AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ONGC Q4 Results: ಒಎನ್​ಜಿಸಿ FY21 ನಾಲ್ಕನೇ ತ್ರೈಮಾಸಿಕದ ಲಾಭ 6,734 ಕೋಟಿ ರೂಪಾಯಿ, 1.85 ರೂ. ಡಿವಿಡೆಂಡ್

ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್​ನಿಂದ ಹಣಕಾಸು ಫಲಿತಾಂಶವನ್ನು ಘೋಷಣೆ ಮಾಡಲಾಗಿದ್ದು, 2021ರ ಮಾರ್ಚ್ ಕೊನೆಗೆ (FY21 Q4) 6,734 ಕೋಟಿ ರೂಪಾಯಿ ಲಾಭವನ್ನು ದಾಖಲೆ ಮಾಡಿದೆ. ಒಂದು ವರ್ಷದ ಹಿಂದಿನ ಇದೇ ತ್ರೈಮಾಸಿಕದಲ್ಲಿ ಕಂಪೆನಿಯು 3214 ಕೋಟಿ ರೂಪಾಯಿ ನಷ್ಟ ಕಂಡಿತ್ತು.

ONGC Q4 Results: ಒಎನ್​ಜಿಸಿ FY21 ನಾಲ್ಕನೇ ತ್ರೈಮಾಸಿಕದ ಲಾಭ 6,734 ಕೋಟಿ ರೂಪಾಯಿ, 1.85 ರೂ. ಡಿವಿಡೆಂಡ್
ಒಎನ್​ಜಿಸಿ
Follow us
TV9 Web
| Updated By: Srinivas Mata

Updated on:Jun 25, 2021 | 11:26 AM

ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್​ನಿಂದ ಜೂನ್ 24ನೇ ತಾರೀಕಿನಂದು ಹಣಕಾಸು ಫಲಿತಾಂಶವನ್ನು ಘೋಷಣೆ ಮಾಡಲಾಗಿದ್ದು, 2021ರ ಮಾರ್ಚ್ ಕೊನೆಗೆ (FY21 Q4) 6,734 ಕೋಟಿ ರೂಪಾಯಿ ಲಾಭವನ್ನು ದಾಖಲೆ ಮಾಡಿದೆ. ಒಂದು ವರ್ಷದ ಹಿಂದಿನ ಇದೇ ತ್ರೈಮಾಸಿಕದಲ್ಲಿ ಕಂಪೆನಿಯು 3214 ಕೋಟಿ ರೂಪಾಯಿ ನಷ್ಟ ಕಂಡಿತ್ತು. ಒಟ್ಟಾರೆ ಆದಾಯವನ್ನು ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 1.2ರಷ್ಟು ಕಡಿಮೆ ಆಗಿ, 21,189 ಕೋಟಿ ಆಗಿದೆ ಎಂದು ಬಿಎಸ್​ಇ ಫೈಲಿಂಗ್​ನಲ್ಲಿ ತಿಳಿಸಿದೆ. ಸರಕು ಮಾರಾಟದ ಮೂಲಕ ಬರುವುದು (ನೆಟ್ ರಿಯಲೈಸೇಷನ್) ಶೇ 18.4ರಷ್ಟು ಏರಿಕೆ ಆಗಿ, ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾರಲ್​ಗೆ 58.05 ಯುಎಸ್​ಡಿ ತಲುಪಿದೆ. ಒಂದು ವರ್ಷದ ಹಿಂದಿನ ಅವಧಿಯಲ್ಲಿ 49.01 ಯುಎಸ್​ಡಿ ಇತ್ತು. ಕೊವಿಡ್ 19 ಪ್ರಕರಣಗಳಲ್ಲಿ ಇಳಿಮುಖವಾಗಿ ಬೇಡಿಕೆ ಕುದುರಿಕೊಂಡಿದ್ದರಿಂದ ಈ ಬೆಳವಣಿಗೆ ಆಗಿದೆ.

