Adani Group: ಅದಾನಿ ಸಮೂಹ ಕಂಪೆನಿಯ ವಿದೇಶೀ ಫಂಡ್​ಗಳ ಖಾತೆ ನಿರ್ಬಂಧಿಸಿಲ್ಲ ಎಂದ ಎನ್​ಎಸ್​ಡಿಎಲ್

ಅದಾನಿ ಸಮೂಹದ ಕಂಪೆನಿಗಳಲ್ಲಿ ಪ್ರಮುಖ ಹೂಡಿಕೆದಾರ ವಿದೇಶೀ ಕಂಪೆನಿಗಳ ಡಿಮ್ಯಾಟ್​ ಖಾತೆಯನ್ನು ನಿರ್ಬಂಧಗೊಳಿಸಿಲ್ಲ ಎಂದು ಎನ್​ಎಸ್​ಡಿಎಲ್ ಹೇಳಿರುವುದಾಗಿ ಸೋಮವಾರ ಸಂಜೆ ಮೇಲೆ ವರದಿ ಆಗಿದೆ.

Adani Group: ಅದಾನಿ ಸಮೂಹ ಕಂಪೆನಿಯ ವಿದೇಶೀ ಫಂಡ್​ಗಳ ಖಾತೆ ನಿರ್ಬಂಧಿಸಿಲ್ಲ ಎಂದ ಎನ್​ಎಸ್​ಡಿಎಲ್
ಸಾಂದರ್ಭಿಕ ಚಿತ್ರ

ಅದಾನಿ ಸಮೂಹ ಕಂಪೆನಿಯ ದೊಡ್ಡ ಪ್ರಮಾಣದ ಷೇರು ಪಾಲುದಾರ ಮೂರು ವಿದೇಶಿ ಫಂಡ್​ಗಳ ಖಾತೆಯನ್ನು ನಿರ್ಬಂಧಿಸಿಲ್ಲ ಎಂದು ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟರಿ ಲಿಮಿಟಿಡ್ (ಎನ್​ಎಸ್​ಡಿಎಲ್​) ಹಿರಿಯ ಅಧಿಕಾರಿಗಳು ಅದಾನಿ ಸಮೂಹ ಕಂಪೆನಿಗಳಿಗೆ ತಿಳಿಸಿದ್ದಾರೆ. “ನಿಮ್ಮ ಇಮೇಲ್ ಖಾತೆಯಲ್ಲಿ ತಿಳಿಸಿರುವ ಡಿಮ್ಯಾಟ್​ ಖಾತೆಗಳ ಸ್ಥಿತಿ ಎನ್​ಎಸ್​ಡಿಎಲ್​ ಸಿಸ್ಟಮ್​ನಲ್ಲಿ ಸಕ್ರಿಯವಾಗಿವೆ,” ಎಂದು ಎನ್​ಎಸ್​ಡಿಎಲ್ ಉಪಾಧ್ಯಕ್ಷ ರಾಕೇಶ್ ಮೆಹ್ತಾ ಅವರು ಅದಾನಿ ಅಧಿಕಾರಿಗಳಿಗೆ ಹೇಳಿದ್ದಾರೆ. ಮೆಹ್ತಾ ಅವರು ನಿರ್ದಿಷ್ಟವಾಗಿ ಅಲ್ಬುಲಾ ಇನ್​ವೆಸ್ಟ್​ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಎಸ್​ ಇನ್​ವೆಸ್ಟ್​ಮೆಂಟ್​ ಫಂಡ್​ಗೆ ಸಂಬಂಧಿಸಿದಂತೆಯೇ ಖಾತೆಯ ಕುರಿತು ತಿಳಿಸಿದ್ದಾರೆ. ಈ ಮೂರೂ ಫಂಡ್​ಗಳು ಸೇರಿ ಅದಾನಿ ಎಂಟರ್​ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟ್ರಾನ್ಸ್​ಮಿಷನ್ ಮತ್ತು ಅದಾನಿ ಟೋಟಲ್ ಗ್ಯಾಸ್ ಇವೆಲ್ಲವೂ ಸೇರಿ ರೂ. 43,500 ಕೋಟಿಗೂ ಹೆಚ್ಚು ಮೌಲ್ಯದ ಷೇರು ಹೊಂದಿದೆ.

