Shopping Behaviour: ಆನ್​ಲೈನ್ ಶಾಪಿಂಗ್: ಜಗತ್ತಿನಲ್ಲಿ ಭಾರತೀಯರೇ ಅತಿಹೆಚ್ಚು ಆತುರಗಾರರಂತೆ; ಜನರ ಮಿಡಿತ ಅರಿತು ಜಾಣರಾದ ಕಂಪನಿಗಳು

|

Updated on: Jul 26, 2023 | 5:38 PM

Indians Most Impatient Online Shoppers: ಜಗತ್ತಿನ ಆನ್​ಲೈನ್ ಶಾಪರ್​ಗಳ ಪೈಕಿ ತಾಳ್ಮೆ ಇಲ್ಲದವರು ಹೆಚ್ಚು ಯಾರಾದರೂ ಇದ್ದಾರಂದರೆ ಅದು ಭಾರತೀಯರಂತೆ ಎಂದು ವಂಡರ್​ಮ್ಯಾನ್ ಥಾಂಪ್ಸನ್ ಎಂಬ ಕಂಪನಿ ಇತ್ತೀಚೆಗೆ ಪ್ರಕಟಿಸಿದ ವರದಿಯೊಂದರಲ್ಲಿ ತಿಳಿಸಿದೆ.

Shopping Behaviour: ಆನ್​ಲೈನ್ ಶಾಪಿಂಗ್: ಜಗತ್ತಿನಲ್ಲಿ ಭಾರತೀಯರೇ ಅತಿಹೆಚ್ಚು ಆತುರಗಾರರಂತೆ; ಜನರ ಮಿಡಿತ ಅರಿತು ಜಾಣರಾದ ಕಂಪನಿಗಳು
ಆನ್ಲೈನ್ ಶಾಪಿಂಗ್
Follow us on

ನವದೆಹಲಿ, ಜುಲೈ 26: ಸ್ಮಾರ್ಟ್​ಫೋನ್ ಬಂದ ಮೇಲೆ ಜನರ ವರ್ತನೆ ಬದಲಾಗಿದೆ. ಇಕಾಮರ್ಸ್ ಬೆಳೆದಂತೆ ಜನರ ಆನ್​ಲೈನ್ ಶಾಪಿಂಗ್ ವರ್ತನೆ ಬದಲಾಗುತ್ತಾ ಹೋಗಿದೆ. ಭಾರತದಲ್ಲಿ ಶೇ. 45ರಷ್ಟು ಡಿಜಿಟಲ್ ಉತ್ಪನ್ನಗಳು ಆನ್​ಲೈನ್​ನಲ್ಲೇ ಮಾರಾಟವಾಗುತ್ತವೆ. ಭಾರತದ ರೀಟೇಲ್ ಮಾರುಕಟ್ಟೆಯಲ್ಲಿ ಶೇ. 6.5ರಷ್ಟು ಪಾಲು ಆನ್​ಲೈನ್ ಮಾರಾಟದಿಂದಲೇ ಇದೆ. ಸಾಕಷ್ಟು ಜನರು ಬಟ್ಟೆ ಬರೆ, ಗ್ಯಾಜೆಟ್ ಇತ್ಯಾದಿಯನ್ನು ಆನ್​ಲೈನ್​ನಲ್ಲೇ ಖರೀದಿಸುತ್ತಾರೆ. ಈ ಮಧ್ಯೆ ಜಾಗತಿಕ ವರದಿಯೊಂದು ವಿಶ್ವಾದ್ಯಂತ ಜನರ ಶಾಪಿಂಗ್ ವರ್ತನೆ (Shopping Behaviour) ಬಗ್ಗೆ ಬೆಳಕು ಚೆಲ್ಲಿದೆ. ಕುತೂಹಲದ ಸಂಗತಿ ಇರುವುದು ಭಾರತೀಯರ ಶಾಪಿಂಗ್ ವರ್ತನೆಯದ್ದು. ಆನ್​ಲೈನ್ ಶಾಪಿಂಗ್ ವಿಚಾರಕ್ಕೆ ಬಂದರೆ ಭಾರತೀಯರು ವಿಶ್ವದಲ್ಲೇ ಅತ್ಯಂತ ಅಸಹನಶೀಲರಂತೆ. ಅಂದರೆ ತಾಳ್ಮೆ ಇಲ್ಲದ ಆನ್​ಲೈನ್ ಶಾಪರ್​ಗಳು ಭಾರತೀಯರು ಎಂದು ವಂಡರ್​ಮ್ಯಾನ್ ಥಾಂಪ್ಸನ್ (Wunderman Thompson) ಎಂಬ ರಿಸರ್ಚ್ ಕಂಪನಿ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ.

ಭಾರತೀಯರು ಯಾಕೆ ಆತುರಗಾರರು?

