Multibagger: ಈ ಷೇರಿನಲ್ಲಿ ಮಾಡಿದ 1 ಲಕ್ಷ ರೂಪಾಯಿ ಹೂಡಿಕೆ ನೀಡಿದ್ದು 3 ತಿಂಗಳಲ್ಲಿ 13 ಲಕ್ಷ ರೂ. ರಿಟರ್ನ್ಸ್
ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ಮಾಡಿದ 1 ಲಕ್ಷ ರೂಪಾಯಿ ಹೂಡಿಕೆಯು ಮೂರು ತಿಂಗಳಲ್ಲಿ 13 ಲಕ್ಷ ರೂಪಾಯಿ ಆಗಿದೆ. ಯಾವುದು ಆ ಸ್ಟಾಕ್ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
2021ನೇ ಇಸವಿ ಷೇರು ಮಾರುಕಟ್ಟೆ ಹೂಡಿಕೆದಾರರ ಪಾಲಿಗೆ ಪ್ರಮುಖವಾದ ವರ್ಷವಾಗಿದೆ. ಏಕೆಂದರೆ ದೊಡ್ಡ ಸಂಖ್ಯೆಯಲ್ಲಿ ಷೇರುಗಳು ಅದರ ಷೇರುದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ (ಶೇ 100ಕ್ಕಿಂತ ಹೆಚ್ಚು) ಅನ್ನು ತಲುಪಿಸಿವೆ. ಈ ವರ್ಷದಲ್ಲಿ ಭಾರತೀಯ ಸೂಚ್ಯಂಕಗಳು ಹೊಸ ಎತ್ತರಕ್ಕೆ ಏರಿದವು. ಷೇರು ಮಾರುಕಟ್ಟೆ ತಜ್ಞರ ಪ್ರಕಾರ, ಮಾರುಕಟ್ಟೆಯ ಎಲ್ಲ ವಿಭಾಗಗಳು ಭಾರತೀಯ ಸೂಚ್ಯಂಕಗಳಿಗೆ ಉತ್ತೇಜನ ನೀಡುವ ಸೆಗ್ಮೆಂಟ್ಗಳು ಏರಿಕೆಯಲ್ಲಿ ಇರುವುದರಿಂದ ಇದು ಸಾಧ್ಯ ಆಗಿರಬಹುದು. ಆದ್ದರಿಂದ 2021ರಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳು ಮತ್ತು ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. 3i ಇನ್ಫೋಟೆಕ್ ಅಂತಹ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಆಗಿದ್ದು, ಕಳೆದ 3 ತಿಂಗಳಲ್ಲಿ ಶೇ 1200ರಷ್ಟು ಲಾಭವನ್ನು ನೀಡಿದೆ.
ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನ ಷೇರು ಬೆಲೆಯ ಇತಿಹಾಸದ ಪ್ರಕಾರ, ಇದು ಕಳೆದ ವಾರ ಎನ್ಎಸ್ಇಯಲ್ಲಿನ ಎಲ್ಲ 5 ವಹಿವಾಟು ಸೆಷನ್‌ಗಳಲ್ಲಿ ಶೇಕಡಾ 5ರ ಅಪ್ಪರ್ ಸರ್ಕ್ಯೂಟ್ (ಮೇಲ್ಸ್ತರ) ತಲುಪಿ, ಶೇ 21.50ರಷ್ಟು ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಈ ಪೆನ್ನಿ ಸ್ಟಾಕ್ 35.85 ರೂಪಾಯಿಯಿಂದ ರೂ. 108.50 ಕ್ಕೆ ಏರಿ, ಈ ಅವಧಿಯಲ್ಲಿ ಶೇ 200ರಷ್ಟು ಏರಿಕೆಯಾಗಿದೆ. ಅದೇ ರೀತಿ, ಕಳೆದ 3 ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ಪ್ರತಿ ಷೇರಿಗೆ ರೂ. 8.45 ರಿಂದ (ಎನ್‌ಎಸ್‌ಇಯಲ್ಲಿ 27ನೇ ಆಗಸ್ಟ್ 2021ರ ಬೆಲೆ) ರೂ. 108.50 ಮಟ್ಟಕ್ಕೆ (ಎನ್‌ಎಸ್‌ಇಯಲ್ಲಿ 26 ನವೆಂಬರ್ 2021ರಂದು ಮುಕ್ತಾಯದ ಬೆಲೆ) ಏರಿಕೆಯಾಗಿದೆ. ಈ ಸಮಯದಲ್ಲಿ ಸುಮಾರು ಶೇ 1200ರಷ್ಟು ಏರಿಕೆ ದಾಖಲಿಸಿದೆ.
ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನ ಷೇರಿನ ಬೆಲೆ ಇತಿಹಾಸವನ್ನು ಗಣನೆಗೆ ತೆಗೆದುಕೊಂಡರೆ, ಹೂಡಿಕೆದಾರರು ಒಂದು ವಾರದ ಹಿಂದೆ ಈ ಸ್ಟಾಕ್‌ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಆ ಮೊತ್ತವು ಇಂದು 1.21 ಲಕ್ಷ ರೂಪಾಯಿ ಆಗಿರುತ್ತಿತ್ತು. ಅದೇ ರೀತಿ, ಹೂಡಿಕೆದಾರರು ಒಂದು ತಿಂಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದರೆ ಮತ್ತು ಇಲ್ಲಿಯವರೆಗೆ ಈ ಷೇರುಗಳನ್ನು ಮಾರದೇ ಉಳಿಸಿಕೊಂಡಿದ್ದರೆ ಆ 1 ಲಕ್ಷ ಇಂದು 3 ಲಕ್ಷವಾಗಿ ಬದಲಾಗುತ್ತಿತ್ತು. ಇನ್ನು, 3 ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ 1 ಲಕ್ಷ ರುಪಾಯಿಯನ್ನು ಹೂಡಿಕೆ ಮಾಡಿ, ತಲಾ 8.45ರಂತೆ ಒಂದು ಷೇರನ್ನು ಖರೀದಿಸಿದ್ದರೆ ಮತ್ತು ಹೂಡಿಕೆದಾರರು ಈ ಷೇರುಗಳನ್ನು ಹಾಗೇ ಉಳಿಸಿಕೊಂಡಿದ್ದರೆ ಆ 1 ಲಕ್ಷ ರೂಪಾಯಿ ಇಂದು 13 ಲಕ್ಷ ಆಗಿರುತ್ತಿತ್ತು.
ಇದನ್ನೂ ಓದಿ: Multibagger: ಮಾಯಾಬಜಾರ್ ಸಿನಿಮಾ ನೆನಪಿಸುವಂಥ ಈ ಷೇರಿನಲ್ಲಿನ 1 ಲಕ್ಷ ರೂ. ಹೂಡಿಕೆ ವರ್ಷದಲ್ಲಿ 31 ಲಕ್ಷ ರೂಪಾಯಿ