Micron Unit: ಇನ್ನೊಂದು ವರ್ಷದಲ್ಲಿ ಆರಂಭವಾಗಲಿದೆ ಭಾರತದ ಮೊದಲ ಸೆಮಿಕಂಡಕ್ಟರ್ ಫ್ಯಾಕ್ಟರಿ; ಮೈಕ್ರೋನ್ ಘಟಕ ನಿರ್ಮಾಣ ಪ್ರಗತಿಯಲ್ಲಿ

Chip Manufacturing Unit: ಅಮೆರಿಕದ ಸೆಮಿಕಂಡಕ್ಟರ್ ಕಂಪನಿ ಮೈಕ್ರೋನ್ ಟೆಕ್ನಾಲಜಿ ಗುಜರಾತ್​ನ ಸಾನಂದ್​ನಲ್ಲಿ ನಿರ್ಮಿಸುತ್ತಿರುವ ಚಿಪ್ ಫ್ಯಾಕ್ಟರಿ 2025ರ ಜನವರಿಯಲ್ಲಿ ಆರಂಭವಾಗಲಿದೆ. ಮೈಕ್ರೋನ್​ನ ಮೊದಲ ಹಂತದ ಯೋಜನೆ ಇದಾಗಿದ್ದು 800 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ. 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ತಯಾರಾಗುತ್ತಿರುವ ಈ ಘಟಕವನ್ನು ಟಾಟಾ ಗ್ರೂಪ್​ನ ಸಂಸ್ಥೆಯೊಂದು ಕಟ್ಟುತ್ತಿದೆ.

Micron Unit: ಇನ್ನೊಂದು ವರ್ಷದಲ್ಲಿ ಆರಂಭವಾಗಲಿದೆ ಭಾರತದ ಮೊದಲ ಸೆಮಿಕಂಡಕ್ಟರ್ ಫ್ಯಾಕ್ಟರಿ; ಮೈಕ್ರೋನ್ ಘಟಕ ನಿರ್ಮಾಣ ಪ್ರಗತಿಯಲ್ಲಿ
ಸೆಮಿಕಂಡಕ್ಟರ್ ಚಿಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 11, 2024 | 4:26 PM

ನವದೆಹಲಿ, ಜನವರಿ 11: ಅಮೆರಿಕದ ಸೆಮಿಕಂಡ್ಟರ್ ದೈತ್ಯ ಮೈಕ್ರೋನ್ ಟೆಕ್ನಾಲಜಿ (Micron Technology) ಸಂಸ್ಥೆ ಭಾರತದಲ್ಲಿ ಸ್ಥಾಪಿಸುತ್ತಿರುವ ಘಟಕ ಇನ್ನೊಂದು ವರ್ಷದಲ್ಲಿ ಕಾರ್ಯಾರಂಭಿಸಲಿದೆ. ಅಮೆರಿಕದ ಮೈಕ್ರೋನ್ ಟೆಕ್ನಾಲಜಿ ಸಂಸ್ಥೆಯೇ ಖುದ್ದಾಗಿ ಈ ವಿಚಾರವನ್ನು ಖಚಿತಪಡಿಸಿದೆ. ಗುಜರಾತ್​ನ ಸಾನಂದ್ ಜಿಲ್ಲೆಯಲ್ಲಿ ಅದರ ಮೊದಲ ಹಂತದ ಘಟಕ ನಿರ್ಮಾಣ ಆಗುತ್ತಿದೆ. ಇದು 2025ರ ಆರಂಭದಲ್ಲಿ ಕಾರ್ಯಾರಂಭಿಸಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.

