2020ರ ಏಪ್ರಿಲ್ ತಿಂಗಳಿಂದ ಈಚೆಗೆ ಎನ್ಎಸ್ಇ ನಿಫ್ಟಿ ಇಂದಿನ ಮಟ್ಟಕ್ಕೆ ಹೋಲಿಸಿದಲ್ಲಿ ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಮಾರ್ಕೆಟ್ ಪ್ರಬಲವಾದ ಏರಿಕೆ ದಾಖಲಿಸಿರುವ ಈ ಕಾಲಘಟ್ಟದಲ್ಲಿ ಸ್ಮಾಲ್-ಕ್ಯಾಪ್, ಮಿಡ್- ಕ್ಯಾಪ್ ಅವುಗಳ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಭಾರತದ ಷೇರು ಮಾರುಕಟ್ಟೆಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್ಗಳ ಸಂಖ್ಯೆ ಜಾಸ್ತಿ ಆಗಿವೆ. ಈ ಷೇರುಗಳನ್ನು ದೀರ್ಘ ಕಾಲ ಹಾಗೇ ಇಟ್ಟುಕೊಂಡವರಿಗೆ ಅದ್ಭುತವಾದ ರಿಟರ್ನ್ಸ್ ಕೊಟ್ಟಿದೆ. ಮಲ್ಟಿಬ್ಯಾಗರ್ ಅಂದರೆ ಬಹು ಪಟ್ಟಿನ ರಿಟರ್ನ್ಸ್ ಎಂದರ್ಥ. ಉದಾಹರಣೆಯಾಗಿ ಮೈಂಡ್ಟ್ರೀ ತೆಗೆದುಕೊಳ್ಳಿ. ಈ ಐ.ಟಿ. ಸ್ಟಾಕ್ 81.75 ರೂಪಾಯಿ ಇದ್ದದ್ದು, ಇಂದು (ಆಗಸ್ಟ್ 20ರ ಮಧ್ಯಾಹ್ನ 12.04ರ ಹೊತ್ತಿಗೆ) 3355.40 ರೂಪಾಯಿ ತಲುಪಿದೆ. ಕಳೆದ ಹತ್ತು ವರ್ಷದಲ್ಲಿ 41 ಪಟ್ಟು ದರ ಹೆಚ್ಚಾಗಿದೆ.
ಮೈಂಡ್ಟ್ರೀ ಷೇರು ದರದ ಇತಿಹಾಸ
ಕಳೆದ 5 ಟ್ರೇಡಿಂಗ್ ಸೆಷನ್ನಲ್ಲಿ ಮೈಂಡ್ಟ್ರೀ ಷೇರು 2930 ರೂಪಾಯಿ ಹಂತದಿಂದ 3355.40 ರೂಪಾಯಿಗೆ ಏರಿದೆ. ಶೇಕಡಾ 14ರಷ್ಟು ಗಳಿಕೆಯನ್ನು ಕಂಡಿದೆ. ಕಳೆದ ಒಂದು ತಿಂಗಳಲ್ಲಿ 2762.95 ರೂಪಾಯಿಯಿಂದ 3355.40 ರೂಪಾಯಿ ಬಳಿ ಬಂದಿದೆ. ಷೇರುದಾರರಿಗೆ ಶೇ 21ರಷ್ಟು ರಿಟರ್ನ್ಸ್ ನೀಡಿದೆ. ಆರು ತಿಂಗಳ ಹಿಂದಿನ ದರವನ್ನು ನೋಡುವುದಾದರೆ 1614.55 ರೂಪಾಯಿಯಲ್ಲಿ ಇದ್ದದ್ದು 3355.40ಗೆ ಏರಿಕೆಯಾಗಿ, ಶೇ 107ರಷ್ಟು ಏರಿಕೆಯನ್ನು ಈ ಅವಧಿಯಲ್ಲೇ ದಾಖಲಿಸಿದೆ. ಒಂದು ವರ್ಷದಲ್ಲಿ ಮೈಂಡ್ಟ್ರೀ ಷೇರಿನದ ದರವು ಶೇ 185ರಷ್ಟು ಹೆಚ್ಚಳವಾಗಿದೆ. ಕಳೆದ 5 ವರ್ಷದಲ್ಲಿ ಶೇ 486ರಷ್ಟು ರಿಟರ್ನ್ಸ್ ನೀಡಿರುವ ಈ ಷೇರು, 569.25 ರೂಪಾಯಿಯಿಂದ 3355.40 ರೂಪಾಯಿಗೆ ಬಂದಿದೆ. ಮೈಂಡ್ಟ್ರೀ ಕಂಪೆನಿ ಷೇರಿನ ಹತ್ತು ವರ್ಷದ ಇತಿಹಾಸ ಗಮನಿಸಿದರೆ, 81.75 ರೂಪಾಯಿಯಿಂದ 3355.40 ರೂಪಾಯಿಗೆ ತಲುಪಿ, ಷೇರುದಾರರಿಗೆ ಶೇ 4000ದಷ್ಟು ರಿಟರ್ನ್ಸ್ ದಕ್ಕಿಸಿಕೊಟ್ಟಿದೆ.
