Castrol Super Mechanic Title: ಕಾಲ್ಕಾ ಪ್ರಸಾದ್ ಮತ್ತು ಕಿಶೋರ್ ಕಲ್ಲಪ್ಪ ಗಾಟಡೆ ಕ್ಯಾಸ್ಟ್ರಾಲ್ ಸೂಪರ್ ಮೆಕ್ಯಾನಿಕ್ ಚಾಂಪಿಯನ್ಸ್ 2021-22
Castrol India -TV9 Network: ಕಾಲ್ಕ ಪ್ರಸಾದ್ ಮತ್ತು ಕಿಶೋರ್ ಕಲ್ಲಪ್ಪ ಗಾಟಡೆ ಅವರು ಈ ಬಾರಿ 2021-22ನೇ ಸಾಲಿನ ಕ್ಯಾಸ್ಟ್ರಾಲ್ ಸೂಪರ್ ಮೆಕ್ಯಾನಿಕ್ ಚಾಂಪಿಯನ್ ಬಿರುದನ್ನು ಅನುಕ್ರಮವಾಗಿ ಕಾರು ಮತ್ತು ಬೈಕ್ ವಿಭಾಗದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಭಾರತದಾದ್ಯಂತ ಸುಮಾರು 1.40 ಲಕ್ಷ ಮೆಕ್ಯಾನಿಕ್ ಗಳು ಕ್ಯಾಸ್ಟ್ರಾಲ್ ಸೂಪರ್ ಮೆಕ್ಯಾನಿಕ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಕಾಲ್ಕ ಪ್ರಸಾದ್ ಮತ್ತು ಕಿಶೋರ್ ಕಲ್ಲಪ್ಪ ಗಾಟಡೆ ಅವರು ಈ ಬಾರಿ 2021-22ನೇ ಸಾಲಿನ ಕ್ಯಾಸ್ಟ್ರಾಲ್ ಸೂಪರ್ ಮೆಕ್ಯಾನಿಕ್ ಚಾಂಪಿಯನ್ ಬಿರುದನ್ನು ಅನುಕ್ರಮವಾಗಿ ಕಾರು ಮತ್ತು ಬೈಕ್ ವಿಭಾಗದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ (Castrol Super Mechanic 2021-22 Title). ಭಾರತದಾದ್ಯಂತ ಸುಮಾರು 1.40 ಲಕ್ಷ ಮೆಕ್ಯಾನಿಕ್ ಗಳು ಕ್ಯಾಸ್ಟ್ರಾಲ್ ಸೂಪರ್ ಮೆಕ್ಯಾನಿಕ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ಪರ್ಧೆಯ ವಿಜೇತರು ಟ್ರೋಫಿಗಳು ಮತ್ತು ನಗದು ಬಹುಮಾನವನ್ನು ಗೆದ್ದುಕೊಂಡಿದ್ದಾರೆ. ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಕ್ಯಾಸ್ಟ್ರಾಲ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಾಂಗ್ವಾನ್ ಮತ್ತು ಟಿವಿ9 ನೆಟ್ ವರ್ಕ್ (TV9 Network) ಸಿಇಒ ಬರುನ್ ದಾಸ್ ಅವರು ಪ್ರಶಸ್ತಿ ಪ್ರದಾನ ಮಾಡಿದರು (Castrol Super Mechanic Contest).
ಇಬ್ಬರೂ ವಿಜೇತರಿಗೆ ಒಂದು ಬೈಕ್, ನಾಲ್ಕು ಮಂದಿಯ ಕುಟುಂಬಸ್ಥರಿಗೆ ವಿಮಾ ಪಾಲಿಸಿ ಮತ್ತು ತಮ್ಮ ಗ್ಯಾರೇಜ್ ಅಭಿವೃದ್ಧಿಗಾಗಿ 1,00,000 ರೂಪಾಯಿ ಚೆಕ್ ವಿತರಿಸಲಾಯಿತು. ಮರು ಮಯೂರ್ ಭಾಯ್ ಮತ್ತು ಪ್ರವೀಣ್ ಕುಮಾರ್ ರಾವತ್ ಅವರುಗಳು ಅನುಕ್ರಮವಾಗಿ ಕಾರು ಮತ್ತು ಬೈಕ್ ವಿಭಾಗದಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇಬ್ಬರಿಗೂ ಒಂದು ಬೈಕ್ ಮತ್ತು ನಾಲ್ಕು ಮಂದಿಯ ಕುಟುಂಬಸ್ಥರಿಗೆ ವಿಮಾ ಪಾಲಿಸಿ ವಿತರಿಸಲಾಯಿತು. ಧರ್ಮರಾಜ್ ಮತ್ತು ಜಿ ರಾಮಕೃಷ್ಣ ಎರಡನೆಯ ರನ್ನರ್ ಅಪ್ ಆಗಿದ್ದಾರೆ. ಇವರಿಬ್ಬರಿಗೂ ತಮ್ಮ ಗ್ಯಾರೇಜ್ ಅಭಿವೃದ್ಧಿಗಾಗಿ 25,000 ರೂಪಾಯಿ ಚೆಕ್ ವಿತರಿಸಲಾಯಿತು.
