
ಭಾರತೀಯ ಈ-ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಕೆಲವು ನಿರ್ಧಾರಗಳು ಕೇವಲ ಸ್ಟ್ರಾಟಿಜಿಕ್ ಇರುತ್ತವೆ ಎಂದಲ್ಲ, ಅವು ಒಳಗಿನಿಂದ ಹುಟ್ಟುವ ಎಮೋಶನ್ಸ್ಗಳ ಪ್ರತಿಬಿಂಬವಾಗಿರುತ್ತವೆ. ಭಾರತೀಯ ಗೇಮಿಂಗ್ ಸ್ಟಾರ್ಗಳೆನಿಸಿರುವ ರೈಸ್ಟಾರ್ (Rai Star) ಮತ್ತು ಗ್ಯಾನ್ ಗೇಮಿಂಗ್ (Gyan Gaming) ಅವರುಗಳು MOBA Legends 5v5 ಗೆ ಪ್ರವೇಶಿಸಿರುವುದು ಅಂತಹದ್ದೇ ಒಂದು ಕ್ಷಣ. ಇವರು ಹಿಂದೆ ಆಡುತ್ತಿದ್ದ ಗೇಮ್ಗಳಿಂದ ಬಹಳ ಫೇಮಸ್ ಆದವರು. ಈಗ ಇವರ ಹೊಸ ಗೇಮ್ ಆಯ್ಕೆಯು ಕೇವಲ ಒಂದು ಘೋಷಣೆ ಮಾತ್ರವಲ್ಲ, ದೀರ್ಘ ಪ್ರಯಾಣದ ದಿಕ್ಕು ಬದಲಾವಣೆ.
ಡಿಸೆಂಬರ್ 21ರಂದು ನಡೆದ ಈ ಪ್ರಕಟಣೆ ಗೇಮಿಂಗ್ ಸಮುದಾಯದಲ್ಲಿ ದೊಡ್ಡ ಪ್ರತಿಕ್ರಿಯೆಯನ್ನೇ ಸೃಷ್ಟಿಸಿದೆ. ಕೆಲವರಿಗೆ ಇದು ಅಚ್ಚರಿ, ಕೆಲವರಿಗೆ ಉತ್ಸಾಹ, ಇನ್ನೂ ಹಲವರಿಗೆ ಮೌನವಾದ ಎಮೋಷನಲ್ ಎಫೆಕ್ಟ್.
ರೈಸ್ಟಾರ್ ಮತ್ತು ಗ್ಯಾನ್ ಗೇಮಿಂಗ್ ಇಬ್ಬರಿಗೂ ಅವರು ಹಿಂದೆ ಕಟ್ಟಿಕೊಂಡ ಜಗತ್ತು ಕೇವಲ ಕಂಟೆಂಟ್ ಮಾತ್ರವಲ್ಲ, ಅದು ಗುರುತು, ನಂಬಿಕೆ, ಮತ್ತು ಲಕ್ಷಾಂತರ ಅಭಿಮಾನಿಗಳೊಂದಿಗೆ ಬೆಸೆದ ಸಂಬಂಧ. ಆ ಪರಿಧಿಯನ್ನು ಬಿಟ್ಟು ಮುಂದೆ ಸಾಗುವುದು ಸುಲಭ ನಿರ್ಧಾರವಲ್ಲ. ಆದರೆ ಸಮಯದೊಂದಿಗೆ ಒಂದು ಮೌನ ಪ್ರಶ್ನೆ ಹುಟ್ಟುತ್ತದೆ. ಇದೇ ಸಾಕೆ, ಇಲ್ಲಿಂದ ಮುಂದೆ ಇನ್ನಷ್ಟು ಆಳವಾದ ಅನುಭವ ಬೇಕಲ್ಲವೇ..!
ಇದನ್ನೂ ಓದಿ: 27 ವರ್ಷಗಳಲ್ಲಿ ಅಮೆರಿಕದ ಈಕ್ವಿಟಿ ಹಾಗೂ ಚಿನ್ನವನ್ನೂ ಮೀರಿಸಿದ್ಯಾ ಭಾರತದ ನಿಫ್ಟಿ?; ಹೇಗೆ ಹೂಡಿಕೆ ಮಾಡುವುದು ನಿಫ್ಟಿ50ಯಲ್ಲಿ?
ಇಲ್ಲಿ ಆಟ ಕೇವಲ ಪ್ರತಿಕ್ರಿಯೆಯಲ್ಲ, ಚಿಂತನೆ. ಕೇವಲ ವೈಯಕ್ತಿಕ ಪ್ರದರ್ಶನವಲ್ಲ, ತಂಡದ ನಂಬಿಕೆ. ಪ್ರತಿಯೊಂದು ನಿರ್ಧಾರಕ್ಕೂ ಪರಿಣಾಮವಿದೆ. ಐದು ಮಂದಿಯ ತಂಡದಲ್ಲಿ ಪ್ರತಿಯೊಬ್ಬರ ಪಾತ್ರವೂ ನಿರ್ಣಾಯಕ. ಇದು ಆಟಗಾರನ ಮನಸ್ಥಿತಿಯಲ್ಲಿ ಸಹಜವಾಗಿ ಒಂದು ಪರಿವರ್ತನೆ ತರುತ್ತದೆ. ವೇಗದಿಂದ ಸಹನೆಗೆ, ಸ್ವತಂತ್ರತೆಯಿಂದ ಸಂಯೋಜನೆಗೆ ಪರಿವರ್ತನೆ ಇರುತ್ತದೆ.
