ಪ್ಲೇಸ್ಟೋರ್​ನಲ್ಲಿ ಚ್ಯಾಟ್​ಜಿಪಿಟಿ, ಫ್ಲಿಪ್​ಕಾರ್ಟ್ ಅನ್ನು ಮೀರಿಸಿದ ಎಲ್​ಪಿಜಿ ಬುಕಿಂಗ್ ಆ್ಯಪ್

Indian Oil's gas booking app One tops the chart in Play Store: ಭಾರತದಲ್ಲಿ ಎಲ್​ಪಿಜಿ ಸಿಲಿಂಡರ್​ಗೆ ಬೇಡಿಕೆ ವಿಪರೀತವಾಗುತ್ತಿದೆ. ಇದೇ ವೇಳೆ, ಇಂಡಿಯನ್ ಆಯಿಲ್​ನ ಒನ್ ಆ್ಯಪ್ ಭಾರೀ ಪ್ರಮಾಣದಲ್ಲಿ ಡೌನ್​ಲೋಡ್ ಆಗುತ್ತಿದೆ. ಪ್ಲೇಸ್ಟೋರ್​ನಲ್ಲಿ ಚ್ಯಾಟ್​ಜಿಪಿಟಿಯಂತಹ ಆ್ಯಪ್​ಗಳನ್ನು ಮೀರಿಸಿ ಒನ್ ಆ್ಯಪ್ ನಂಬರ್ ಸ್ಥಾನದಲ್ಲಿದೆ. ಈ ಆ್ಯಪ್​ನಲ್ಲಿ ಹೊಸ ಎಲ್​ಪಿಜಿ ಕನೆಕ್ಷನ್, ಸಿಲಿಂಡರ್ ಬುಕಿಂಗ್, ಏಜೆನ್ಸಿ ಬದಲಾವಣೆ ಇತ್ಯಾದಿ ಕಾರ್ಯಗಳನ್ನು ಮಾಡಬಹುದು.

ಪ್ಲೇಸ್ಟೋರ್​ನಲ್ಲಿ ಚ್ಯಾಟ್​ಜಿಪಿಟಿ, ಫ್ಲಿಪ್​ಕಾರ್ಟ್ ಅನ್ನು ಮೀರಿಸಿದ ಎಲ್​ಪಿಜಿ ಬುಕಿಂಗ್ ಆ್ಯಪ್
ಎಲ್​ಪಿಜಿ

Updated on: Mar 15, 2026 | 1:40 PM

ನವದೆಹಲಿ, ಮಾರ್ಚ್ 15: ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಗೆ ಅಭಾವ ಆಗಿದೆಯೋ ಇಲ್ಲವೋ ಬೇರೆ ವಿಚಾರ, ಜನಸಾಮಾನ್ಯರಲ್ಲಿ ಎಲ್​ಪಿಜಿಗೆ (LPG) ಹಾಹಾಕಾರ ಮಾಡುತ್ತಿರುವಂತಹ ಪರಿಸ್ಥಿತಿ ಇದೆ. ಗ್ಯಾಸ್ ಬುಕಿಂಗ್​ಗೆ ಜನರು ಮುಗಿಬಿದ್ದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಪ್ಲೇಸ್ಟೋರ್​ನಲ್ಲಿ ಇಂಡಿಯನ್ ಆಯಿಲ್​ನ ಒನ್ ಆ್ಯಪ್ (Indian Oil’s One) ನಂಬರ್ ಒನ್ ಎನಿಸಿದೆ. ಚ್ಯಾಟ್​ಜಿಪಿಟಿ ಇತ್ಯಾದಿ ಸ್ಟಾರ್ ಆ್ಯಪ್​ಗಳನ್ನು ಇದು ಹಿಂದಿಕ್ಕಿದೆ.

ಒನ್ ಆ್ಯಪ್​ನಲ್ಲಿ ಇಂಡೇನ್ ಗ್ರಾಹಕರು ಎಲ್​ಪಿಜಿ ಬುಕಿಂಗ್ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಬಹುದು. ಹೊಸ ಎಲ್​ಪಿಜಿ ಕನೆಕ್ಷನ್, ಏಜೆನ್ಸಿ ಬದಲಾವಣೆ, ಗ್ಯಾಸ್ ಬುಕಿಂಗ್ ಇತ್ಯಾದಿ ಕೆಲಸಗಳನ್ನು ಈ ಒನ್ ಆ್ಯಪ್​ನಲ್ಲಿ ಮಾಡಲು ಅವಕಾಶ ಇರುತ್ತದೆ.

