ನವದೆಹಲಿ, ಜುಲೈ 28: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31ರವರೆಗೆ ಕಾಲಾವಕಾಶ ಕೊಡಲಾಗಿದೆ. ಈ ಡೆಡ್ಲೈನ್ ವಿಸ್ತರಿಸಬಹುದು ಎಂದು ನೀವು ಇನ್ನೂ ಐಟಿಆರ್ ಸಲ್ಲಿಸದೇ ಹೋಗಿದ್ದರೆ ಕಷ್ಟವಾದೀತು. ಕಳೆದ ವರ್ಷದಂತೆ ಈ ಬಾರಿಯೂ ಡೆಡ್ಲೈನ್ ವಿಸ್ತರಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಹಣಕಾಸು ಸಚಿವಾಲಯವಾಗಲೀ, ಅಥವಾ ಆದಾಯ ತೆರಿಗೆ ಇಲಾಖೆಯಾಗಲೀ ಅಧಿಕೃತವಾಗಿ ಏನನ್ನೂ ತಿಳಿಸಿಲ್ಲ. ಒಂದು ವೇಳೆ ಐಟಿಆರ್ ಸಲ್ಲಿಕೆಗೆ ಗಡುವನ್ನು ಹೆಚ್ಚಿಸುವುದೇ ಆದಲ್ಲಿ ಸಾಮಾನ್ಯವಾಗಿ ಜುಲೈ 30 ಅಥವಾ 31ರಂದು ಘೋಷಿಸಲಾಗುತ್ತದೆ.
ಕಳೆದ ವರ್ಷ ಜುಲೈ 25ಕ್ಕೆ ಐಟಿಆರ್ ಸಲ್ಲಿಸಿದವರ ಸಂಖ್ಯೆ 4 ಕೋಟಿ ದಾಟಿತ್ತು. ಈ ವರ್ಷ ಜುಲೈ 22ಕ್ಕೆಯೇ ಆ ಸಂಖ್ಯೆ ದಾಟಿದೆ. ಕಳೆದ ವರ್ಷ ಜುಲೈ 31ರ ಡೆಡ್ಲೈನ್ನೊಳಗೆ 6.77 ತೆರಿಗೆ ಪಾವತಿದಾರರು ಐಟಿ ರಿಟರ್ನ್ಸ್ ಸಲ್ಲಿಸಿದ್ದರು. ಈ ವರ್ಷ ಐದು ಕೋಟಿ ಜನರು ಈಗಾಗಲೇ ರಿಟರ್ನ್ಸ್ ಫೈಲ್ ಮಾಡಿದ್ದಾರೆ. ಜುಲೈ ಅಂತ್ಯದೊಳಗೆ ಐಟಿಆರ್ಗಳ ಸಂಖ್ಯೆ 7 ಕೋಟಿ ದಾಟುವ ನಿರೀಕ್ಷೆ ಇದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31ರವರೆಗೆ ಕಾಲಾವಕಾಶ ಕೊಡಲಾಗಿದೆ. ಅದಾದ ಬಳಿಕವೂ ಸಲ್ಲಿಸಬಹುದು, ಆದರೆ, ದಂಡ ತೆರಬೇಕಾಗುತ್ತದೆ. ಲೇಟ್ ಫೀ ಎಂದು ನಿರ್ದಿಷ್ಟ ಮೊತ್ತದ ಶುಲ್ಕ ಕಟ್ಟಿಸಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ದೇಶ ಬಿಟ್ಟುಹೋಗುವವರಿಗೆ ಟ್ಯಾಕ್ಸ್ ಕ್ಲಿಯರೆನ್ಸ್ ನಿಯಮ; ಇದು ಎಲ್ಲರಿಗೂ ಕಡ್ಡಾಯವಲ್ಲ ಎಂದ ಸಿಬಿಡಿಟಿ
ಈ ರೀತಿ ತಡವಾಗಿ ಕಟ್ಟಲೂ ಡಿಸೆಂಬರ್ 31ರವರೆಗೆ ಅವಕಾಶ ಇದೆ. ಈ ಡಿಸೆಂಬರ್ 31ರ ಗಡುವು ಮೀರಿ ಹೋದರೆ ಆದಾಯ ತೆರಿಗೆ ಸೆಕ್ಷನ್ 234ಎ ಮತ್ತು 234ಬಿ ಅಡಿಯಲ್ಲಿ ತಡ ಪಾವತಿ ಶುಲ್ಕದ ಜೊತೆಗೆ ಬಾಕಿ ಮೊತ್ತವನ್ನು ಬಡ್ಡಿ ಸಮೇತ ಕಟ್ಟಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