AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mobile Call Tariff: ಹಲೋ, ಮೊಬೈಲ್ ಫೋನ್ ಕರೆ ದರಗಳ ಏರುವ ಸಾಧ್ಯತೆಯಿದೆ ಗಮನಿಸಿ

ಮೊಬೈಲ್ ಫೋನ್ ಕರೆ ದರಗಳು ಸದ್ಯದಲ್ಲೇ ದುಬಾರಿ ಆಗಲಿವೆ. ಅದರ ಹಿಂದಿನ ಕಾರಣ ಏನು ಎಂಬ ಬಗೆಗಿನ ವಿವರಗಳು ಈ ಲೇಖನದಲ್ಲಿವೆ.

Mobile Call Tariff: ಹಲೋ, ಮೊಬೈಲ್ ಫೋನ್ ಕರೆ ದರಗಳ ಏರುವ ಸಾಧ್ಯತೆಯಿದೆ ಗಮನಿಸಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 02, 2022 | 5:55 PM

Share

ಏರುತ್ತಿರುವ ಹಣದುಬ್ಬರದ (Inflation) ಮಧ್ಯೆ ಟೆಲಿಕಾಂ ಸೇವೆಗಳು ಮತ್ತೊಮ್ಮೆ ದುಬಾರಿ ಆಗಬಹುದು. ವಾಸ್ತವವಾಗಿ, ಕೆಲವು ತಿಂಗಳ ಹಿಂದೆ ದರ ಹೆಚ್ಚಳದಿಂದಾಗಿ ಮೂರು ಖಾಸಗಿ ವಲಯದ ಟೆಲಿಕಾಂಗಳ ಒಟ್ಟು ಚಂದಾದಾರರ ಬೇಸ್ 37 ಮಿಲಿಯನ್ ಕಡಿಮೆಯಾಗಿದೆ, ಆದರೆ ಅವರ ಸಕ್ರಿಯ ಚಂದಾದಾರರ ಬೇಸ್ ಶೇ 3ರಷ್ಟು ಹೆಚ್ಚಾಗಿದೆ. ಅಂದರೆ, 29 ಮಿಲಿಯನ್. ಅಂತಹ ಪರಿಸ್ಥಿತಿಯಲ್ಲಿ, ಕಂಪೆನಿಗಳು ಸೇವಾ ದರಗಳಲ್ಲಿ ಮತ್ತೊಂದು ಹೆಚ್ಚಳದ ಬಗ್ಗೆ ಯೋಚಿಸಬಹುದು. CRISILನ ವರದಿಯ ಪ್ರಕಾರ, ಆಗಸ್ಟ್ 2021 ಮತ್ತು ಫೆಬ್ರವರಿ 2022ರ ನಡುವೆ ರಿಲಯನ್ಸ್ ಜಿಯೋದ ಒಟ್ಟು ಚಂದಾದಾರರ ನೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಮತ್ತೊಂದೆಡೆ, ಕಂಪೆನಿಯ ಸಕ್ರಿಯ ಚಂದಾದಾರರು ಮಾರ್ಚ್ 2022 ತ್ರೈಮಾಸಿಕದಲ್ಲಿ ಶೇ 94ರಷ್ಟು ಬೆಳೆದಿದ್ದಾರೆ. ಒಂದು ವರ್ಷದ ಹಿಂದೆ, ಕಂಪೆನಿಯ ಸಕ್ರಿಯ ಚಂದಾದಾರರು ಕೇವಲ ಶೇ 78 ಮಾತ್ರ. ಭಾರ್ತಿ ಏರ್‌ಟೆಲ್‌ನ ಸಕ್ರಿಯ ಚಂದಾದಾರರು ಮಾರ್ಚ್ ತ್ರೈಮಾಸಿಕದಲ್ಲಿ 11 ಮಿಲಿಯನ್‌ನಿಂದ 99ರಷ್ಟು ಬೆಳೆದಿದ್ದಾರೆ. ಐಡಿಯಾದ ಸಕ್ರಿಯ ಚಂದಾದಾರರು 30 ಮಿಲಿಯನ್‌ನಿಂದ ಕುಸಿದಿದ್ದಾರೆ.

ಕಂಪೆನಿಗಳ ಗಳಿಕೆಯು 2020-21ರಲ್ಲಿ ಶೇ 20-25ರಷ್ಟು ಬೆಳೆಯುತ್ತದೆ ಎಂದು ಅಂದಾಜಿಸಲಾಗಿದ್ದು, ಟೆಲಿಕಾಂ ಕಂಪೆನಿಗಳ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ (ARPU) ಶೇ 11ರಷ್ಟು ಏರಿಕೆಯಾಗಿ, ರೂ. 149ಕ್ಕೆ ತಲುಪಿದೆ. ಕಾರಣ ಏನೆಂದರೆ, ಡಿಸೆಂಬರ್ 2019ರಲ್ಲಿ, ಈ ಕಂಪೆನಿಗಳು ದರವನ್ನು ಹೆಚ್ಚಿಸಿವೆ. ಆದರೆ ಅವರ ARPU ಬೆಳವಣಿಗೆಯು 2021-22ರಲ್ಲಿ ಶೇ 5ಕ್ಕೆ ಕುಸಿಯಿತು.

ಈ ಕಂಪೆನಿಗಳು 2022-23ರಲ್ಲಿ ಶೇ 15-20 ARPU ಬೆಳವಣಿಗೆಯನ್ನು ಹೊಂದಿರಬೇಕು. ಇದು ಕಳೆದ ಹಣಕಾಸು ವರ್ಷದಲ್ಲಿ ದರ ಹೆಚ್ಚಳದ ಪೂರ್ಣ ವರ್ಷದ ಲಾಭ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ದರ ಹೆಚ್ಚಳದ ಸಾಧ್ಯತೆಯ ಕಾರಣದಿಂದ ಆಗಿರುತ್ತದೆ. ಈ ಕಾರಣದಿಂದಾಗಿ, ದೇಶದ ಪ್ರಮುಖ ಮೂರು ಟೆಲಿಕಾಂ ಕಂಪೆನಿಗಳ ಆದಾಯವು ಶೇ 20-25ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮೊಬೈಲ್​ಗಳ ಖಾಸಗಿ ಮಾಹಿತಿಗೆ ಚೀನಾ ಕನ್ನ: ಮಾಲ್​ವೇರ್ ದಾಟಿಸಲು ಲೋನ್ ಆ್ಯಪ್ ಬಳಕೆ, ಸಾಲ ಪಡೆದವರ ಸುಲಿಗೆ

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