GPF: ಜನವರಿ – ಮಾರ್ಚ್ ತ್ರೈಮಾಸಿಕ ಅವಧಿಗೆ ಜಿಪಿಎಫ್, ಸಿಪಿಎಫ್ ಬಡ್ಡಿ ದರ ಪ್ರಕಟಿಸಿದ ಕೇಂದ್ರ, ಇಲ್ಲಿದೆ ವಿವರ

ಜಿಪಿಎಫ್​ ಎಂಬುದು ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಕೇಂದ್ರ ಸರ್ಕಾರದ ನೌಕರರಿಗೆ ಇದರಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಉದ್ಯೋಗಿಗಳು ವೇತನದ ನಿರ್ದಿಷ್ಟ ಮೊತ್ತವನ್ನು ಜಿಪಿಎಫ್‌ನಲ್ಲಿ ಹೂಡಿಕೆ ಮಾಡಲು ಅನುಮತಿಸಲಾಗಿದೆ.

GPF: ಜನವರಿ - ಮಾರ್ಚ್ ತ್ರೈಮಾಸಿಕ ಅವಧಿಗೆ ಜಿಪಿಎಫ್, ಸಿಪಿಎಫ್ ಬಡ್ಡಿ ದರ ಪ್ರಕಟಿಸಿದ ಕೇಂದ್ರ, ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jan 04, 2023 | 11:35 AM

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯ 2023ರ ಜನವರಿ, ಮಾರ್ಚ್ ತ್ರೈಮಾಸಿಕ ಅವಧಿಗೆ ಸಾಮಾನ್ಯ ಭವಿಷ್ಯ ನಿಧಿ (GPF), ಕಾಂಟ್ರಿಬ್ಯೂಟರಿ ಪ್ರಾವಿಡೆಂಟ್ ಫಂಡ್ (CPF) ಹಾಗೂ ಇತರ ಭವಿಷ್ಯ ನಿಧಿಗಳ ಬಡ್ಡಿ ದರ ಪ್ರಕಟಿಸಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಈ ವಿಚಾರವಾಗಿ ಆರ್ಥಿಕ ವ್ಯವಹಾರಗಳ ಇಲಾಖೆ (DEA), ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಹೊಸ ವರ್ಷದ ಮೊದಲ ತ್ರೈಮಾಸಿಕ ಅವಧಿಗೆ ಜಿಪಿಎಫ್, ಸಿಪಿಎಫ್ ಸೇರಿದಂತೆ ಭವಿಷ್ಯ ನಿಧಿಗಳ ಬಡ್ಡಿ ದರ ಶೇಕಡಾ 7.1 ಇರಲಿದೆ ಎಂದು ಸಚಿವಾಲಯ ತಿಳಿಸಿದೆ. ಈ ಬಡ್ಡಿ ದರ ಜನವರಿ 1ರಿಂದ ಅನ್ವಯವಾಗಲಿದ್ದು, 2023ರ ಮಾರ್ಚ್ 31ರ ವರೆಗೆ ಅಸ್ತಿತ್ವದಲ್ಲಿರಲಿದೆ.

ಏನಿದು ಜಿಪಿಎಫ್?

ಜಿಪಿಎಫ್​ ಎಂಬುದು ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಕೇಂದ್ರ ಸರ್ಕಾರದ ನೌಕರರಿಗೆ ಇದರಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಉದ್ಯೋಗಿಗಳು ವೇತನದ ನಿರ್ದಿಷ್ಟ ಮೊತ್ತವನ್ನು ಜಿಪಿಎಫ್‌ನಲ್ಲಿ ಹೂಡಿಕೆ ಮಾಡಲು ಅನುಮತಿಸಲಾಗಿದೆ. ಉದ್ಯೋಗದ ಅವಧಿಯಲ್ಲಿ ಸಂಗ್ರಹವಾದ ಒಟ್ಟಾರೆ ಮೊತ್ತವನ್ನು ಅವರ ನಿವೃತ್ತಿಯ ಸಮಯದಲ್ಲಿ ಪಾವತಿಸಲಾಗುತ್ತದೆ. ಜಿಪಿಎಫ್​​ನ ಬಡ್ಡಿ ದರವನ್ನು ಸರ್ಕಾರ ಪ್ರತಿ ತ್ರೈಮಾಸಿಕಕ್ಕೊಮ್ಮೆ ಪರಿಷ್ಕರಣೆ ಮಾಡುತ್ತದೆ.

