
ಪೆಟ್ರೋಲ್, ಡೀಸಲ್ ಇತ್ಯಾದಿ ಉತ್ಪನ್ನಗಳನ್ನು ಕಚ್ಛಾ ತೈಲದಿಂದ (Crude Oil) ತಯಾರಿಸಲಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿದೆ. ನಾವು ಪೆಟ್ರೋಲ್ ಅನ್ನು ಲೀಟರ್ ಲೆಕ್ಕದಲ್ಲಿ ನೋಡುತ್ತೇವೆ. ಕಚ್ಛಾ ತೈಲ ಅಥವಾ ಕ್ರೂಡ್ ಆಯಿಲ್ ಅನ್ನು ಸಾಮಾನ್ಯವಾಗಿ ಬ್ಯಾರಲ್ ಲೆಕ್ಕದಲ್ಲಿ ನೋಡಲಾಗುತ್ತದೆ. ಒಂದು ಬ್ಯಾರಲ್ ಎಂದರೆ 42 ಗ್ಯಾಲನ್ಗಳು. ಒಂದು ಗ್ಯಾಲನ್ 3.785 ಲೀಟರ್ನಷ್ಟಾಗುತ್ತದೆ. ಅಂದರೆ, ಒಂದು ಬ್ಯಾರಲ್ ತೈಲ ಎಂದರೆ ಅದು ಸುಮಾರು 157 ಲೀಟರ್ಗಳಷ್ಟಾಗುತ್ತದೆ. ಕಚ್ಛಾ ತೈಲದಿಂದ ಹಲವಾರು ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸಬಹುದು. ಅದು ಮಾತ್ರವಲ್ಲ, ಇನ್ನೂ ಅನೇಕ ಉತ್ಪನ್ನಗಳ ತಯಾರಿಕೆಯೂ ಈ ಕ್ರೂಡ್ ಆಯಿಲ್ನಿಂದ ಮಾಡಲಾಗುತ್ತದೆ.
ಒಂದು ಬ್ಯಾರಲ್ ಎಂದರೆ ಸುಮಾರು 157 ಲೀಟರ್ ಎನ್ನಬಹುದು. ಕಚ್ಛಾ ತೈಲವನ್ನು ಸಂಸ್ಕರಿಸಿದಾಗ ಅದು 166 ಲೀಟರ್ ಆಗುತ್ತದೆ. ಒಂದು ಬ್ಯಾರಲ್ ಕಚ್ಛಾ ತೈಲದಿಂದ ಸುಮಾರು 20 ಗ್ಯಾಲನ್ಗಳಷ್ಟು ಪೆಟ್ರೋಲ್ ತಯಾರಿಸಬಹುದು. ಸುಮಾರು 72ರಿಂದ 75 ಲೀಟರ್ಗಳಷ್ಟು ಪೆಟ್ರೋಲ್ ತಯಾರಿಕೆ ಸಾಧ್ಯವಂತೆ.
ಇದನ್ನೂ ಓದಿ: ಪ್ರಾಜೆಕ್ಟ್ ಕುಶ; ಭಾರತದ ಸ್ವಂತ ಡಿಫೆನ್ಸ್ ಸಿಸ್ಟಂ; ಅಮರಿಕದ ಥಾಡ್ ಅನ್ನೂ ಮೀರಿಸುತ್ತೆ ಇದು
ಕಚ್ಛಾ ತೈಲದ ಪ್ರಮುಖ ಉತ್ಪನ್ನವು ಪೆಟ್ರೋಲ್ ಆಗಿರುತ್ತದೆ. ಅರ್ಧದಷ್ಟು ಬ್ಯಾರಲ್ ತೈಲವನ್ನು ಪೆಟ್ರೋಲ್ ತಯಾರಿಕೆಗೆ ಬಳಸಲಾಗುತ್ತದೆ. ಮಿಕ್ಕಿರುವ ಕಚ್ಛಾ ತೈಲವನ್ನು ಹೇರಳ ಉಪ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತದೆ. ಬರೋಬ್ಬರಿ 6,000 ಕ್ಕೂ ಹೆಚ್ಚು ಉತ್ಪನ್ನಗಳ ತಯಾರಿಕೆಗೆ ಈ ತೈಲವನ್ನು ಬಳಸಲಾಗುತ್ತದೆ.
