ಒಂದು ತಿಂಗಳಲ್ಲಿ 1 ಕೋಟಿ ಗ್ರಾಹಕರನ್ನು ಕಳೆದುಕೊಂಡ ಜಿಯೋ, ಏರ್ಟೆಲ್, ವಿಐ; ಗಳಿಸಿಕೊಂಡಿದ್ದು ಬಿಎಸ್ಸೆನ್ನೆಲ್ ಮಾತ್ರವೇ

Jio, Airtel, Vi lose; BSNL gains: ಸೆಪ್ಟೆಂಬರ್ ತಿಂಗಳಲ್ಲಿ ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದಿಂದ ಒಟ್ಟು 1 ಕೋಟಿಗೂ ಅಧಿಕ ಸಬ್​ಸ್ಕ್ರಿಪ್ಷನ್​ಗಳು ನಿಂತಿವೆ. ಅದೇ ತಿಂಗಳಲ್ಲಿ ಬಿಎಸ್ಸೆನ್ನೆಲ್​ಗೆ 8.49 ಲಕ್ಷ ಹೊಸ ಸಬ್​​ಸ್ಕ್ರಿಪ್ಷನ್ಸ್ ಸಿಕ್ಕಿವೆ. ಅತಿಹೆಚ್ಚು ಗ್ರಾಹಕರನ್ನು ಕಳೆದುಕೊಂಡಿದ್ದು ಜಿಯೋ. ಈಗ ಅದರ ಒಟ್ಟು ಸಬ್​ಸ್ಕ್ರಿಪ್ಷನ್ಸ್ ಸಂಖ್ಯೆ 46.37 ಕೋಟಿ ಇದೆ.

ಒಂದು ತಿಂಗಳಲ್ಲಿ 1 ಕೋಟಿ ಗ್ರಾಹಕರನ್ನು ಕಳೆದುಕೊಂಡ ಜಿಯೋ, ಏರ್ಟೆಲ್, ವಿಐ; ಗಳಿಸಿಕೊಂಡಿದ್ದು ಬಿಎಸ್ಸೆನ್ನೆಲ್ ಮಾತ್ರವೇ
ಮೊಬೈಲ್ ಬಳಕೆದಾರರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 22, 2024 | 12:03 PM

ನವದೆಹಲಿ, ನವೆಂಬರ್ 22: ಕೆಲ ತಿಂಗಳ ಹಿಂದೆ ಶೇ. 20ಕ್ಕೂ ಹೆಚ್ಚು ಪ್ರಮಾಣದಲ್ಲಿ ಮೊಬೈಲ್ ರೀಚಾರ್ಜ್ ದರಗಳ ಏರಿಕೆ ಮಾಡಿದ್ದ ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ನಿರಂತರವಾಗಿ ಗ್ರಾಹಕರನ್ನು ಕಳೆದುಕೊಳ್ಳುತ್ತಿವೆ. ಗ್ರಾಹಕರ ವಲಸೆ ಸೆಪ್ಟೆಂಬರ್​ನಲ್ಲೂ ಮುಂದುವರಿದಿದೆ. ಟ್ರಾಯ್ ಬಿಡುಗಡೆ ಮಾಡಿದ ಸೆಪ್ಟೆಂಬರ್ ತಿಂಗಳ ದತ್ತಾಂಶದ ಪ್ರಕಾರ ಈ ಮೂರು ಕಂಪನಿಗಳಿಂದ ಆ ಒಂದು ತಿಂಗಳಲ್ಲಿ ಹೊರಹೋದ ಸಬ್​ಸ್ಕ್ರೈಬರ್​ಗಳ ಸಂಖ್ಯೆ ಒಂದು ಕೋಟಿಗೂ ಹೆಚ್ಚು.

