AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇರುಪೇಟೆಗೆ ಈ ವಾರ ರಕ್ತದೋಕುಳಿ; ಸೆನ್ಸೆಕ್ಸ್​ನಿಂದ 2,092, ನಿಫ್ಟಿಯಿಂದ 567 ಅಂಕಗಳು ಕುಸಿತ

Indian stock market big crash this week: ಶೇರು ಮಾರುಕಟ್ಟೆ ಈ ವಾರ ಸಖತ್ ಕುಸಿತ ಕಂಡಿದೆ. ಶುಕ್ರವಾರವೊಂದೇ ದಿನ 4 ಲಕ್ಷ ಕೋಟಿ ರೂನಷ್ಟು ನಷ್ಟವಾಗಿದೆ. ಸೆನ್ಸೆಕ್ಸ್ ಸೋಮವಾರದಿಂದ ಶುಕ್ರವಾರದವರೆಗೆ ಎರಡು ಸಾವಿರಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿದೆ. ನಿಫ್ಟಿ ಹತ್ತಿರಹತ್ತಿರ 600 ಅಂಕಗಳ ನಷ್ಟ ಕಂಡಿದೆ. ಇದಕ್ಕೇನು ಕಾರಣ, ಇಲ್ಲಿದೆ ವರದಿ.

ಶೇರುಪೇಟೆಗೆ ಈ ವಾರ ರಕ್ತದೋಕುಳಿ; ಸೆನ್ಸೆಕ್ಸ್​ನಿಂದ 2,092, ನಿಫ್ಟಿಯಿಂದ 567 ಅಂಕಗಳು ಕುಸಿತ
ಶೇರು ಮಾರುಕಟ್ಟೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 24, 2026 | 5:45 PM

Share

ನವದೆಹಲಿ, ಜುಲೈ 24: ಭಾರತೀಯ ಶೇರು ಮಾರುಕಟ್ಟೆಯಲ್ಲಿ (Stock Market) ಭಾರಿ ಕುಸಿತ ಕಂಡಿದ್ದು, ಸೆನ್ಸೆಕ್ಸ್ ಹಾಗೂ ನಿಫ್ಟಿ 50 ಸೂಚ್ಯಂಕಗಳು ಶುಕ್ರವಾರ ಭಾರೀ ನಷ್ಟ ಅನುಭವಿಸಿವೆ. ಇದರಿಂದ ಹೂಡಿಕೆದಾರರ ಸುಮಾರು ₹4 ಲಕ್ಷ ಕೋಟಿ ರೂಪಾಯಿ ಸಂಪತ್ತು ಕೊಚ್ಚಿಹೋಗಿದೆ. ಇದು ಇವತ್ತು ಒಂದೇ ದಿನದಲ್ಲಿ ಕಂಡ ನಷ್ಟ. ಆದರೆ, ಈ ವಾರ ಸಂಪೂರ್ಣ ಕುಸಿತದ ವಾರವಾಗಿದೆ. ವಾರದ ಐದೂ ಸೆಷನ್​ಗಳೂ ಮಾರುಕಟ್ಟೆಗೆ ಹಿನ್ನಡೆ ತಂದಿವೆ.

ಸೋಮವಾರ (ಜುಲೈ 20) ನಿಫ್ಟಿ ಸೂಚ್ಯಂಕ 24,334 ಅಂಕಗಳಲ್ಲಿತ್ತು. ಇವತ್ತು ಅದು 23,767 ಅಂಕಗಳ ಮಟ್ಟಕ್ಕೆ ಇಳಿದಿದೆ. ಅಂದರೆ, ಐದು ದಿನದಲ್ಲಿ 567 ಅಂಕಗಳನ್ನು ಕಳೆದುಕೊಂಡಿದೆ. ಸೆನ್ಸೆಕ್ಸ್ ಈ ಐದು ದಿನದಲ್ಲಿ 2,092 ಅಂಕಗಳ ನಷ್ಟ ಮಾಡಿಕೊಂಡಿದೆ. 78,151 ಅಂಕಗಳಿಂದ 76,059 ಮಟ್ಟಕ್ಕೆ ಇಳಿದಿದೆ. ನಿಫ್ಟಿಗೆ ಸಪೋರ್ಟ್ ಲೆವೆಲ್ 23,650 ರೂ ಇತ್ತು. ಅದಕ್ಕೂ ಕೆಳಗೆ ಹೋಗಿ ನಂತರ ಸ್ವಲ್ಪ ಚೇತರಿಕೆ ಕಂಡಿದೆ.

