Multibagger: ಈ ಕಂಪೆನಿಯ ಷೇರಿನಲ್ಲಿ ಮಾಡಿದ 1 ಲಕ್ಷ ರೂ. ಹೂಡಿಕೆ 6 ತಿಂಗಳಲ್ಲಿ 35.52 ಲಕ್ಷ ರೂ.
ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ ಮಾಡಿದ 1 ಲಕ್ಷ ರೂಪಾಯಿಯ ಹೂಡಿಕೆ ಆರು ತಿಂಗಳಲ್ಲಿ ರೂ. 35.52 ಲಕ್ಷ ಆಗಿದೆ. ಯಾವುದು ಆ ಸ್ಟಾಕ್ ಎಂಬ ವಿವರ ಇಲ್ಲಿದೆ.
ಖಾದ್ಯ ತೈಲ ತಯಾರಿಕೆಯ ಮಿಡ್ ಕ್ಯಾಪ್ ಕಂಪೆನಿ- ಸೂರಜ್ ಇಂಡಸ್ಟ್ರೀಸ್ ಕೇವಲ 6 ತಿಂಗಳಲ್ಲಿ ಮಲ್ಟಿಬ್ಯಾಗರ್ ಸ್ಟಾಕ್ ಆಗಿ ಮಾರ್ಪಟ್ಟಿದೆ. ಜೂನ್ 3 ರಿಂದ ಡಿಸೆಂಬರ್ 3, 2021ರ ಮಧ್ಯೆ ಈ ಸ್ಟಾಕ್ ಕನಿಷ್ಠ ರೂ.2.20ನಿಂದ ಮೇಲಕ್ಕೆ ಏರಿ, ರೂ. 78.15 ತಲುಪಿದೆ. ಇಂದಿನ ವಹಿವಾಟಿನಲ್ಲಿ (ಡಿಸೆಂಬರ್ 3, 2021) ಸ್ಟಾಕ್ ಅಪ್ಪರ್ ಸರ್ಕ್ಯೂಟ್ ಮಿತಿಯಾದ ಶೇ 5ರಷ್ಟನ್ನು ತಲುಪಿ, ರೂ. 78.15 ಮುಟ್ಟಿದೆ. ಆದರೆ ಎನ್ಎಸ್ಇಯಲ್ಲಿ ಈ ಷೇರುಗಳನ್ನು ಲಿಸ್ಟ್ ಮಾಡಿಲ್ಲ. 2.20 ರೂಪಾಯಿಯಿಂದ ಸದ್ಯದ ಬೆಲೆಗೆ, ಅಂದರೆ ಈ 6 ತಿಂಗಳ ಸಮಯದಲ್ಲಿ ಶೇ 3552ರಷ್ಟು ಗಳಿಕೆ ಕಂಡಿದೆ. 1 ವರ್ಷದ ಗಳಿಕೆ ಗಮನಿಸಿದರೆ ಶೇ 5,958ರಷ್ಟಿದೆ. ಆ ಸಂದರ್ಭದಲ್ಲಿ ಈ ಸ್ಟಾಕ್‌ನಲ್ಲಿ ಒಂದೇ ಸಲಕ್ಕೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ 45,454 ಷೇರುಗಳು ಖರೀದಿಸಬಹುದಿತ್ತು. ಸದ್ಯಕ್ಕೆ ಆ ಷೇರಿನ ಬೆಲೆ ಬಹು ಪಟ್ಟು ಜಾಸ್ತಿಯಾಗಿ, ಈಗಿನ ಮೌಲ್ಯದಂತೆ ರೂ. 35.52 ಲಕ್ಷ ಆಗಿರುತ್ತಿತ್ತು ಈ ಕಂಪೆನಿಯ ಸದ್ಯದ ಮಾರುಕಟ್ಟೆ ಬಂಡವಾಳ ರೂ. 67 ಕೋಟಿ ಇದೆ.
Q2FY22 ಫಲಿತಾಂಶದಂತೆ, ಸೂರಜ್ ಇಂಡಸ್ಟ್ರೀಸ್ ನಿವ್ವಳ ಮಾರಾಟವು ವರ್ಷದಿಂದ ವರ್ಷಕ್ಕೆ ಉತ್ತಮವಾದ ಜಿಗಿತವನ್ನು ಕಂಡಿದೆ. ಆ ಮೂಲಕ FY22ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 14.96 ಕೋಟಿ ರೂಪಾಯಿ ತಲುಪಿದೆ. ಅದೇ ರೀತಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಗಮನಿಸಿದರೂ ಶೇ 1087ರಷ್ಟು ಜಾಸ್ತಿಯಾಗಿ, 0.82 ಕೋಟಿ ಆಗಿದೆ. EBITDA ಸೆಪ್ಟೆಂಬರ್ 2021ರಲ್ಲಿ 1.01 ಕೋಟಿ ರೂಪಾಯಿ ತಲುಪಿದ್ದು, 2020ರ ಸೆಪ್ಟೆಂಬರ್‌ನಲ್ಲಿ ಇದ್ದ 0.08 ಕೋಟಿಗೆ ಹೋಲಿಸಿದರೆ ಶೇ 1362.5ರಷ್ಟು ಹೆಚ್ಚಾಗಿದೆ.
