ವಿಜಯ್ ಮಲ್ಯ ಸೋತಿದ್ದು ಯಾಕೆ? ಕಾರಣಗಳನ್ನು ಬಿಚ್ಚಿಟ್ಟ ಕಿರಣ್ ಮಜುಮ್ದಾರ್
Kiran Mazumdar speaks about Vijay Mallya: ವಿಜಯ್ ಮಲ್ಯ ಅವರಿಗೆ ಕಿಂಗ್ಫಿಶರ್ ಏರ್ಲೈನ್ಸ್ನ ಹುಚ್ಚೇ ಮುಳುವಾಯಿತು ಎನ್ನುತ್ತಾರೆ ಕಿರಣ್ ಮಜುಮ್ದಾರ್. ಏರ್ಲೈನ್ಸ್ ಶುರು ಮಾಡಿ ಅದು ನಷ್ಟವಾಗುತ್ತಿದ್ದರೂ ಗೆದ್ದೇಗೆಲ್ಲುತ್ತೇನೆ ಎನ್ನುವ ಹುಂಬತನ ವಿಜಯ್ ಮಲ್ಯಗೆ ಇತ್ತು. ಯಾರು ಹೇಳಿದರೂ ಅವರಿಗೆ ಅರಿವಾಗಲಿಲ್ಲ ಎಂದು ಬಯೋಕಾನ್ ಮುಖಸ್ಥೆಯು ನಿಖಿಲ್ ಕಾಮತ್ರ ಪೋಡ್ಕ್ಯಾಸ್ಟ್ನಲ್ಲಿ ಹೇಳಿದ್ದಾರೆ.
ಬೆಂಗಳೂರು, ಅಕ್ಟೋಬರ್ 8: ವಿಜಯ್ ಮಲ್ಯ ದೇಶ ಬಿಟ್ಟು ಹೋಗಿ ಹಲವು ವರ್ಷಗಳಾದರೂ ಬಹಳ ಜನರ ಚಿತ್ತದಿಂದ ಯಾವತ್ತೂ ಮರೆಯಾಗದ ವ್ಯಕ್ತಿತ್ವ ಅವರದ್ದು. ಐಪಿಎಲ್ನ ಆರಂಭದ ದಿನಗಳಲ್ಲಿ ಆರ್ಸಿಬಿ ಜೊತೆ ರಂಗುರಂಗಾಗಿದ್ದ ವಿಜಯ್ ಮಲ್ಯ ಆರ್ಥಿಕ ಅಪರಾಧಿಯಾಗಿ ವಿದೇಶಕ್ಕೆ ಹೋಗಿ ನೆಲಸುವಂತಾಗಿದೆ. ವಿಜಯ್ ಮಲ್ಯ ಕಥೆ ಯಾಕೆ ಹೀಗಾಯಿತು, ಅವರು ನಷ್ಟ ಕಾಣಲು ಏನು ಕಾರಣ ಎಂಬುದನ್ನು ಕಿರಣ್ ಮಜುಮ್ದಾರ್ ವಿವರಿಸಿದ್ದಾರೆ.
ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಅವರು ವಿಜಯ್ ಮಲ್ಯರ ದೀರ್ಘಕಾಲದ ಸ್ನೇಹಿತೆ. ಅವರನ್ನು ವೈಯಕ್ತಿಕವಾಗಿ ಮತ್ತು ಔದ್ಯಮಿಕವಾಗಿ ಹತ್ತಿರದಿಂದ ಬಲ್ಲವರು. ನಿಖಿಲ್ ಕಾಮತ್ ಅವರ ಪೋಡ್ಕ್ಯಾಸ್ಟ್ನಲ್ಲಿ ಪಾಲ್ಗೊಂಡು ಮಾತನಾಡುತ್ತಾ ಕಿರಣ್ ಮಜುಮ್ದಾರ್ ತಮ್ಮ ಹಳೆಯ ಸ್ನೇಹಿತನ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕಸ ಗುಡಿಸುವ ಕಾಯಕ; ಸಾಯುವಾಗ ಹೊಂದಿದ್ದ ಆಸ್ತಿ 60 ಕೋಟಿ ರೂ; ಮಾದರಿಯಾಗುವ ರೊನಾಲ್ಡ್ ರೀಡ್ ಕಥೆ
ವಿಜಯ್ ಮಲ್ಯ ಕಿಂಗ್ಫಿಶರ್ ಬ್ರ್ಯಾಂಡ್ ಸೃಷ್ಟಿಸಿ ಗೆದ್ದರು. ಆದರೆ, ಕಿಂಗ್ಫಿಶರ್ ಏರ್ಲೈನ್ಸ್ ಶುರು ಮಾಡಿ ತಪ್ಪೆಸಗಿದರು. ಏರ್ಲೈನ್ಸ್ ಬಗ್ಗೆ ಅವರಿಗೆ ಬಹಳ ಪ್ಯಾಶನ್ ಇತ್ತು. ಸಂಸ್ಥೆ ನಷ್ಟದ ಮೇಲೆ ನಷ್ಟ ಕಂಡರೂ ಅವರ ನಂಬಿಕ ಕದಲಿಲ್ಲ. ಏನಾದರೂ ಗೆಲ್ಲುತ್ತೇನೆ ಎನ್ನುವ ಅವರ ಹುಂಬತನವೇ ಅವರಿಗೆ ಮುಳುವಾಯಿತು ಎಂದು ಕಿರಣ್ ಮಜುಮ್ದಾರ್ ಹೇಳಿದ್ದಾರೆ.
