Aadhaar- PAN Linking: ಪ್ಯಾನ್- ಆಧಾರ್ ಜೋಡಣೆ ಜೂನ್ 30ರೊಳಗೆ ಮಾಡದಿದ್ದಲ್ಲಿ ಏನಾಗುತ್ತದೆ ಗೊತ್ತೆ?

Aadhaar- PAN Linking: ಪ್ಯಾನ್- ಆಧಾರ್ ಜೋಡಣೆ ಜೂನ್ 30ರೊಳಗೆ ಮಾಡದಿದ್ದಲ್ಲಿ ಏನಾಗುತ್ತದೆ ಗೊತ್ತೆ?
ಸಾಂದರ್ಭಿಕ ಚಿತ್ರ

ಜೂನ್ 30, 2021ರೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜತೆಗೆ ಜೋಡಣೆ ಮಾಡದಿದ್ದಲ್ಲಿ ಏನಾಗುತ್ತದೆ ಗೊತ್ತಾ? ಹೀಗೆ ಮಾಡುವುದಕ್ಕೆ ಗಡುವು ಇದಾಗಿದೆ. ಒಂದು ವೇಳೆ ಲಿಂಕ್ ಆಗದಿದ್ದರೆ ಪ್ಯಾನ್ ಕಾರ್ಡ್ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ. 1000 ರೂ. ತನಕ ಶುಲ್ಕ ಬೀಳುತ್ತದೆ.

TV9kannada Web Team

| Edited By: Srinivas Mata

Jun 25, 2021 | 6:23 PM

ಪರ್ಮನೆಂಟ್ ಅಕೌಂಟ್ ನಂಬರ್ (PAN) ಮತ್ತು ಆಧಾರ್ ಕಾರ್ಡ್ ಜೋಡಣೆ ಮಾಡುವುದಕ್ಕೆ ಜೂನ್ 30, 2021 ಕೊನೆಯ ದಿನವಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿರುವ ಪ್ರಕಾರ, ಯಾರು ಪ್ಯಾನ್ ಕಾರ್ಡ್ ಮತ್ತು ಆಧಾರ್ ಜೋಡಣೆ ಮಾಡುವುದಿಲ್ಲವೋ ಅಂಥವರ ಪ್ಯಾನ್ ಕಾರ್ಡ್ ಇನ್ನು ಮುಂದೆ ಕಾರ್ಯ ನಿರ್ವಹಿಸುವುದಿಲ್ಲ. ಆ ನಂತರ ಯಾವಾಗ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಲಾಗುತ್ತದೋ ಆ ನಂತರವಷ್ಟೇ ಕಾರ್ಯ ನಿರ್ವಹಿಸುವುದಕ್ಕೆ ಶುರುವಾಗುತ್ತದೆ. 2021ರ ಬಜೆಟ್​ನಲ್ಲಿ ಕೇಂದ್ರ ಸರ್ಕಾರವು ಆದಾಯ ತೆರಿಗೆ ಕಾಯ್ದೆ 1961ಕ್ಕೆ 234H ಎಂಬ ಹೊಸ ಸೆಕ್ಷನ್ ಸೇರಿಸಿತು. ನಿಗದಿತ ದಿನಾಂಕದ ಆಚೆಗೂ ಪ್ಯಾನ್- ಆಧಾರ್ ಜೋಡಣೆ ಆಗದಿದ್ದಲ್ಲಿ ಅಂಥವರಿಂದ ಶುಲ್ಕವನ್ನು ವಸೂಲು ಮಾಡಲಾಗುತ್ತದೆ. ಹೊಸ ಸೆಕ್ಷನ್​ನ ಪ್ರಕಾರ, ಒಂದು ವೇಳೆ ಪ್ಯಾನ್ ಅನ್ನು ಆಧಾರ್ ಜತೆಗೆ ಜುಲೈ 1, 2021ರಂದು ಅಥವಾ ಆ ನಂತರವೂ ಲಿಂಕ್ ಮಾಡದಿದ್ದಲ್ಲಿ ಆ ವ್ಯಕ್ತಿಗೆ 1000 ರೂಪಾಯಿ ಮೀರದಂತೆ ದಂಡವನ್ನು ವಿಧಿಸಲಾಗುವುದು.

ಒಂದು ವೇಳೆ ಪ್ಯಾನ್​ ಕಾರ್ಡ್​ ಕಾರ್ಯ ನಿರ್ವಹಿಸುವುದಿಲ್ಲ ಎಂದಾದಲ್ಲಿ ಎಲ್ಲೆಲ್ಲಿ ಹಣಕಾಸು ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವೋ ಅವುಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. 2021ರ ಫೆಬ್ರವರಿಯಲ್ಲಿ ಸಿಬಿಡಿಟಿ ಹೊರಡಿಸಿದ ನೋಟಿಫಿಕೇಷನ್ (ಅಧಿಸೂಚನೆ) ಪ್ರಕಾರ, ಯಾವಾಗಿನಿಂದ ಮತ್ತೆ ಆಧಾರ್​ ಜತೆಗೆ ಜೋಡಣಡ ಮಾಡಲಾಗುತ್ತದೋ ಆಗಿನಿಂದ ಪ್ಯಾನ್​ ಕಾರ್ಡ್ ಕಾರ್ಯ ನಿರ್ವಹಣೆ ಶುರು ಮಾಡುತ್ತದೆ.

ಒಂದು ವೇಳೆ ಜೂನ್ 30ರ ನಂತರದಲ್ಲಿ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿದಲ್ಲಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಮೊದಲೇ ಹೇಳಿದಂತೆ ಸೆಕ್ಷನ್ 234H ಅಡಿಯಲ್ಲಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಆದ್ದರಿಂದ ಗಡುವು ಮೀರುವ ಮುನ್ನ ಆಧಾರ್ ಜತೆಗೆ ಪ್ಯಾನ್ ಕಾರ್ಡ್ ಜೋಡಣೆ ಮಾಡುವುದು ಉತ್ತಮ. ಆದಾಯ ತೆರಿಗೆ ಕಾನೂನಿನ ಪ್ರಕಾರ, ವೈಯಕ್ತಿಕವಾಗಿ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜತೆಗೆ ಜೋಡಣೆ ಮಾಡಿಲ್ಲ ಅನ್ನೋ ಕಾರಣಕ್ಕೆ ಕಾರ್ಯ ನಿರ್ವಹಿಸುವುದು ನಿಲ್ಲಿಸಿದರೆ ಅಂಥವರು ಪ್ಯಾನ್ ಮಾಹಿತಿ ಒದಗಿಸಬೇಕಾಗುತ್ತದೆ. ಅವರು ಅಗತ್ಯ ದಾಖಲಾತಿ ಒದಗಿಸಿಲ್ಲ/ನೀಡಿಲ್ಲ/ನಮೂದಿಸಿಲ್ಲ ಎಂದಾಗುತ್ತದೆ. ಇದರಿಂದಾಗಿ ಆ ನಂತರದಲ್ಲಿ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಏನೆಲ್ಲ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೋ ಅವುಗಳೆಲ್ಲಕ್ಕೂ ಹೊಣೆ ಆಗಬೇಕಾಗುತ್ತದೆ.

ಇದನ್ನೂ ಓದಿ: Personal finance: ವ್ಯಕ್ತಿಯು ಮೃತಪಟ್ಟ ನಂತರ ಆಧಾರ್, ಪ್ಯಾನ್ ಕಾರ್ಡ್, ಪಾಸ್​ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಏನು ಮಾಡಬೇಕು?

(If PAN card not linked to Aadhaar within deadline of June 30th 2021, what will happen next? Here is an explainer)

Follow us on

Related Stories

Most Read Stories

Click on your DTH Provider to Add TV9 Kannada