ಇದೇ ವೇಳೆ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಸಂಸ್ಥೆಯ ಮೊಬೈಲ್ ಬಳಕೆದಾರರ ಸಂಖ್ಯೆ ಸೆಪ್ಟೆಂಬರ್​ನಲ್ಲಿ 8.49 ಲಕ್ಷದಷ್ಟು ಹೆಚ್ಚಾಗಿದೆ. ರಿಲಾಯನ್ಸ್ ಜಿಯೋ ಅತಿಹೆಚ್ಚು ಗ್ರಾಹಕರನ್ನು ಕಳೆದುಕೊಂಡಿದೆ. ಟ್ರಾಯ್ ವರದಿ ಪ್ರಕಾರ ಜಿಯೋದಿಂದ 79.69 ಲಕ್ಷ ಕನೆಕ್ಷನ್​ಗಳು ಅನ್​ಸಬ್​ಸ್ಕ್ರೈಬ್ ಆಗಿವೆ. ಭಾರ್ತಿ ಏರ್ಟೆಲ್ ಕಳೆದುಕೊಂಡ ಗ್ರಾಹಕರ ಸಂಖ್ಯೆ 14.34 ಲಕ್ಷ. ವೊಡಾಫೋನ್ ಐಡಿಯಾದಿಂದ ಹೊರಹೋದವರು 15.53 ಲಕ್ಷ. ಈ ಮೂರು ಸಂಸ್ಥೆಗಳಲ್ಲಿ ಭಾರ್ತಿ ಏರ್ಟೆಲ್ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ.

ಇದನ್ನೂ ಓದಿ: ಅದಾನಿ ಗ್ರೂಪ್​ಗೆ ನೀಡಿದ್ದ ಏರ್ಪೋರ್ಟ್, ಪವರ್ ಟ್ರಾನ್ಸ್​ಮಿಷನ್ ಗುತ್ತಿಗೆಗಳನ್ನು ರದ್ದುಗೊಳಿಸಿದ ಕೀನ್ಯಾ ಸರ್ಕಾರ

ಆದರೆ, ಈ ಮೂರು ಕಂಪನಿಗಳಿಂದ ಅನ್​ಸ್ಕ್ರೈಬ್ ಆಗಿರುವುದು ಒಂದು ಕೋಟಿಗೂ ಅಧಿಕ. ಅದೇ ವೇಳೆ ಬಿಎಸ್ಸೆನ್ನೆಲ್​ಗೆ ಹೊಸದಾಗಿ ಸೇರ್ಪಡೆಯಾಗಿದ್ದು 8.49 ಲಕ್ಷ ಮಾತ್ರ. ಇನ್ನುಳಿದ ಚಂದಾದಾರರು ಎತ್ತ ಹೋದರು ಎನ್ನುವ ಮಾಹಿತಿ ಇಲ್ಲ. ಪ್ರಾಯಶಃ, ಹೆಚ್ಚುವರಿ ಸಿಮ್​ಗಳನ್ನು ಇಟ್ಟುಕೊಂಡಿರುವವರು, ಖಾಯಂ ಆಗಿ ಅನ್​ಸ್ಕ್ರೈಬ್ ಮಾಡಿರುವ ಸಾಧ್ಯತೆ ಇದೆ.

ಸದ್ಯ ಬೆಲೆ ಏರಿಕೆ ಮಾಡಲ್ಲ ಎಂದ ಬಿಎಸ್ಸೆನ್ನೆಲ್

ಬಹಳ ಅಗ್ಗದ ದರದಲ್ಲಿ ರೀಚಾರ್ಜ್ ಆಫರ್ ಮಾಡಿರುವ ಬಿಎಸ್ಸೆನ್ನೆಲ್ ಸಂಸ್ಥೆ ಸದ್ಯಕ್ಕೆ ಹಾಗೂ ಸದ್ಯೋಭವಿಷ್ಯದಲ್ಲಿ ಬೆಲೆ ಏರಿಕೆ ಮಾಡುವುದಿಲ್ಲ ಎಂದು ನಿರ್ಧರಿಸಿದೆ. ಸಂಸ್ಥೆಯ ಛೇರ್ಮನ್ ರಾಬರ್ಟ್ ರವಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನ್ಯೂಸ್9 ಗ್ಲೋಬಲ್ ಸಮಿಟ್​ನಲ್ಲಿ ಭಾರತದ ಬೆಳವಣಿಗೆಯ ಹಾದಿ ತೆರೆದಿಟ್ಟ ಸಚಿವ ಎ ವೈಷ್ಣವ್

ನಾಲ್ಕು ಸಂಸ್ಥೆಗಳ ಮೊಬೈಲ್ ಗ್ರಾಹಕರ ಸಂಖ್ಯೆ

  • ರಿಲಾಯನ್ಸ್ ಜಿಯೊ: 46.37 ಕೋಟಿ
  • ಭಾರ್ತಿ ಏರ್ಟೆಲ್: 38.34 ಕೋಟಿ
  • ವೊಡಾಫೋನ್ ಐಡಿಯಾ: 21.24 ಕೋಟಿ
  • ಬಿಎಸ್ಸೆನ್ನೆಲ್: 9.18 ಕೋಟಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