ಇದನ್ನೂ ಓದಿ: GPF Rule Change 2022: ಜಿಪಿಎಫ್​ನಲ್ಲಿ ವರ್ಷಕ್ಕೆ ಎಷ್ಟು ಹೂಡಿಕೆ ಮಾಡಬಹುದು? ನಿಯಮದಲ್ಲಿ ಬದಲಾವಣೆ ಮಾಡಿದ ಕೇಂದ್ರ

ಕಾಂಟ್ರಿಬ್ಯೂಟರಿ ಪ್ರಾವಿಡೆಂಟ್ ಫಂಡ್, ಆಲ್ ಇಂಡಿಯಾ ಸರ್ವೀಸಸ್ ಪ್ರಾವಿಡೆಂಟ್ ಫಂಡ್, ಸಶಸ್ತ್ರ ಪಡೆಗಳ ಸಿಬ್ಬಂದಿಯ ಪ್ರಾವಿಡೆಂಟ್ ಫಂಡ್, ಸ್ಟೇಟ್ ರೈಲ್ವೆ ಪ್ರಾವಿಡೆಂಟ್ ಫಂಡ್ ಹಾಗೂ ಇತರ ಫಂಡ್​ಗಳಿಗೆ ಶೇಕಡಾ 7.1ರ ಬಡ್ಡಿ ಅನ್ವಯವಾಗಲಿದೆ.

ಶೇಕಡಾ 7.1ರ ಬಡ್ಡಿ ದರ ವ್ಯಾಪ್ತಿಯಡಿ ಬರುವ ಫಂಡ್​ಗಳು

1. ಸಾಮಾನ್ಯ ಭವಿಷ್ಯ ನಿಧಿ (ಕೇಂದ್ರ ಸರ್ಕಾರಿ ನೌಕರರಿಗೆ ಸಂಬಂಧಿಸಿದ್ದು)

2. ದಿ ಕಾಂಟ್ರಿಬ್ಯೂಟರಿ ಪ್ರಾವಿಡೆಂಟ್ ಫಂಡ್

3. ದಿ ಆಲ್ ಇಂಡಿಯಾ ಸರ್ವೀಸಸ್ ಪ್ರಾವಿಡೆಂಟ್ ಫಂಡ್

4. ದಿ ಸ್ಟೇಟ್ ರೈಲ್ವೆ ಪ್ರಾವಿಡೆಂಟ್ ಫಂಡ್

5. ಸಾಮಾನ್ಯ ಭವಿಷ್ಯ ನಿಧಿ (ರಕ್ಷಣಾ ಸೇವೆಗಳಿಗೆ ಸಂಬಂದಿಸಿದ್ದು)

6. ಇಂಡಿಯನ್ ಆರ್ಡಿನೆನ್ಸ್ ಡಿಪಾರ್ಟ್​​ಮೆಂಟ್ ಪ್ರಾವಿಡೆಂಟ್ ಫಂಡ್

7. ಇಂಡಿಯನ್ ಆರ್ಡಿನೆನ್ಸ್ ಫ್ಯಾಕ್ಟರೀಸ್ ವರ್ಕ್​ಮೆನ್ಸ್ ಪ್ರಾವಿಡೆಂಟ್ ಫಂಡ್

8. ಇಂಡಿಯನ್ ನೇವಲ್ ಡಾಕ್​ಯಾರ್ಡ್​ ವರ್ಕ್​ಮೆನ್ಸ್ ಪವ್ರಾವಿಡೆಂಟ್ ಫಂಡ್

9. ಡಿಫೆನ್ಸ್ ಸರ್ವೀಸಸ್ ಆಫೀಸರ್ಸ್ ಪ್ರಾವಿಡೆಂಟ್ ಫಂಡ್

10. ಆರ್ಮ್ಡ್ ಫೋರ್ಸಸ್ ಪರ್ಸನಲ್ ಪ್ರಾವಿಡೆಂಟ್ ಫಂಡ್

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:09 am, Wed, 4 January 23

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