Positive story: ಹೆಸರಾಂತ ಕಂಪೆನಿ ಫೋರ್ಡ್ಗೆ ರತನ್ ಟಾಟಾ ಪ್ರತೀಕಾರ ಹೇಳಿದ್ದು ಹೇಗೆ ಗೊತ್ತಾ?
ತಮಗಾದ ಅವಮಾನಕ್ಕೆ ಉದ್ಯಮಿ ರತನ್ ಟಾಟಾ ಅವರು ಫೋರ್ಡ್ ವಿರುದ್ಧ ಹೇಗೆ ಪ್ರತೀಕಾರ ಹೇಳಿದರು ಎಂಬ ಬಗ್ಗೆ ಆಸಕ್ತಿಕರವಾದ ಸಂಗತಿ ಇಲ್ಲಿದೆ.
ಒಬ್ಬೊಬ್ಬರ ಸಿಟ್ಟು ಒಂದೊಂದು ಬಗೆಯಲ್ಲಿ ಇರುತ್ತದೆ. ಅದೇ ರೀತಿ ಒಬ್ಬೊಬ್ಬರ ಪ್ರತೀಕಾರ ಒಂದೊಂದು ರೀತಿಯಲ್ಲಿ ಇರುತ್ತದೆ. ಜಗತ್ತಿನ ಅತಿ ದೊಡ್ಡ ಬ್ರ್ಯಾಂಡ್ಗಳಲ್ಲಿ ಒಂದಾದ “ಫೋರ್ಡ್” ವಿರುದ್ಧದ ಟಾಟಾ “ಪ್ರತೀಕಾರ” ಹೇಗಿತ್ತು ಅನ್ನೋದನ್ನು ವೇದಾಂತ ಬಿರ್ಲಾ ಜೂನ್ 2ರ ಗುರುವಾರದಂದು ನೆನಪಿಸಿಕೊಂಡಿದ್ದಾರೆ. “ಇದು ಟಾಟಾ ಪ್ರತೀಕಾರದ ಕಥೆ, ಅದರಲ್ಲೂ ರತನ್ ಟಾಟಾ (Ratan Tata) ಜೀ ಅವರು ಫೋರ್ಡ್ ಮೇಲೆ ನಿಜವಾಗಿಯೂ ಭಾರೀ ಯಶಸ್ಸು ಸಾಧಿಸಿದ ಕಥೆಯೂ ಹೌದು,” ಎಂದು ಬಿರ್ಲಾ ಪ್ರಿಸಿಷನ್ ಟೆಕ್ನಾಲಜೀಸ್ ಅಧ್ಯಕ್ಷ ವೇದಾಂತ ಬಿರ್ಲಾ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಇದೇ ದಿನ (ಜೂನ್ 2) 2008ರಲ್ಲಿ ಟಾಟಾ ಮೋಟಾರ್ಸ್ನಿಂದ ಎರಡು ವಿಲಾಸಿ ಕಾರು ಬ್ರ್ಯಾಂಡ್ಗಳಾದ ಜಾಗ್ವಾರ್ ಮತ್ತು ಲ್ಯಾಂಡ್ರೋವರ್ ಅನ್ನು ಫೋರ್ಡ್ನಿಂದ ಸ್ವಾಧೀನ ಮಾಡಿಕೊಳ್ಳಲಾಯಿತು. ಅದು ಕೇವಲ ಭಾರತೀಯ ವಾಹನ ತಯಾರಕ ಸಂಸ್ಥೆಯೊಂದರ ವೃತ್ತಿ ಯಶಸ್ಸಷ್ಟೇ ಆಗಿರಲಿಲ್ಲ. ರತನ್ ಟಾಟಾ ಅವರ ವೈಯಕ್ತಿಕ ಮಹಾ ಗೆಲುವು ಸಹ ಆಗಿತ್ತು ಎಂದು ನೆನಪಿಸಿಕೊಂಡಿದ್ದಾರೆ ವೇದಾಂತ ಬಿರ್ಲಾ.
