ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ (Sensex) ಹಾಗೂ ನಿಫ್ಟಿ (Nifty-50) ಬುಧವಾರ (ಆಗಸ್ಟ್ 4, 2021) ಕೂಡ ಏರಿಕೆಯ ಓಟವನ್ನು ಮುಂದುವರಿಸಿವೆ. ನಿಫ್ಟಿ-50 ಸೂಚ್ಯಂಕವು ಬೆಳಗ್ಗೆ ಈ ವರದಿ ಬರೆಯುವ ಹೊತ್ತಿಗೆ 150.90 ಪಾಯಿಂಟ್ಸ್ ಅಥವಾ ಶೇ 0.94ರಷ್ಟು ಮೇಲೇರಿ 16,281.65 ಪಾಯಿಂಟ್ಸ್ನೊಂದಿಗೆ ವ್ಯವಹಾರ ನಡೆಸುತ್ತಿತ್ತು. ಇನ್ನು ಬಿಎಸ್ಇ ಸೆನ್ಸೆಕ್ಸ್ 581.92 ಪಾಯಿಂಟ್ಸ್ ಅಥವಾ ಶೇ 1.08ರಷ್ಟು ಹೆಚ್ಚಳವಾಗಿ 54,405.28 ಪಾಯಿಂಟ್ಸ್ನೊಂದಿಗೆ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ ಬ್ಯಾಂಕ್ 621.85 ಪಾಯಿಂಟ್ಸ್ ಹೆಚ್ಚಳವಾಗಿ, 35,829.30 ಪಾಯಿಂಟ್ಸ್ನಲ್ಲಿತ್ತು. ಈಕ್ವಿಟಿ ಮಾರ್ಕೆಟ್ನಲ್ಲಿ ಹೂಡಿಕೆದಾರರಿಗೆ ಉತ್ಸಾಹ ಮೂಡುವಂಥ ಬೆಳವಣಿಗೆ ಆಗುತ್ತಿದ್ದರೆ ಅಮೆರಿಕದ ಡಾಲರ್ ವಿರುದ್ಧ ರೂಪಾಯಿ 13 ಪೈಸೆ ಗಳಿಕೆ ಕಂಡು, 74.15ರೊಂದಿಗೆ ವ್ಯವಹಾರ ಆರಂಭಿಸಿತು. ಮಂಗಳವಾರ ದಿನದ ಕೊನೆಗೆ 74.28 ಇತ್ತು. ಅದೇ ಸೋಮವಾರದ ಕೊನೆಗೆ 74.34ರಲ್ಲಿ ವ್ಯವಹಾರ ಮುಗಿಸಿತ್ತು.
ಸೆನ್ಸೆಕ್ಸ್ ಸೂಚ್ಯಂಕವು ಮಂಗಳವಾರದ ಕೊನೆಗೆ 53,823.36 ಪಾಯಿಂಟ್ಸ್ನೊಂದಿಗೆ ದಿನಾಂತ್ಯ ಕಂಡಿತ್ತು. ಬುಧವಾರ ಬೆಳಗ್ಗೆ 54,071 ಪಾಯಿಂಟ್ಸ್ನೊಂದಿಗೆ ವಹಿವಾಟು ಶುರು ಮಾಡಿ, ಇಂಟ್ರಾಡೇನಲ್ಲಿ ಸಾರ್ವಕಾಲಿಕ ಗರಿಷ್ಠ ಎತ್ತರವಾದ 54,440.80 ಪಾಯಿಂಟ್ಸ್ ದಾಖಲು ಮಾಡಿದೆ. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 54 ಸಾವಿರ ಪಾಯಿಂಟ್ಸ್ ಗಡಿ ದಾಟಿದೆ. ಇನ್ನು ನಿಫ್ಟಿ- 50 ಮಂಗಳವಾರ 16 ಸಾವಿರ ಪಾಯಿಂಟ್ಸ್ ಗಡಿ ದಾಟಿ ಹೊಸ ದಾಖಲೆಯನ್ನು ಬರೆದಿತ್ತು. ಮಂಗಳವಾರ ದಿನಾಂತ್ಯಕ್ಕೆ 16,130.75 ಪಾಯಿಂಟ್ಸ್ನೊಂದಿಗೆ ವ್ಯವಹಾರ ಮುಗಿಸಿದ್ದ ನಿಫ್ಟಿ, ಬುಧವಾರ ಬೆಳಗ್ಗೆ 16,195.25 ಪಾಯಿಂಟ್ಸ್ನೊಂದಿಗೆ ಶುರು ಮಾಡಿತು ಹಾಗೂ ದಿನದ ಹಾಗೂ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 16,288.15 ಪಾಯಿಂಟ್ಸ್ ಅನ್ನು ಮುಟ್ಟಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಎಚ್ಡಿಎಫ್ಸಿ ಶೇ 4.08
ಐಸಿಐಸಿಐ ಬ್ಯಾಂಕ್ ಶೇ 2.86
ಕೊಟಕ್ ಮಹೀಂದ್ರಾ ಶೇ 2.28
ಆಕ್ಸಿಸ್ ಬ್ಯಾಂಕ್ ಶೇ 1.92
ಎಚ್ಡಿಎಫ್ಸಿ ಬ್ಯಾಂಕ್ ಶೇ 1.83
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -1.39
ಟೈಟನ್ ಕಂಪೆನಿ ಶೇ -0.95
ಸನ್ ಫಾರ್ಮಾ ಶೇ -0.80
ಟೆಕ್ ಮಹೀಂದ್ರಾ ಶೇ -0.68
ಒಎನ್ಜಿಸಿ ಶೇ -0.68
ಇದನ್ನೂ ಓದಿ: Stock Market Expert Tips: ಷೇರು ಮಾರ್ಕೆಟ್ನಲ್ಲಿ ಬದಲಾವಣೆ ಗುರುತಿಸಿ ಲಾಭ ಮಾಡೋದು ಹೇಗೆ ಅನ್ನೋದನ್ನು ನಿತಿನ್ ಹೇಳ್ತಾರೆ
ಇದನ್ನೂ ಓದಿ: Investments In IPO: ಬ್ಯಾಂಕ್ಗಳಿಂದ ಐಪಿಒಗಳ ಮೇಲಿನ ಹೂಡಿಕೆ 4 ವರ್ಷಗಳ ಗರಿಷ್ಠ ಮಟ್ಟಕ್ಕೆ
(Opening Bell: Nifty Gains More Than 150 Points And Sensex Crosses 54000 Points In Early Session Of Trading)
Published On - 11:03 am, Wed, 4 August 21