ಹೂಡಿಕೆ ಮೇಲಿನ ಪರಿಣಾಮ
ಐತಿಹಾಸಿಕ ದರಗಳನ್ನು ನೋಡುವುದಾದರೆ, ಈ ಮಲ್ಟಿಬ್ಯಾಗರ್ ಸ್ಟಾಕ್ ಮೇಲೆ ತಿಂಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ಇವತ್ತಿಗೆ 1.21 ಲಕ್ಷ ರೂಪಾಯಿ ಆಗಿರುತ್ತದೆ. ಅದೇ ಆರು ತಿಂಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ಆ ಮೊತ್ತ ಇವತ್ತಿಗೆ 2.07 ಲಕ್ಷ ರೂಪಾಯಿ ಆಗಿರುತ್ತದೆ. ಇನ್ನು ಹೂಡಿಕೆದಾರರು ವರ್ಷದ ಹಿಂದೆ ಇದೇ ಐ.ಟಿ. ಸ್ಟಾಕ್ ಮೇಲೆ ಒಂದು ಲಕ್ಷ ಹೂಡಿದ್ದರೆ ಹಾಗೂ ಅದನ್ನು ಹಾಗೂ ಉಳಿಸಿಕೊಂಡಿದ್ದಲ್ಲಿ 2.85 ಲಕ್ಷ ರೂಪಾಯಿ ಆಗಿರುತ್ತದೆ. 5 ವರ್ಷದ ಹಿಂದೆ ಮೈಂಡ್ಟ್ರೀ ಷೇರಿನ ಮೇಲೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ, ಇವತ್ತಿಗೂ ಹಾಗೇ ಉಳಿಸಿಕೊಂಡಿದ್ದಲ್ಲಿ ಇವತ್ತಿಗೆ ಅದು 5.86 ಲಕ್ಷ ರೂಪಾಯಿ ಆಗಿರುತ್ತಿತ್ತು. ಇನ್ನು ಹತ್ತು ವರ್ಷದ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ, ಮೈಂಡ್ಟ್ರೀ ಷೇರುಗಳನ್ನು ಹಾಗೇ ಉಳಿಸಿಕೊಂಡಿದ್ದಲ್ಲಿ ಇವತ್ತಿಗೆ 41 ಲಕ್ಷ ರೂಪಾಯಿ ಆಗಿರುತ್ತಿತ್ತು.
ಸಿಂಪಲ್ ಆಗಿ ಹೇಳಬೇಕು ಅಂದರೆ, ಹತ್ತು ವರ್ಷದ ಹಿಂದೆ ಟಾಟಾ ನ್ಯಾನೋ ಕಾರು ಖರೀದಿಸುವಷ್ಟು ಮೊತ್ತವನ್ನು ಮೈಂಡ್ ಟ್ರೀ ಷೇರಿನ ಮೇಲೆ ಹಾಕಿದ್ದರೆ ಇವತ್ತಿಗೆ ಮರ್ಸಿಡೀಸ್ ಅಥವಾ ಬಿಎಂಡಬ್ಲ್ಯು ಕಾರು ಖರೀದಿ ಮಾಡುವಷ್ಟು ದುಡ್ಡು ಬಂದಿರುತ್ತಿತ್ತು.
ಇದನ್ನೂ ಓದಿ: 1 ಲಕ್ಷ ಹೂಡಿಕೆ ಮಾಡಿದ ಈ ಷೇರುದಾರನಿಗೆ ಸಿಕ್ತು 40 ಲಕ್ಷ; ಅಬ್ಬಾ ಯಾವುದೀ ಷೇರು
(Investment Of Rs 1 Lakh In Mindtree IT Stock Become Rs 40 Lakh In 10 Years)
Published On - 5:18 pm, Fri, 20 August 21