Beware..! ಕಮಿಷನ್ ಆಸೆಗೆ ಬಿದ್ದು ಯಾರಾರಿಗೋ ಹಣ ವರ್ಗಾವಣೆ ಮಾಡದಿರಿ ಹುಷಾರ್..!

Money Laundering ways: ವಂಚಕರಿಗೆ ಇವತ್ತು ಅಕ್ರಮ ಎಸಗಲು ನೂರಾರು ಮಾರ್ಗಗಳಿವೆ. ಹಣಕಾಸು ಅಕ್ರಮಕ್ಕೆ ಕಠಿಣ ಶಿಕ್ಷೆ ಇರುವುದರಿಂದ ಅಮಾಯಕರನ್ನು ತಮ್ಮ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡುವುದು ಸೇರಿದಂತೆ ಹಲವು ಕಾರ್ಯಗಳನ್ನು ಸಾಧಿಸುತ್ತಾರೆ. ಕಮಿಷನ್ ಆಸೆ ಇತ್ಯಾದಿ ಪ್ರಲೋಬನೆಗಳನ್ನು ನೀಡಬಹುದು. ಬೆದರಿಸಿ ಕೆಲಸ ಮಾಡಿಸಬಹುದು.

Beware..! ಕಮಿಷನ್ ಆಸೆಗೆ ಬಿದ್ದು ಯಾರಾರಿಗೋ ಹಣ ವರ್ಗಾವಣೆ ಮಾಡದಿರಿ ಹುಷಾರ್..!
ಹಣ ವರ್ಗಾವಣೆ
Follow us
|

Updated on: Mar 22, 2024 | 4:52 PM

ಇವತ್ತಿನ ದಿನಗಳಲ್ಲಿ ತಂತ್ರಜ್ಞಾನ ಬೆಳೆದಂತೆ ಹಣಕಾಸು ಅಕ್ರಮಗಳು (economic offence) ವಿವಿಧ ರೂಪ ಬೆಳೆದಿವೆ. ವಂಚಕರು ವಿವಿಧ ಮಾರ್ಗಗಳನ್ನು ಅನುಸರಿಸುತ್ತಾರೆ. ಹೂಡಿಕೆ ಸ್ಕೀಮ್​ಗಳನ್ನು ಆಕರ್ಷಿಸಿ ಜನರಿಂದ ಬಂಡವಾಳ ಪಡೆದು ವಂಚಿಸುವ ಪ್ರಕರಣಗಳು ಈಗಲೂ ನಡೆಯುತ್ತಿರುತ್ತವೆ. ಕಪ್ಪು ಹಣವನ್ನು (black money) ಬಿಳಿ ಮಾಡುವ ದಂಧೆ ಒಳಗಿಂದೊಳಗೆ ಅವ್ಯಾಹತವಾಗಿ ನಡೆಯುತ್ತದೆ. ತೆರಿಗೆಯಿಂದ ತಪ್ಪಿಸಿಕೊಳ್ಳಲು ಜನರು ಕಳ್ಳ ದಾರಿಗಳನ್ನು ಹಿಡಿಯುತ್ತಾರೆ. ಈ ಪ್ರಯತ್ನದಲ್ಲಿ ಅಮಾಯಕ ಜನರೂ ಬಲಿಪಶುಗಳಾಗುವುದುಂಟು. ಯಾವುದೊ ಸಣ್ಣ ಆಸೆಗೆ ಸಿಲುಕಿ ವಂಚಕರ ಬದಲು ಅಮಾಯಕರು ಕಾನೂನು ಶಿಕ್ಷೆಗೆ ಗುರಿಯಾಗಬಹುದು.

ಹಣದ ಅಕ್ರಮ ವರ್ಗಾವಣೆಗೆ ಅಮಾಯಕರನ್ನು ಹೇಗೆ ಸೆಳೆಯಲಾಗುತ್ತೆ ನೋಡಿ…

ಅಕ್ರಮವಾಗಿ ಹಣ ವರ್ಗಾವಣೆ ಮಾಡುವುದು ಅಪರಾಧ. ಹಣಕಾಸು ಅಪರಾಧಕ್ಕೆ ಕಠಿಣ ಶಿಕ್ಷೆಗಳಿವೆ. ವಂಚಕರು ತಾವು ಸಿಕ್ಕಿ ಬೀಳದಂತೆ ರಹಸ್ಯವಾಗಿ ಅಕ್ರಮ ಹಣ ವರ್ಗಾವಣೆ ಮಾಡುತ್ತಾರೆ. ಭಾರತದಲ್ಲಿ ಇಂಥ ಹವಾಲ ನೆಟ್ವರ್ಕ್ ಬಹಳ ಜೋರಾಗಿದೆ. ಇದರಲ್ಲಿ ಅಮಾಯಕರನ್ನೂ ಶಾಮೀಲಾಗಿಸುವುದುಂಟು.

