Gold Silver Price on 29th July: ಸತತ ಇಳಿಕೆ ಬಳಿಕ ತುಸು ಏರಿದ ಚಿನ್ನದ ಬೆಲೆ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2024 July 29th: ಚಿನ್ನದ ಬೆಲೆ ಗ್ರಾಮ್​ಗೆ 25 ರೂನಷ್ಟು ಏರಿದೆ. 6,300 ರೂ ಇದ್ದದ್ದು 6,325 ರೂ ಆಗಿದೆ. ಇಂದೂ ಕೂಡ ಬೆಲೆ ಏರಿಕೆಯಾಗುವ ಸಂಭವ ಇದೆ. ಬುಧವಾರ ಅಮೆರಿಕದಲ್ಲಿ ಬಡ್ಡಿ ದರ ಪರಿಷ್ಕರಣೆ ಆದ ಬಳಿಕ ಚಿನಿವಾರ ಪೇಟೆಯಲ್ಲಿ ಮತ್ತೆ ವ್ಯತ್ಯಯಗಳಾಗಬಹುದು.

Gold Silver Price on 29th July: ಸತತ ಇಳಿಕೆ ಬಳಿಕ ತುಸು ಏರಿದ ಚಿನ್ನದ ಬೆಲೆ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 29, 2024 | 5:00 AM

ಬೆಂಗಳೂರು, ಜುಲೈ 29: ಸತತವಾಗಿ ಇಳಿಕೆಯಾಗುತ್ತಿದ್ದ ಚಿನ್ನದ ಬೆಲೆ ಈಗ ತುಸು ಏರಿದೆ. ಗ್ರಾಮ್​ಗೆ 25 ರೂನಷ್ಟು ಏರಿದೆ. ವಿದೇಶಗಳ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಸ್ವಲ್ಪ ಹೆಚ್ಚಳವಾಗಿದೆ. ಕಳೆದ ಎರಡು ವಾರದಲ್ಲಿ ಚಿನ್ನದ ಬೆಲೆ ಏರಿಕೆಗಿಂತ ಇಳಿಕೆಯಾಗಿದ್ದೇ ಹೆಚ್ಚು. ಬೆಳ್ಳಿ ಬೆಲೆಗಳೂ ಸಾಕಷ್ಟು ಇಳಿದಿವೆ. ಭಾರತದಲ್ಲಿ ಚಿನ್ನ, ಬೆಳ್ಳಿ ಮೇಲೆ ಆಮದು ಸುಂಕ ಕಡಿಮೆಗೊಂಡ ಕಾರಣಕ್ಕೆ ಚಿನ್ನದ ಬೆಲೆ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 63,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 69,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,450 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 63,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,425 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 29ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,250 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 69,000 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,250 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 69,000 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 842.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 63,250 ರೂ
  • ಚೆನ್ನೈ: 64,650 ರೂ
  • ಮುಂಬೈ: 63,250 ರೂ
  • ದೆಹಲಿ: 63,400 ರೂ
  • ಕೋಲ್ಕತಾ: 63,250 ರೂ
  • ಕೇರಳ: 63,250 ರೂ
  • ಅಹ್ಮದಾಬಾದ್: 63,300 ರೂ
  • ಜೈಪುರ್: 63,400 ರೂ
  • ಲಕ್ನೋ: 63,400 ರೂ
  • ಭುವನೇಶ್ವರ್: 63,250 ರೂ

ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನ; ಡೆಡ್​ಲೈನ್ ವಿಸ್ತರಣೆ ಸಾಧ್ಯತೆ ಕಡಿಮೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,520 ರಿಂಗಿಟ್ (63,300 ರುಪಾಯಿ)
  • ದುಬೈ: 2,680 ಡಿರಾಮ್ (60,980 ರುಪಾಯಿ)
  • ಅಮೆರಿಕ: 730 ಡಾಲರ್ (61,120 ರುಪಾಯಿ)
  • ಸಿಂಗಾಪುರ: 1000 ಸಿಂಗಾಪುರ್ ಡಾಲರ್ (62,230 ರುಪಾಯಿ)
  • ಕತಾರ್: 2,720 ಕತಾರಿ ರಿಯಾಲ್ (62,570 ರೂ)
  • ಸೌದಿ ಅರೇಬಿಯಾ: 2,740 ಸೌದಿ ರಿಯಾಲ್ (61,140 ರುಪಾಯಿ)
  • ಓಮನ್: 290 ಒಮಾನಿ ರಿಯಾಲ್ (62,740 ರುಪಾಯಿ)
  • ಕುವೇತ್: 220 ಕುವೇತಿ ದಿನಾರ್ (59,480 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,425 ರೂ
  • ಚೆನ್ನೈ: 8,900 ರೂ
  • ಮುಂಬೈ: 8,450 ರೂ
  • ದೆಹಲಿ: 8,450 ರೂ
  • ಕೋಲ್ಕತಾ: 8,450 ರೂ
  • ಕೇರಳ: 8,900 ರೂ
  • ಅಹ್ಮದಾಬಾದ್: 8,450 ರೂ
  • ಜೈಪುರ್: 8,450 ರೂ
  • ಲಕ್ನೋ: 8,450 ರೂ
  • ಭುವನೇಶ್ವರ್: 8,900 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