದ ಸ್ಥಿರ ನೀತಿ ಮತ್ತು ಸುಧಾರಣಾ ಕ್ರಮಗಳಿಂದಾಗಿ ವಿವಿಧ ಉದ್ಯಮಗಳಿಗೆ ಆತ್ಮವಿಶ್ವಾಸ ಮೂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮುಂಬರುವ ವರ್ಷಗಳಲ್ಲೂ ಈ ಸ್ಥಿರ ನೀತಿ ಮುಂದುವರಿಯುತ್ತದೆ ಎಂದೂ ನರೇಂದ್ರ ಮೋದಿ ಭರವಸೆ ನೀಡಿದ್ಧಾರೆ. ಬಜೆಟ್ ನಂತರದ ಮೂರು ವೆಬಿನಾರ್ಗಳಲ್ಲಿ ಪ್ರಧಾನಿ ಪಾಲ್ಗೊಂಡು ಮಾತನಾಡಿದರು.

ನವದೆಹಲಿ, ಮಾರ್ಚ್ 4: ತಜ್ಞರು ನಿರೀಕ್ಷೆ ಮಾಡದ ರೀತಿಯಲ್ಲಿ ಸರ್ಕಾರ ಹಲವು ಕ್ಷೇತ್ರಗಳನ್ನು ಬಲಪಡಿಸಲ ಕ್ರಮ ಕೈಗೊಂಡಿದೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ರಫ್ತು ಹೆಚ್ಚಿಸಲು ಈ ಬಜೆಟ್ನಲ್ಲಿ ಪ್ರಮುಖ ಹೆಜ್ಜೆ ಇರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್ ನಂತರದ ವೆಬಿನಾರ್ಗಳಲ್ಲಿ (Post Budget Webinars) ಪಾಲ್ಗೊಂಡು ಮಾತನಾಡುತ್ತಿದ್ದ ಪ್ರಧಾನಿಗಳು, ಭಾರತೀಯ ಉದ್ಯಮಗಳು ಜಾಗತಿಕ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಇವತ್ತು ಪ್ರತಿಯೊಂದು ದೇಶವೂ ಭಾರತದೊಂದಿಗೆ ಆರ್ಥಿಕ ಸಹಭಾಗಿತ್ವಕ್ಕೆ ಆಸಕ್ತಿ ತೋರುತ್ತಿದೆ. ನಮ್ಮ ಉತ್ಪಾದನಾ ಕ್ಷೇತ್ರವು ಈ ಪಾಲುದಾರಿಕೆಯ ಅವಕಾಶವನ್ನು ಬಳಸಿಕೊಳ್ಳಲು ಮುಂದೆ ಬರಬೇಕು ಎಂದು ಈ ವೆಬಿನಾರ್ನಲ್ಲಿ ಮೋದಿ ಹೇಳಿದ್ದಾರೆ.
ಬಜೆಟ್ ನಂತರದ ಮೂರು ವೆಬಿನಾರ್ಗಳು ಆಯೋಜನೆಯಾಗಿವೆ. ಮೊದಲನೆಯದು, ‘ಎಂಎಸ್ಎಂಇ, ಅಭಿವೃದ್ಧಿಯ ಒಂದು ಎಂಜಿನ್’. ಎರಡನೆಯದು, ‘ಉತ್ಪಾದನೆ, ರಫ್ತು ಮತ್ತು ಪರಮಾಣು ಶಕ್ತಿ ಯೋಜನೆಗಳು’. ಮೂರನೆಯದು, ‘ಕಾನೂನು ನಿಯಂತ್ರಕ, ಹೂಡಿಕೆ ಮತ್ತು ಸುಲಭ ವ್ಯವಹಾರ ಸುಧಾರಣೆಗಳು’.