ಭಾರತದಲ್ಲಿ ಆನ್​ಲೈನ್ ಶಾಪಿಂಗ್ ಮಾಡುವವರಲ್ಲಿ ಶೇ. 38ರಷ್ಟು ಮಂದಿಗೆ ತಾವು ಆರ್ಡರ್ ಮಾಡಿದ ವಸ್ತುಗಳು 2 ಗಂಟೆಯೊಳಗೆ ಬರಬೇಕೆಂದು ಅಪೇಕ್ಷಿಸುತ್ತಾರಂತೆ. ಕ್ವಿಕ್ ಡೆಲಿವರಿ ನಿರೀಕ್ಷೆಯಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಭಾರತದವರೇ ಮುಂದಿದ್ದಾರೆ.

ಇದನ್ನೂ ಓದಿ: Economy: ಜಗತ್ತು ಅಲುಗಾಡಿದರೂ ಭಾರತ ನಿಶ್ಚಲ; 2023ರಲ್ಲಿ ಭಾರತದಿಂದ ನಿರೀಕ್ಷೆಮೀರಿದ ಆರ್ಥಿಕವೃದ್ಧಿ: ಐಎಂಎಫ್ ಅಂದಾಜು

ಹಾಗೆಯೇ, ಆರ್ಡರ್ ಮಾಡಿದ ಉತ್ಪನ್ನಗಳನ್ನು ರಿಟರ್ನ್ ಮಾಡುವುದರಲ್ಲೂ ಭಾರತೀಯರು ಮುಂದಿದ್ದಾರೆ. ಈ ರಿಪೋರ್ಟ್ ಪ್ರಕಾರ, ಆನ್​ಲೈನ್ ಶಾಪಿಂಗ್ ಮಾಡುವ ಭಾರತೀಯರು ಶೇ. 37ರಷ್ಟು ಉತ್ಪನ್ನಗಳನ್ನು ಮರಳಿಸುತ್ತಾರಂತೆ. ಈ ವಿಚಾರದಲ್ಲಿ ಭಾರತ ಯುಎಇ ನಂತರದ ಸ್ಥಾನದಲ್ಲಿದೆ. ಉತ್ಪನ್ನದ ಗುಣಮಟ್ಟದ ಬಗ್ಗೆ ತಕರಾರು ಇದ್ದು ಮರಳಿಸುವವರೇ ಹೆಚ್ಚು.

ಆನ್​ಲೈನ್ ಶಾಪರ್​ಗಳ ನಾಡಿಮಿಡಿತ ಅರಿತ ಕಂಪನಿಗಳೇ ಜಾಣ

ಭಾರತದ ಆನ್​ಲೈನ್ ಶಾಪರ್​ರಗಳ ಮಂತ್ರ ಎಂದರೆ ಅದು ಕ್ವಿಕ್ ಡೆಲಿವರಿ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನ. ಇವೆರಡನ್ನು ಒದಗಿಸುವ ಕಂಪನಿಗಳಿಗೆ ಭಾರತದಲ್ಲಿ ಭವಿಷ್ಯ ಇದೆ. ಭಾರತೀಯ ಶಾಪರ್​ಗಳ ಕ್ವಿಕ್ ಡೆಲಿವರಿ ಬಯಕೆಯನ್ನು ಅರಿತ ಸ್ವಿಗ್ಗಿ, ಜೆಪ್ಟೋ, ಬಿಗ್ ಬ್ಯಾಸ್ಕೆಟ್, ಸ್ವಿಗ್ಗಿ ಇನ್ಸ್​ಟಾಮಾರ್ಟ್, ಬ್ಲಿಂಕಿಟ್, ಡುಂಜೋ ಮೊದಲಾದ ಕಂಪನಿಗಳು ಒಳ್ಳೆಯ ಬ್ಯುಸಿನೆಸ್ ಕಾಣುತ್ತಿವೆ.

ಇದನ್ನೂ ಓದಿ: Alcohol King: ಶೇ. 66ರಷ್ಟು ಮಾರುಕಟ್ಟೆ ಪ್ರಾಬಲ್ಯ; ಇದೇ ಭಾರತದಲ್ಲಿ ಸ್ಪಿರಿಟ್​​ಗಳ ರಾಜ

ಆದರೆ, ಕ್ವಿಕ್ ಡೆಲಿವರಿ ಸರ್ವಿಸ್ ಒದಗಿಸುವುದು ಅಷ್ಟು ಸುಲಭದ ಕೆಲಸವಲ್ಲ. ಸಾಕಷ್ಟು ಡೆಲಿವರಿ ಹುಡುಗರು ಸೇರಿದಂತೆ ಸಮರ್ಪಕ ಇನ್​ಫ್ರಾಸ್ಟ್ರಕ್ಚರ್ ಮತ್ತು ಇಕೋಸಿಸ್ಟಂ ಅನ್ನು ಕಂಪನಿಗಳು ಹೊಂದಿರಬೇಕು. ಅದು ಸವಾಲಿನ ಕೆಲಸ. ಆದರೆ, ಸ್ಪರ್ಧಾತ್ಮಕ ಮಾರುಕಟ್ಟೆಯ ಬೇಡಿಕೆಗಳಿಗೆ ತಕ್ಕಂತೆ ಕಂಪನಿಗಳು ಅಣಿಗೊಳ್ಳುವುದು ಅನಿವಾರ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