Multibagger stock: ಈ ಸ್ಟಾಕ್‌ನಲ್ಲಿ ಮಾಡಿದ ರೂ. 1 ಲಕ್ಷದ ಹೂಡಿಕೆ 3 ವರ್ಷಗಳಲ್ಲಿ 73 ಲಕ್ಷ ರೂಪಾಯಿ
ಈ ಮಲ್ಟಿಬ್ಯಾಗರ್ ಷೇರಿನಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂಪಾಯಿ ಕೇವಲ ಮೂರು ವರ್ಷಗಳಲ್ಲಿ 73 ಲಕ್ಷ ರುಪಾಯಿ ಆಗಿದೆ. ಯಾವುದು ಆ ಷೇರು ಎಂಬ ವಿವರ ಇಲ್ಲಿದೆ.
ರಿಟರ್ನ್ ದೃಷ್ಟಿಕೋನದಿಂದ ಭಾರತೀಯ ಷೇರು ಮಾರುಕಟ್ಟೆಗೆ 2021ನೇ ಇಸವಿಯು ಗಮನಾರ್ಹ ವರ್ಷ ಆಗಿದೆ. ಈ ವರ್ಷದಲ್ಲಿ ಜಾಗತಿಕ ಆರ್ಥಿಕತೆಯು ಕೊರೊನಾ ಬಿಕ್ಕಟ್ಟಿನ ಅಡಿಯಲ್ಲಿ ತತ್ತರಿಸಿರುವ ಹೊರತಾಗಿಯೂ ಭಾರತದಲ್ಲಿನ ಮಲ್ಟಿಬ್ಯಾಗರ್ ಷೇರುಗಳ (Multibagger stock) ಪಟ್ಟಿಗೆ ಉತ್ತಮ ಸಂಖ್ಯೆಯ ಷೇರುಗಳು ಸೇರ್ಪಡೆ ಆಗಿವೆ. ಬ್ರೈಟ್‌ಕಾಮ್ ಗ್ರೂಪ್ (Brightcom Group) ಷೇರುಗಳು 2021ರಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳಲ್ಲಿ ಒಂದಾಗಿದೆ. ಕಳೆದ 3 ವರ್ಷಗಳಲ್ಲಿ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ರೂ. 2.44ರಿಂದ (ಎನ್‌ಎಸ್‌ಇಯಲ್ಲಿ 18 ಜನವರಿ 2019ರ ಬೆಲೆ) ರೂ. 178.05ಕ್ಕೆ (ಎನ್‌ಎಸ್‌ಇಯಲ್ಲಿ 19ನೇ ಜನವರಿ 2022ರ ಬೆಲೆ) ಹಂತಕ್ಕೆ ಏರಿದೆ. – ಈ ಅವಧಿಯಲ್ಲಿ ಸುಮಾರು ಶೇ 7,200ರಷ್ಟು ಏರಿಕೆ ಆಗಿದೆ.
ಬ್ರೈಟ್‌ಕಾಮ್ ಸಮೂಹದ ಷೇರಿನ ಬೆಲೆ ಇತಿಹಾಸ ಕಳೆದ ಒಂದು ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಷೇರು ಮಾರಾಟದ ಒತ್ತಡಕ್ಕೆ ಒಳಗಾಗಿದ್ದು, ಈ ಅವಧಿಯಲ್ಲಿ ಶೇಕಡಾ 4.5ರಷ್ಟು ನಷ್ಟವಾಗಿದೆ. ಕಳೆದ 6 ತಿಂಗಳಲ್ಲಿ ಪ್ರತಿ ಷೇರಿಗೆ ರೂ. 35ರಿಂದ ರೂ. 178ಕ್ಕೆ ಏರಿ, ಈ ಅವಧಿಯಲ್ಲಿ ಸುಮಾರು ಶೇ 400ರಷ್ಟು ಏರಿಕೆಯಾಗಿದೆ. ಇನ್ನು ಕಳೆದ ಒಂದು ವರ್ಷದಲ್ಲಿ ಈ ಡಿಜಿಟಲ್ ಮಾರ್ಕೆಟಿಂಗ್ ಕಂಪೆನಿಯ ಸ್ಟಾಕ್ ರೂ. 6.20ರಿಂದ ರೂ. 178ಕ್ಕೆ ಹೆಚ್ಚಳ ಆಗಿದ್ದು, ಈ ಅವಧಿಯಲ್ಲಿ ಸುಮಾರು ಶೇ 2800ರಷ್ಟು ಮೇಲೇರಿದೆ. ಕಳೆದ 3 ವರ್ಷಗಳಲ್ಲಿ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ರೂ. 2.44ರಿಂದ ರೂ. 178ಕ್ಕೆ ಹೆಚ್ಚಳವಾಗಿದ್ದು, ಈ ಅವಧಿಯಲ್ಲಿ 72 ಪಟ್ಟು ಏರಿಕೆಯಾಗಿದೆ.