ಇದನ್ನೂ ಓದಿ: ಗೂಗಲ್ ಅಕೌಂಟ್​ಗೆ ಸೈನ್ ಇನ್ ಆಗಲು, ರಿಕವರಿ ಮಾಡಲು ಸೆಲ್ಫಿ ವಿಡಿಯೊ

ಆಟೊಮೊಬೈಲ್, ಮೆಟಲ್, ಐಟಿ, ರಿಯಲ್ ಎಸ್ಟೇಟ್ ಕಂಪನಿಗಳ ಷೇರುಗಳು ಅತಿಹೆಚ್ಚು ಕುಸಿತ ಕಂಡಿವೆ. ಈ ಭಾರಿ ಕುಸಿತಕ್ಕೆ ಪ್ರಮುಖ ಕಾರಣಗಳು ಏನು ಎನ್ನುವ ಮಾಹಿತಿ ಇಲ್ಲಿ ಮುಂದಿದೆ:

ಮಾರುಕಟ್ಟೆ ಕುಸಿತಕ್ಕೆ 5 ಪ್ರಮುಖ ಕಾರಣಗಳು

  1. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆ: ಅಮೆರಿಕ ಮತ್ತು ಇರಾನ್ ನಡುವಿನ ಸಶಸ್ತ್ರ ಸಂಘರ್ಷ ತೀವ್ರಗೊಂಡಿರುವುದರಿಂದ ಕೆಂಪು ಸಮುದ್ರದಲ್ಲಿ (Red Sea) ತೈಲ ಸಾಗಣೆಗೆ ಅಡಚಣೆಯಾಗಿದೆ. ಪರಿಣಾಮವಾಗಿ ಬ್ರೆಂಟ್ ಕಚ್ಚಾ ತೈಲ (Brent Crude) ಬೆಲೆ ಬ್ಯಾರೆಲ್‌ಗೆ $100 ಗಡಿ ದಾಟಿದ್ದು, ಇದು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ದೇಶಗಳ ಆರ್ಥಿಕತೆ ಮತ್ತು ಹಣದುಬ್ಬರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
  2. ಅಮೆರಿಕದ ಹೊಸ ಸುಂಕ ನೀತಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ 60ಕ್ಕೂ ಹೆಚ್ಚು ದೇಶಗಳ ಮೇಲೆ ಶೇ. 10ರಿಂದ ಶೇ. 12.5ರಷ್ಟು ಹೊಸ ಸುಂಕಗಳನ್ನು ಜಾರಿಗೆ ತಂದಿದ್ದಾರೆ. ಇದು ಜಾಗತಿಕ ವ್ಯಾಪಾರ ಮತ್ತು ಭಾರತೀಯ ರಫ್ತುದಾರರಲ್ಲಿ ಆತಂಕ ಮೂಡಿಸಿದೆ.
  3. ಅಮೆರಿಕದ ಬಾಂಡ್ ಯೀಲ್ಡ್ ಏರಿಕೆ: ಅಮೆರಿಕದಲ್ಲಿ 10 ವರ್ಷಗಳ ಸರ್ಕಾರಿ ಬಾಂಡ್‌ಗಳ ಇಳುವರಿ ಶೇ. 4.7ಕ್ಕೆ ಏರಿಕೆಯಾಗಿದೆ. ಇದರಿಂದ ವಿದೇಶಿ ಹೂಡಿಕೆದಾರರು (FIIs) ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಿಂದ (Emerging Markets) ಹಣವನ್ನು ಹಿಂತೆಗೆದುಕೊಂಡು, ಅಮೆರಿಕದ ಸುರಕ್ಷಿತ ಹೂಡಿಕೆಗಳತ್ತ ಹೊರಳುತ್ತಿದ್ದಾರೆ.
  4. ವಿದೇಶಿ ಹೂಡಿಕೆಗಳ ಹೊರಹರಿವು: ಜಾಗತಿಕ ಅನಿಶ್ಚಿತತೆಯಿಂದಾಗಿ ವಿದೇಶಿ ಸಂಸ್ಥಾಗತ ಹೂಡಿಕೆದಾರರು ಭಾರತೀಯ ಶೇರು ಮಾರುಕಟ್ಟೆಯಲ್ಲಿ ನಿರಂತರವಾಗಿ ಶೇರುಗಳನ್ನು ಮಾರಾಟ ಮಾಡುತ್ತಿದ್ದಾರೆ.
  5. ಕಂಪನಿಗಳ ತ್ರೈಮಾಸಿಕ ಫಲಿತಾಂಶದ ಆತಂಕ: ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಭಾರತೀಯ ಕಂಪನಿಗಳ ಲಾಭಾಂಶದ (Corporate Earnings) ಮೇಲೆಯೂ ಒತ್ತಡ ಬಿದ್ದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ
ಬಿಯರ್ ಬಾಟಲಿಗಳಿದ್ದ ಲಾರಿ ಪಲ್ಟಿ; ಲಕ್ಷಾಂತರ ರೂ. ಮೌಲ್ಯದ ಮದ್ಯರಸ್ತೆ ಪಾಲು
ಬಿಯರ್ ಬಾಟಲಿಗಳಿದ್ದ ಲಾರಿ ಪಲ್ಟಿ; ಲಕ್ಷಾಂತರ ರೂ. ಮೌಲ್ಯದ ಮದ್ಯರಸ್ತೆ ಪಾಲು
ಸೂಪರ್ ಮಾಮ್ ರಿಯಾಲಿಟಿ ಶೋ ಆಡಿಷನ್ ವಿವರ ಇಲ್ಲಿದೆ
ಸೂಪರ್ ಮಾಮ್ ರಿಯಾಲಿಟಿ ಶೋ ಆಡಿಷನ್ ವಿವರ ಇಲ್ಲಿದೆ