ನವದೆಹಲಿ, ಅಕ್ಟೋಬರ್ 17: ಈ ಹಣಕಾಸು ವರ್ಷದಲ್ಲಿ ಸಾಫ್ಟ್ವೇರ್ ಎಂಜಿನಿಯರುಗಳಿಗೆ ಹೆಚ್ಚು ಉದ್ಯೋಗಾವಕಾಶ ಸಿಗಲಿದೆ. ಕಳೆದ ವರ್ಷ ಹೊಸ ನೇಮಕಾತಿಯನ್ನು ಅಳೆದು ತೂಗಿ ಮಾಡುತ್ತಿದ್ದ ಐಟಿ ಸೆಕ್ಟರ್ನ ಕಂಪನಿಗಳು ಈ ವರ್ಷ ಹೆಚ್ಚು ಮುಕ್ತವಾಗಿ ಮಾಡಲಿವೆ. 2024-25ರ ಹಣಕಾಸು ವರ್ಷದಲ್ಲಿ ಈ ವಲಯದಲ್ಲಿ ಹೊಸ ನೇಮಕಾತಿಯಲ್ಲಿ ಶೇ. 20ರಿಂದ 25ರಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ ಎಂದು ಟೀಮ್ಲೀಸ್ ಡಿಜಿಟಲ್ ಸಂಸ್ಥೆಯ ವರದಿಯೊಂದು ಹೇಳುತ್ತಿದೆ. ಅದರಲ್ಲೂ ಗ್ಲೋಬಲ್ ಕೇಪಬಿಲಿಟಿ ಸೆಂಟರ್ಗಳಲ್ಲಿ ಹೊಸಬರ ನೇಮಕಾತಿ ಶೇ. 40ರಷ್ಟು ಜಂಪ್ ಆಗಬಹುದು ಎಂದೂ ಹೇಳಲಾಗುತ್ತಿದೆ.
ಕೃತಕ ಬುದ್ಧಿಮತ್ತೆ (ಎಐ), ಯಂತ್ರ ಕಲಿಕೆ (ಮೆಷಿನ್ ಲರ್ನಿಂಗ್), ಡಾಟಾ ಅನಾಲಿಟಿಕ್ಸ್ ಇತ್ಯಾದಿ ನವೀನ ಕೌಶಲ್ಯಗಳನ್ನು ಹೊಂದಿದವರಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇದರಿಂದಾಗಿ ಹೊಸ ನೇಮಕಾತಿ ಈ ವರ್ಷ ಗಣನೀಯವಾಗಿ ಹೆಚ್ಚುತ್ತಿದೆ.
ಇದನ್ನೂ ಓದಿ: ಒಂದು ವರ್ಷದಲ್ಲಿ ಭಾರತದಲ್ಲಿ 400 ಕೋಟಿ ವ್ಯಾಕ್ಸಿನ್ ಡೋಸ್ ತಯಾರಿಕೆ: ಕೇಂದ್ರ ಆರೋಗ್ಯ ಕಾರ್ಯದರ್ಶಿ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಆಟೊಮೇಶನ್ ಟೆಕ್ನಾಲಜಿಗೆ ಎಲ್ಲಿಲ್ಲದ ಮಹತ್ವ ಸೃಷ್ಟಿಯಾಗುತ್ತಿದ್ದು, ಆ ಕೌಶಲ್ಯಗಳ ಅಗತ್ಯತೆ ಹೆಚ್ಚಾಗಿದೆ. ಹೀಗಾಗಿ ಡಾಟಾ ಆಧಾರಿತ ಕೆಲಸಗಳಿಗೆ ಹೆಚ್ಚು ಬೇಡಿಕೆ ಇದೆ. ಇದೇ ಕಾರಣಕ್ಕೆ ಡಾಟಾ ಸೈಂಟಿಸ್ಟ್ ಹುದ್ದೆಗಳಿಗೆ ಅವಕಾಶಗಳು ಹೆಚ್ಚಾಗಿವೆ. ಮೆಷಿನ್ ಲರ್ನಿಂಗ್ ಸ್ಕಿಲ್ಗಳ ಅಗತ್ಯ ಇದೆ ಎನ್ನುವ ಜಾಬ್ ಪೋಸ್ಟಿಂಗ್ಗಳೂ ಹೆಚ್ಚಾಗಿವೆ ಎಂದು ಟೀಮ್ಲೀಸ್ ಡಿಜಿಟಲ್ ಸಂಸ್ಥೆಯ ವಿಶ್ಲೇಷಣೆಯ ದತ್ತಾಂಶಗಳು ತಿಳಿಸುತ್ತವೆ.
ನ್ಯಾಚುರಲ್ ಲ್ಯಾಂಗ್ವೇಜ್ ಪ್ರೋಸಸಿಂಗ್ನಲ್ಲಿ (ಎನ್ಎಲ್ಪಿ) ಕೌಶಲ್ಯ ಹೊಂದಿರುವವರಿಗೆ ಬೇಡಿಕೆ ಹೆಚ್ಚಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಒಂದು ವಿಭಾಗವಾಗಿರುವ ಎನ್ಎಲ್ಪಿಯಲ್ಲಿ ಮನುಷ್ಯರ ಭಾಷೆಯನ್ನು ಯಂತ್ರಗಳು ಅರ್ಥಮಾಡಿಕೊಂಡು, ದತ್ತಾಂಶವನ್ನು ಸಂಸ್ಕರಿಸುವಂತೆ ಮಾಡಲಾಗುತ್ತದೆ. 2024ರಲ್ಲಿ ಈ ಎನ್ಎಲ್ಪಿ ಕೌಶಲ್ಯಗಳ ಅಗತ್ಯ ಇರುವ ಹುದ್ದೆಗಳಿಗೆ ಶೇ. 5ರಷ್ಟು ಬೇಡಿಕೆ ಇದೆ. 2025ರಲ್ಲಿ ಇದಕ್ಕೆ ಇರುವ ಬೇಡಿಕೆ ಶೇ. 19ಕ್ಕೆ ಹೆಚ್ಚಾಗಲಿದೆಯಂತೆ.
ಇದನ್ನೂ ಓದಿ: ವಾಟ್ಸಾಪ್, ಇನ್ಸ್ಟಾಗ್ರಾಮ್, ರಿಯಾಲಿಟಿ ಲ್ಯಾಬ್ಸ್ ಟೀಮ್ನಿಂದ ಉದ್ಯೋಗಿಗಳ ಲೇ ಆಫ್
ಪೈತಾನ್ ಪ್ರೋಗ್ರಾಮಿಂಗ್, ಎಥಿಕಲ್ ಹ್ಯಾಕಿಂಗ್, ಪೆನಿಟ್ರೇಶನ್ ಟೆಸ್ಟಿಂಗ್, ಎಜೈಲ್ ಸ್ಕ್ರಮ್ ಮಾಸ್ಟರ್, ಎಡಬ್ಲ್ಯುಎಸ್ ಸೆಕ್ಯೂರಿಟಿ, ಜಾವಾಸ್ಕ್ರಿಪ್ಟ್ ಮೊದಲಾದ ವಿದ್ಯೆಗಳನ್ನು ತಿಳಿದವರಿಗೂ ಬೇಡಿಕೆ ಹೆಚ್ಚುತ್ತಿದೆ ಎಂದು ಟೀಮ್ಲೀಸ್ ಡಿಜಿಟಲ್ ಸಂಸ್ಥೆ ಹೇಳುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