Retail inflation ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 7ಕ್ಕೆ ಏರಿಕೆ
ಜುಲೈನಲ್ಲಿ ಶೇಕಡಾ 6.71ರಷ್ಟಿದ್ದ ಚಿಲ್ಲರೆ ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇಕಡಾ 7ಕ್ಕೆ ಏರಿಕೆ
ದೆಹಲಿ: ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಭಾರತದ ಚಿಲ್ಲರೆ ಹಣದುಬ್ಬರವು (Retail inflation) ಆಗಸ್ಟ್‌ನಲ್ಲಿ ಶೇ 7ಕ್ಕೆ ಏರಿದೆ ಎಂದು ಸರ್ಕಾರವು ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ತೋರಿಸಿದೆ. ಆಹಾರ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಏರಿಕೆ ಆಗಿದೆ. ಹಿಂದಿನ ತಿಂಗಳಲ್ಲಿ ಸಿಪಿಐ 6.71 ರಷ್ಟಿತ್ತು. ಆಹಾರ ಹಣದುಬ್ಬರವು ಗ್ರಾಹಕರ ಬೆಲೆ ಸೂಚ್ಯಂಕದ (ಸಿಪಿಐ) ಅರ್ಧದಷ್ಟು ಭಾಗವನ್ನು ಹೊಂದಿದೆ. ಗೋಧಿ, ಅಕ್ಕಿ ಮತ್ತು ಬೇಳೆಕಾಳುಗಳಂತಹ ಅಗತ್ಯ ಬೆಳೆಗಳ ಬೆಲೆಗಳು ಹೆಚ್ಚಾದ ಕಾರಣ ಏರಿಕೆ ಆಗಿದೆ.ಚಿಲ್ಲರೆ ಹಣದುಬ್ಬರವು ಜನವರಿಯಿಂದ ರಿಸರ್ವ್ ಬ್ಯಾಂಕ್‌ನ ಆರಾಮದಾಯಕ ಮಟ್ಟವಾದ ಶೇ 6% ಕ್ಕಿಂತ ಹೆಚ್ಚಿದೆ. ಸತತ 8 ನೇ ತಿಂಗಳು ಹಣದುಬ್ಬರ ಅಂಕಿಅಂಶಗಳು ಸೆಂಟ್ರಲ್ ಬ್ಯಾಂಕ್‌ನ ಟಾಲರೆನ್ಸ್ ಬ್ಯಾಂಡ್‌ನ ಶೇ 2-6ಕ್ಕಿಂತ ಹೆಚ್ಚಾಗಿದೆ. ಹಣದುಬ್ಬರವನ್ನು ಶೇ 2-4 ವ್ಯಾಪ್ತಿಯಲ್ಲಿ ಇರಿಸಲು ಸರ್ಕಾರದಿಂದ ಕಾರ್ಯಪ್ರವೃತ್ತವಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಬೆಲೆ ಏರಿಕೆ ದರವನ್ನು ಪರಿಶೀಲಿಸುವ ಉದ್ದೇಶದಿಂದ ಮೇ ತಿಂಗಳಿನಿಂದ ಪ್ರಮುಖ ನೀತಿ ದರವನ್ನು 140 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.
ಆರ್ಬಿಐ ಯೋಜನೆಗಳು ಹಣದುಬ್ಬರವು 2023 ರ ಆರಂಭದವರೆಗೆ ಅದರ ಗುರಿ ಶ್ರೇಣಿಯ ಶೇ 6 ಟಾಪ್ ಎಂಡ್‌ಗಿಂತ ಹೆಚ್ಚಿರುವುದನ್ನು ತೋರಿಸಿದೆ. ಗಗನಕ್ಕೇರುತ್ತಿರುವ ಹಣದುಬ್ಬರವನ್ನು ತಡೆಯಲು ಕೇಂದ್ರ ಬ್ಯಾಂಕ್ ಈ ವರ್ಷದ ಮೇ ತಿಂಗಳಿನಿಂದ ಬೆಂಚ್‌ಮಾರ್ಕ್ ಸಾಲದ ದರಗಳನ್ನು 140 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದರ ಮುಂದಿನ ನೀತಿ ನಿರ್ಧಾರವು ಸೆಪ್ಟೆಂಬರ್ 30 ರಂದು ನಡೆಯಲಿದೆ.
Published On - 6:28 pm, Mon, 12 September 22