Coal India Limited Dividend: ಕೋಲ್ ಇಂಡಿಯಾ ಲಿಮಿಟೆಡ್​ನಿಂದ ರೂ. 3.50ರಂತೆ ಡಿವಿಡೆಂಡ್ ಘೋಷಣೆ

ಕೋಲ್ ಇಂಡಿಯಾ ಲಿಮಿಟೆಡ್​ನಿಂದ 2020-21ನೇ ಸಾಲಿಗೆ ಅಂತಿಮ ಡಿವಿಡೆಂಡ್ ರೂ. 3.50ರಂತೆ ಘೋಷಣೆ ಮಾಡಲಾಗಿದೆ. ಷೇರುದಾರರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಅನುಮತಿ ದೊರೆಯಬೇಕಿದೆ.

Coal India Limited Dividend: ಕೋಲ್ ಇಂಡಿಯಾ ಲಿಮಿಟೆಡ್​ನಿಂದ ರೂ. 3.50ರಂತೆ ಡಿವಿಡೆಂಡ್ ಘೋಷಣೆ
ಪ್ರಾತಿನಿಧಿಕ ಚಿತ್ರ

ಕೋಲ್ ಇಂಡಿಯಾ ಲಿಮಿಟೆಡ್​ನ ನಿರ್ದೇಶಕ ಮಂಡಳಿಯು ಸೋಮವಾರದಂದು 10 ರೂಪಾಯಿ ಮುಖಬೆಲೆಯ ಪ್ರತಿ ಷೇರಿಗೆ ರೂ. 3.50ರಂತೆ ಅಂತಿಮ ಡಿವಿಡೆಂಡ್ ಘೋಷಣೆ ಮಾಡಲಾಗಿದೆ. 2020- 21ರ ಹಣಕಾಸು ವರ್ಷಕ್ಕೆ ಈ ಡಿವಿಡೆಂಡ್ ಘೋಷಣೆ ಮಾಡಿದೆ. ಅದೇ ವೇಳೆ ನಾಲ್ಕನೇ ತ್ರೈಮಾಸಿಕದಲ್ಲಿ ಲಾಭವನ್ನು ಸಹ ಪ್ರಕಟಿಸಲಾಗಿದೆ. ಮಾರಾಟದಲ್ಲಿ ಕಡಿಮೆ ಆಗಿದ್ದರಿಂದ ಮಾರ್ಚ್ 31, 2021ರ ಕೊನೆಗೆ ಕನ್ಸಾಲಿಡೇಟೆಡ್​ ಲಾಭದಲ್ಲಿ ಶೇ 1.1ರಷ್ಟು ಕಡಿಮೆ ಆಗಿ, ರೂ. 4,586.78 ಕೋಟಿ ತಲುಪಿರುವುದಾಗಿ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಬಿಎಸ್​ಇ ಫೈಲಿಂಗ್​ನಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಕನ್ಸಾಲಿಡೇಟೆಡ್ ಲಾಭ 4,637.95 ಕೋಟಿ ಆಗಿತ್ತು. ಫೈಲಿಂಗ್​ನಲ್ಲಿ ತೋರಿಸಿರುವ ಪ್ರಕಾರ, ಕೋಲ್​ ಇಂಡಿಯಾದ ಕನ್ಲಾಲಿಡೇಟೆಡ್ ಮಾರಾಟವು ಜನವರಿಯಿಂದ ಮಾರ್ಚ್ ಅವಧಿ ಮಾರಾಟ 24,510.80 ಕೋಟಿ ರೂಪಾಯಿ ಆಗಿದೆ. 2019-20ನೇ ಸಾಲಿನ ಮಾರ್ಚ್ ಅವಧಿಯಲ್ಲಿ 25,597.43 ಕೋಟಿ ರೂಪಾಯಿ ಮಾರಾಟದ ವರದಿ ಆಗಿತ್ತು.

ಕಳೆದ ವರ್ಷದ ಇದೇ ಅವಧಿಯಲ್ಲಿ ಕೋಲ್ ಇಂಡಿಯಾದ ವೆಚ್ಚ 22,373.046 ಕೋಟಿ ರೂಪಾಯಿ ಆಗಿತ್ತು. ಈ ಬಾರಿ 21,565.15 ಕೋಟಿ ರೂಪಾಯಿಗೆ ಕುಸಿತವಾಗಿದೆ. ಮುಂಬರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂತಿಮ ಡಿವಿಡೆಂಡ್​ಗೆ ಅನುಮತಿ ದೊರೆಯಬೇಕಿದೆ. ಕೋಲ್ ಇಂಡಿಯಾ ಹೇಳಿರುವ ಪ್ರಕಾರ, ಉತ್ಪಾದನೆಯು 203.42 ಮಿಲಿಯನ್ ಟನ್​ಗಳಿಗೆ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಗೆ 213.71 ಮಿಲಿಯನ್ ಟನ್​ ಉತ್ಪಾದನೆ ಆಗಿತ್ತು. ಇನ್ನು ಆಫ್​ಟೇಕ್ ಜನವರಿಯಿಂದ ಮಾರ್ಚ್​ ಅವಧಿಗೆ 164.89 ಮಿಲಿಯನ್ ಆಗಿದೆ. ಕಳೆದ ವರ್ಷದ ಇದೇ ಅವಧಿಗೆ 164.33 ಮಿಲಿಯನ್ ಟನ್ ಇತ್ತು.

ಕೋಲ್ ಇಂಡಿಯಾ ಲಿಮಿಟೆಡ್​ನಿಂದ 2023- 24ನೇ ಸಾಲಿನ ಹೊತ್ತಿಗೆ 100 ಕೋಟಿ ಟನ್​ಗಳ ಉತ್ಪಾದನೆಯ ಗುರಿಯನ್ನು ಕೋಲ್ ಇಂಡಿಯಾ ಲಿಮಿಟೆಡ್ ಗುರಿ ಇರಿಸಿಕೊಂಡಿದೆ. ಇದು ಭಾರತದ ಒಟ್ಟಾರೆ ಉತ್ಪಾದನೆಯಲ್ಲಿ ಶೇ 80ರಷ್ಟಾಗುತ್ತದೆ. ಕೋಲ್ ಇಂಡಿಯಾದಲ್ಲಿ ಕೇಂದ್ರ ಸರ್ಕಾರವು ಶೇ 66.13ರಲ್ಲಿ ಪಾಲನ್ನು ಹೊಂದಿದೆ. ಕೋಲ್ ಇಂಡಿಯಾ ಬಂಡವಾಳ ವೆಚ್ಚವು ರೂ. 10,000 ಕೋಟಿಗೂ ಹೆಚ್ಚಾಗಿದೆ.

ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್ ಜನವರಿ- ಮಾರ್ಚ್ ತ್ರೈಮಾಸಿಕ ಲಾಭ ಶೇ 260ರಷ್ಟು ಏರಿಕೆ

(Coal India Limited (CIL) announced final dividend of Rs 3.50. This is subject to approval at shareholders annual general meet.)