
ಬಾಡಿಗೆ ಮನೆ (Rented house) ಅಂದ ಮೇಲೆ ಮನೆಮಾಲೀಕರು ಭದ್ರತಾ ಠೇವಣಿ ರೂಪದಲ್ಲಿ ಇಂತಿಷ್ಟು ಹಣವನ್ನು ಪಡೆಯುತ್ತಾರೆ. ಆದರೆ ಬಾಡಿಗೆ ಮನೆ ಬಿಡುವಾಗ ಆ ಹಣವನ್ನು ಬಾಡಿಗೆದಾರರು ವಾಪಸ್ಸು ಪಡೆಯುವುದು ಸಹಜ. ಈ ಭದ್ರತಾ ಠೇವಣಿ ವಿಚಾರವಾಗಿ ಮನೆ ಮಾಲೀಕರು ಹಾಗೂ ಬಾಡಿಗೆದಾರರ ವಿಚಾರವಾಗಿ ಜಗಳಗಳು ನಡೆಯುತ್ತವೆ. ಮನೆ ಮಾಲೀಕರು ಡೆಪಾಸಿಟ್ ಹಣವನ್ನು ಹಿಂತಿರುಗಿಸದಿದ್ದರೆ ಏನು ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನೀವು ನಗದು ರೂಪದಲ್ಲಿ ಹಣ ಪಾವತಿಸಿದರೆ, ನಿಮ್ಮ ಬಳಿ ಯಾವುದೇ ಪುರಾವೆಗಳಿರಲ್ಲ. ಭದ್ರತಾ ಠೇವಣಿ, ಮಾಸಿಕ ಬಾಡಿಗೆ ಮತ್ತು ಬಾಡಿಗೆ ಹೆಚ್ಚಳದ ಬಗ್ಗೆ ಮುಂಚಿತವಾಗಿ ಬಾಡಿಗೆ ಒಪ್ಪಂದವನ್ನು ಮಾಡಿಕೊಳ್ಳುವುದು ಸೂಕ್ತ. ಈ ರೀತಿ ಮಾಡುವುದರಿಂದ ಭವಿಷ್ಯದಲ್ಲಿ ಸಮಸ್ಯೆಗಳಾದಂತೆ ತಡೆಯುತ್ತದೆ.
ಇದನ್ನೂ ಓದಿ: ಪಿಎಂ ಆವಾಸ್ ಯೋಜನೆ; ಸ್ವಂತ ಸೂರು ಇಲ್ಲದವರಿಗೆ ಒಂದು ಆಶಾಕಿರಣ; ಸರ್ಕಾರದ ನೆರವು ಬಳಸಿ
ಮನೆ ಮಾಲೀಕರು ಭದ್ರತಾ ಠೇವಣಿಯನ್ನು ಹಿಂತಿರುಗಿಸದಿದ್ದು, ಬಾಡಿಗೆದಾರ ಗ್ರಾಹಕ ವೇದಿಕೆ ಅಥವಾ ಬಾಡಿಗೆ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು. ಇಂತಹ ಸಂದರ್ಭಗಳು ಎದುರಾದರೆ ನೀವು ದಾಖಲೆ ಪುರಾವೆಗಳನ್ನು ಇಟ್ಟುಕೊಂಡಿರುವುದು ಬಹಳ ಮುಖ್ಯ. ಹೀಗಾಗಿ ಬಾಡಿಗೆ ಮನೆ ಪ್ರವೇಶಿಸುವ ಮೊದಲು ಫೋಟೋಗಳನ್ನು ತೆಗೆದುಕೊಳ್ಳಿ. ಯಾವುದೇ ಕಾರಣಕ್ಕೂ ಮೌಖಿಕ ಒಪ್ಪಂದ ಮಾಡಿಕೊಳ್ಳಬೇಡಿ. ಕಡ್ಡಾಯವಾಗಿ ನಿಯಮಗಳು, ಡೆಪಾಸಿಟ್ ಮೊತ್ತ ಮತ್ತು ಅದನ್ನು ಮರಳಿ ನೀಡುವ ಸಮಯವನ್ನು ಒಳಗೊಂಡ ಲಿಖಿತ ಒಪ್ಪಂದಕ್ಕೆ ಸಹಿ ಮಾಡಿ. ಬಾಡಿಗೆ ಪಾವತಿ ಬಿಲ್ ಸೇರಿದಂತೆ ಇನ್ನಿತ್ತರ ದಾಖಲೆಗಳು ನಿಮ್ಮ ಬಳಿ ಇರಲಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