ITR Filing Last Date 2025: ಐಟಿ ರಿಟರ್ನ್ ಸಲ್ಲಿಸಲು ಡೆಡ್ಲೈನ್ ಮತ್ತೆ ವಿಸ್ತರಣೆಯಾಗುತ್ತಾ?
ITR filing last date to be extended further: ಐಟಿ ರಿಟರ್ನ್ಸ್ ಸಲ್ಲಿಸಲು ಸೆಪ್ಟೆಂಬರ್ 15ಕ್ಕೆ ಇರುವ ಗಡುವನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಐಟಿಆರ್ ಫಾರ್ಮ್ಗಳನ್ನು ಅಪ್ಡೇಟ್ ಮಾಡಲಾಗುತ್ತಿದ್ದುದ್ದರಿಂದ ಸರ್ಕಾರವು ಜುಲೈ 31 ಬದಲು ಸೆಪ್ಟೆಂಬರ್ 15 ಅನ್ನು ಡೆಡ್ಲೈನ್ ಆಗಿ ನಿಗದಿ ಮಾಡಿತ್ತು. ಈಗ ಕೆಲ ಫಾರ್ಮ್ಗಳಿಗೆ ಯುಟಿಲಿಟಿಗಳನ್ನು ಬಿಡುಗಡೆ ಮಾಡದೇ ಇರುವುದರಿಂದ ಗಡುವು ವಿಸ್ತರಣೆ ಆಗಬಹುದು.

ನವದೆಹಲಿ, ಜುಲೈ 30: ಆದಾಯ ತೆರಿಗೆ ರಿಟರ್ನ್ಸ್ (Income Tax Returns) ಸಲ್ಲಿಸಲು ಸಾಮಾನ್ಯವಾಗಿ ಜುಲೈ 31ಕ್ಕೆ ಡೆಡ್ಲೈನ್ ಇರುತ್ತದೆ. ವಿವಿಧ ಫಾರ್ಮ್ಗಳು ಇನ್ನೂ ಬಿಡುಗಡೆ ಆಗದೇ ಇರುವುದು ಮತ್ತಿತರ ಕಾರಣಗಳಿಗೆ ಐಟಿಆರ್ ಸಲ್ಲಿಕೆಗೆ ಡೆಡ್ಲೈನ್ ಅನ್ನು ಜುಲೈ 31ರಿಂದ ಸೆಪ್ಟೆಂಬರ್ 15ಕ್ಕೆ ಏರಿಸಲಾಗಿದೆ. ಈ ಗಡುವಿಗೆ ಇನ್ನು 50 ದಿನವೂ ಉಳಿದಿಲ್ಲ. ಇದೇ ವೇಳೆ, ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರವು ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸಲು ವಿವಿಧ ಐಟಿಆರ್ ಫಾರ್ಮ್ಗಳ ಪರಿಷ್ಕರಣೆ ನಡೆಸಿತತು. ಈ ಬದಲಾವಣೆಗಳಿಗಾಗಿ ಸೆಪ್ಟೆಂಬರ್ 15ರವರೆಗೆ ಡೆಡ್ಲೈನ್ ವಿಸ್ತರಿಸಲಾಗಿತ್ತು. ಈಗ ಕೆಲ ಐಟಿಆರ್ ಫಾರ್ಮ್ಗಳಿಗೆ ಬೇಕಾದ ಸಂಪನ್ಮೂಲಗಳು ತೆರಿಗೆ ಪಾವತಿದಾರರ ಬಳಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಐಟಿಆರ್ ಫಾರ್ಮ್ 5, 6 ಮತ್ತು 7ಕ್ಕೆ ಆನ್ಲೈನ್ ಮತ್ತು ಆಫ್ಲೈನ್ ಯುಟಿಲಿಟಿಗಳನ್ನು ಐಟಿ ಇಲಾಖೆ ಇನ್ನೂ ಬಿಡುಗಡೆ ಮಾಡಿಲ್ಲ. ಈ ಕಾರಣಕ್ಕೆ ಸೆಪ್ಟೆಂಬರ್ 15ರಂದು ಇರುವ ಡೆಡ್ಲೈನ್ ಅನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ.
ಐಟಿ ಇಲಾಖೆಯಿಂದ ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಡೆಡ್ಲೈನ್ ವಿಸ್ತರಣೆ ಆಗುವುದಿದ್ದರೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧಿಸೂಚನೆ ಹೊರಡಿಸುತ್ತದೆ. ಹಿಂದಿನ ಇಂಥ ಕೆಲ ಸಂದರ್ಭಗಳಲ್ಲಿ ಐಟಿಆರ್ ಸಲ್ಲಿಕೆಗೆ ಕಾಲಾವಕಾಶ ವಿಸ್ತರಿಸಲಾಗಿತ್ತು. ಹೀಗಾಗಿ, ಈ ಬಾರಿಯೂ ಈ ಸಾಧ್ಯತೆಯಂತೂ ಇದೆ.
ಇದನ್ನೂ ಓದಿ: Income Tax Bill 2025: ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ, ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ
ಈ ಬಾರಿ ಸರ್ಕಾರದಿಂದಲೇ ಪದೇಪದೇ ವಿಳಂಬ…
ಈ ಬಾರಿ ಸರ್ಕಾರವು ಐಟಿಆರ್ ಸಲ್ಲಿಕೆಯ ತಾಂತ್ರಿಕ ಅಂಶಗಳನ್ನು ಅಪ್ಡೇಟ್ ಮಾಡಲು ಹೋಗಿ ವಿಳಂಬ ಮಾಡಿದೆ. ಐಟಿಆರ್ ಫಾರ್ಮ್ಗಳಿಗೆ ಯುಟಿಲಿಟಿಗಳನ್ನು ತಡವಾಗಿ ಬಿಡುಗಡೆ ಮಾಡಿದೆ. 5, 6 ಮತ್ತು 7 ಫಾರ್ಮ್ಗಳಿಗೆ ಯುಟಿಲಿಟಿಗಳನ್ನು ರಿಲೀಸ್ ಮಾಡಲು ಮತ್ತಷ್ಟು ವಿಳಂಬ ಮಾಡಿದರೆ ಸೆಪ್ಟೆಂಬರ್ 15ಕ್ಕೆ ಇದ್ದ ಡೆಡ್ಲೈನ್ ಮುಂದಕ್ಕೆ ಹೋಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