ಮನಿಕಂಟ್ರೋಲ್​ನಿಂದ ಮೇಲ್​ಗಳ ವಿನಿಮಯವನ್ನು ಪರಿಶೀಲಿಸಲಾಗಿದೆ ಎನ್ನಲಾಗಿದೆ. ಎನ್​ಎಸ್​ಡಿಎಲ್​ ವೆಬ್​ಸೈಟ್​ನಲ್ಲಿ ಈಗಲೂ ಈ ಮೂರು ವಿದೇಶೀ ಪೋರ್ಟ್​ಫೋಲಿಯೋ ಇನ್ವೆಸ್ಟರ್ಸ್ (ಎಫ್​ಪಿಐ) ಖಾತೆಗಳು ಸ್ಥಗಿತವಾಗಿವೆ ಅಂತಲೇ ತೋರಿಸುತ್ತಿದೆ. ಆದರೆ ಈಗ ಹಳೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮವನ್ನು ಕೈಗೊಳ್ಳಲಾಗಿದೆ, ಎಂದು ಹೆಸರು ಹೇಳಲು ಇಚ್ಛಿಸದ ಎನ್​ಎಸ್​ಡಿಎಲ್ ಅಧಿಕಾರಿಗಳು ಮನಿಕಂಟ್ರೋಲ್​ಗೆ ಮಾಹಿತಿ ನೀಡಿದ್ದಾರೆ. ಎನ್​ಎಸ್​ಡಿಎಲ್​ನ ಅಧಿಕಾರಿಗಳ ಹೇಳಿಕೆಯನ್ನೇ ಉದಾಹರಿಸಿ, ರಾಯಿಟರ್ಸ್ ಸುದ್ದಿ ಸಂಸ್ಥೆ ಕೂಡ ವರದಿ ಮಾಡಿದೆ. ಎನ್​ಎಸ್​ಡಿಎಲ್​ನಿಂದ ಯಾವುದೇ ಕ್ರಮ ಕೈಗೊಳ್ಳಿಲ್ಲ ಎಂದು ಮೂಲಗಳು ರಾಯಿಟರ್ಸ್​ಗೆ ತಿಳಿಸಿವೆ.

ಮಾರುಕಟ್ಟೆ ತಜ್ಞರು ಹೇಳುವ ಪ್ರಕಾರ, ನಿಯಂತ್ರಕರು ಅಥವಾ ಡೆಪಾಸಿಟರಿಯಿಂದ ಕೆಲವು ಸಂಸ್ಥೆಗಳ ಖಾತೆಯನ್ನು ಸ್ಥಗಿತಗೊಳಿಸುವುದು ಅಂದರೆ ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲ ಷೇರುಗಳು ಅಥವಾ ವಹಿವಾಟುಗಳನ್ನು ಅಮಾನತು ಅಥವಾ ಸ್ಥಗಿತ ಮಾಡಿದಂತೆ ಅಲ್ಲ. ವಿವಿಧ ಬ್ರೋಕರೇಜ್​ಗಳನ್ನು ವ್ಯವಹಾರ ಮಾಡದಂತೆ ನಿರ್ಬಂಧಿಸಿದರೂ ಮತ್ತು ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವುದನ್ನು ನಿರ್ಬಂಧಿಸಿದ್ದರೂ ಈಗಾಗಲೇ ಇರುವ ಗ್ರಾಹಕರಿದ್ದರೂ ವ್ಯವಹಾರ ನಡೆಸುವುದಕ್ಕೆ ಬ್ರೋಕಿಂಗ್ ಪ್ಲಾಟ್​ಫಾರ್ಮ್​ ಬಳಸಬಹುದಾಗಿರುತ್ತದೆ. ಇನ್ನೂ ಮುಂದುವರಿದು ಹೇಳಬೇಕು ಅಂದರೆ, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಾಗ ನಿಯಂತ್ರಕರು ನಿರ್ಬಂಧ ಹೇರುವ ಮುನ್ನ ಷೇರು ಮಾರಾಟಕ್ಕೆ ಅವಕಾಶ ನೀಡುತ್ತಾರೆ. ಆದರೆ ಹೊಸ ಖರೀದಿಗೆ ಅವಕಾಶ ನೀಡಲ್ಲ.

