ಆನ್ಲೈನ್ ಶಾಪಿಂಗ್ ಮಾಡುವಾಗ ಈ ಟಿಪ್ಸ್ ಪಾಲಿಸಿದ್ರೆ ದುಡ್ಡು ಉಳಿಯುತ್ತೆ

ಶಾಪಿಂಗ್ ಅಂದ್ರೆ ಎಲ್ಲರಿಗೂ ಇಷ್ಟನೇ. ಆದರೆ ತಮಗೆ ಬೇಕಾದ ವಸ್ತುಗಳನ್ನು ಆನ್ಲೈನ್ ನಲ್ಲಿ ಖರೀದಿಸುವ ಭರದಲ್ಲಿ ದುಡ್ಡು ಅಕೌಂಟ್ ನಲ್ಲಿ ಖಾಲಿಯಾದದ್ದೇ ತಿಳಿಯಲ್ಲ. ಆದರೆ ನೀವೇನಾದ್ರೂ ಆನ್ಲೈನ್ ಶಾಪಿಂಗ್ ಮಾಡುತ್ತಿದ್ದರೆ ಮೊದಲಿಗೆ ಪ್ರೋಮೋ ಕೋಡ್‌ಗಳು, ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು, ಡಿಸ್ಕೌಂಟ್ ಆಫರ್ ಗಳತ್ತ ಗಮನ ಹರಿಸುವುದು ಉತ್ತಮ. ಇದರಿಂದ ನೀವು ಹಣವನ್ನು ಸ್ವಲ್ಪ ಮಟ್ಟಿಗೆ ಉಳಿಸಬಹುದು.

ಆನ್ಲೈನ್ ಶಾಪಿಂಗ್ ಮಾಡುವಾಗ ಈ ಟಿಪ್ಸ್ ಪಾಲಿಸಿದ್ರೆ ದುಡ್ಡು ಉಳಿಯುತ್ತೆ
ಸಾಂದರ್ಭಿಕ ಚಿತ್ರ
Image Credit source: depositphotos.com

Updated on: Nov 08, 2026 | 5:17 PM

ಮುಖ್ಯಾಂಶಗಳು

  • ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಟ್ರೆಂಡ್ ಹೆಚ್ಚಾಗಿದೆ
  • ಬಹುತೇಕ ಎಲ್ಲಾ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುತ್ತಾರೆ
  • ಆನ್‌ಲೈನ್‌ ಶಾಪಿಂಗ್‌ ವೇಳೆ ಈ ಟ್ರಿಪ್ಸ್‌ ಪಾಲಿಸಿದ್ರೆ ಹಣ ಹೆಚ್ಚು ಖರ್ಚಾಗುವುದು ಉಳಿಯುತ್ತದೆ

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ (Online Shopping) ಟ್ರೆಂಡ್ ಹೆಚ್ಚಾಗಿದೆ. ದಿನಬಳಕೆಯ ವಸ್ತುಗಳಿಂದ ಹಿಡಿದು ಅಗತ್ಯ ವಸ್ತುಗಳ ಖರೀದಿಗೂ ಆನ್ಲೈನ್ ನನ್ನೇ ಅವಲಂಬಿಸಿಕೊಂಡವರು ಹೆಚ್ಚು. ಆದರೆ ಶಾಪಿಂಗ್ ಮಾಡುವ ಗೀಳಿಗೆ ಬೇಕಾಬಿಟ್ಟಿ ಹಣವನ್ನು ಖರ್ಚು ಮಾಡ್ಬೇಡಿ. ಒಂದು ವೇಳೆ ನಿಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡ್ತೀರಿ ಅಂತಾದ್ರೆ ಈ ಸಲಹೆಗಳನ್ನು ಪಾಲಿಸಿ, ಇದರಿಂದ ನಿಮ್ಮ ಹಣ ಉಳಿಯುತ್ತದೆ.

ಆನ್‌ಲೈನ್‌ ಶಾಪಿಂಗ್‌ ವೇಳೆ ಈ ಸಲಹೆ ಪಾಲಿಸಿ

ಬೆಲೆಗಳನ್ನು ಹೋಲಿಕೆ ಮಾಡಿ: ನೀವು ಆನ್ಲೈನ್ ನಲ್ಲಿ ಯಾವುದೇ ವಸ್ತು ಖರೀದಿಸುತ್ತೀರಿ ಅಂತಾದ್ರೆ ಬೇರೆ ಬೇರೆ ವೆಬ್ಸೈಟ್ ಗಳಲ್ಲಿ ಆ ವಸ್ತುವಿನ ಬೆಲೆ ಬಗ್ಗೆ ತಿಳಿದುಕೊಳ್ಳಿ. ಎಲ್ಲಿ ಕಡಿಮೆ ಇದೆಯೋ ಅಲ್ಲಿ ಖರೀದಿ ಮಾಡುವುದು ಉತ್ತಮ.

