ಅಸ್ಸಾಂನಲ್ಲಿ ಜನರ ಮನಗೆದ್ದ ರತನ್ ಟಾಟಾ ಭಾಷಣ; ಮೋದಿ ಜತೆ ವೇದಿಕೆ ಹಂಚಿಕೊಂಡ ಹಿರಿಯ ಉದ್ಯಮಿ ಹೇಳಿದ್ದೇನು?
ಕ್ಷಮಿಸಿ, ನನಗೆ ಹಿಂದಿಯಲ್ಲಿ ಅಷ್ಟೊಂದು ಪರಿಣತಿ ಇಲ್ಲ ಎಂದ ಅವರು ನಾನು ಏನು ಹೇಳುವುದಾದರೂ ಅದನ್ನು ಹೃದಯದಿಂದ ಹೇಳುತ್ತೇನೆ ಎಂದಿದ್ದಾರೆ. ನಾನು ನನ್ನ ಕೊನೆಯ ವರ್ಷಗಳನ್ನು ಆರೋಗ್ಯಕ್ಕಾಗಿ ಮೀಸಲಿಡುತ್ತೇನೆ...
ಗುವಾಹಟಿ: ಗುರುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ವೇದಿಕೆ ಹಂಚಿಕೊಂಡ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರು ಅಸ್ಸಾಂನಲ್ಲಿ (Assam) ಸರ್ಕಾರಿ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣದ ಮಾಡಿದ್ದು ಇದು ಅನೇಕ ಹೃದಯಗಳನ್ನು ಗೆದ್ದಿದೆ . “ಆಜ್ ಅಸ್ಸಾಂ ಕಾ ಬಹುತ್ ಇಂಪಾರ್ಟೆಂಟ್ ದಿನ್ ಹೈ…(ಇಂದು ಅಸ್ಸಾಂಗೆ ಬಹಳ ಮುಖ್ಯವಾದ ದಿನವಾಗಿದೆ). ಕ್ಷಮಿಸಿ, ನನಗೆ ಹಿಂದಿಯಲ್ಲಿ ಅಷ್ಟೊಂದು ಪರಿಣತಿ ಇಲ್ಲ ಎಂದ ಅವರು ನಾನು ಏನು ಹೇಳುವುದಾದರೂ ಅದನ್ನು ಹೃದಯದಿಂದ ಹೇಳುತ್ತೇನೆ ಎಂದಿದ್ದಾರೆ. ನಾನು ನನ್ನ ಕೊನೆಯ ವರ್ಷಗಳನ್ನು ಆರೋಗ್ಯಕ್ಕಾಗಿ ಮೀಸಲಿಡುತ್ತೇನೆ. ಅಸ್ಸಾಂ ಅನ್ನು ಎಲ್ಲರೂ ಗುರುತಿಸುವ ರಾಜ್ಯವನ್ನಾಗಿ ಮಾಡಿ” ಎಂದು ಅವರು ಒತ್ತಿ ಹೇಳಿದರು. ಅಸ್ಸಾಂ ರಾಜ್ಯದ ಇತಿಹಾಸದಲ್ಲಿ ಇಂದು ಅತ್ಯಂತ ಮಹತ್ವದ ದಿನ. ಆರೋಗ್ಯ ರಕ್ಷಣೆ ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅಸ್ಸಾಂ ಅನ್ನು ಉನ್ನತ ಮಟ್ಟಕ್ಕೆ ಏರಿಸುವ ದಿನ ಇದು. ಶ್ರೀಮಂತರ ಕಾಯಿಲೆಯಲ್ಲದ ಕ್ಯಾನ್ಸರ್‌ಗೆ ಲಕ್ಷಾಂತರ ಜನರ ಸೇವೆ ಮಾಡಲು ರಾಜ್ಯವನ್ನು ಸಜ್ಜುಗೊಳಿಸುತ್ತಿರುವ ದಿನ. ಪ್ರಧಾನಿಯವರ ಬೆಂಬಲವಿಲ್ಲದೇ ಇರುತ್ತಿದ್ದರೆ ಇದ್ಯಾವುದೂ ನಡೆಯುತ್ತಿರಲಿಲ್ಲ. ಬಹಳ ಮುಂಚಿತವಾಗಿಯೇ ಮಾಡಿದ ಚಿಂತನೆಯಿಂದ ರೂಪುಗೊಂಡ ಸಂಗತಿ ಇದಾಗಿದ್ದು ಇದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ. ಗುರುವಾರ, ಪಿಎಂ ಮೋದಿ ಅವರು ಏಳು ಆಸ್ಪತ್ರೆಗಳನ್ನು ಉದ್ಘಾಟಿಸುವ ಮೂಲಕ ಏಷ್ಯಾದ ಅತಿದೊಡ್ಡ ಕ್ಯಾನ್ಸರ್ ಆರೈಕೆ ಜಾಲವನ್ನು ಪ್ರಾರಂಭಿಸಿದರು ಮತ್ತು ರೋಗದ ಚಿಕಿತ್ಸೆಗಾಗಿ ಇನ್ನೂ ಹೆಚ್ಚಿನ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದರು.
