ಭಾರತದಲ್ಲಿ ಷೇರು ಮಾರುಕಟ್ಟೆ ಕುಸಿತಕ್ಕೆ ಏನು ಕಾರಣ? ಜೆಫರೀಸ್ನ ಕ್ರಿಸ್ ವುಡ್ ಹೇಳುವುದಿದು…
Chris Wood of Jefferies speaks on Indian stock market: ಜೆಫೆರೀಸ್ ಸಂಸ್ಥೆ ಭಾರತದ ಮಾರುಕಟ್ಟೆ ಬಗ್ಗೆ ತನ್ನ ಗ್ರೇಡಿಂಗ್ ಅನ್ನು ಓವರ್ವೇಟ್ನಿಂದ ನ್ಯೂಟ್ರಲ್ಗೆ ಇಳಿಸಿದೆ. ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥ ಕ್ರಿಸ್ಟೋಫರ್ ವುಡ್ ಸ್ಪಷ್ಟನೆ ನೀಡಿದ್ದು, ತನಗೆ ಭಾರತದ ಮಾರುಕಟ್ಟೆ ಬಗ್ಗೆ ಈಗಲೂ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಅಮೆರಿಕದ ಮಾರುಕಟ್ಟೆ ಮಂದಗೊಳ್ಳಲಿದ್ದು, ಭಾರತ ಮತ್ತು ಚೀನಾ ಹೆಚ್ಚು ಆಶಾದಾಯಕವಾಗಿದೆ ಎಂಬುದು ಅವರ ಅನಿಸಿಕೆ. ಹಾಗೆಯೇ, ಭಾರತದ ಮಾರ್ಕೆಟ್ ಕರೆಕ್ಷನ್ ಆಗಲು ಕೆಲ ಕಾರಣಗಳನ್ನೂ ಅವರು ವಿವರಿಸಿದ್ದಾರೆ.

ನವದೆಹಲಿ, ಮಾರ್ಚ್ 4: ಭಾರತದ ಮಾರುಕಟ್ಟೆಗೆ ತನ್ನ ರೇಟಿಂಗ್ ಅನ್ನು ಇಳಿಸಿದ್ದ ಜೆಫೆರೀಸ್ ಸಂಸ್ಥೆಯ ಗ್ಲೋಬಲ್ ಈಕ್ವಿಟಿ ಮುಖ್ಯಸ್ಥ ಕ್ರಿಸ್ಟೋಫರ್ ವುಡ್, ಭಾರತದ ಬಗ್ಗೆ ಈಗಲೂ ಆಶಾದಾಯಕವಾಗಿದೆ. ಭಾರತದ ಮಾರುಕಟ್ಟೆಗೆ ಜೆಫೆರೀಸ್ ಓವರ್ವೇಟ್ ರೇಟಿಂಗ್ ನೀಡಿತ್ತು. ಅದನ್ನು ತುಸು ಇಳಿಸಿದೆ. ಭಾರತ ಈಗಲೂ ಕೂಡ ಏಷ್ಯಾ ಮಾತ್ರವಲ್ಲ, ಜಾಗತಿಕವಾಗಿ ಉತ್ತಮ ಬೆಳವಣಿಗೆ ಹೊಂದುತ್ತಿರುವುದರಿಂದ ರೇಟಿಂಗ್ ಅನ್ನು ತೀರಾ ಅಲ್ಪ ಮಾತ್ರ ಇಳಿಕೆ ಮಾಡಿದ್ದೇವೆ ಎಂದು ಕ್ರಿಸ್ಟೋಫರ್ ವುಡ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಭಾರತದ ಷೇರು ಮಾರುಕಟ್ಟೆಯಲ್ಲಿ ಈಗ ನಡೆಯುತ್ತಿರುವ ದೀರ್ಘಾವಧಿಯ ಕುಸಿತದ ಕಾರಣಕ್ಕೆ ಅವರು ಓವರ್ವೇಟ್ನಿಂದ ನ್ಯೂಟ್ರಲ್ಗೆ ಗ್ರೇಡಿಂಗ್ ಅನ್ನು ಇಳಿಸಲು ಕಾರಣ. ಈ ಗ್ರೇಡಿಂಗ್ ಎಂಬುದು ಜಾಗತಿಕ ಹೂಡಿಕೆದಾರರಿಗೆ ಭಾರತದ ಮಾರುಕಟ್ಟೆ ಬಗ್ಗೆ ಜೆಫರೀಸ್ ನೀಡುವ ಅಭಿಪ್ರಾಯ ಅಥವಾ ಸಲಹೆ ಎಂದು ಪರಿಗಣಿಸಬಹುದು.