ಮೈಕ್ರೋನ್ ಟೆಕ್ನಾಲಜಿ ಸಂಸ್ಥೆ ಮೆಮೊರಿ ಚಿಪ್ ಮತ್ತು ಡಾಟಾ ಸ್ಟೋರೇಜ್ ನಿರ್ಮಿಸುತ್ತದೆ. ವಿಶ್ವದ ಅತಿದೊಡ್ಡ ಸೆಮಿಕಂಡಕ್ಟರ್ ಚಿಪ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳಲ್ಲಿ ಅದೂ ಒಂದು. ಭಾರತದಲ್ಲಿ ಒಟ್ಟು 2.75 ಬಿಲಿಯನ್ ಡಾಲರ್ ವೆಚ್ಚದಲ್ಲಿ ಉತ್ಪಾದನಾ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರ ಒಂದು ಭಾಗವಾಗಿ ಸಾನಂದ್​ನಲ್ಲಿ ನಿರ್ಮಾಣವಾಗುತ್ತಿರುವ ಘಟಕಕ್ಕೆ 800 ಮಿಲಿಯನ್ ಡಾಲರ್ ವ್ಯಯಿಸುತ್ತಿದೆ.

ಇದನ್ನೂ ಓದಿ: Layoffs: ಗೂಗಲ್​ನಿಂದ ಮತ್ತೆ ನೂರಾರು ಮಂದಿಯ ಲೇ ಆಫ್; ಫಿಟ್​ಬಿಟ್​ನ ಇಬ್ಬರು ಸಹಸಂಸ್ಥಾಪಕರೂ ಔಟ್

ಸಾನಂದ್​ನಲ್ಲಿ ಮೊದಲ ಹಂತದಲ್ಲಿ ನಿರ್ಮಾಣವಾಗುತ್ತಿರುವ ಫ್ಯಾಕ್ಟರಿಯು ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ (ಎಟಿಎಂಪಿ) ಘಟಕವಾಗಿರುತ್ತದೆ. ಇದು 5 ಲಕ್ಷ ಚದರ ಅಡಿ ವಿಸ್ತೀರ್ಣದ್ದಿರಲಿದೆ. ಟಾಟಾ ಗ್ರೂಪ್​ನ ಸಂಸ್ಥೆ ಇದನ್ನು ಕಟ್ಟುತ್ತಿದೆ.

ಚಿಪ್ ತಯಾರಿಸಲು ಬಹಳ ನಾಜೂಕಾದ ಪರಿಸರ ಅಗತ್ಯ ಇದೆ. ಧೂಳು ಬಾರದ ಮತ್ತು ಅಲುಗಾಟ ಇಲ್ಲದ ವಾತಾವರಣ ಈ ಘಟಕದಲ್ಲಿ ಇರುವುದು ಅಗತ್ಯ.

ಈಗ ನಿರ್ಮಾಣ ಮಾಡಲಾಗುತ್ತಿರುವುದು ಮೊದಲ ಹಂತದ ಘಟಕ ಮಾತ್ರ. ಜಾಗತಿಕವಾಗಿ ಬೇಡಿಕೆ ಹೆಚ್ಚು ಬಂದರೆ 2025ರ ಬಳಿಕ ಎರಡನೇ ಹಂತದ ಘಟಕವನ್ನು ನಿರ್ಮಿಸುವ ಯೋಜನೆ ಮೈಕ್ರೋನ್ ಟೆಕ್ನಾಲಜಿಯದ್ದು. ಒಟ್ಟಾರೆ 5,000 ಮಂದಿಗೆ ಉದ್ಯೋಗಾವಕಾಶ ನೀಡಲಿದೆ.

ಇದನ್ನೂ ಓದಿ: ಫೆ. 1ಕ್ಕೆ ಮಧ್ಯಂತರ ಬಜೆಟ್ ಮಂಡನೆ; ಜನವರಿ 31ರಿಂದ ಫೆಬ್ರುವರಿ 9ರವರೆಗೆ ಬಜೆಟ್ ಅಧಿವೇಶನ: ವರದಿ

ಘಟಕ ಆರಂಭವಾಗಲು ಇನ್ನೂ ಒಂದು ವರ್ಷ ಬೇಕಾಗುತ್ತದಾದರೂ ಮೈಕ್ರೋನ್ ಸಂಸ್ಥೆ ಈಗಾಗಲೇ 200 ಮಂದಿಯನ್ನು ನೇಮಕಾತಿ ಮಾಡಿದೆ. ಮಲೇಷ್ಯಾ ಮತ್ತು ಮೊಹಾಲಿಯಲ್ಲಿ ಇವರಿಗೆ ತರಬೇತಿ ನೀಡಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು