ಚೀನಾದ ಯಾವುದೇ ನಗರಕ್ಕಿಂತಲೂ ಮುಂಬೈನಲ್ಲಿ ಅತಿಹೆಚ್ಚು ಬಿಲಿಯನೇರ್​ಗಳು; ಜಾಗತಿಕವಾಗಿ ಮುಂಬೈಗೆ ಮೂರನೇ ಸ್ಥಾನ

|

Updated on: Mar 26, 2024 | 11:03 AM

Hurun's 2024 Global Rich List: ಮುಂಬೈಗಿಂತ ಹಲವು ಪಟ್ಟು ಬೃಹತ್ ಆಗಿರುವ ಬೀಜಿಂಗ್ ನಗರದಲ್ಲಿ ಬಿಲಿಯನೇರ್​ಗಳ ಸಂಖ್ಯೆ ಮುಂಬೈನದಕ್ಕಿಂತ ಕಡಿಮೆ ಇದೆ. ಹುರೂನ್ ಗ್ಲೋಬಲ್ ರಿಚ್ ಲಿಸ್ಟ್ 2024 ಪ್ರಕಾರ ಬಿಲಿಯನೇರ್​ಗಳ ಸಂಖ್ಯೆ ಮುಂಬೈನಲ್ಲಿ 92 ಇದ್ದರೆ, ಬೀಜಿಂಗ್​ನಲ್ಲಿ 91 ಇದೆ. ಜಾಗತಿಕವಾಗಿ ಮುಂಬೈ 3ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಹಿಂದಿನ ವರ್ಷದಲ್ಲಿ ಅಗ್ರಸ್ಥಾನದಲ್ಲಿದ್ದ ಬೀಜಿಂಗ್ ಈಗ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ನ್ಯೂಯಾರ್ಕ್ ಮತ್ತು ಲಂಡನ್ ನಗರಗಳು ಮೊದಲೆರಡು ಸ್ಥಾನ ಪಡೆದಿವೆ.

ಚೀನಾದ ಯಾವುದೇ ನಗರಕ್ಕಿಂತಲೂ ಮುಂಬೈನಲ್ಲಿ ಅತಿಹೆಚ್ಚು ಬಿಲಿಯನೇರ್​ಗಳು; ಜಾಗತಿಕವಾಗಿ ಮುಂಬೈಗೆ ಮೂರನೇ ಸ್ಥಾನ
ಮುಂಬೈ
Follow us on

ಮುಂಬೈ, ಮಾರ್ಚ್ 26: ಅತಿ ಹೆಚ್ಚು ಬಿಲಿಯನೇರ್​ಗಳನ್ನು (Billionaires) ಹೊಂದಿರುವ ಜಾಗತಿಕ ನಗರಗಳ ಪಟ್ಟಿಯಲ್ಲಿ ಮುಂಬೈ ಮೂರನೇ ಸ್ಥಾನಕ್ಕೆ ಏರಿದೆ. ಈ ವಿಚಾರದಲ್ಲಿ ಚೀನಾ ರಾಜಧಾನಿ ಹಾಗೂ ಬೃಹತ್ ನಗರವಾದ ಬೀಜಿಂಗ್ ಅನ್ನು ಮುಂಬೈ ಹಿಂದಿಕ್ಕಿದೆ. ಹುರುನ್ ರಿಸರ್ಚ್​ನ ಗ್ಲೋಬಲ್ ರಿಚ್ ಲಿಸ್ಟ್ ಪಟ್ಟಿ (Hurun’s 2024 global rich list) ಪ್ರಕಾರ, ಮುಂಬೈನಲ್ಲಿ 92 ಬಿಲಿಯನೇರ್​ಗಳಿದ್ದಾರೆ. ಬೀಜಿಂಗ್​ನಲ್ಲಿ ಇವರ ಸಂಖ್ಯೆ 91 ಇದೆ. ಇದರೊಂದಿಗೆ ಏಷ್ಯಾದಲ್ಲೇ ಅತಿಹೆಚ್ಚು ಬಿಲಿಯನೇರ್​ಗಳು ಮುಂಬೈನಲ್ಲಿ ಇದ್ದಂತಾಗಿದೆ.

ಹುರುನ್ ಪಟ್ಟಿ ಪ್ರಕಾರ ಅಮೆರಿಕದ ನ್ಯೂಯಾರ್ಕ್ 119 ಬಿಲಿಯನೇರ್​ಗಳನ್ನು ಹೊಂದಿ, ಅಗ್ರ ಸ್ಥಾನದಲ್ಲಿದೆ. ಬ್ರಿಟನ್ ರಾಜಧಾನಿ ಲಂಡನ್ ನಗರಿ 97 ಬಿಲಿಯನೇರ್​ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷದ ಪಟ್ಟಿಗಿಂತ ನ್ಯೂಯಾರ್ಕ್, ಲಂಡನ್ ಮತ್ತು ಮುಂಬೈ ಹಲವು ಸ್ಥಾನ ಮೇಲೇರಿವೆ.

ಹುರೂನ್​ನ 2023 ಗ್ಲೋಬಲ್ ರಿಚ್ ಲಿಸ್ಟ್​ನಲ್ಲಿ ಬೀಜಿಂಗ್ ಅಗ್ರಸ್ಥಾನದಲ್ಲಿತ್ತು. ನ್ಯೂಯಾರ್ಕ್, ಶಾಂಘಾಯ್, ಶೆಂಝೆನ್ ಮೊದಲಾ ನಗರಗಳು ನಂತರದ ಸ್ಥಾನದಲ್ಲಿದ್ದವು. ಈ ಬಾರಿ ಬೀಜಿಂಗ್​ನಲ್ಲಿ 18 ಜನರು ಬಿಲಿಯನೇರ್ ಪಟ್ಟ ಕಳೆದುಕೊಂಡಿದ್ದಾರೆ. ಮುಂಬೈನಲ್ಲಿ 26 ಹೊಸ ಬಿಲಿಯನೇರ್​ಗಳು ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಎಐ ಯೋಜನೆಗಳಿಗೆ ಭವಿಷ್ಯ ಇಲ್ಲ: ಮಾಜಿ ಗೂಗಲ್ ಉದ್ಯೋಗಿ ಹತಾಶೆಯಿಂದ ಹೇಳಿದ್ದು ಯಾಕೆ ಗೊತ್ತಾ?

ಹುರೂನ್ ಬಿಲಿಯನೇರ್​ಗಳ ಪಟ್ಟಿ

  • ನ್ಯೂಯಾರ್ಕ್: 119 ಬಿಲಿಯನೇರ್​ಗಳು
  • ಲಂಡನ್: 97
  • ಮುಂಬೈ: 92
  • ಬೀಜಿಂಗ್: 91
  • ಶಾಂಘೈ: 87
  • ಶೆಂಝೆನ್: 84
  • ಹಾಂಕಾಂಗ್: 65

ಚೀನಾ ದೇಶದಲ್ಲಿ ಒಟ್ಟಾರೆ 814 ಬಿಲಿಯನೇರ್​​ಗಳಿದ್ದಾರೆ. ಅದಕ್ಕೆ ಹೋಲಿಸಿದರೆ ಭಾರತದಲ್ಲಿ ಸಂಖ್ಯೆ ಕಡಿಮೆ. ಇಲ್ಲಿ ಬಿಲಿಯನೇರ್​ಗಳ ಸಂಖ್ಯೆ 271.

ಬಿಲಿಯನೇರ್​ಗಳೆಂದರೆ ಯಾರು?

ಒಂದು ಬಿಲಿಯನ್ ಎಂದರೆ ನೂರು ಕೋಟಿ ಅಥವಾ ಶತಕೋಟಿ. ಕನಿಷ್ಠ ನೂರು ಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವವರನ್ನು ಬಿಲಿಯನೇರ್​ಗಳೆಂದು ಪರಿಗಣಿಸಲಾಗುತ್ತದೆ. ಭಾರತೀಯ ರುಪಾಯಿ ಲೆಕ್ಕದಲ್ಲಿ ಸುಮಾರು 8,300ರಿಂದ 8,500 ಕೋಟಿ ರೂ ಸಂಪತ್ತಿರುವ ಕುಬೇರರು ಬಿಲಿಯನೇರ್​ಗಳೆನಿಸುತ್ತಾರೆ.

ಬೆಂಗಳೂರಿನಲ್ಲಿ ಎಷ್ಟಿದ್ದಾರೆ ಬಿಲಿಯನೇರ್​ಗಳು?

2023ರ ಫೋರ್ಬ್ಸ್ ಪಟ್ಟಿ ಪ್ರಕಾರ ಭಾರತದಲ್ಲಿ ಬಿಲಿಯನೇರ್​ಗಳಿರುವ ನಗರಗಳ ಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನ ಪಡೆದರೆ, ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ದೆಹಲಿ ಎರಡನೇ ಸ್ಥಾನ ಹೊಂದಿದೆ.

ಬೆಂಗಳೂರಿನಲ್ಲಿ ಎಷ್ಟಿದ್ದಾರೆ ಬಿಲಿಯನೇರ್​ಗಳು?

2023ರ ಫೋರ್ಬ್ಸ್ ಪಟ್ಟಿ ಪ್ರಕಾರ ಭಾರತದಲ್ಲಿ ಬಿಲಿಯನೇರ್​ಗಳಿರುವ ನಗರಗಳ ಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನ ಪಡೆದರೆ, ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ದೆಹಲಿ ಎರಡನೇ ಸ್ಥಾನ ಹೊಂದಿದೆ.

ಇದನ್ನೂ ಓದಿ: ಕಮಿಷನ್ ಆಸೆಗೆ ಬಿದ್ದು ಯಾರಾರಿಗೋ ಹಣ ವರ್ಗಾವಣೆ ಮಾಡದಿರಿ ಹುಷಾರ್..!

ಆದರೆ, ಹುರೂನ್ ಕಳೆದ ವರ್ಷ ಬಿಡುಗಡೆ ಮಾಡಿದ ಪಟ್ಟಿಯೊಂದರ ಪ್ರಕಾರ ಬೆಂಗಳೂರಿನಲ್ಲಿ ಅತಿಹೆಚ್ಚು ಸೆಲ್ಫ್ ಮೇಡ್ ಬಿಲಿಯನೇರ್​ಗಳಿದ್ದಾರೆ. ಅಂದರೆ, ಸ್ವಂತ ಬಲದಲ್ಲಿ ಬಿಸಿನೆಸ್ ಬೆಳೆಸಿ ಬಿಲಿಯನೇರ್​ಗಳಾದವರು ಬೆಂಗಳೂರಿನಲ್ಲೇ ಹೆಚ್ಚು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