AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Future Group: ಫ್ಯೂಚರ್ ರೀಟೇಲ್, ಫ್ಯೂಚರ್​ ಎಂಟರ್​ಪ್ರೈಸಸ್​ನಿಂದ ತಪ್ಪಿದ 8,158 ಕೋಟಿಯ ಸಾಲ ಮರುಪಾವತಿ

ಫ್ಯೂಚರ್​ ರೀಟೇಲ್ ಹಾಗೂ ಫ್ಯೂಚರ್ ಎಂಟರ್​ಪ್ರೈಸಸ್​ನಿಂದ 8,158 ಕೋಟಿ ರೂಪಾಯಿ ಪಾವತಿ ದಿನಾಂಕದಂದು ಪಾವತಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಲಾಗಿದೆ.

Future Group: ಫ್ಯೂಚರ್ ರೀಟೇಲ್, ಫ್ಯೂಚರ್​ ಎಂಟರ್​ಪ್ರೈಸಸ್​ನಿಂದ ತಪ್ಪಿದ 8,158 ಕೋಟಿಯ ಸಾಲ ಮರುಪಾವತಿ
ಕಿಶೋರ್ ಬಿಯಾನಿ (ಸಂಗ್ರಹ ಚಿತ್ರ)
TV9 Web
| Edited By: |

Updated on: Apr 01, 2022 | 11:47 PM

Share

ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ಸಮೂಹದ (Future Group) ಎರಡು ಪ್ರಮುಖ ಕಂಪೆನಿಗಳಾದ ಫ್ಯೂಚರ್ ರಿಟೇಲ್ ಮತ್ತು ಫ್ಯೂಚರ್ ಎಂಟರ್‌ಪ್ರೈಸಸ್ ಶುಕ್ರವಾರ ಒಟ್ಟಾರೆಯಾಗಿ 8,157.97 ಕೋಟಿ ರೂಪಾಯಿ ಮೌಲ್ಯದ ಸಾಲ ಮರುಪಾವತಿ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಫ್ಯೂಚರ್ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಫ್‌ಇಎಲ್)ನಿಂದ ರೂ. 2,835.65 ಕೋಟಿ ಮತ್ತು ಫ್ಯೂಚರ್ ರೀಟೇಲ್ ಲಿಮಿಟೆಡ್ (ಎಫ್‌ಆರ್‌ಎಲ್) ರೂ. 5,322.32 ಕೋಟಿ ಪಾವತಿಸಲು ಅಂತಿಮ ದಿನಾಂಕ ಮಾರ್ಚ್ 31, 2022 ಆಗಿತ್ತು. ಕಳೆದ ವರ್ಷ ಎಫ್​ಆರ್​ಎಲ್ ಮತ್ತು ಎಫ್​ಇಎಲ್ ಹಲವಾರು ಇತರ ಫ್ಯೂಚರ್ ಸಮೂಹ ಕಂಪೆನಿಗಳೊಂದಿಗೆ ಕೊವಿಡ್-ಬಾಧಿತ ಕಂಪೆನಿಗಳಿಗೆ ಬ್ಯಾಂಕ್‌ಗಳ ಒಕ್ಕೂಟದೊಂದಿಗೆ ಒಂದು ಬಾರಿ ಪುನರ್​ರಚಿಸುವ (OTR) ಯೋಜನೆಯನ್ನು ರೂಪಿಸಿದ್ದವು. ಇ-ಕಾಮರ್ಸ್ ಪ್ರಮುಖ ಕಂಪೆನಿಯಾದ ಅಮೆಜಾನ್ ಮತ್ತು ಇತರ ಸಂಬಂಧಿತ ಸಮಸ್ಯೆಗಳ ವಿಚಾರವಾಗಿ ನಡೆಯುತ್ತಿರುವ ದಾವೆಗಳಿಂದಾಗಿ ಸಾಲದಾತರಿಗೆ 5,322.32 ಕೋಟಿ ರೂಪಾಯಿ ಮರುಪಾವತಿಯ ಅಂತಿಮ ದಿನಾಂಕವು ತಪ್ಪಿಹೋಗಿದೆ ಎಂದು ಎಫ್​ಆರ್​ಎಲ್ ಹೇಳಿದೆ.

