ಈ ವರ್ಷದ ನಾಲ್ಕನೇ ತ್ರೈಮಾಸಿಕದ ವೇಳೆಗೆ (2022ರ ಜನವರಿಯಿಂದ ಮಾರ್ಚ್) ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಶನಿವಾರ ಎಲ್‌ಐಸಿಯ ಲಿಸ್ಟಿಂಗ್ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. “… ಈ ವರ್ಷದ ಬಜೆಟ್ನಲ್ಲಿ ಖಾಸಗೀಕರಣದಿಂದ 1.75 ಲಕ್ಷ ಕೋಟಿ ರೂಪಾಯಿ ಆದಾಯ ಬರಲಿದೆ ಎಂಬ ನಿರೀಕ್ಷೆ ಮಾಡಲಾಗಿದೆ. ಏರ್ ಇಂಡಿಯಾ ಉತ್ತಮವಾಗಿ ಮುಂದುವರಿಯುತ್ತಿದೆ. ಎರಡು ಬಿಡ್‌ಗಳು ಬಂದಿವೆ ಎಂದು ನೀವು ಓದಿರಬೇಕು. ಭಾರತ್ ಪೆಟ್ರೋಲಿಯಂ ಮತ್ತು ಎಲ್‌ಐಸಿಯ ಲಿಸ್ಟಿಂಗ್ ಕೂಡ ಇದೆ. ಇದು ಈ ವರ್ಷದ ನಾಲ್ಕನೇ ತ್ರೈಮಾಸಿಕದೊಳಗೆ ಆಗಬೇಕು ಎಂಬ ವಿಶ್ವಾಸ ನಮಗಿದೆ,” ಎಂದು ಅವರು ಹೇಳಿದರು.
“ಈ ವರ್ಷ ಖಾಸಗೀಕರಣಕ್ಕೆ ಬಹಳ ಮುಖ್ಯವಾದ ವರ್ಷ ಎಂದು ಇತಿಹಾಸವು ನೋಡಲಿದೆ ಎಂಬ ವಿಶ್ವಾಸ ನನಗೆ ತುಂಬಾ ಇದೆ,” ಎಂದು ಅವರು ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್‌ನ (ISB) ‘PGPMAX ನಾಯಕತ್ವ ಶೃಂಗಸಭೆ 2021’ರ ಭಾಗವಾಗಿ ನಡೆದ ಸಂವಾದಾದಲ್ಲಿ ಹೇಳಿದರು. ದೇಶದ ಅತಿದೊಡ್ಡ ವಿಮಾದಾರ ಎಲ್‌ಐಸಿಯ ಮೆಗಾ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ನಿರ್ವಹಿಸಲು ಸರ್ಕಾರವು ಇತ್ತೀಚೆಗೆ ಗೋಲ್ಡ್‌ಮನ್ ಸ್ಯಾಚ್ಸ್ (ಇಂಡಿಯಾ) ಸೆಕ್ಯೂರಿಟೀಸ್, ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ ಮತ್ತು ನೋಮುರಾ ಫೈನಾನ್ಷಿಯಲ್ ಅಡ್ವೈಸರಿ ಮತ್ತು ಸೆಕ್ಯೂರಿಟೀಸ್ ಇಂಡಿಯಾ ಸೇರಿದಂತೆ 10 ಮರ್ಚೆಂಟ್ ಬ್ಯಾಂಕರ್‌ಗಳನ್ನು ನೇಮಿಸಿದೆ.
ಖಾಸಗೀಕರಣದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸುಬ್ರಮಣಿಯನ್ ಅವರು, ‘ಆತ್ಮನಿರ್ಭರ ಭಾರತ್’ ನೀತಿ ಮತ್ತು ಕೆಲವು ಆಯಕಟ್ಟಿನ ವಲಯಗಳನ್ನು ಹೊರತುಪಡಿಸಿ ಸಾರ್ವಜನಿಕ ವಲಯದ ಸಂಸ್ಥೆಗಳ ಖಾಸಗೀಕರಣವನ್ನು ಉತ್ತೇಜಿಸುವ ಪ್ರಮುಖ ಸುಧಾರಣೆಯ ಕುರಿತು ಮಾತನಾಡಿದರು.
ಇದನ್ನೂ ಓದಿ: ಕೊರೊನಾ ಮೂರನೇ ಅಲೆ, ಸರ್ಕಾರದ ಪ್ಯಾಕೇಜ್, ಷೇರು ಮಾರುಕಟ್ಟೆ ತನಕ ಮುಖ್ಯ ಆರ್ಥಿಕ ಸಲಹೆಗಾರರು ಹೇಳಿದ್ದೇನು?
(LIC Listing Expecting In FY22 4th Quarter According To CEA Krishnamurthy Subramanian)