
ಹೈದರಾಬಾದ್: ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹೈದರಾಬಾದ್ ನಗರದಲ್ಲಿ, ಪ್ರಕೃತಿಯ ಮಡಿಲಲ್ಲಿ ನೆಲೆಸಬೇಕು ಎಂಬುದು ಅನೇಕರ ಕನಸು. ಅಂತಹ ಕನಸುಗಳನ್ನು ನನಸು ಮಾಡಿಸುವ ಉದ್ದೇಶದಿಂದ ನಾನಕ್‌ರಾಮ್‌ಗೂಡದಲ್ಲಿ (Nanakramguda) ರೂಪುಗೊಳ್ಳುತ್ತಿದೆ ‘ಮೈ ಹೋಮ್ ವ್ಯೋಮ’ (My Home Vyoma). ಇದು ಕೇವಲ ವಸತಿ ಸೌಕರ್ಯವಲ್ಲ, ಬದಲಾಗಿ ನೀವು ಎಂದೂ ಕಾಣದ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಲಕ್ಸುರಿ ಜೀವನಶೈಲಿಗೆ ಹೊಸ ಅರ್ಥ ಕಲ್ಪಿಸುತ್ತಿರುವ ಪ್ರೀಮಿಯಂ ಪ್ರಾಜೆಕ್ಟ್.
‘ಮೈ ಹೋಮ್’ (My Home) ಎನ್ನುವುದು ಬರೀ ಹೆಸರಲ್ಲ, ಅದೊಂದು ಬಲವಾದ ನಂಬಿಕೆ. ಕಳೆದ ನಾಲ್ಕು ದಶಕಗಳಿಗೂ ಅಧಿಕ ಕಾಲದಿಂದ ರಿಯಲ್ ಎಸ್ಟೇಟ್ ರಂಗದಲ್ಲಿ ಗುಣಮಟ್ಟ, ನಂಬಿಕೆ, ಸಮಯಪಾಲನೆ ಮತ್ತು ಪಾರದರ್ಶಕತೆಗೆ ಹೆಸರುವಾಸಿಯಾಗಿರುವ ಈ ಸಂಸ್ಥೆ, ಹೈದರಾಬಾದ್ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಗರಾದ್ಯಂತ 27 ಹೆಗ್ಗುರುತು ಡೆವಲಪ್‌ಮೆಂಟ್‌ಗಳನ್ನು ಪೂರ್ಣಗೊಳಿಸಿರುವ ಮೈ ಹೋಮ್ ಗ್ರೂಪ್, ಈಗ ‘ಮೈ ಹೋಮ್ ವ್ಯೋಮ’ ಮೂಲಕ ಮತ್ತೊಂದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಮನೆ ನಿರ್ಮಿಸುವುದೆಂದರೆ ಕೇವಲ ನಾಲ್ಕು ಗೋಡೆಗಳನ್ನು ಕಟ್ಟುುವುದಲ್ಲ, ಬದಲಾಗಿ ಒಂದು ಕುಟುಂಬಕ್ಕೆ ತಲೆಮಾರುಗಳಿಗೂ ಉಳಿಯುವ ಉತ್ತಮ ವಾತಾವರಣವನ್ನು ನೀಡುವುದು ಎಂಬ ತತ್ವದೊಂದಿಗೆ ಇದು ರೂಪುಗೊಳ್ಳುತ್ತಿದೆ.

Hyderabad My Home
ಹೈದರಾಬಾದ್‌ನ ನಾನಕ್‌ರಾಮ್‌ಗೂಡ ಹಾಗೂ ಫೈನಾನ್ಶಿಯಲ್ ಡಿಸ್ಟ್ರಿಕ್ಟ್ ಪ್ರದೇಶವು ಇಂದು ಲಕ್ಸುರಿ ಜೀವನಕ್ಕೆ ಕೇರಾಫ್ ಅಡ್ರೆಸ್ ಆಗಿ ಮಾರ್ಪಟ್ಟಿದೆ. ಗಚ್ಚಿಬೌಲಿ, ಹೈಟೆಕ್ ಸಿಟಿ, ಕೋಕಾಪೇಟ್ ಮತ್ತು ನಿಯೋಪಾಲಿಸ್‌ನಂತಹ ಪ್ರಮುಖ ಗ್ರೋತ್ ಕಾರಿಡಾರ್‌ಗಳ ನಡುವೆ ಇರುವ ಈ ಪ್ರಾಜೆಕ್ಟ್ ಪ್ರಮುಖ ಸ್ಥಳಗಳಿಗೆ ಸುಲಭ ಸಂಪರ್ಕ ಸಾಧಿಸುವ ಸ್ಥಳದಲ್ಲಿದೆ.

My Home Vyoma
ಮೈ ಹೋಮ್ ವ್ಯೋಮಾದ ಅತ್ಯಂತ ದೊಡ್ಡ ವಿಶೇಷತೆಯೆಂದರೆ ಇಲ್ಲಿರುವ ವಿಶಾಲವಾದ ಜಾಗ. ಒಟ್ಟು 22.34 ಎಕರೆ ವಿಸ್ತೀರ್ಣದ ಈ ಪ್ರಾಜೆಕ್ಟ್‌ನಲ್ಲಿ ಬಡಾವಣೆಯ ಶೇಕಡಾ 83 ರಷ್ಟು ಭಾಗವನ್ನು ಮುಕ್ತ ಜಾಗಕ್ಕಾಗಿ (Open Space) ಹಾಗೂ ಹಸಿರು ವಾತಾವರಣಕ್ಕಾಗಿ ಮೀಸಲಿಡಲಾಗಿದೆ. ನಗರದಲ್ಲಿ ಚದರ ಅಡಿಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಓಪನ್ ಸ್ಪೇಸ್‌ಗೆ ಇಷ್ಟು ಪ್ರಾಮುಖ್ಯತೆ ನೀಡಿರುವುದು ಇಲ್ಲಿನ ಅತಿ ದೊಡ್ಡ ಲಕ್ಸುರಿಯಾಗಿದೆ. ಸುತ್ತಲೂ ವಾಕಿಂಗ್ ಟ್ರ್ಯಾಕ್‌ಗಳು, ಸೈಕ್ಲಿಂಗ್ ಟ್ರ್ಯಾಕ್, ಪ್ಲೇ ಏರಿಯಾ ಮತ್ತು ಸುಂದರವಾದ ಲಾನ್‌ಗಳು ನಿವಾಸಿಗಳಿಗೆ ಮನಸ್ಸಿಗೆ ನೆಮ್ಮದಿ ನೀಡುತ್ತವೆ.
