AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Intel: 200 ಉದ್ಯೋಗಿಗಳ ವಜಾಕ್ಕೆ ಇಂಟೆಲ್ ಚಿಂತನೆ; ಕಾರ್ಖಾನೆ ಕೆಲಸಗಾರರಿಗೆ 3 ತಿಂಗಳ ವೇತನ ರಹಿತ ರಜೆ

ವೆಚ್ಚ ಕಡಿತ ಯೋಜನೆಯ ಅಡಿಯಲ್ಲಿ ಕನಿಷ್ಠ 201 ಮಂದಿಯನ್ನು ಇಂಟೆಲ್ ವಜಾಗೊಳಿಸಲಿದೆ. ಇಂಟೆಲ್​ನ ಕ್ಯಾಲಿಫೋರ್ನಿಯಾದ ಫಾಲ್ಸೊಮ್​ ಕಚೇರಿಯಿಂದ 111 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

Intel: 200 ಉದ್ಯೋಗಿಗಳ ವಜಾಕ್ಕೆ ಇಂಟೆಲ್ ಚಿಂತನೆ; ಕಾರ್ಖಾನೆ ಕೆಲಸಗಾರರಿಗೆ 3 ತಿಂಗಳ ವೇತನ ರಹಿತ ರಜೆ
ಇಂಟೆಲ್Image Credit source: Reuters
TV9 Web
| Edited By: |

Updated on: Dec 09, 2022 | 11:00 AM

Share

ನವದೆಹಲಿ: ಶೀಘ್ರದಲ್ಲೇ ಸುಮಾರು 200 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ (Layoffs) ಚಿಪ್​ ತಯಾರಿಕಾ ಕಂಪನಿ ಇಂಟೆಲ್ (Intel) ತಿಳಿಸಿರುವುದಾಗಿ ವರದಿಯಾಗಿದೆ. ಅಮೆರಿಕದ ಕಂಪ್ಯೂಟರ್ ನಿಯತಕಾಲಿಕೆ ‘ಸಿಆರ್​ಎನ್’ ವರದಿಯ ಪ್ರಕಾರ, ಜನವರಿ 31ರಿಂದ ಇಂಟೆಲ್ ವಜಾ ಪ್ರಕ್ರಿಯೆ ಆರಂಭಿಸಲಿದೆ. ಮಾರಾಟದಲ್ಲಿ ಕುಸಿತ ಕಂಡುಬಂದಿರುವುದೇ ಉದ್ಯೋಗಿಗಳ ವಜಾಕ್ಕೆ ಕಾರಣ ಎನ್ನಲಾಗಿದೆ.

ವೆಚ್ಚ ಕಡಿತ ಯೋಜನೆಯ ಅಡಿಯಲ್ಲಿ ಕನಿಷ್ಠ 201 ಮಂದಿಯನ್ನು ಇಂಟೆಲ್ ವಜಾಗೊಳಿಸಲಿದೆ. ಇಂಟೆಲ್​ನ ಕ್ಯಾಲಿಫೋರ್ನಿಯಾದ ಫಾಲ್ಸೊಮ್​ ಕಚೇರಿಯಿಂದ 111 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. 90 ಮಂದಿ ಉದ್ಯೋಗಿಗಳನ್ನು ಸಾಂತಾ ಕ್ಲಾರಾ ಪ್ರದೇಶದಲ್ಲಿರುವ ಇಂಟೆಲ್ ಪ್ರಧಾನ ಕಚೇರಿಗೆ ವರ್ಗಾಯಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Layoffs: ನೂರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿರುವ ಸ್ವಿಗ್ಗಿ, ವೇದಾಂತು, ಅಡೋಬ್

ಜಾಗತಿಕವಾಗಿ ಇಂಟೆಲ್​ನ ಸಾವಿರಾರು ಕಾರ್ಖಾನೆ ಕೆಲಸಗಾರರಿಗೆ ಮೂರು ತಿಂಗಳ ವೇತನ ರಹಿತ ರಜೆ ಆಫರ್ ನೀಡಲಾಗಿದೆ ಎಂದು ‘ಒರೆಗೋನಿಯನ್ ಲೈವ್’ ವರದಿ ಮಾಡಿದೆ. ಉತ್ಪಾದನಾ ಕ್ಷೇತ್ರದ ಪ್ರತಿಭೆಗಳನ್ನು ಉಳಿಸಿಕೊಳ್ಳುವುದು ದೀರ್ಘಾವಧಿಯ ಬೆಳವಣಿಗೆ ದೃಷ್ಟಿಯಿಂದ ನಮಗೆ ಬಹು ಮುಖ್ಯವಾಗಿದೆ. ಸ್ವಯಂಪ್ರೇರಿತ ರಜೆ ಯೋಜನೆಯಿಂದ ಉತ್ಪಾದನಾ ಕ್ಷೇತ್ರದ ಕೆಲಸಗಾರರನ್ನು ಉಳಿಸಿಕೊಳ್ಳುವುದು ನಮಗೆ ಸುಲಭವಾಗಲಿದೆ. ಜತೆಗೆ, ಅಲ್ಪಾವಧಿಯ ವೆಚ್ಚ ಕಡಿಮೆ ಮಾಡಲೂ ಸಾಧ್ಯವಾಗಲಿದೆ ಎಂದು ಇಂಟೆಲ್ ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಐರ್ಲೆಂಡ್​ನಲ್ಲಿ ಇಂಟೆಲ್​ ಕಾರ್ಖಾನೆ ಕೆಲಸಗಾರರಿಗೆ ಮೂರು ತಿಂಗಳ ವೇತನರಹಿತ ರಜೆ ಆಫರ್ ನೀಡಿತ್ತು ಎಂದು ಇತ್ತೀಚೆಗೆ ‘ಟೈಮ್ಸ್’ ವರದಿ ಮಾಡಿತ್ತು.

ಸ್ವಿಗ್ಗಿ, ವೇದಾಂತು ಹಾಗೂ ಅಡೋಬ್ ಕೂಡ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗದುಹಾಕಲು ಮುಂದಾಗಿವೆ ಎಂದು ಗುರುವಾರ ವರದಿಯಾಗಿತ್ತು. ಸ್ವಿಗ್ಗಿ ಸುಮಾರು 250 ಉದ್ಯೋಗಿಗಳನ್ನು ಕೆಲಸದಿಂದ ತೆಗದುಹಾಕಲು ಚಿಂತನೆ ನಡೆಸಿದೆ. ಎಜುಟೆಕ್ ಕಂಪನಿ ವೇದಾಂತು ಇತ್ತೀಚೆಗೆ ಸುಮಾರು 385 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕೆಲವು ದಿನಗಳ ಹಿಂದಷ್ಟೇ ಅಡೋಬ್ ಕಂಪನಿ ಕೂಡ ಸುಮಾರು 100 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವಿವಿಧ ಮಾಧ್ಯಮ ವರದಿಗಳು ತಿಳಿಸಿದ್ದವು. ಈ ಮಧ್ಯೆ, ಜಾಗತಿಕವಾಗಿ ಸುಮಾರು 16 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್, 20,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಹಿಂದೆ ಅಮೆಜಾನ್ 10,000 ಉದ್ಯೋಗಿಗಳ ವಜಾಕ್ಕೆ ಮುಂದಾಗಿದೆ ಎಂದು ವರದಿಯಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