ನವದೆಹಲಿ, ನವೆಂಬರ್ 17: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಿವಿಗೆ ಅಸಹನೀಯ ಎನಿಸುವ ಶಬ್ದಗಳಲ್ಲಿ ತೆರಿಗೆ ಇಳಿಸುವುದೂ ಒಂದು ಎಂದು ಹಲವರು ತಮಾಷೆ ಮಾಡುವುದುಂಟು. ಈ ರೀತಿಯ ಸಾವಿರಾರು ಮೀಮ್ಸ್ಗಳಿಗೆ ಹಣಕಾಸು ಸಚಿವೆ ಗುರಿಯಾಗಿರುವುದುಂಟು. ಇವೆಲ್ಲವನ್ನೂ ತಾನು ಗಮನಿಸುತ್ತಿದ್ದೇನೆ ಎಂದು ಬಾರಿ ಬಾರಿ ಹೇಳುವ ನಿರ್ಮಲಾ ಸೀತಾರಾಮನ್, ತೆರಿಗೆ ಪರಿಷ್ಕರಣೆ ವಿಚಾರದಲ್ಲಿ ಯಾವ ಒತ್ತಡಕ್ಕೂ ಬಾಗುವ ಮಾತೇ ಇಲ್ಲ. ಆದರೆ, ಇವತ್ತು ಭಾನುವಾರ ಅವರ ಮಾತಿನ ಲಯ ತುಸು ಬದಲಾದಂತಿತ್ತು. ಎಕ್ಸ್ ಬಳಕೆದಾರರೊಬ್ಬರು ತೆರಿಗೆ ಹೊರೆ ಕಡಿಮೆ ಮಾಡಿ ಎಂದು ಮಾಡಿಕೊಂಡ ಮನವಿಗೆ ಸಚಿವೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
‘ನಿರ್ಮಲಾ ಸೀತಾರಾಮನ್ ಅವರೇ, ನಿಮ್ಮ ಪ್ರಯತ್ನಗಳಿಗೆ ಹಾಗೂ ಈ ದೇಶಕ್ಕೆ ನೀವು ನೀಡಿರುವ ಕೊಡುಗೆಗಳ ಬಗ್ಗೆ ನಮಗೆ ಬಹಳ ಮೆಚ್ಚುಗೆ ಇದೆ. ಆದರೆ, ಮಧ್ಯಮ ವರ್ಗದವರಿಗೆ ಸ್ವಲ್ಪ ರಿಲೀಫ್ ಕೊಡಲು ಯೋಚಿಸಬೇಕೆಂದು ಸವಿನಯದಿಂದ ಕೋರುತ್ತೇನೆ. ಇದರಲ್ಲಿ ಬಹಳ ಸಮಸ್ಯೆ ಇರುವುದನ್ನು ಅರಿತುಕೊಳ್ಳಬಲ್ಲೆ. ಆದರೆ, ಇದು ನನ್ನ ಕಳಕಳಿಯ ಮನವಿಯಷ್ಟೇ,’ ಎಂದು ತುಷಾರ್ ಶರ್ಮಾ ಎಂಬುವವರು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿರೋ ಕನ್ನಡಿಗರಿಗೆ ಮರಾಠಿ ಬರುತ್ಯೆ? ಕನ್ನಡ ಕಲಿಯಿರಿ ಎಂದ ಈ ಸಿಇಒ ಅಭಿಪ್ರಾಯಕ್ಕೆ ಆನ್ಲೈನ್ನಲ್ಲಿ ಬಿಸಿಬಿಸಿ ಚರ್ಚೆ
ರಾಮಾಯಣದ ಸೀತಾ ಮಾತೆಯ ನುಡಿಗಳ ಬಗ್ಗೆ ಪೇಪರ್ಕ್ಲಿಪ್ವೊಂದನ್ನು ನಿರ್ಮಲಾ ಸೀತಾರಾಮನ್ ತಮ್ಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಆ ಪೋಸ್ಟ್ಗೆ ತುಷಾರ್ ಶರ್ಮಾ ಪ್ರತಿಕ್ರಿಯಿಸಿ, ಅದಕ್ಕೆ ಸಂಬಂಧವಿಲ್ಲದ ತೆರಿಗೆ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಅನಿರೀಕ್ಷಿತ ಪ್ರತಿಕ್ರಿಯೆಗೆ ಹಣಕಾಸು ಸಚಿವೆ ಸಕಾರಾತ್ಮಕವಾಗಿ ಸ್ಪಂದಿಸಿ ಅಚ್ಚರಿ ಮೂಡಿಸಿದ್ದಾರೆ.
Thank you for your kind words and your understanding. I recognise and appreciate your concern.
PM @narendramodi ‘s government is a responsive government. Listens and attends to people’s voices. Thanks once again for your understanding. Your input is valuable. https://t.co/0C2wzaQtYx— Nirmala Sitharaman (@nsitharaman) November 17, 2024
‘ನಿಮ್ಮ ಒಳ್ಳೆಯ ಮಾತುಗಳಿಗೆ ಮತ್ತು ತಿಳಿವಳಿಕೆಗೆ ಧನ್ಯವಾದಗಳು. ನಿಮ್ಮ ಕಾಳಜಿಯನ್ನು ನಾನು ಶ್ಲಾಘಿಸುತ್ತೇನೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸ್ಪಂದನಶೀಲ ಸರ್ಕಾರವಾಗಿದೆ. ಜನರ ಧ್ವನಿಗಳನ್ನು ಆಲಿಸುತ್ತದೆ. ನಿಮ್ಮ ಅನಿಸಿಕೆ ಅಮೂಲ್ಯವಾದುದು,’ ಎಂದು ನಿರ್ಮಲಾ ಸೀತಾರಾಮನ್ ಸ್ಪಂದಿಸಿದ್ದಾರೆ.
ಇದನ್ನೂ ಓದಿ: ಐಟಿಆರ್ ಸಲ್ಲಿಕೆ ವೇಳೆ ಈ ಆದಾಯ ಮರೆಮಾಚಿದರೆ 10 ಲಕ್ಷ ರೂ ದಂಡ: ಆದಾಯ ತೆರಿಗೆ ಇಲಾಖೆ ಸೂಚನೆ
ನಿರ್ಮಲಾ ಸೀತಾರಾಮನ್ ಅವರ ಈ ಸಕಾರಾತ್ಮಕ ಮಾತುಗಳು ಮುಂಬರುವ ಬಜೆಟ್ನಲ್ಲಿ ಟ್ಯಾಕ್ಸ್ ರಿಲೀಫ್ ಕಾದಿರಬಹುದಾ ಎನ್ನುವ ಆಶಾಭಾವನೆಯನ್ನು ತೆರಿಗೆ ಪಾವತಿದಾರರಲ್ಲಿ ಹುಟ್ಟುಹಾಕಿರಬಹುದು. ಸಚಿವೆಯ ಈ ಪೋಸ್ಟ್ಗೆ ಬಹಳಷ್ಟು ಜನರು ಋಣಾತ್ಮಕವಾಗಿ ಪ್ರತಿಕ್ರಿಯಿಸಿರುವುದೂ ಉಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