2020- 21ನೇ ಹಣಕಾಸು ವರ್ಷದಲ್ಲಿ ಒಎನ್​ಜಿಸಿ ಲಾಭ ಶೇ 16.5ರಷ್ಟು ಕಡಿಮೆ ಆಗಿ, 11,246 ಕೋಟಿ ತಲುಪಿದೆ. ಇನ್ನು ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಆದಾಯದಲ್ಲಿ ಶೇ 29.2ರಷ್ಟು ಇಳಿಕೆ ಆಗಿ, ರೂ. 68,141 ಕೋಟಿ ಆಗಿದೆ. “ದೇಶದಾದ್ಯಂತ ವಿಧಿಸಿದ್ದ ಕೊರೊನಾ ಲಾಕ್​ಡೌನ್ ಇಲ್ಲದಿದ್ದಲ್ಲಿ ಒಎನ್​ಜಿಸಿಯು ಕಚ್ಚಾ ತೈಲ ನಿರ್ವಹಣೆ ಬ್ಲಾಕ್​ಗಳಿಂದ ಹತ್ತಿರಹತ್ತಿರ ಕಳೆದ ವರ್ಷದ ಉತ್ಪಾದನೆ ಮಟ್ಟವನ್ನು ತಲುಪಿತ್ತು,” ಎಂದು ಕಂಪೆನಿ ತಿಳಿಸಿದೆ. ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ ಕಡಿಮೆ ಆಗಲು ಪ್ರಾಥಮಿಕವಾದ ಕಾರಣ ಏನೆಂದರೆ, ಕೊವಿಡ್​- 19ನಿಂದ ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡಿದ್ದು. ಇದರಿಂದಾಗಿ ಕಂಡೆನ್ಸೇಟ್ ಮತ್ತು ವ್ಯಾಲ್ಯೂ ಆ್ಯಡೆಡ್ ಪ್ರಾಡಕ್ಟ್ಸ್ ಉತ್ಪಾದನೆಯಲ್ಲೂ ಕಡಿಮೆ ಆಗಿದೆ ಎಂದು ತಿಳಿಸಲಾಗಿದೆ.

ಒಎನ್​ಜಿಸಿ ತಿಳಿಸಿರುವ ಪ್ರಕಾರ, ಕಾರ್ಯ ನಿರ್ವಹಿಸುವ ಪ್ರದೇಶಗಳ ಸರಾಸರಿ ಪೈಕಿ 10 ಹೊಸದಾಗಿ (3 ಒಳನಾಡು, 7 ವಿದೇಶಗಳಲ್ಲಿ) ಕಂಡುಹಿಡಿಯಲಾಗಿದೆ. ಇನ್ನು ಒಎನ್​ಜಿಸಿಯಿಂದ ಅಂತಿಮ ಡಿವಿಡೆಂಡ್ ಎಂದು ಪ್ರತಿ ಷೇರಿಗೆ ರೂ. 1.85 ಘೋಷಣೆ ಮಾಡಲಾಗಿದೆ. ಅಲ್ಲಿಗೆ FY21ರಲ್ಲಿ ಒಟ್ಟಾರೆ ಡಿವಿಡೆಂಡ್ ಪ್ರತಿ ಷೇರಿಗೆ ರೂ. 3.60 ಆದಂತಾಗಿದೆ.

ಇದನ್ನೂ ಓದಿ: Coal India Limited Dividend: ಕೋಲ್ ಇಂಡಿಯಾ ಲಿಮಿಟೆಡ್​ನಿಂದ ರೂ. 3.50ರಂತೆ ಡಿವಿಡೆಂಡ್ ಘೋಷಣೆ

(ONGC announced FY21 Q4 results announced on June 24th. Profit of Rs 6734 recorded. Dividend of Rs 1.85 announced)

Published On - 11:23 am, Fri, 25 June 21