#WATCH Dibrugarh: “I dedicate my last years to health. Make Assam a state that recognizes & is recognized by all,”says industrialist Ratan Tata at an event where PM Modi will shortly be inaugurating 7 state-of-the-Art-Cancer-Centres & lay foundation stone for 7 new Cancer centres pic.twitter.com/LFbhjc6SA5
— ANI (@ANI) April 28, 2022
“ಏಳು ವರ್ಷಗಳಲ್ಲಿ ಒಂದು ಆಸ್ಪತ್ರೆಯನ್ನು ಸ್ಥಾಪಿಸುವುದು ದೊಡ್ಡ ಸಾಧನೆ ಎಂದು ಪರಿಗಣಿಸಲ್ಪಟ್ಟ ಸಮಯವಿತ್ತು. ಆದರೆ ಇಂದು ಅಸ್ಸಾಂನಲ್ಲಿ ಒಂದೇ ದಿನದಲ್ಲಿ ಏಳು ಹೊಸ ಆಸ್ಪತ್ರೆಗಳನ್ನು ಉದ್ಘಾಟಿಸಲಾಗಿದೆ. ಇನ್ನು ಮೂರು ಕ್ಯಾನ್ಸರ್ ಆಸ್ಪತ್ರೆಗಳು ನಿರ್ಮಾಣ ಹಂತದಲ್ಲಿದ್ದು, ಇನ್ನೂ ಏಳು ಆಸ್ಪತ್ರೆಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ದಿಬ್ರುಗಢದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮೋದಿ ಹೇಳಿದರು.
“ರಾಜ್ಯ ಮತ್ತು ಈಶಾನ್ಯದ ಉಳಿದ ಭಾಗಗಳು ಹೆಚ್ಚಿನ ಸಂಖ್ಯೆಯ ಕ್ಯಾನ್ಸರ್ ಪ್ರಕರಣಗಳಿಗೆ ಸಾಕ್ಷಿಯಾಗಿರುವುದರಿಂದ ಅಸ್ಸಾಂನಲ್ಲಿ ಇಂತಹ ವ್ಯಾಪಕ ಮತ್ತು ವಿಶೇಷವಾದ ಕ್ಯಾನ್ಸರ್ ಆರೈಕೆ ಜಾಲದ ಅಗತ್ಯವಿದೆ. ಈ ಹಿಂದೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ರೋಗಿಗಳು ಚಿಕಿತ್ಸೆಗಾಗಿ ಹೊರರಾಜ್ಯಗಳಿಗೆ ಹೋಗಬೇಕಾಗಿತ್ತು” ಎಂದು ಅವರು ಹೇಳಿದರು.
ಇದನ್ನೂ ಓದಿ: ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ದಾಸ್ತಾನು ಇಲ್ಲ ಎಂದ ದೆಹಲಿ ಸರ್ಕಾರ; ಎನ್ಟಿಪಿಸಿ ಹೇಳೋದೇ ಬೇರೆ ಕತೆ!
Published On - 2:15 pm, Fri, 29 April 22