AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Poverty: ಭಾರತದಲ್ಲಿ 13.5 ಕೋಟಿ ಮಂದಿ ಬಡತನದಿಂದ ಹೊರಕ್ಕೆ, ಉತ್ತರಪ್ರದೇಶದಲ್ಲಿ ಅತಿಹೆಚ್ಚು: ನೀತಿ ಆಯೋಗ್ ವರದಿ

NITI Ayog Report On Poverty: ಭಾರತದಲ್ಲಿ 2015-16ರಿಂದ 2019-21ರ ಅವಧಿಯಲ್ಲಿ ಬಹು ಆಯಾಮದ ಬಡತನದಿಂದ 13.5 ಕೋಟಿ ಜನರು ಹೊರಬಂದಿದ್ದಾರೆ ಎಂದು ನೀತಿ ಆಯೋಗ್​ನ ವರದಿಯೊಂದು ತಿಳಿಸಿದೆ.

Poverty: ಭಾರತದಲ್ಲಿ 13.5 ಕೋಟಿ ಮಂದಿ ಬಡತನದಿಂದ ಹೊರಕ್ಕೆ, ಉತ್ತರಪ್ರದೇಶದಲ್ಲಿ ಅತಿಹೆಚ್ಚು: ನೀತಿ ಆಯೋಗ್ ವರದಿ
ಬಡತನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 18, 2023 | 11:41 AM

Share

ನವದೆಹಲಿ, ಜುಲೈ 18: ಭಾರತದಲ್ಲಿ 2005ರಿಂದ 15 ವರ್ಷದ ಅವಧಿಯಲ್ಲಿ 41ಕೋಟಿ ಭಾರತೀಯರು ಬಹು ಆಯಾಮಗಳ ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ವಿಶ್ವಸಂಸ್ಥೆಯ ಅಧ್ಯಯನ ವರದಿಯೊಂದು ಹೇಳಿತ್ತು. ಇದೀಗ ಭಾರತದ ನೀತಿ ಆಯೋಗ್ (NITI Aayog) 2015ರಿಂದ ಈಚೆಗಿನ ಬಡತನ ನಿರ್ಮೂಲನೆಯ ಮಾಹಿತಿ ಪ್ರಕಟಿಸಿದೆ. ‘ನ್ಯಾಷನಲ್ ಮಲ್ಟಿಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್: ಎ ಪ್ರೋಗ್ರೆಸ್ ರಿವ್ಯೂ 2023’ ಜುಲೈ 17ರಂದು ಬಿಡುಗಡೆ ಮಾಡಿದ ವರದಿ ಪ್ರಕಾರ 2015-16ರಿಂದ 2019-21ರ ಅವಧಿಯಲ್ಲಿ 13.5 ಕೋಟಿ ಭಾರತೀಯರು ಬಹು ಆಯಾಮದ ಬಡತನದಿಂದ ತಪ್ಪಿಸಿಕೊಂಡಿದ್ದಾರೆ. ಬಡವರ ಸಂಖ್ಯೆ ಅತಿಹೆಚ್ಚು ಇಳಿಮುಖಗೊಂಡಿರುವ ರಾಜ್ಯಗಳಲ್ಲಿ ಉತ್ತರಪ್ರದೇಶ ಮೊದಲ ಸ್ಥಾನ ಪಡೆದಿದೆ. ಬಿಹಾರ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ಥಾನದಲ್ಲೂ ಗಮಾರ್ಹ ಪ್ರಮಾಣದಲ್ಲಿ ಬಡತನ ಕಡಿಮೆ ಆಗಿದೆ.

2015ರ ಏಪ್ರಿಲ್​ನಿಂದ 2021ರ ಮಾರ್ಚ್​ವರೆಗಿನ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಬಡತನ ಅತಿಹೆಚ್ಚು ಕಡಿಮೆ ಆಗಿದೆ. ಶೇ. 32.58ರಷ್ಟಿದ್ದ ಬಡತನ ಶೇ. 19.28ಕ್ಕೆ ಇಳಿದಿದೆ. ನಗರಪ್ರದೇಶಗಳಲ್ಲಿ ಬಡತನ ಶೇ. 8.65ರಿಂದ ಶೇ. 5.27ಕ್ಕೆ ಕಡಿಮೆ ಆಗಿದೆ.

ಇದನ್ನೂ ಓದಿPoverty Index: 15 ವರ್ಷದಲ್ಲಿ 41 ಕೋಟಿ ಭಾರತೀಯರು ಬಡತನದಿಂದ ಹೊರಗೆ: ವಿಶ್ವಸಂಸ್ಥೆ

36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 707 ಆಡಳಿತಾತ್ಮಕ ಜಿಲ್ಲೆಗಳಲ್ಲಿನ ಬಡತನದ ಅಂಕಿ ಅಂಶಗಳನ್ನು ಹೊರತೆಗೆದಿರುವ ನೀತಿ ಆಯೋಗ್, 5 ವರ್ಷದಲ್ಲಿ ಉತ್ತರಪ್ರದೇಶದಲ್ಲಿ 3.43 ಕೋಟಿ ಮಂದಿ ಬಡತನದ ಪೊರೆ ಕಳಚಿ ಹೊರಬಂದಿರುವುದನ್ನು ಎತ್ತಿತೋರಿಸಿದೆ.

2015-16ರಿಂದ 2019-21ರ ಅವಧಿಯಲ್ಲಿ ಭಾರತದಲ್ಲಿ ಮಲ್ಟಿಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್ (ಎಂಪಿಐ) ಮೌಲ್ಯ ಅರ್ಧದಷ್ಟು ಕಡಿಮೆ ಆಗಿದೆ. 0.117ರಷ್ಟಿದ್ದ ಎಂಪಿಐ ಮೌಲ್ಯ 0.066ಕ್ಕೆ ಇಳಿದಿದೆ. ಬಡತನದ ತೀವ್ರತೆಯೂ ಶೇ. 47ರಿಂದ ಶೇ. 44ಕ್ಕೆ ಇಳಿದಿದೆ. ಬಡತನ ನಿರ್ಮೂಲನೆಯ ಕಾರ್ಯದಲ್ಲಿ 2030ಕ್ಕೆ ನಿಗದಿ ಮಾಡಿದ ಗುರಿಯನ್ನು ಬಹಳ ಬೇಗನೇ ಭಾರತ ಮುಟ್ಟುತ್ತಿದೆ’ ಎಂದು ನೀತಿ ಆಯೋಗ್​ನ ಈ ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್