ಕ್ಯಾಸ್ಟ್ರಾಲ್ ಇಂಡಿಯಾ ಮತ್ತು ಟಿವಿ9 ನೆಟ್ ವರ್ಕ್ ಹಮ್ಮಿಕೊಂಡಿದ್ದ ಈ ಸ್ಪರ್ಧೆಯನ್ನು ಪ್ರಶಂಶಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭಾರತದ ವಾಹನೋದ್ಯಮ ಕ್ಷೇತ್ರದಲ್ಲಿ ಮೆಕ್ಯಾನಿಕ್ ಸಮುದಾಯದವರು ತುಂಬಾ ಮುಖ್ಯ ಭಾಗವಾಗುತ್ತಾರೆ. ಅವರಲ್ಲಿ ಕೌಶಲ್ಯವನ್ನು ಸಂಘಟಿತ ಮಾದರಿಯಲ್ಲಿ ಗುರುತಿಸಿ, ಉನ್ನತೀಕರಿಸುವುದು ಹೊಸ ಜೀವನೋಪಾಯದ ಅವಕಾಶಗಳನ್ನು ತೆರೆದಿಡುತ್ತದೆ. ಇದರಿಂದ ಅವರ ಆದಾಯ ಹೆಚ್ಚಳವಾಗುತ್ತದೆ. Castrol Super Mechanic Contest ಅಂತಹ ಸ್ಪರ್ಧೆಗಳು ದೇಶದ ಮೆಕ್ಯಾನಿಕ್ಗಳಲ್ಲಿ ಉದ್ಯೋಗ ಮತ್ತು ಉದ್ಯಮಶೀಲತೆ ಅವಕಾಶಗಳನ್ನು ಹುರಿದುಂಬಿಸುವ, ಕೌಶಲ್ಯ ಉನ್ನತೀಕರಣಗೊಳಿಸುವುದಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ಕೇಂದ್ರ ಸಚಿವ ಪ್ರಧಾನ್ ಆಶಿಸಿದರು.
ಟೆಲಿವಿಶನ್ ನಟ ರವಿ ದುಬೆ ಅವರು ಈ ಹಿಂದಿನ ಸ್ಪರ್ಧೆಯಿಂದಲೂ ಕ್ಯಾಸ್ಟ್ರಾಲ್ ಸೂಪರ್ ಮೆಕ್ಯಾನಿಕ್ ಚಾಂಪಿಯನ್ ಜೊತೆ ಸಕ್ರಿಯವಾಗಿದ್ದು, ಪ್ರಸಕ್ತ ಸಾಲಿನ ಫೈನಲ್ ಸಮಾರಂಭದ ಅತಿಥಿಯಾಗಿ ಪಾಲ್ಗೊಂಡಿದ್ದರು. ಕ್ಯಾಸ್ಟ್ರಾಲ್ ಸೂಪರ್ ಮೆಕ್ಯಾನಿಕ್ ಚಾಂಪಿಯನ್ ಸ್ಪರ್ಧೆ 2021-22 ಗ್ರ್ಯಾಂಡ್ ಫೈನಲ್ ಸಮಾರಂಭವನ್ನು ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ರವಿ ದುಬೆ, ಡ್ಯಾನ್ಸರುಗಳು, ಶಾಸ್ತ್ರೀಯ ಸಂಗೀತಗಾರರು ಮತ್ತು ಮಿಮಿಕ್ರಿ ಕಲಾವಿದರು ವರ್ಣರಂಜಿತ ಫೈನಲ್ ಕಾರ್ಯಕ್ರಮದ ರಂಗೇರಿಸಿದರು.