ಕಳೆದ ವರ್ಷ ಬ್ಯಾಂಕ್‌ಗಳ ಒಕ್ಕೂಟದೊಂದಿಗೆ ಎಫ್​ಆರ್​ಎಲ್​ ಒಂದು ಸಲದ ಪುನಾರಚನೆ ಯೋಜನೆಗೆ ಪ್ರವೇಶಿಸಿತ್ತು ಮತ್ತು ಈಕ್ವಿಟಿ ಕೊಡುಗೆಯ ಮೂಲಕ ಮಾರ್ಚ್ 31, 2022ರ ಮೊದಲು 3,900 ಕೋಟಿ ರೂ. ಸಂಗ್ರಹಿಸಿತ್ತು. “ಅಲ್ಲದೆ, ಬಂಡವಾಳದ ಒಳಹರಿವು ಪರಿಗಣಿಸಿ ಕಂಪೆನಿಯು 31 ಮಾರ್ಚ್, 2022 ರಂದು ಅಥವಾ ಮೊದಲು ವಿವಿಧ ಬ್ಯಾಂಕ್‌ಗಳ ಒಕ್ಕೂಟ ಮತ್ತು ಸಾಲದಾತರಿಗೆ (ಒಟಿಆರ್ ಯೋಜನೆಯಡಿ ಒಪ್ಪಂದಕ್ಕೆ ಪಕ್ಷಗಳು) ರೂ 5,322.32 ಕೋಟಿ ಮೊತ್ತವನ್ನು ಪಾವತಿಸಲು ಬಾಧ್ಯತೆ ಇತ್ತು (‘Due Date’),” ಎಂದು ಅದು ಹೇಳಿದೆ. ಆದರೆ ಕಂಪೆನಿಯು “ಅಮೆಜಾನ್.ಕಾಮ್ ಎನ್​ವಿ ಇನ್ವೆಸ್ಟ್‌ಮೆಂಟ್ ಹೋಲ್ಡಿಂಗ್ಸ್ ಎಲ್​ಎಲ್​ಸಿ ಮತ್ತು ಇತರ ಸಂಪರ್ಕಿತ ಸಮಸ್ಯೆಗಳೊಂದಿಗೆ ನಡೆಯುತ್ತಿರುವ ದಾವೆಗಳಿಂದಾಗಿ” ಈಕ್ವಿಟಿ ಕೊಡುಗೆಯ ಮೂಲಕ ಹಣವನ್ನು ಸಂಗ್ರಹಿಸಲು ಸಾಧ್ಯ ಆಗಲಿಲ್ಲ.

3,494.56 ಕೋಟಿ ರೂಪಾಯಿಗಳನ್ನು ಬ್ಯಾಂಕ್‌ಗಳಿಗೆ ಪಾವತಿಸಲು 2021ರ ಡಿಸೆಂಬರ್ 31ರಂದು ಹಿಂದಿನ ಗಡುವನ್ನು ಸಹ ಎಫ್​ಇಎಲ್ ತಪ್ಪಿಸಿತ್ತು. ಎಫ್​ಇಎಲ್​ ಸಂಜೆಯ ತಡವಾದ ಫೈಲಿಂಗ್‌ನಲ್ಲಿ, ಬ್ಯಾಂಕ್‌ಗಳ ಒಕ್ಕೂಟಕ್ಕೆ 2,835.65 ಕೋಟಿ ರೂಪಾಯಿಗಳನ್ನು ಪಾವತಿಸಲು ಸಾಧ್ಯವಾಗಿಲ್ಲ ಎಂದು ಹೇಳಿದೆ. ಒಂದು ಸಲದ ಪುನಾರಚನೆ ಯೋಜನೆಯಡಿ ಒಪ್ಪಂದಕ್ಕೆ ಪಕ್ಷಗಳಾಗಿರುವ ಅದರ ಸಾಲದಾತರಿಗೆ “ರೂ. 2,835.65 ಕೋಟಿ ಮೊತ್ತವನ್ನು ಪಾವತಿಸಲು” ಅಂತಿಮ ದಿನಾಂಕವು ಮಾರ್ಚ್ 31, 2022 ಆಗಿತ್ತು. “ನಿಗದಿತ ದಿನಾಂಕದಂದು ಬ್ಯಾಂಕ್‌ಗಳು ಮತ್ತು ಸಾಲದಾತರಿಗೆ ಮೇಲಿನ ಬಾಧ್ಯತೆಗಳನ್ನು ಪೂರೈಸಲು ಕಂಪೆನಿಗೆ ಸಾಧ್ಯವಾಗಲಿಲ್ಲ,” ಎಂದು ಎಫ್​ಇಎಲ್​ ಹೇಳಿದೆ. ಆದರೆ ಆರ್‌ಬಿಐ ಸುತ್ತೋಲೆಯ ಆಗಸ್ಟ್ 6, 2020ರ ಪ್ರಕಾರ, ಒಟಿಆರ್​ ಯೋಜನೆಯಡಿ ಎಫ್​ಇಎಲ್​ ನಿಗದಿತ ದಿನಾಂಕದಿಂದ 30 ದಿನಗಳ ಪರಿಶೀಲನಾ ಅವಧಿಯನ್ನು ಹೊಂದಿದೆ ಎಂದು ಕಂಪೆನಿಯು ಹೇಳಿದ್ದು, “ಕಂಪೆನಿಯು ಈ ಸಂಬಂಧ ಮತ್ತಷ್ಟು ಬೆಳವಣಿಗೆ ಹಾಗೂ ಅಪ್​ಡೇಟ್​ಗಳನ್ನು ಅನ್ವಯಿಸಿದಾಗ ತಿಳಿಸುತ್ತದೆ,” ಎಂದು ಸೇರಿಸಲಾಗಿದೆ.