ಷೇರುದಾರರ ಡಿಮ್ಯಾಟ್​ ಖಾತೆಯನ್ನು ನಿರ್ಬಂಧಿಸುವುದಕ್ಕೆ ಸೆಬಿಯಿಂದ ಸೆಬಿ ಕಾಯ್ದೆ 1992, ಸೆಕ್ಷನ್ 11 ಮತ್ತು 11Bಯಲ್ಲಿ ಅವಕಾಶ ಇದೆ. ಆದರೆ ಆ ಎರಡೂ ಸಂದರ್ಭದಲ್ಲಿ ನಿಯಂತ್ರಕರಿಂದ ಸಾರ್ವಜನಿಕ ಆದೇಶವನ್ನು ನೀಡಬೇಕು. ಸೆಬಿಯ ಸ್ವತಂತ್ರ ನಿರ್ದೇಶನಗಳು ಅಥವಾ ಸರ್ಕಾರ ಅಥವಾ ಕೋರ್ಟ್ ಆದೇಶ, ಡೆಪಾಸಿಟರಿಗಳು ತಾವಾಗಿಯೇ ಷೇರುದಾರರ ಷೇರುಗಳನ್ನು ಸ್ಥಗಿತ ಮಾಡುವುದಕ್ಕೆ ಸಾಧ್ಯವಿಲ್ಲ. ಒಂದೋ ಡೆಪಾಸಿಟರಿ ಪಾರ್ಟಿಸಿಪೆಂಟ್​ನಿಂದ ಸ್ವಯಂಪ್ರೇರಿತವಾಗಿ ಅಥವಾ ಸಾರ್ವಜನಿಕ ಆದೇಶ ಲಭ್ಯ ಇಲ್ಲದಿದ್ದಾಗ ಗ್ರಾಹಕರಿಂದ ಮನವಿ ಬಂದು ಅದರ ಮೇಲೆ ಕ್ರಮ ಕೈಗೊಳ್ಳಬೇಕು.

ಎನ್​ಎಸ್​ಡಿಎಲ್​ನಿಂದ ಅದಾನಿ ಸಮೂಹದ ಪ್ರಮುಖ ವಿದೇಶೀ ಹೂಡಿಕೆದಾರರ ಡಿಮ್ಯಾಟ್​ ಖಾತೆ ನಿರ್ಬಂಧಿಸಲಾಗಿ ಎಂದು ಸುದ್ದಿಯಾಗಿ, ಜೂನ್ 14ನೇ ತಾರೀಕಿನ ಸೋಮವಾರ ಬಿಎಸ್​ಇ ಸೆನ್ಸೆಕ್ಸ್​ನಲ್ಲಿ ಅದಾನಿ ಸಮೂಹದ ಕಂಪೆನಿಗಳಿಗೆ ಭಾರೀ ಹೊಡೆತ ಬಿತ್ತು. ಅದಾನಿ ಪೋರ್ಟ್ಸ್ ಶೇ 8.36ರಷ್ಟು, ಅದಾನಿ ಪವರ್ ಶೇ 4.99 ಸೇರಿ ಇತರ ಷೇರುಗಳು ಭಾರೀ ಇಳಿಕೆ ಕಂಡವು.

ಇದನ್ನೂ ಓದಿ: Adani group: ಎಫ್​ಪಿಐ ಫಂಡ್​ ಹೂಡಿಕೆದಾರರ ಖಾತೆಗೆ ನಿರ್ಬಂಧ ವಿಧಿಸಿರುವ ವರದಿ ನಿರಾಕರಿಸಿದ ಅದಾನಿ ಸಮೂಹ

ಇದನ್ನೂ ಓದಿ: ಷೇರುಪೇಟೆಯಲ್ಲಿ ಪತರಗುಟ್ಟಿದ ಅದಾನಿ ಕಂಪನಿಯ ಷೇರು ಬೆಲೆ; ಮೂರು ಗಂಟೆಯಲ್ಲಿ 92 ಸಾವಿರ ಕೋಟಿ ರೂ ಗಂಟು ನಷ್ಟ

ಇದನ್ನೂ ಓದಿ: Gautam Adani: 2021ರಲ್ಲಿ 3 ಲಕ್ಷ ಕೋಟಿ ರೂ.ಗೂ ಹೆಚ್ಚಾಯಿತು ಅದಾನಿ ಆಸ್ತಿ; ಇದು ಅಪಾಯದ ಅದೃಷ್ಟ ಎನ್ನುತ್ತಾರೆ ವಿಶ್ಲೇಷಕರು

(NSDL clarified that, it has not frozen any foreign funds accounts which are invested in Adani group companies)

Click on your DTH Provider to Add TV9 Kannada