ಕಿಂಗ್ಫಿಶರ್ ಏರ್ಲೈನ್ಸ್ನಲ್ಲಿ ಸ್ಟಾಫ್ ಸಂಖ್ಯೆ ತಗ್ಗಿಸಿ, ವೆಚ್ಚವನ್ನು ಕಡಿಮೆ ಮಾಡಿ, ನಷ್ಟ ಕಡಿಮೆ ಮಾಡಿ ಎಂದು ನಾನು ಸಲಹೆ ನೀಡಿದ್ದೆ. ಆದರೆ ಅದನ್ನು ಒಪ್ಪಲು ಅವರು ಸಿದ್ಧರಿರಲಿಲ್ಲ. ತಾನೇನು ಮಾಡುತ್ತಿದ್ದೇನೆ ತನಗೆ ಗೊತ್ತು ಎನ್ನುತ್ತಿದ್ದರು. ವಾಸ್ತವವನ್ನು ಒಪ್ಪುವ ಮನಃಸ್ಥಿತಿ ಅವರಿಗೆ ಆಗ ಇರಲಿಲ್ಲ ಎಂದು ಬಯೋಕಾನ್ ಮುಖ್ಯಸ್ಥೆ ಈ ಪಾಡ್ಕ್ಯಾಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಇಲಾನ್ ಮಸ್ಕ್ ಸೂಪರ್ ಮ್ಯಾನ್; ಈ ಕೆಲಸ ಮಾಡೋಕೆ ಅವರೊಬ್ರಿಂದ್ಲೇ ಸಾಧ್ಯ: ನಿವಿಡಿಯಾ ಸಿಇಒ ಹೊಗಳಿಕೆ
ಸರ್ಕಾರ ಈಗಲೂ ಮಲ್ಯರನ್ನು ಟಾರ್ಗೆಟ್ ಮಾಡುವುದು ನಿಲ್ಲಿಸಬೇಕು
ವಿಜಯ್ ಮಲ್ಯ ಒಳ್ಳೆಯ ಉದ್ಯಮಿ. ತಾವು ನೀಡಬೇಕಿದ್ದ ಸಾಲವನ್ನು ಬಹುತೇಕ ಹಿಂದಿರುಗಿಸಿದ್ದಾರೆ. ಆದರೂ ಸರ್ಕಾರ ಅವರನ್ನು ಯಾಕೆ ಟಾರ್ಗೆಟ್ ಮಾಡುತ್ತಿದೆ ಎಂದು ಗೊತ್ತಾಗುತ್ತಿಲ್ಲ. ವಿಜಯ್ ಮಲ್ಯ ಇಲ್ಲಿ ಇರಬೇಕಾದವರು. ಅವರಿಗೆ ಇಲ್ಲಿ ಬರಲು ಅವಕಾಶ ಕೊಡಬೇಕು. ಅವರು ಇನ್ನೂ ಬಹಳಷ್ಟು ಕೆಲಸಗಳನ್ನು ಮಾಡಬಲ್ಲುರು ಎಂದು ನಿಖಿಲ್ ಕಾಮತ್ ಜೊತೆಗಿನ ಸಂದರ್ಶನದಲ್ಲಿ ಕಿರಣ್ ಮಜುಮ್ದಾರ್ ಅಭಿಪ್ರಾಯಪಟ್ಟಿದ್ದಾರೆ.
ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಮಾತನಾಡಿರುವ ಶಾರ್ಟ್ಸ್ ವಿಡಿಯೋ ಲಿಂಕ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