ಈ ಪಯಣದಲ್ಲಿ ಗ್ಯಾನ್ ಗೇಮಿಂಗ್ ಮತ್ತು ರೈ ಸ್ಟಾರ್ ಜೊತೆಯಾಗಿರುವುದು ಕೂಡ ಅರ್ಥಪೂರ್ಣ. ಇಬ್ಬರೂ ಈಗ ಕೇವಲ ವೀಕ್ಷಕರ ಸಂಖ್ಯೆಯ ಹಿಂದೆ ಓಡುವುದಿಲ್ಲ. ಅವರು ದೀರ್ಘಾವಧಿಯ ಬೆಳವಣಿಗೆ, ಸ್ಪರ್ಧಾತ್ಮಕ ಸ್ಥಿರತೆ ಮತ್ತು ಜಾಗತಿಕ ವೇದಿಕೆಯನ್ನು ಗಮನದಲ್ಲಿಟ್ಟುಕೊಂಡಿದ್ದಾರೆ. ಉದ್ಯಮ ತಜ್ಞರ ದೃಷ್ಟಿಯಲ್ಲಿ ಇದು ಮೌನವಾದ ಆದರೆ ದೃಢವಾದ ತಂತ್ರಾತ್ಮಕ ಹೆಜ್ಜೆ.
ಭಾರತೀಯ ಈ-ಸ್ಪೋರ್ಟ್ಸ್ ಕೂಡ ಇದೇ ಹಂತದಲ್ಲಿದೆ. ಪ್ರೇಕ್ಷಕರು ಹೆಚ್ಚು ಪ್ರೌಢರಾಗುತ್ತಿದ್ದಾರೆ. ಆಟವನ್ನು ನೋಡುವ ದೃಷ್ಟಿ ಬದಲಾಗುತ್ತಿದೆ. ಕೇವಲ ಮನರಂಜನೆ ದೃಷ್ಟಿ ಇದ್ದ ಆಟವು ಈಗ ಕೌಶಲ್ಯ, ತಂತ್ರ ಮತ್ತು ತಂಡದ ಸಂಸ್ಕೃತಿಯ ಕಡೆಗೆ ಗಮನ ಹರಿಯುತ್ತಿದೆ.
ಇದನ್ನೂ ಓದಿ: ಷೇರು, ಚಿನ್ನ, ಎಫ್ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?
MOBA Legends 5v5 ಈ ಬದಲಾವಣೆಗೆ ಸರಿಹೊಂದುವ ಪ್ಲಾಟ್ಫಾರ್ಮ್ ಆಗಿದೆ. ಇಲ್ಲಿ ಹೀರೋ ಒಬ್ಬನಲ್ಲ, ತಂಡವೇ ಹೀರೋ. ಇದು ಭಾರತೀಯ ಕ್ರೀಡಾ ಮನೋಭಾವಕ್ಕೆ ಸಹಜವಾಗಿ ಹೊಂದಿಕೊಳ್ಳುವ ರೂಪ.
ಪ್ರಸಿದ್ಧ ಕ್ರಿಯೇಟರ್‌ಗಳು ತಮ್ಮ ಕಂಫರ್ಟ್ ಝೋನ್ ಬಿಟ್ಟು ಹೊಸ ದಾರಿಗೆ ಹೆಜ್ಜೆ ಇಡುವಾಗ, ಬೆಳೆಯಲು ಧೈರ್ಯ ಮತ್ತು ಬದಲಾವಣೆ ಅವಶ್ಯ ಎಂಬ ಸಂದೇಶವು ಅನೇಕ ಯುವ ಗೇಮರ್‌ಗಳಿಗೆ ತಲುಪುತ್ತದೆ.
MOBA Legends 5v5 ಈಗ Android ಮತ್ತು iOS ನಲ್ಲಿ ಲಭ್ಯ. ಆದರೆ ಇದನ್ನು ಕೇವಲ ಹೊಸ ಗೇಮ್ ಎಂದು ನೋಡುವುದು ತಪ್ಪು. ಇದು ಭಾರತೀಯ ಈ-ಸ್ಪೋರ್ಟ್ಸ್ ಕಥೆಯಲ್ಲಿ ಆರಂಭವಾಗುತ್ತಿರುವ ಹೊಸ ಅಧ್ಯಾಯ. ಹೆಚ್ಚು ಆಳವಾದ, ಹೆಚ್ಚು ಶಿಸ್ತಿನ, ಮತ್ತು ಹೆಚ್ಚು ಭವಿಷ್ಯಮುಖಿ ಅಧ್ಯಾಯ ಇದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