ಇದನ್ನೂ ಓದಿ: ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

ಎಕ್ಸ್ ಬಳಕೆದಾರರೊಬ್ಬರು ಇಂಡಿಯನ್ ಆಯಿಲ್​ನ ಈ ಒನ್ ಆ್ಯಪ್ ಟಾಪ್ ಚಾರ್ಟ್ಸ್​ನಲ್ಲಿ ನಂಬರ್ ಒನ್ ಆಗಿರುವುದನ್ನು ತಮ್ಮ ಟ್ವೀಟ್​ವೊಂದರಲ್ಲಿ ಎತ್ತಿತೋರಿಸಿದ್ದಾರೆ. ನೀವು ಈ ಆ್ಯಪ್ ಈಗ ಡೌನ್​ಲೋಡ್ ಮಾಡಿ ಓಪನ್ ಮಾಡಿದಾಗ ಕೆಲ ಫೀಚರ್​ಗಳು ಕೆಲಸ ಮಾಡುವುದಿಲ್ಲ. ಹೊಸದಾಗಿ ರಿಜಿಸ್ಟರ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಿಢೀರನೇ ಈ ಆ್ಯಪ್ ಗಣನೀಯ ಸಂಖ್ಯೆಯಲ್ಲಿ ಡೌನ್​ಲೋಡ್ ಆಗಿರುವುದು ಇದಕ್ಕೆ ಕಾರಣ.

ಎಕ್ಸ್ ಪೋಸ್ಟ್

ಚ್ಯಾಟ್​ಜಿಪಿ, ಸ್ಟೋರಿ ಟಿವಿ, ಫ್ರೀರೀಲ್ಸ್, ಮೀಶೋ, ಫ್ಲಿಪ್​ಕಾರ್ಟ್, ಜಿಯೋಹಾಟ್​ಸ್ಟಾರ್ ಇತ್ಯಾದಿ ಆ್ಯಪ್​ಗಳನ್ನು ಮೀರಿಸಿ, ಇಂಡಿಯನ್ ಆಯಿಲ್ ಒನ್ ಆ್ಯಪ್ ಅತಿಹೆಚ್ಚು ಡೌನ್​ಲೋಡ್ ಆದ ಆ್ಯಪ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಬುಕಿಂಗ್ ಮಾಡಲು ಒನ್ ಆ್ಯಪ್ ಬಳಸುವುದು ಅನಿವಾರ್ಯವೇನಲ್ಲ. ನಿಮ್ಮ ಗ್ಯಾಸ್ ಏಜೆನ್ಸಿಯ ಗ್ಯಾಸ್ ಬುಕಿಂಗ್ ನಂಬರ್ ಮೂಲಕವೇ ಸಿಲಿಂಡರ್ ಬುಕಿಂಗ್ ಮಾಡಬಹುದು. ಮೊದಲೆಲ್ಲಾ 1-3 ದಿನದೊಳಗೆ ಸಿಲಿಂಡರ್ ಸಿಗುತ್ತಿತ್ತು. ಈಗ ಸ್ವಲ್ಪ ವಿಳಂಬವಾಗಬಹುದು.

ಇದನ್ನೂ ಓದಿ: ಗ್ಯಾಸ್​ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?

ಇಂಡೇನ್ ಬಳಕೆದಾರರು ವಾಟ್ಸಾಪ್ ಮೂಲಕವೂ ಗ್ಯಾಸ್ ಬುಕಿಂಗ್ ಮಾಡಬಹುದು. 7588888824 ನಂಬರ್ ಅನ್ನು ಮೊದಲು ತಮ್ಮ ಫೋನ್​ಗೆ ಸೇವ್ ಮಾಡಿಕೊಳ್ಳಬೇಕು. ಇಂಡೇನ್ ಕನೆಕ್ಷನ್ ಹೊಂದಿರುವ ನೊಂದಾಯಿತ ಮೊಬೈಲ್ ನಂಬರ್​ನಲ್ಲಿ ವಾಟ್ಸಾಪ್ ಓಪನ್ ಮಾಡಿ ಮೇಲಿನ ನಂಬರ್​ಗೆ REFILL ಎನ್ನುವ ಮೆಸೇಜ್ ಕಳುಹಿಸಬೇಕು. ನಿಮ್ಮ ನೊಂದಾಯಿತ ಮೊಬೈಲ್ ನಂಬರ್​ನ ವಿವರಗಳನ್ನು ಪರಿಶೀಲಿಸಲಾಗುತ್ತದೆ. ಅದು ಖಚಿತಗೊಂಡ ಬಳಿಕ ಎಲ್​ಪಿಜಿ ಬುಕಿಂಗ್ ಮನವಿ ಸ್ವೀಕರಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us