ಇದನ್ನೂ ಓದಿ: ಡೆಟ್ ಫಂಡ್ ಎಂದರೇನು? ಎಫ್​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದರಿಂದ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್

ವಿವಿಧ ಸ್ಕೀಮ್​ಗಳ ಹೆಸರಿನಲ್ಲಿ ಅಮಾಯಕರನ್ನು ಸೆಳೆದು, ಅವರ ಮೂಲಕ ಬೇರೆ ಬ್ಯಾಂಕ್ ಖಾತೆಗೆ ಹಣ ರವಾನೆ ಮಾಡಿಸಲಾಗುತ್ತದೆ. ಈ ಕಾರ್ಯಕ್ಕೆ ಒಂದಷ್ಟು ಹಣ ಸಿಗುತ್ತದೆ. ಈ ಆಸೆಯಿಂದ ಜನರು ಯಾರಾರಿಗೋ ಅಪರಿಚಿತರಿಗೆ ಹಣ ವರ್ಗಾವಣೆ ಮಾಡುತ್ತಾರೆ.

ಅಪರಿಚಿತರಿಗೆ ಬ್ಯಾಂಕ್ ಖಾತೆಯಿಂದ ನಗದು ಹಣ ಡ್ರಾ ಮಾಡಿ ಕೊಡುವುದು ಇತ್ಯಾದಿ ಕೆಲಸಗಳನ್ನೂ ಮಾಡಿಸಲಾಗುತ್ತದೆ.

ವ್ಯಕ್ತಿಗಳು ಮಾತ್ರವಲ್ಲ, ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನೂ ಈ ರೀತಿ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ನಕಲಿ ಮಾಲೀಕರು ಮತ್ತು ಸಂಸ್ಥೆಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಅವುಗಳ ಮೂಲಕ ಮನಿ ಲಾಂಡರಿಂಗ್ ನಡೆಯುತ್ತದೆ. ಹಾಗೆಯೇ, ಅಮಾಯಕ ಜನರನ್ನೂ ಕೂಡ ಮನಿ ಲಾಂಡರಿಂಗ್​ಗೆ ಬಳಸಬಹುದು. ಇನ್ನೂ ಕೆಲವರು ಎಲ್ಲಾ ಗೊತ್ತಿದ್ದೇ ಈ ರೀತಿ ಅಕ್ರಮ ಹಣ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದುಂಟು.

ಇದನ್ನೂ ಓದಿ: 63 ಜನರಿದ್ದ ಕೂಡು ಕುಟುಂಬದಲ್ಲಿ ಜನಿಸಿದ ಉದಯ್ ಕೋಟಕ್​ಗೆ, ಇಡೀ ಕಂಪನಿ ಒಂದು ಜಾಯಿಂಟ್ ಫ್ಯಾಮಿಲಿ ಇದ್ದಂತೆ

ಇಂಥ ಅಕ್ರಮ ಹಣದ ಆಟಕ್ಕೆ ನೀವು ಗೊತ್ತಿಲ್ಲದೇ ಪಾಲ್ಗೊಂಡಿದ್ದರೂ, ಕಾನೂನಿನ ಕೈ ನಿಮ್ಮವರೆಗೂ ಬರಬಹುದು. ಮನಿ ಲಾಂಡರಿಂಗ್ ಕಾಯ್ದೆ ಸೇರಿದಂತೆ ಆರ್ಥಿಕ ಅಪರಾಧಕ್ಕೆ ಸಾಕಷ್ಟು ಶಿಕ್ಷೆಗಳಿರುತ್ತವೆ. ಯಾರದ್ದೋ ಕೂಸಿಗೆ ನೀವು ಅಪ್ಪ ಆಗಿ ಶಿಕ್ಷೆ ಅನುಭವಿಸಬೇಕಾದೀತು ಜೋಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್