Multibagger: ಮಾಯಾಬಜಾರ್ ಸಿನಿಮಾ ನೆನಪಿಸುವಂಥ ಈ ಷೇರಿನಲ್ಲಿನ 1 ಲಕ್ಷ ರೂ. ಹೂಡಿಕೆ ವರ್ಷದಲ್ಲಿ 31 ಲಕ್ಷ ರೂಪಾಯಿ

ಯಾವುದರಲ್ಲಿ ಇಷ್ಟು ರಿಟರ್ನ್ಸ್​ ಬರಬಹುದೋ ಗೊತ್ತಿಲ್ಲ. ಹಾಗಂತ ಇದರಲ್ಲಿ ಅಪಾಯ ಇಲ್ಲವೆಂದಲ್ಲ. ಆದರೆ ಕಳೆದ ಒಂದು ವರ್ಷದಲ್ಲಿ ಈ ಸ್ಕಾಕ್​ನಲ್ಲಿ ಮಾಡಿದ 1 ಲಕ್ಷ ಹೂಡಿಕೆ 31 ಲಕ್ಷ ರೂಪಾಯಿ ಆಗಿರುತ್ತಿತ್ತು.

Multibagger: ಮಾಯಾಬಜಾರ್ ಸಿನಿಮಾ ನೆನಪಿಸುವಂಥ ಈ ಷೇರಿನಲ್ಲಿನ 1 ಲಕ್ಷ ರೂ. ಹೂಡಿಕೆ ವರ್ಷದಲ್ಲಿ 31 ಲಕ್ಷ ರೂಪಾಯಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shruti hegde

Updated on: Nov 24, 2021 | 8:14 AM

ಕಳೆದ ಒಂದು ವರ್ಷದಲ್ಲಿ ಬಹಳಷ್ಟು ಷೇರುಗಳು ಶೇಕಡಾ 100ಕ್ಕಿಂತ ಹೆಚ್ಚು ಲಾಭವನ್ನು ನೀಡಿವೆ. 2021ರಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳ ಪಟ್ಟಿಯಲ್ಲಿ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್‌ನಿಂದ ಸ್ಮಾಲ್-ಕ್ಯಾಪ್​ವರೆಗಿನ ಷೇರುಗಳನ್ನು ಮಾತ್ರ ಒಳಗೊಂಡಿಲ್ಲ, ಇದು ಪೆನ್ನಿ ಸ್ಟಾಕ್‌ಗಳನ್ನು ಸಹ ಒಳಗೊಂಡಿದೆ. JITF ಇನ್​ಫ್ರಾಲಾಜಿಸ್ಟಿಕ್ಸ್ ಷೇರುಗಳು ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ಗಳಲ್ಲಿ ಒಂದಾಗಿದೆ. ಇದು ಕಳೆದ ಒಂದು ವರ್ಷದಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಶೇ 100ಕ್ಕಿಂತ ಹೆಚ್ಚಿನ ಲಾಭವನ್ನು ನೀಡಿದೆ. ವಾಸ್ತವವಾಗಿ, JITF ಇನ್​ಫ್ರಾಲಾಜಿಸ್ಟಿಕ್ಸ್ ಷೇರಿನ ಬೆಲೆಯು ಪ್ರತಿ ಷೇರಿಗೆ ರೂ. 6.05ರಿಂದ ರೂ. 188ಕ್ಕೆ ಏರಿದೆ. ಕಳೆದ ಒಂದು ವರ್ಷದಲ್ಲಿ ಅದರ ಷೇರುದಾರರಿಗೆ ಶೇ 3000ಕ್ಕಿಂತ ಹೆಚ್ಚಿನ ಲಾಭವನ್ನು ನೀಡಿದೆ

ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನ ಷೇರು ಬೆಲೆ ಇತಿಹಾಸದ ಪ್ರಕಾರ, JITF ಇನ್​ಫ್ರಾ ಲಾಜಿಸ್ಟಿಕ್ಸ್ ಷೇರುಗಳು ಕಳೆದ ಒಂದು ತಿಂಗಳಿನಿಂದ ಪ್ರಾಫಿಟ್-ಬುಕಿಂಗ್ ಒತ್ತಡದಲ್ಲಿದೆ. ಇದು ಪ್ರತಿ ಷೇರಿಗೆ ರೂ.261.50ರಿಂದ ರೂ.187.95ಕ್ಕೆ ಇಳಿದಿದೆ, ಈ ಅವಧಿಯಲ್ಲಿ ಸುಮಾರು ಶೇ 28ರಷ್ಟು ನಷ್ಟವನ್ನು ಕಂಡಿದೆ. ಕಳೆದ 6 ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಪ್ರತಿ ಷೇರಿಗೆ ರೂ. 11.85ರಿಂದ ರೂ. 187.95ಕ್ಕೆ ಏರಿದೆ, ಈ ಅವಧಿಯಲ್ಲಿ ಸುಮಾರು ಶೇ 1500ರಷ್ಟು ಏರಿಕೆಯಾಗಿದೆ. ವರ್ಷದ ಆರಂಭದಿಂದ ಇಲ್ಲಿಯವರೆಗೆ ಈ ಷೇರು 12.80 ರೂಪಾಯಿಯಿಂದ 187.95 ರೂಪಾಯಿ ಮಟ್ಟಕ್ಕೆ ಏರಿದೆ. 2021ರಲ್ಲಿ ಶೇ 1370ರಷ್ಟು ಜಿಗಿತವನ್ನು ದಾಖಲಿಸಿದೆ. ಅದೇ ರೀತಿ, ಕಳೆದ ಒಂದು ವರ್ಷದಲ್ಲಿ ಈ ಷೇರು ರೂ. 6.05ರಿಂದ (22 ನವೆಂಬರ್ 2020 ರಂದು NSE ನಲ್ಲಿ ಬೆಲೆ) ರೂ. 187.95 (NSE ನಲ್ಲಿ 22 ನವೆಂಬರ್ 2021 ರಂದು ಮುಕ್ತಾಯದ ಬೆಲೆ) ಜಿಗಿದಿದೆ. ಈ ಅವಧಿಯಲ್ಲಿ ಶೇ 3000ದಷ್ಟು ಏರಿಕೆಯನ್ನು ನೀಡಿದೆ.

ಹೂಡಿಕೆ ಮೇಲೆ ಪರಿಣಾಮ JITF ಇನ್​ಫ್ರಾ ಲಾಜಿಸ್ಟಿಕ್ಸ್ ಷೇರು ಬೆಲೆ ಇತಿಹಾಸ ನೋಡುವುದಾದರೆ, ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಷೇರಿನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಇಂದು 72,000 ರೂಪಾಯಿ ಆಗಿರುತ್ತಿತ್ತು. ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ಹೂಡಿಕೆದಾರರು 6 ತಿಂಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದರೆ, 16 ಲಕ್ಷ ಆಗುತ್ತಿತ್ತು. ಅದೇ ರೀತಿ, ಹೂಡಿಕೆದಾರರು 2021ರ ಆರಂಭದಲ್ಲಿ 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ, JITF ಇನ್​ಫ್ರಾ ಲಾಜಿಸ್ಟಿಕ್ಸ್ ಷೇರುಗಳನ್ನು 12.80 ರಂತೆ ಖರೀದಿಸಿದ್ದರೆ ಅದರ 1 ಲಕ್ಷ ಇಂದು 14.7 ಲಕ್ಷಕ್ಕೆ ಬದಲಾಗುತ್ತಿತ್ತು. ಅದೇ ರೀತಿ ಹೂಡಿಕೆದಾರರು ಒಂದು ವರ್ಷದ ಹಿಂದೆ 1 ಲಕ್ಷ ಹೂಡಿಕೆ ಮಾಡಿ, ತಲಾ 6.05ರಂತೆ ಒಂದು ಷೇರನ್ನು ಖರೀದಿಸಿ ಮತ್ತು ಇಲ್ಲಿಯವರೆಗೆ ಇರಿಸಿಕೊಂಡಿದ್ದರೆ ಆ 1 ಲಕ್ಷ ಇಂದು ರೂ. 31 ಲಕ್ಷ ಆಗಿರುತ್ತಿತ್ತು.

ಇದನ್ನೂ ಓದಿ: 20 ವರ್ಷದ ಹಿಂದೆ ರಾಯಲ್ ಎನ್​ಫೀಲ್ಡ್​ ಬೈಕ್ ಬದಲಿಗೆ ಈ ಕಂಪೆನಿ ಷೇರು ಖರೀದಿಸಿದ್ದರೆ ಇವತ್ತಿಗೆ ಎಷ್ಟು ಕೋಟಿ ಗೊತ್ತೆ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