ಡೀಸಲ್, ಕೆರೋಸಿನ್ (ಸೀಮೆ ಎಣ್ಣೆ), ಜೆಟ್ ಫುಯೆಲ್, ಲೂಬ್ರಿಕೆಂಟ್ ಆಯಿಲ್, ಲಿಪ್ ಸ್ಟಿಕ್, ನೈಲ್ ಪಾಲಿಶ್, ಪರ್ಫ್ಯೂಮ್, ಡೈ, ಹೆಲ್ಮೆಟ್, ಸಿಡಿ ಪ್ಲೇಯರ್, ಶೂ ಪಾಲಿಶ್, ಟಯರ್, ಇಂಕ್, ಸ್ವೆಟರ್, ಬಾಲ್ಪಾಯಿಂಟ್ ಪೆನ್, ಸೋಪ್, ವಾಟರ್ ಪೈಪ್, ರಬ್ಬರ್ ಸಿಮೆಂಟ್, ಆಸ್ಫಾಲ್ಟ್ (ರಸ್ತೆಗೆ ಬಳಸುವ ಟಾರ್), ರಸಗೊಬ್ಬರ, ಕೀಟನಾಶಕ, ವ್ಯಾಕ್ಸ್, ಪ್ಲಾಸ್ಟಿಕ್ ಕಪ್ ಇತ್ಯಾದಿ ನಾನಾ ತರಹದ ಉತ್ಪನ್ನಗಳನ್ನು ತಯಾರಿಸಬಹುದು.
ಇದನ್ನೂ ಓದಿ: ಟ್ಯಾಕ್ಸ್ ಸಮಯ; ಭಾರತದಲ್ಲಿ 7 ರೀತಿಯ ತೆರಿಗೆದಾರರು, 7 ಐಟಿಆರ್ ಫಾರ್ಮ್ಗಳು; ಯಾವುದು ಯಾರಿಗೆ? ಇಲ್ಲಿದೆ ಡೀಟೇಲ್ಸ್
ಇನ್ನು, ಕೇವಲ ಒಂದು ಬ್ಯಾರಲ್ ಕಚ್ಛಾ ತೈಲದಿಂದಲೇ ಬಹಳಷ್ಟು ಉತ್ಪನ್ನಗಳನ್ನು ತಯಾರಿಸಲು ಸಾಧ್ಯ. ಸಾಕಷ್ಟು 20-30 ಲೀಟರ್ ಪೆಟ್ರೋಲ್, ಡೀಸಲ್, 70 ಕಿವ್ಯಾ ವಿದ್ಯುತ್, 1.8 ಕಿಲೋ ಚಾರ್ಕೋಲ್ ಬ್ರಿಕೆಟ್ಸ್, 12 ಸಣ್ಣ ಪ್ರೊಪೇನ್ ಸಿಲಿಂಡರ್, ಒಂದು ಗ್ಯಾಲನ್ ಟಾರ್ಗೆ ಬೇಕಾದ ಆಸ್ಫಾಲ್ಟ್, ಒಂದು ಲೀಟರ್ ಲೂಬ್ರಿಕೆಂಟ್, 170 ಬರ್ತ್ಡೇ ಕ್ಯಾಂಡಲ್, 39 ಪಾಲಿಯೆಸ್ಟರ್ ಬಟ್ಟೆ, 750 ಬಾಚಣಿಕೆ, 540 ಟೂತ್ಬ್ರಶ್, 65 ಪ್ಲಾಸ್ಟಿಕ್ ಡಸ್ಟ್ಪ್ಯಾನ್, 65 ಪ್ಲಾಸ್ಟಿಕ್ ಕಪ್ ಹೀಗೆ ಇನ್ನೂ ಅನೇಕ ಉತ್ಪನ್ನಗಳನ್ನು ಒಂದು ಬ್ಯಾರಲ್ ತೈಲದಿಂದ ತಯಾರಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