ಈ ಪ್ರಾಜೆಕ್ಟ್‌ನಲ್ಲಿ ಒಟ್ಟು 12 ಟವರ್‌ಗಳು, ಗ್ರೌಂಡ್ + 50/51 ಮಹಡಿಗಳ ಬೃಹತ್ ನಿರ್ಮಾಣವಿದ್ದು, ಒಟ್ಟು 2,360 ಅಲ್ಟ್ರಾ ಲಕ್ಸುರಿ 3 ಮತ್ತು 4 ಬಿಎಚ್‌ಕೆ ನಿವಾಸಗಳು ಲಭ್ಯವಿವೆ. ಇಲ್ಲಿ ಹೈ-ರೈಜ್ ಲಿವಿಂಗ್ ಎಂದರೆ ಕೇವಲ ಎತ್ತರದಲ್ಲಿ ವಾಸಿಸುವುದಲ್ಲ; ಎತ್ತರದ ಮನೆಗೆ ವಿಶಾಲವಾದ ಹಸಿರು ಮತ್ತು ಪ್ರಕೃತಿಯ ಅನುಭೂತಿಯನ್ನು ಬೆಸೆಯುವುದಾಗಿದೆ. ‘ಲೈವ್ ಇನ್ ದಿ ಮೊಮೆಂಟ್’ (Live in the Moment) ಎನ್ನುವ ಕಾನ್ಸೆಪ್ಟ್ ಅಡಿಯಲ್ಲಿ ಇದು ರೂಪುಗೊಳ್ಳುತ್ತಿದ್ದು, ಒತ್ತಡದ ಜೀವನದಿಂದ ದೂರಾಗಿ ಪ್ರಶಾಂತ ಬದುಕನ್ನು ಇದು ಖಾತ್ರಿಪಡಿಸುತ್ತದೆ.
ನಿವಾಸಿಗಳ ಮನೋರಂಜನೆ ಮತ್ತು ಫಿಟ್‌ನೆಸ್‌ಗಾಗಿ ಇಲ್ಲಿ 1 ಲಕ್ಷ ಚದರ ಅಡಿಗಳಿಗೂ ಅಧಿಕ ವಿಸ್ತೀರ್ಣದ ಎರಡು ಬೃಹತ್ ಕ್ಲಬ್ ಹೌಸ್‌ಗಳನ್ನು ನಿರ್ಮಿಸಲಾಗಿದೆ. ಫಿಟ್‌ನೆಸ್ ಜಿಮ್, ಸ್ಪಾ ಅಂಡ್ ಸಲೂನ್, ಯೋಗ ಅಂಡ್ ಏರೋಬಿಕ್ಸ್. ಮಕ್ಕಳಿಗಾಗಿ ಇನ್ಡೋರ್ ಗೇಮ್ಸ್ ಮತ್ತು ಪಿಕಲ್ ಬಾಲ್ ಕೋರ್ಟ್. ಮಲ್ಟಿಪರ್ಪಸ್ ಹಾಲ್ಸ್, ಗೆಸ್ಟ್ ರೂಮ್‌ಗಳು, ಸೂಪರ್‌ಮಾರ್ಕೆಟ್‌ಗಳು, ಫಾರ್ಮಸಿ ಮತ್ತು ಬ್ಯಾಂಕ್‌ಗಳು. ಸ್ವಿಮ್ಮಿಂಗ್ ಪೂಲ್, ಔಟ್‌ಡೋರ್ ಜಿಮ್, ಪೆಟ್ ಜೋನ್ ಮತ್ತು ಸ್ಪೋರ್ಟ್ಸ್ ನೆಟ್ಸ್ಗಳು ಲಭ್ಯವಿವೆ.
ಒಂದರ್ಥದಲ್ಲಿ ಮನೆಯಿಂದ ಹೊರಗೆ ಹೋಗದೆಯೂ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳುವ ಸಮಗ್ರ ವ್ಯವಸ್ಥೆ ಇಲ್ಲಿ ಲಭ್ಯವಿದೆ. ಮೈ ಹೋಮ್ ವ್ಯೋಮ ಕೇವಲ ‘ಮನೆ ಎಲ್ಲಿ ಖರೀದಿಸಬೇಕು’ ಎಂಬ ಪ್ರಶ್ನೆಗೆ ಸಿಗುವ ಉತ್ತರ ಮಾತ್ರವಲ್ಲ, ಬದಲಾಗಿ ಅತ್ಯುತ್ತಮ ಜೀವನಶೈಲಿಯನ್ನು ಆಯ್ಕೆ ಮಾಡಿಕೊಳ್ಳಲು ಇರುವ ಸರಿಯಾದ ವೇದಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:14 pm, Sat, 10 October 26