Loading...

ಕಾರ್ಟ್ ನಲ್ಲಿ ವಸ್ತುಗಳನ್ನು ಇರಿಸಿ: ನಿಮ್ಗೆ ಇಷ್ಟವಾದ ವಸ್ತುಗಳನ್ನು ಕಾರ್ಟ್ ಗೆ ಸೇರಿಸಿ. ಸೀಸನಲ್ ಡಿಸ್ಕೌಂಟ್ ಇದ್ದಾಗ ಖರೀದಿಸಿ ಮಾಡಿ.

ರೇಟಿಂಗ್ಸ್ ಹಾಗೂ ವಿಮರ್ಶೆ ಚೆಕ್ ಮಾಡಿ: ಯಾವುದೇ ವಸ್ತುವನ್ನು ಆನ್ಲೈನ್ ನಲ್ಲಿ ಖರೀದಿ ಮಾಡುವ ಮುನ್ನ ಕೆಳಗಿರುವ ಕಸ್ಟಮರ್ ರಿವ್ಯೂಸ್ ಹಾಗೂ ರೇಟಿಂಗ್ಸ್‌ನ್ನು ತಪ್ಪದೇ ಓದಿ. ಈ ರಿವ್ಯೂ ನೋಡಿದ ಬಳಿಕವೇ ವಸ್ತು ಖರೀದಿಸುವುದು ಉತ್ತಮ.

ರಿಟರ್ನ್ ಹಾಗೂ ರಿಫಂಡ್ ಆಯ್ಕೆ ಇದೆಯೇ ತಿಳಿದುಕೊಳ್ಳಿ: ಆನ್ಲೈನ್ ನಲ್ಲಿ ನೋಡಿದ ವಸ್ತುಗಳು ನಿಮ್ಮ ಕೈ ತಲುಪಿದ ಬಳಿಕ ಇಷ್ಟವಾಗಬೇಕಾಗಿಲ್ಲ. ವಸ್ತು ಇಷ್ಟವಾಗದಿದ್ದರೆ, ಅದನ್ನು ವಾಪಸ್ ಮಾಡಬಹುದು. ಈ ಆಯ್ಕೆ ಬಗ್ಗೆ ಮೊದಲು ತಿಳಿದುಕೊಳ್ಳಿ.

ಡಿಸ್ಕೌಂಟ್ ಕೂಪನ್‌: ನೀವು ಆನ್ಲೈನ್ ನಲ್ಲಿ ವಸ್ತುಗಳನ್ನು ಖರೀದಿ ಮಾಡುವ ಮೊದಲು ಡಿಸ್ಕೌಂಟ್ ಕೂಪನ್‌ಗಳು ಅಥವಾ ಬ್ಯಾಂಕ್ ಆಫರ್‌ಗಳಿವೆ ಎಂದು ಚೆಕ್ ಮಾಡಿ, ಇದು ನಿಮ್ಮ ಹಣವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಇದನ್ನೂ ಓದಿ: ಬಿನಾನ್ಸ್ ಕ್ರಿಪ್ಟೋ ಕನ್ನ; ಉತ್ತರಕೊರಿಯನ್ ತಂಡದ ಮೇಲೆ ಶಂಕೆ; ಹ್ಯಾಕರ್​ಗಳಿಂದ ಬಹಳ ಸಂಯೋಜಿತ ದಾಳಿ ಸಾಧ್ಯವಾಗಿದ್ದು ಹೀಗೆ…

ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿ: ಹೊಸ ಅಥವಾ ಅಪರಿಚಿತ ವೆಬ್‌ಸೈಟ್‌ಗಳಲ್ಲಿ ಶಾಪಿಂಗ್ ಮಾಡುವಾಗ ಸಾಧ್ಯವಾದಷ್ಟು ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಳ್ಳಿ. ವಸ್ತು ನಿಮ್ಮ ಕೈ ಸೇರಿದ ಬಳಿಕ ನೀವು ಹಣ ಪಾವತಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us