ಇದನ್ನೂ ಓದಿ: ಭಾರತದಲ್ಲಿ ಷೇರು ಮಾರುಕಟ್ಟೆ ಕುಸಿತಕ್ಕೆ ಏನು ಕಾರಣ? ಜೆಫರೀಸ್ನ ಕ್ರಿಸ್ ವುಡ್ ಹೇಳುವುದಿದು…
‘ಕಳೆದ ಹತ್ತು ವರ್ಷದಲ್ಲಿ ಭಾರತದಲ್ಲಿ ನಿರಂತರವಾಗಿ ಸುಧಾರಣೆ, ಹಣಕಾಸು ಶಿಸ್ತು, ಪಾರದರ್ಶಕತೆ ಮತ್ತು ಸಮಗ್ರ ಪ್ರಗತಿಗೆ ಬದ್ಧತೆ ತೋರಲಾಗುತ್ತಿದೆ. ಈ ಸುಧಾರಣೆಗಳು ಮತ್ತು ಸ್ಥಿರ ನೀತಿಯ ಭರವಸೆಯು ನಮ್ಮ ಉದ್ಯಮಕ್ಕೆ ಹೊಸ ವಿಶ್ವಾಸ ತಂದುಕೊಟ್ಟಿದೆ’ ಎಂದು ನರೇಂದ್ರ ಮೋದಿ ಅವರು ಈ ವೆಬಿನಾರ್ವೊಂದರಲ್ಲಿ ತಿಳಿಸಿದ್ದಾರೆ.
‘ಮುಂಬರುವ ವರ್ಷಗಳಲ್ಲೂ ಇದೇ ರೀತಿಯ ನೀತಿ ಸ್ಥಿರತೆ ಉಳಿಸಿಕೊಂಡು ಹೋಗುತ್ತೇವೆ ಎಂದು ಮ್ಯಾನುಫ್ಯಾಕ್ಚರಿಂಗ್ ಮತ್ತು ರಫ್ತು ಕ್ಷೇತ್ರದಲ್ಲಿ ಇರುವ ಪ್ರತಿಯೊಬ್ಬ ಭಾಗಿದಾರರರಿಗೂ ಭರವಸೆ ನೀಡಬಯಸುತ್ತೇನೆ. ಈ ಉದ್ಯಮಗಳು ಆತ್ಮವಿಶ್ವಾಸಪೂರ್ವಕವಾಗಿ ದೊಡ್ಡ ಹೆಜ್ಜೆಗಳನ್ನು ಇಡಬೇಕೆಂದು ಕೇಳುತ್ತೇನೆ’ ಎಂದಿದ್ದಾರೆ ಪ್ರಧಾನಿ.
ಇದನ್ನೂ ಓದಿ: ಆ ದೇವತೆ ಕಟ್ಟುತ್ತಾಳಾ? ಟ್ರಂಪ್ ಟ್ಯಾಕ್ಸ್ ಬಗ್ಗೆ ಪ್ರತಿಕ್ರಿಯಿಸಿದ ವಾರನ್ ಬಫೆಟ್; ಇದು ಯುದ್ಧ ಕಾಲದ ಕ್ರಮವಾ?
‘ಯಾವುದೇ ದೇಶದ ಅಭಿವೃದ್ಧಿಗೆ ಸ್ಥಿರ ನೀತಿ ಮತ್ತು ಉತ್ತಮ ವ್ಯವಹಾರ ವಾತಾವರಣ ಇರುವುದು ಬಹಳ ಮುಖ್ಯ. ಕೆಲ ವರ್ಷಗಳ ಹಿಂದೆ ಜನ ವಿಶ್ವಾಸ ಕಾಯ್ದೆ ತಂದೆವು. ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ 40,000 ನಿಯಮಗಳನ್ನು ನಿಲ್ಲಿಸಲಾಯಿತು. ಇದರಿಂದ ಸುಲಭ ವ್ಯವಹಾರ ವ್ಯವಸ್ಥೆಗೆ ಉತ್ತೇಜನ ಸಿಕ್ಕಿತು. ಸರಳೀಕೃತ ಆದಾಯ ತೆರಿಗೆ ವಿಚಾರ ತಂದೆವು. ಈಗ ಜನ್ ವಿಶ್ವಾಸ್ 2.0 ಮಸೂದೆ ರಚನೆಗೆ ಮುಂದಾಗಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದ ಕ್ರಮಗಳ ಬಗ್ಗೆ ವಿವರ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