ಇದನ್ನೂ ಓದಿ: ಆ ದೇವತೆ ಕಟ್ಟುತ್ತಾಳಾ? ಟ್ರಂಪ್ ಟ್ಯಾಕ್ಸ್ ಬಗ್ಗೆ ಪ್ರತಿಕ್ರಿಯಿಸಿದ ವಾರನ್ ಬಫೆಟ್; ಇದು ಯುದ್ಧ ಕಾಲದ ಕ್ರಮವಾ?
ಕುತೂಹಲ ಎಂದರೆ, ಕ್ರಿಸ್ಟೋಫರ್ ವುಡ್ ಅವರು ತಮ್ಮ ಗ್ರೀಡ್ ಅಂಡ್ ಫಿಯರ್ ಪೋರ್ಟ್ಫೋಲಿಯೋಗಳಲ್ಲಿ ಭಾರತದ ಸ್ಟಾಕುಗಳ ಸಂಗ್ರಹವನ್ನು ಸ್ವಲ್ಪ ಮಾತ್ರವೇ ಕಡಿಮೆ ಮಾಡಿದ್ದಾರೆ. ಇದರೊಂದಿಗೆ ಅವರು ಭಾರತದ ರಚನಾತ್ಮಕ ಬಲದ ಬಗ್ಗೆ ಇನ್ನೂ ವಿಶ್ವಾಸ ಇರಿಸಿಕೊಂಡಿರುವುದನ್ನು ತೋರಿಸಿದ್ದಾರೆ.
ಭಾರತದ ಮಾರುಕಟ್ಟೆ ಕುಸಿತ ಯಾಕಾಗಿ?
ಇದೇ ವೇಳೆ, ಭಾರತದ ಷೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಕುಸಿತದ ಬಗ್ಗೆ ಕ್ರಿಸ್ ವುಡ್ಗೆ ಅಚ್ಚರಿ ಎನಿಸಿಲ್ಲ. ಈ ಹಿಂದೆ ಪ್ರಮುಖ ಘಟನೆಗಳು ನಡೆದಾಗ ಮಾರುಕಟ್ಟೆ ಹೆಚ್ಚು ಅಲುಗಾಡದೇ ನಿಶ್ಚಲವಾಗಿತ್ತು. ಆದರೆ, ಈಕ್ವಿಟಿಗಳ ಬೇಡಿಕೆ ಮತ್ತು ಪೂರೈಕೆ ಪರಿಣಾಮವಾಗಿ ಮಾರ್ಕೆಟ್ ಕರೆಕ್ಷನ್ ಆಗುತ್ತಿದೆ ಎಂಬುದು ಅವರ ಅನಿಸಿಕೆ.
ಇದನ್ನೂ ಓದಿ: ಒಮ್ಮೆ ಹೊಸ ಟ್ಯಾಕ್ಸ್ ರಿಜೈಮ್ ಬಳಸಿದರೆ ಮತ್ತೆ ಹಳೆಯದನ್ನು ಬಳಸಬಾರದಾ? ಇಲ್ಲಿದೆ ಸತ್ಯಾಂಶ
ಸರ್ಕಾರದ ಹಣಕಾಸು ನೀತಿ ಬಿಗಿಗೊಳಿಸಿದ್ದು ಆರ್ಥಿಕತೆ ಹಾಗೂ ಮಾರುಕಟ್ಟೆ ಕುಸಿತಕ್ಕೆ ಎಡೆ ಮಾಡಿಕೊಟ್ಟಿರಬಹುದು. ಹಣಕಾಸು ಸಂಸ್ಥೆಗಳ ಸಾಲ ಮತ್ತು ಠೇವಣಿ ಅನುಪಾತ, ಅಸುರಕ್ಷಿತ ಸಾಲ ಹಾಗೂ ಕಿರು ಸಾಲ ವಿಚಾರದಲ್ಲಿ ನಿಯಮಗಳನ್ನು ಬಿಗಿಗೊಳಿಸಿದ ಕ್ರಮವೂ ಈ ವಿದ್ಯಮಾನಕ್ಕೆ ಕಾರಣವಾಗಿರಬಹುದು ಎಂದು ಜೆಫೆರೀಸ್ನ ಗ್ಲೋಬಲ್ ಈಕ್ವಿಟಿ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