ನವದೆಹಲಿ, ಜುಲೈ 16: ನಾಳೆ ಬುಧವಾರ ಮುಸ್ಲಿಮರ ಮೊಹರಂ ಹಬ್ಬ ಇದ್ದು ರಾಷ್ಟ್ರೀಯ ರಜೆಗಳಲ್ಲಿ ಅದೂ ಒಂದಿದೆ. ಮೊಹರಂ ಎಂಬುದು ಇಸ್ಲಾಮಿಕ್ ಕ್ಯಾಲಂಡರ್ನಲ್ಲಿ ಒಂದು ಮಾಸದ ಹೆಸರು. ಕ್ಯಾಲಂಡರ್ನ ಮೊದಲ ತಿಂಗಳೂ ಹೌದು. ನಾಲ್ಕು ಪವಿತ್ರ ಮಾಸಗಳಲ್ಲಿ ಮೊಹರಂ ಕೂಡ ಒಂದು. ಮೊಹರಂಗೆ ಭಾರತದಲ್ಲಿ ಸರ್ಕಾರ ರಜೆ ಇದೆ. ಅಂತೆಯೇ ಕರ್ನಾಟಕವೂ ಒಳಗೊಂಡಂತೆ ಬಹುತೇಕ ಕಡೆ ಬ್ಯಾಂಕುಗಳಿಗೆ ಜುಲೈ 17ರಂದು ರಜೆ ಇರುತ್ತದೆ. ಷೇರು ಮಾರುಕಟ್ಟೆಯೂ ನಾಳೆ ಬಂದ್ ಆಗಿರುತ್ತದೆ.
ಉತ್ತರಾಖಂಡ್ನಲ್ಲಿ ಹರೇಲಾ ದಿನದ ಹಬ್ಬಕ್ಕೆ ಇಂದು ಜುಲೈ 16ರಂದು ಬ್ಯಾಂಕ್ ರಜೆ ಇರುತ್ತದೆ. ಇದೇ ಹಬ್ಬಕ್ಕೆ ಹಿಮಾಚಲಪ್ರದೇಶದ ಕೆಲ ಭಾಗಗಳಲ್ಲಿ ರಜೆ ಇದೆ.
ಇದನ್ನೂ ಓದಿ: ಎಸ್ಬಿಐನಿಂದ ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿ ಎಂಸಿಎಲ್ಆರ್ ದರ ಹೆಚ್ಚಳ; ಏರಿಕೆ ಆಗಲಿದೆ ಬಡ್ಡಿ
ಜುಲೈ 17, ಬುಧವಾರದಂದು ಮುಹರಂ ಹಬ್ಬಕ್ಕೆ ಷೇರು ಮಾರುಕಟ್ಟೆಗೆ ರಜೆ ಇದೆ. ಈಕ್ವಿಟಿ ಸೆಗ್ಮೆಂಟ್ ಮಾತ್ರವಲ್ಲ, ಕರೆನ್ಸಿ ಡಿರೈವೇಟಿವ್ಸ್, ಕಮಾಡಿಟಿ ಡಿರೈವೇಟಿವ್ಸ್ ಸೆಗ್ಮೆಂಟ್ ಕೂಡ ಬುಧವಾರ ಮುಚ್ಚಿರುತ್ತದೆ. ಈ ವರ್ಷಾಂತ್ಯದವರೆಗೂ ಮೊಹರಂ ಅನ್ನೂ ಒಳಗೊಂಡಂತೆ ಆರು ದಿನಗಳಿಗೆ ಷೇರು ಮಾರುಕಟ್ಟೆ ರಜೆ ಹೊಂದಿರುತ್ತದೆ. ದೀಪಾವಳಿ, ಸ್ವಾತಂತ್ರ್ಯೋತ್ಸವ ಮೊದಲಾದ ದಿನಗಳೂ ಈ ರಜಾ ಪಟ್ಟಿಯಲ್ಲಿವೆ. ಷೇರು ಮಾರುಕಟ್ಟೆ ಈ ಕೆಳಗಿನ ದಿನಗಳಲ್ಲಿ ಬಂದ್ ಆಗಿರುತ್ತದೆ:
ಇಲ್ಲಿ ಭಾರತದ ಷೇರು ಮಾರುಕಟ್ಟೆ ಎಂದರೆ, ನ್ಯಾಷನಲ್ ಸ್ಟಾಕ್ ಎಕ್ಸ್ ಎಕ್ಸ್ಚೇಂಜ್ (ಎನ್ಎಸ್ಇ) ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ). ಈ ಎರಡೂ ಷೇರು ವಿನಿಮಯ ಕೇಂದ್ರಗಳು ಮೊಹರಂಗೆ ಬಂದ್ ಆಗಿರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:06 am, Tue, 16 July 24