#OnthisDay:-2008
Tata Motors completed the deal to acquire two luxury car brands Jaguar and Land Rover.
“The best revenge is massive success.” ~ Frank Sinatra. The revenge story Of #Tata, especially #RatanTata Ji over Ford is truly the story of massive success too. @RNTata2000 pic.twitter.com/YCKW6EMR6E
— Vedant Birla (@birla_vedant) June 2, 2022
1998ನೇ ಇಸವಿಯಲ್ಲಿ ಟಾಟಾ ಮೋಟಾರ್ಸ್ನಿಂದ ಟಾಟಾ ಇಂಡಿಕಾ ಬಿಡುಗಡೆ ಮಾಡಲಾಯಿತು. ಅದು ಭಾರತದ ಮೊದಲ ದೇಶೀ ಕಾರು ಆಗಿತ್ತು. ಆದರೆ ರತನ್ ಟಾಟಾ ಅವರ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಆಗಲಿಲ್ಲ. ಕಡಿಮೆ ಮಾರಾಟದ ಕಾರಣಕ್ಕೆ ಟಾಟಾ ಮೋಟಾರ್ಸ್ನಿಂದ ಆ ಕಾರು ವ್ಯವಹಾರವನ್ನು ಒಂದು ವರ್ಷದೊಳಗೆ ಮಾರಾಟ ಮಾಡಲು ನಿರ್ಧರಿಸಲಾಯಿತು. ಅಮೆರಿಕದ ಫೋರ್ಡ್ ಜತೆಗೆ ವ್ಯವಹಾರವೊಂದನ್ನು ಮಾಡಿಕೊಳ್ಳಲು ಟಾಟಾದಿಂದ 1999ರಲ್ಲಿ ನಿರ್ಧರಿಸಲಾಯಿತು. ಸರಿ, ರತನ್ ಟಾಟಾ ಮತ್ತು ಅಚರ ತಂಡ ಬಿಲ್ ಫೋರ್ಡ್ರನ್ನು ಭೇಟಿ ಆಗಲು ಅಮೆರಿಕಾಗೆ ತೆರಳಿತು. ಆಗ ಅವರು ಫೋರ್ಡ್ನ ಅಧ್ಯಕ್ಷರಾಗಿದ್ದರು. ಈ ಭೇಟಿ ವೇಳೆ ಟಾಟಾ ಅವರನ್ನು ಫೊರ್ಡ್ ಅವಮಾನಿಸಿದ್ದರಂತೆ.
ಅಮೆರಿಕದ ಉದ್ಯಮಿ ಬಿಲ್ ಫೋರ್ಡ್, ವಾಹನ ಉತ್ಪಾದನೆ ಉದ್ಯಮಕ್ಕೆ ನೀವು ಇಳಿದಿದ್ದೇ ತಪ್ಪು ಎಂದಿದ್ದರಂತೆ. ರತನ್ ಟಾಟಾ ಅವರ ತಂಡದಲ್ಲಿ ಇದ್ದ ಪ್ರವೀಣ್ ಕಡ್ಲೆ 2015ರ ಕಾರ್ಯಕ್ರಮವೊಂದರಲ್ಲಿ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದರು: ನಿಮಗೆ ಏನೂ ಗೊತ್ತಿಲ್ಲ. ನೀವೇಕೆ ಪ್ರಯಾಣಿಕರ ಕಾರಿನ ವಿಭಾಗ ಯಾಕೆ ಶುರು ಮಾಡಿದಿರಿ ಎಂದು ಕೇಳಿದರು ಎಂದು ಅವರು ಹೇಳಿದ್ದರು. ಕಾರು ವಿಭಾಗವನ್ನು ಖರೀದಿಸುವ ಮೂಲಕ ಟಾಟಾಗೆ ಉಪಕಾರ ಮಾಡುತ್ತಿರುವುದಾಗಿ ಹೇಳಿದ್ದರಂತೆ.