ಕಂಪೆನಿಯ ಇಪಿಎಸ್ ಕೂಡ ಸೆಪ್ಟೆಂಬರ್‌ನಲ್ಲಿ ರೂ. 0.95ಕ್ಕೆ ಹೆಚ್ಚಳವಾಗಿದೆ. ವರ್ಷದ ಹಿಂದಿನ ಅವಧಿಯಲ್ಲಿ ಇದೇ ತ್ರೈಮಾಸಿಕದಲ್ಲಿ 0.11 ಪೈಸೆ ಇತ್ತು. ಸೂರಜ್ ಇಂಡಸ್ಟ್ರೀಸ್‌ನ SWOT ವಿಶ್ಲೇಷಣೆ ಸೂರಜ್ ಇಂಡಸ್ಟ್ರೀಸ್ ಷೇರುಗಳು 5 ದಿನ, 20 ದಿನ, 50 ದಿನ, 100 ದಿನ ಮತ್ತು 200 ದಿನ ಚಲಿಸುವ ಸರಾಸರಿಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದೆ. ಸ್ಕ್ರಿಪ್‌ನ SWOT ವಿಶ್ಲೇಷಣೆಯ ಪ್ರಕಾರ, ಪ್ರಮುಖ ಶಕ್ತಿಯೆಂದರೆ ನಿವ್ವಳ ನಗದು ಹರಿವು ಮತ್ತು ಆಪರೇಟಿಂಗ್ ಚಟುವಟಿಕೆಯಿಂದ ನಗದು ಹೆಚ್ಚುತ್ತಿದೆ. ಆದರೆ ಅದರ ದೌರ್ಬಲ್ಯ ಮತ್ತು ಆತಂಕ ಅಂದರೆ, ಕಡಿಮೆ ಪಿಯೋಟ್ರೋಸ್ಕಿ ಸ್ಕೋರ್ ಆಗಿದೆ. ಮತ್ತು ಇದು ದುರ್ಬಲ ಹಣಕಾಸು ಸ್ಥಿತಿ ಹೊಂದಿರುವ ಕಂಪೆನಿಗಳಲ್ಲಿ ಒಂದಾಗಿದೆ. ಇನ್ನು ಈ ಕಂಪೆನಿಯ ಷೇರು 40ಕ್ಕಿಂತ ಹೆಚ್ಚಿನ P/E ಹೊಂದಿದೆ.
ಸೂರಜ್ ಇಂಡಸ್ಟ್ರೀಸ್ ಬಗ್ಗೆ ತಿಳಿಸುವುದಾದರೆ, ವನಸ್ಪತಿ ಮತ್ತು ತೈಲ ಕಂಪೆನಿಯು ಅಂಗನ್ ಮತ್ತು ಅಪ್ನಾ ಬ್ರ್ಯಾಂಡ್ ಅಡಿಯಲ್ಲಿ ಉತ್ಪನ್ನ ಶ್ರೇಣಿಯನ್ನು ನೀಡುತ್ತದೆ. ಇದು ಓಲ್ಡ್ ಮಾಂಕ್ ರಮ್ ಬ್ರಾಂಡ್ ಹೆಸರಿನಲ್ಲಿ ಮದ್ಯ ಉತ್ಪನ್ನಗಳನ್ನು ಸಹ ಒದಗಿಸುತ್ತದೆ. ಸಂಸ್ಥೆಯು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದೆ. ಈ ಕಂಪೆನಿಯು 1992ರಲ್ಲಿ ಸ್ಥಾಪನೆಯಾಗಿದ್ದು, ಉತ್ತರ ಪ್ರದೇಶದ ನೋಯ್ಡಾದಲ್ಲಿ ನೆಲೆಗೊಂಡಿದೆ.
ಇದನ್ನೂ ಓದಿ: Multibagger: ಈ ಷೇರಿನ ಮೇಲೆ ಹೂಡಿಕೆ ಮಾಡಿದ್ದ 1 ಲಕ್ಷ ರೂಪಾಯಿ 8 ತಿಂಗಳಲ್ಲಿ 71 ಲಕ್ಷ ರೂಪಾಯಿ