ಸ್ಪರ್ಧೆಯ ಅಂತಿಮ ಸುತ್ತಿಗೆ ಅರ್ಹತೆ ಪಡೆದ 50 ಸ್ಪರ್ಧೆಗಳ ಪೈಕಿ ಈ ವಿಜೇತರನ್ನು ಆಯ್ಕೆ ಮಾಡಲಾಯಿತು. ಸ್ಪರ್ಧೆಯ ಸಮಯದುದ್ದಕ್ಕೂ ತಮ್ಮ ಕೌಶಲ್ಯತೆ, ಕಾರ್ಯಕ್ಷಮತೆಯನ್ನು ಪರಿಗಣಿಸಿ, ಇವರನ್ನು ಫೈನಲಿಸ್ಟ್ ಗಳನ್ನಾಗಿ ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ 2022 ಸಾಲಿನ ಏಪ್ರಿಲ್ 5 ರಿಂದ 7 ವರಗೆ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಅಂತಿಮ ಸುತ್ತಿನ ಕಣದಲ್ಲಿ ತೋರಿದ ಅಪ್ರತಿಮ ಅನುಭವ ಕೌಶಲ್ಯವನ್ನು ಪರಿಗಣಿಸಿ, ಆಯ್ಕೆ ಮಾಡಲಾಯಿತು. ಕಳೆದ ಅಕ್ಟೋಬರ್ ತಿಂಗಳಲ್ಲಿ ಕ್ಯಾಸ್ಟ್ರಾಲ್ ಸೂಪರ್ ಮೆಕ್ಯಾನಿಕ್ ಸ್ಪರ್ಧೆ ಆರಂಭಗೊಡಿತ್ತು.
ಭಾರತದಾದ್ಯಂತ ಇರುವ ಮೆಕ್ಯಾನಿಕ್ ಗಳಿಗಾಗಿ ಅಯೋಜಿಸಲಾಗಿದ್ದ ಕೌಶಲ್ಯ ತರಬೇತಿ ಕಾರ್ಯಕ್ರಮದ ಬಗ್ಗೆ ತಮ್ಮ ಅನುಭವ ಹಂಚಿಕೊಂಡ ಕ್ಯಾಸ್ಟ್ರಾಲ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಾಂಗ್ವಾನ್ ಅವರು ಕ್ಯಾಸ್ಟ್ರಾಲ್ ಸೂಪರ್ ಮೆಕ್ಯಾನಿಕ್ ಸ್ಪರ್ಧೆಯ ಆಂತರ್ಯದಲ್ಲಿ ಸ್ವತಂತ್ರ ಮೆಕ್ಯಾನಿಕ್ಗಳು ತಮ್ಮ ವೃತ್ತಿಗೆ ಅರ್ಹರಾಗಿ, ಗೌರವಯುತವಾಗಿ ಗುರುತಿಸುವುದು ಪ್ರಧಾನ ಆಶಯವಾಗಿತ್ತು. ಉದ್ಯಮದಲ್ಲಿ ಕಾಲಕಾಲಕ್ಕೆ ಕಂಡುಬರುವ ಬದಲಾವಣೆಗೆ ತಕ್ಕಂತೆ ತಮ್ಮ ಕೌಶಲ್ಯತೆ ಅಭಿವೃದ್ಧಿಪಡಿಸಿಕೊಳ್ಳುವುದಕ್ಕೆ ಅವರಗೆ ಅನುವು ಮಾಡಿಕೊಡುವುದು ನಮ್ಮ ಧ್ಯೇಯವಾಗಿತ್ತು. ಇದೀಗ ಸ್ಪರ್ಧೆಯ ನಾಲ್ಕನೆಯ ಆವೃತ್ತಿ ಕೊನೆಗಾಣುತ್ತಿದ್ದು, ಸ್ಪರ್ಧೆಗೆ ಉತ್ಸಾಹಭರಿತ ಪ್ರತಿಕ್ರಿಯೆ ಕಂಡುಬಂದಿರುವುದನ್ನು ನೋಡಿ ನಮಗೆ ಸಂತಸವಾಗಿದೆ. ವಿಜೇತರನ್ನು ಹೃತ್ಪೂರ್ಕವಾಗಿ ಅಭಿನಂದಿಸುತ್ತೇವೆ ಮತ್ತು ಇದೇ ಮೆಕ್ಯಾನಿಕ್ ಸಮುದಾಯವನ್ನುಸಶಕ್ತಗೊಳಿಸುವ ಕಾರ್ಯವನ್ನು ಮುಂದುವರಿಸುತ್ತೇವೆ ಎಂದು ತಿಳಿಸಲು ಆಶಿಸುತ್ತೇವೆ ಎಂದು ಸಂದೀಪ್ ಸಾಂಗ್ವಾನ್ ತಿಳಿಸಿದರು.
