AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lemon Price Surge: ಸೇಬು, ದಾಳಿಂಬೆಗಿಂತ ನಿಂಬೆಹಣ್ಣು ದುಬಾರಿ! ಕೇಜಿಗೆ 200 ರೂಪಾಯಿಯಂತೆ ಗುಜರಾತ್​ನಲ್ಲಿ

ಭಾರೀ ಬೇಡಿಕೆ ಹಾಗೂ ಪೂರೈಕೆಯಲ್ಲಿನ ವ್ಯತ್ಯಯದ ಕಾರಣಕ್ಕೆ ಗುಜರಾತ್​ನಲ್ಲಿ ನಿಂಬೆಹಣ್ಣಿನ ಬೆಲೆ ಕೇಜಿಗೆ 200 ರೂಪಾಯಿ ತಲುಪಿದೆ. ಇದರ ಜತೆಗೆ ಇತರ ತರಕಾರಿಗಳ ಬೆಲೆಯೂ ಹೆಚ್ಚಾಗಿದೆ.

Lemon Price Surge: ಸೇಬು, ದಾಳಿಂಬೆಗಿಂತ ನಿಂಬೆಹಣ್ಣು ದುಬಾರಿ! ಕೇಜಿಗೆ 200 ರೂಪಾಯಿಯಂತೆ ಗುಜರಾತ್​ನಲ್ಲಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 02, 2022 | 11:38 AM

Share

ಗುಜರಾತ್​ನಲ್ಲಿ ನಿಂಬೆಹಣ್ಣಿನ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ (Price Hike) ಆಗಿದೆ. ಪೂರೈಕೆಯಲ್ಲಿನ ಕೊರತೆ ಮತ್ತು ಬೇಸಿಗೆಯ ಶಾಖದಿಂದಾಗಿ ನಿಂಬೆಹಣ್ಣಿಗೆ ಬೇಡಿಕೆ ವಿಪರೀತ ಆಗಿದೆ. ಸುದ್ದಿ ಸಂಸ್ಥೆ ಎಎನ್​ಐ ಪ್ರಕಾರ, ಗುಜರಾತ್​ನ ರಾಜ್​ಕೋಟ್​ನಲ್ಲಿ ನಿಂಬೆಹಣ್ಣು ಕೇಜಿಗೆ 200 ರೂಪಾಯಿಯಂತೆ ಮಾರಾಟ ಆಗುತ್ತಿದ್ದು, ಈ ಹಿಂದಿನ ದರ ಕೇಜಿಗೆ 50ರಿಂದ 60 ರೂಪಾಯಿ ಇತ್ತು. “ನಿಂಬೆಹಣ್ಣಿನ ಬೆಲೆ ಕೇಜಿಗೆ 200 ರೂಪಾಯಿ ಮುಟ್ಟುತ್ತಿದೆ. ಈ ಹಿಂದೆ ಇದು 50ರಿಂದ 60 ರೂಪಾಯ ಇತ್ತು. ಇದರಿಂದಾಗಿ ಅಡುಗೆ ಮನೆಯ ಬಜೆಟ್​ ಮೇಲೆ ಪರಿಣಾಮ ಆಗುತ್ತದೆ. ಯಾವಾಗ ಇದರ ಬೆಲೆ ಕಡಿಮೆ ಆಗುತ್ತದೆ ಎಂಬುದು ಸಹ ನಮಗೆ ಗೊತ್ತಿಲ್ಲ,” ಎಂದು ಗ್ರಾಹಕರೊಬ್ಬರು ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ತಾಪಮಾನ ಹೆಚ್ಚಾದಂತೆ ವಿಟಮಿನ್ ಸಿ ಹೆಚ್ಚಾಗಿರುವ ನಿಂಬೆಹಣ್ಣನ್ನು ತಮ್ಮ ಆಹಾರದಲ್ಲಿ ಸೇರಿಸಲು ಬಯಸುತ್ತಾರೆ. ಇದರಿಂದ ದೇಹದಲ್ಲಿ ನೀರಿನ ಅಂಶ ಉಳಿಸಿಕೊಳ್ಳುವುದಕ್ಕೆ ಮತ್ತು ಜೀರ್ಣ ವ್ಯವಸ್ಥೆಯನ್ನು ಹೆಚ್ಚಿಸುವುದಕ್ಕೆ ಸಹಕಾರಿ ಆಗುತ್ತದೆ. ಹೆಚ್ಚುತ್ತಿರುವ ಬಳಕೆ ಮತ್ತು ಪೂರೈಕೆಯಲ್ಲಿನ ಕೊರತೆಯಿಂದಾಗಿ ನಿಂಬೆಹಣ್ಣಿನ ಬೆಲೆ ಗಗನಕ್ಕೆ ಏರಿದೆ.

“ಹತ್ತಿರ ಹತ್ತಿರ ಎಲ್ಲ ತರಕಾರಿಗಳ ಬೆಲೆಯಲ್ಲೂ ಏರಿಕೆ ಆಗಿದೆ. ಆದರೆ ಇದು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನದಾಗಿದೆ. ಇಂಥ ದುಬಾರಿ ತರಕಾರಿಗಳನ್ನು ಖರೀದಿಸುವುದು ಮಧ್ಯಮ ವರ್ಗದವರಿಗೆ ಕಷ್ಟ. ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಖರೀದಿಸಿದಂತೆ ಈಗ ನಿಂಬೆಹಣ್ಣನ್ನು ಕೊಳ್ಳಲು ಆಗುವುದಿಲ್ಲ. ಕಳೆದ ವರ್ಷ ಮಾರ್ಚ್​ನಲ್ಲಿ ನಾವು ಪಾವತಿಸುತ್ತಿದ್ದ ದರದ ದುಪ್ಪಟ್ಟಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಏನಾಗುತ್ತದೋ ಎಂದು ನೋಡಬೇಕು,” ಎಂಬುದಾಗಿ ಖರೀದಿದಾರರೊಬ್ಬರು ತಿಳಿಸಿದ್ದಾರೆ.

ಈ ಹಿಂದೆ ನಾವು ವಾರಕ್ಕೆ 1 ಕೇಜಿ ನಿಂಬೆಹಣ್ಣು ಖರೀದಿ ಮಾಡುತ್ತಿದ್ದೆವು. ಆದರೆ ಈಗ 250 ಅಥವಾ 500 ಗ್ರಾಮ್​ಗೆ ಇಳಿಕೆ ಮಾಡಿದ್ದೇವೆ. ಅದಕ್ಕೆ ಕಾರಣ ಈ ಬೆಲೆ ಏರಿಕೆ. ಇದರಿಂದಾಗಿ ನಮ್ಮ ಖರ್ಚಿನ ಮೇಲೆ ಪರಿಣಾಮ ಆಗಿದೆ ಎಂದು ಮತ್ತೊಬ್ಬ ಖರೀದಿದಾರರು ಹೇಳಿದ್ದಾರೆ.

ಇದನ್ನೂ ಓದಿ: LPG Cylinder Price Hike: ಬೆಲೆ ಏರಿಕೆ ಶಾಕ್! ಗೃಹ ಬಳಕೆಯ LPG ಸಿಲಿಂಡರ್ ದರ ಹೆಚ್ಚಳ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್