ಎಫ್​ಇಎಲ್​ ಸೇರಿದಂತೆ ಫ್ಯೂಚರ್ ಸಮೂಹದ ಹಲವಾರು ಕಂಪೆನಿಗಳು ತಮ್ಮ ಸಾಲದಾತರೊಂದಿಗೆ ಆಗಸ್ಟ್ 6, 2020ರ ಆರ್​ಬಿಐ ಸುತ್ತೋಲೆಯ ಪ್ರಕಾರ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಇದರಲ್ಲಿ ಕೊವಿಡ್-ಸಂಬಂಧಿತ ಒತ್ತಡದ ನಿರ್ಣಯದ ಚೌಕಟ್ಟನ್ನು ಘೋಷಿಸಲಾಗಿದೆ. ಎಫ್​ಇಎಲ್​ನಿಂದ 2020ರ ಆಗಸ್ಟ್​ನಲ್ಲಿ ಫ್ಯೂಚರ್ ಸಮೂಹ ಘೋಷಿಸಿದ ರೂ. 24,713 ಕೋಟಿಯ ಒಪ್ಪಂದದ ಭಾಗವಾಗಿದೆ. ಇದರ ಅಡಿಯಲ್ಲಿ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL)ಗೆ ಚಿಲ್ಲರೆ, ಸಗಟು, ಸಾಗಣೆ ಮತ್ತು ವೇರ್‌ಹೌಸಿಂಗ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 19 ಕಂಪೆನಿಗಳನ್ನು ಮಾರಾಟ ಮಾಡುವುದು ಒಳಗೊಂಡಿದೆ.

ಎಲ್ಲ 19 ಕಂಪೆನಿಗಳನ್ನು ಒಂದು ಘಟಕವಾಗಿ ಏಕೀಕರಿಸಲಾಗುತ್ತದೆ. ಅದು ಎಫ್​ಇಎಲ್​ ಎಂದು ಮಾಡಿ, ನಂತರ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್​ಗೆ ವರ್ಗಾಯಿಸಲಾಗುತ್ತದೆ. ಫ್ಯೂಚರ್ ಸಮೂಹ ಕಂಪೆನಿಗಳು 2022ರ ಏಪ್ರಿಲ್ 20ರಿಂದ ಏಪ್ರಿಲ್ 23ರ ನಡುವೆ 24,713 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ತಮ್ಮ ಅನುಮೋದನೆಯನ್ನು ಪಡೆಯಲು ಷೇರುದಾರರು ಮತ್ತು ಸಾಲಗಾರರ ಸಭೆಗಳನ್ನು ನಡೆಸುತ್ತವೆ. ಈ ಒಪ್ಪಂದಕ್ಕೆ ಇ-ಕಾಮರ್ಸ್ ಪ್ರಮುಖ ಅಮೆಜಾನ್‌ನಿಂದ ವ್ಯಾಜ್ಯ ಹೂಡಲಾಗಿದೆ ಮತ್ತು ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ಮತ್ತು ಸಿಂಗಾಪೂರ್ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವೂ ಸೇರಿ ವಿವಿಧ ಫೋರಂಗಳಲ್ಲಿ ವ್ಯಾಜ್ಯ ಇದೆ.

ಇದನ್ನೂ ಓದಿ: Amazon dispute: ಅಮೆಜಾನ್ ವ್ಯಾಜ್ಯದಿಂದಾಗಿ ರೂ. 3,494 ಕೋಟಿ ಸಾಲ ಪಾವತಿಸಲು ವಿಫಲವಾದ ಫ್ಯೂಚರ್ ರೀಟೇಲ್

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್