ಹೂಡಿಕೆ ಮೇಲೆ ಪರಿಣಾಮ ಬ್ರೈಟ್‌ಕಾಮ್ ಗ್ರೂಪ್ ಷೇರಿನ ಬೆಲೆ ಇತಿಹಾಸ ನೋಡುವುದಾದರೆ ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ ಇಂದು 95,500 ರೂಪಾಯಿ ಆಗಿರುತ್ತಿತ್ತು. ಆದರೆ ಕಳೆದ ಆರು ತಿಂಗಳ ಹಿಂದೆ ಹೂಡಿದ್ದಲ್ಲಿ ರು. 5 ಲಕ್ಷ ಆಗಿರುತ್ತಿತ್ತು. ಹೂಡಿಕೆದಾರರು ಒಂದು ವರ್ಷದ ಹಿಂದೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ಆ 1 ಲಕ್ಷ ರುಪಾಯಿ ಇಂದು ರೂ. 29 ಲಕ್ಷ ಆಗಿ ಬದಲಾಗುತ್ತಿತ್ತು. ಹೂಡಿಕೆದಾರರು 3 ವರ್ಷಗಳ ಹಿಂದೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ ಹೂಡಿಕೆ ಮಾಡಿದ್ದರೆ ಮತ್ತು ಈ ಅವಧಿಯಲ್ಲಿ ಈ ಸ್ಕ್ರಿಪ್ ಹಾಗೇ ಉಳಿಸಿಕೊಂಡಿದ್ದಲ್ಲಿ 1 ಲಕ್ಷ ರೂಪಾಯಿ ಇಂದು ರೂ. 73 ಲಕ್ಷ ಆಗಿರುತ್ತಿತ್ತು.
ಬ್ರೈಟ್‌ಕಾಮ್ ಗ್ರೂಪ್ ಷೇರು ಬೆಲೆ ದೃಷ್ಟಿಕೋನ ಈ ಮಲ್ಟಿಬ್ಯಾಗರ್ ಸ್ಟಾಕ್ ಮುಂದಿನ ಎರಡು ವಾರಗಳಲ್ಲಿ 200 ರೂಪಾಯಿವರೆಗೆ ತಲುಪುವ ನಿರೀಕ್ಷೆ ಇರುವುದರಿಂದ ಸ್ಟಾಕ್ ವಿಶ್ಲೇಷಕರು ಈ ಕೌಂಟರ್‌ನಲ್ಲಿ ಇನ್ನೂ ಬುಲಿಶ್ ಆಗಿದ್ದಾರೆ ಅಲ್ಪಾವಧಿಗೆ ಬ್ರೈಟ್‌ಕಾಮ್ ಗ್ರೂಪ್ ಷೇರು ಬೆಲೆ ಗುರಿಯ ಕುರಿತು ಮಾತನಾಡುತ್ತಾ ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ, “ಮಲ್ಟಿಬ್ಯಾಗರ್ ಸ್ಟಾಕ್ ಚಾರ್ಟ್ ಮಾದರಿಯಲ್ಲಿ ಬುಲಿಶ್ ಆಗಿ ಕಾಣುತ್ತದೆ. ರೂ. 150 ಮಟ್ಟದಲ್ಲಿ ಸ್ಟಾಪ್ ಲಾಸ್ ಕಾಯ್ದುಕೊಳ್ಳುವ ಮೂಲಕ ರೂ. 200ರ ಸಮೀಪಾವಧಿಯ ಗುರಿಯೊಂದಿಗೆ ಕೌಂಟರ್ ಅನ್ನು ಖರೀದಿಸಬಹುದು ಮತ್ತು ಇಟ್ಟುಕೊಳ್ಳಬಹುದು,” ಎಂದು ಅವರು ಹೇಳಿದ್ದಾರೆ.
(ಈ ಲೇಖನದಲ್ಲಿನ ಅಭಿಪ್ರಾಯಗಳು ಮತ್ತು ಶಿಫಾರಸುಗಳು ವೈಯಕ್ತಿಕ ವಿಶ್ಲೇಷಕರು ಅಥವಾ ಬ್ರೋಕಿಂಗ್ ಕಂಪೆನಿಗಳದೇ ಹೊರತು ಟಿವಿ9ಕನ್ನಡ ಡಿಜಿಟಲ್ಗೆ ಸೇರಿದ ಯಾವುದೇ ಸಂಸ್ಥೆಗಾಗಲೀ ಈ ಲೇಖಕರಿಗಾಗಲೀ ಸಂಬಂಧಿಸಿದ್ದಲ್ಲ.)
ಇದನ್ನೂ ಓದಿ: Multibagger Stocks: ಏನಿದು ಮಲ್ಟಿಬ್ಯಾಗರ್ ಸ್ಟಾಕ್? ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