ಈ ಸಂದರ್ಭದಲ್ಲಿ ತಮ್ಮ ಅನುಭವ ಹಂಚಿಕೊಂಡ ಟಿವಿ9 ಸಿಇಒ ಬರುಣ್ ದಾಸ್ ಅವರು ಕ್ಯಾಸ್ಟ್ರಾಲ್ ಸೂಪರ್ ಮೆಕ್ಯಾನಿಕ್ ಸ್ಪರ್ಧೆಯು ಅದ್ವಿತೀಯವಾಗಿದೆ. ಜಾಗತಿಕ ನಾಯಕನೆಂಬ ತನ್ನ ಹಮ್ಮುಬಿಮ್ಮಿಗೆ ತಕ್ಕಂತೆ ಕ್ಯಾಸ್ಟ್ರಾಲ್ ಕಂಪನಿಯು ಹೊಸ ಹೆಜ್ಜೆಗುರುತು ಮೂಡಿಸಿದೆ. ಇದರಲ್ಲಿ ನಾವೂ ಸಹ ಭಾಗಿಯಾಗಿದ್ದಕ್ಕೆ ಹೆಮ್ಮೆಯೆನಿಸುತ್ತದೆ. ನಮಗೆ ಪ್ರತಿಯೊಬ್ಬ ಸ್ಪರ್ಧಿಯೂ ಜಯಶಾಲಿಯೇ ಸರಿ. ಕ್ಯಾಸ್ಟ್ರಾಲ್ ಸೂಪರ್ ಮೆಕ್ಯಾನಿಕ್ ಚಾಂಪಿಯನ್ ವಿಜೇತರನ್ನು ಟಿವಿ9 ನೆಟ್ ವರ್ಕ್ ತುಂಬು ಹೃದಯದಿಂದ ಅಭಿನಂದಿಸುತ್ತದೆ ಎಂದು ಹೇಳಿದರು.
ಟಿವಿ9 ನೆಟ್ ವರ್ಕ್ ಭಾರತದಾದ್ಯಂತ ವಿಸ್ತರಿಸಿದ್ದು, ದೇಶಾದ್ಯಂತ ಎಲ್ಲ ಭಾಷೆಯ ಮೆಕ್ಯಾನಿಕ್ ಗಳನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಟಿವಿ9 ಡಿಜಿಟಲ್ ವೇದಿಕೆಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಮೆಕ್ಯಾನಿಕ್ ಗಳಿಗೆ ಅಗತ್ಯ ಮಾಹಿತಿ ಪೂರೈಸುವಲ್ಲಿ ಶಕ್ತಮೀರಿ ಶ್ರಮಿಸಿವೆ ಎಂಬುದು ನನ್ನ ಭಾವನೆ. ಇದು ಮೆಕ್ಯಾನಿಕ್ಗಳಿಗೆ ವರಪ್ರದವಾಗಿ ಅವರು ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಹೊರಹಾಕುವಲ್ಲಿ ಮಾರ್ಗದರ್ಶಕವಾಗಿತ್ತು ಎಂದು ಟಿವಿ9 ನೆಟ್ ವರ್ಕ್ (ಡಿಜಿಟಲ್ ಮತ್ತು ಬ್ರಾಡ್ ಕಾಸ್ಟಿಂಗ್) ಛೀಪ್ ಗ್ರೋಥ್ ಆಫೀಸರ್ ರಕ್ತಿಮ್ ದಾಸ್ ಹೇಳಿದರು.