ಆದರೆ, ಆ ವ್ಯವಹಾರ ಕುದುರಲಿಲ್ಲ. ಅಂದಿನ ಘಟನೆಯು ತಮ್ಮ ಗುರಿಯ ಕಡೆಗೆ ಇನ್ನಷ್ಟು ಗಮನ ಹರಿಸುವಂತೆ ರತನ್ ಟಾಟಾ ಅವರಿಗೆ ಮಾಡಿತು. ಉತ್ಪಾದನಾ ಘಟಕವನ್ನು ಮಾರಾಟ ಮಾಡಬಾರದು ಎಂದು ನಿರ್ಧರಿಸಿದರು. ಆ ನಂತರ ಏನಾಯಿತು ಅಂದರೆ, ಅತ್ಯುತ್ತಮ ವೈಫಲ್ಯವು ಉದ್ಯಮ ಜಗತ್ತಿನ ಯಶಸ್ವಿ ಕ್ಷಣಗಳಾದವು ಎಂದು ಅವರು ಸೇರಿಸಿದ್ದಾರೆ. 9 ವರ್ಷದ ನಂತರ ಪರಿಸ್ಥಿತಿ- ಸನ್ನಿವೇಶಗಳು ಬದಲಾದವು. 2008ರ ಮಹಾ ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಫೋರ್ಡ್ ದಿವಾಳಿ ಅಂಚನ್ನು ತಲುಪಿತು. ಆಗ ಟಾಟಾ ಮೋಟಾರ್ಸ್ನಿಂದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಪೋರ್ಟ್ಫೋಲಿಯೋಗಳ ಖರೀದಿಯ ಆಫರ್ ಮಾಡಿದರು.
2008ರ ಜೂನ್ನಲ್ಲಿ ರತನ್ ಟಾಟಾ ಅವರು ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಅನ್ನು ಪೂರ್ತಿ ನಗದು ಮೊತ್ತ 230 ಕೋಟಿ ಅಮೆರಿಕ ಡಾಲರ್ ಮೊತ್ತಕ್ಕೆ ವ್ಯವಹಾರ ಅಂತಿಮವಾಯಿತು. ಆಗ ಫೋರ್ಡ್ ಅಧ್ಯಕ್ಷ ಬಿಲ್ ಫೋರ್ಡ್ ಅವರು ರತನ್ ಟಾಟಾ ಅವರಿಗೆ ಜೆಎಲ್ಆರ್ ಖರೀದಿಸುವ ಮೂಲಕ ಮಹದುಪಕಾರ ಮಾಡಿದ್ದೀರಿ ಎಂದರು ಎಂಬುದಾಗಿ ಕಡ್ಲೇ ನೆನಪಿಸಿಕೊಂಡಿದ್ದರು ಎಂದು ಫಸ್ಟ್ಫೋಸ್ಟ್ ವರದಿ ಮಾಡಿದೆ.
ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಟಾಟಾ ಅತ್ಯಂತ ಲಾಭದಾಯಕ ಕಂಪೆನಿಯಾಗಿ ಮಾಡಿದರು. ಟಾಟಾದ ಹಣಕಾಸಿನಲ್ಲಿ ಇವತ್ತಿಗೆ ಜೆಎಲ್ಆರ್ ಬೆನ್ನೆಲುಬಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಸ್ಸಾಂನಲ್ಲಿ ಜನರ ಮನಗೆದ್ದ ರತನ್ ಟಾಟಾ ಭಾಷಣ; ಮೋದಿ ಜತೆ ವೇದಿಕೆ ಹಂಚಿಕೊಂಡ ಹಿರಿಯ ಉದ್ಯಮಿ ಹೇಳಿದ್ದೇನು?
Published On - 5:13 pm, Thu, 2 June 22