AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Job Recruitment: 2021ರಲ್ಲಿ ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬ ಜಾಹೀರಾತಿನ ಸತ್ಯಾಂಶ ಏನು?

2021ರಲ್ಲಿ ಪದವಿ ಮುಗಿಸಿದವರು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬ ಜಾಹೀರಾತು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಜಾಹೀರಾತು ನೀಡಿದ್ದ ಎಚ್​ಡಿಎಫ್​ಸಿ ಈಗ ಸ್ಪಷ್ಟನೆ ನೀಡುವಂತಾಗಿದೆ.

Job Recruitment: 2021ರಲ್ಲಿ ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬ ಜಾಹೀರಾತಿನ ಸತ್ಯಾಂಶ ಏನು?
ಎಚ್​ಡಿಎಫ್​ಸಿ ಉದ್ಯೋಗ ನೇಮಕಾತಿ ಜಾಹೀರಾತು
TV9 Web
| Edited By: |

Updated on:Aug 04, 2021 | 12:56 PM

Share

ಉದ್ಯೋಗ ನೇಮಕಾತಿ ಅಧಿಸೂಚನೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಓಹ್ ಆ ಕೆಲಸಕ್ಕೆ ಅಷ್ಟೊಂದು ಸಂಬಳವಾ ಅಥವಾ ಅಷ್ಟೊಂದು ಡಿಮ್ಯಾಂಡಾ ಅಂತೆಲ್ಲ ಅಂದುಕೊಳ್ಳಬೇಡಿ. ಜತೆಗೆ ಈ ವರದಿಯಲ್ಲಿ ಟ್ವಿಸ್ಟ್​ ಸಹ ಇದೆ. ಎಚ್​ಡಿಎಫ್​ಸಿ ಗೊತ್ತಲ್ಲಾ? ಅದರಿಂದ ಉದ್ಯೋಗ ನೇಮಕಾತಿಯ ಸುತ್ತೋಲೆ ಹೊರಡಿಸಲಾಗಿದ್ದು, 2021ರಲ್ಲಿ ತೇರ್ಗಡೆಯಾದ ಪದವೀಧರರು ಈ ಉದ್ಯೋಗಕ್ಕೆ ಅರ್ಜಿ ಹಾಕಿಕೊಳ್ಳಲು ಅರ್ಹರಲ್ಲ ಎಂಬ ಒಕ್ಕಣೆ ಇದ್ದು, ಅದೀಗ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಗಿರಕಿ ಹೊಡೆಯುತ್ತಿದೆ. ದೇಶದ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್​ ಆದ ಎಚ್​ಡಿಎಫ್​ಸಿಯಿಂದ ಸ್ಪಷ್ಟನೆ ನೀಡುವಂಥ ಸ್ಥಿತಿ ಬಂದಿದೆ. “ಟೈಪ್ ಮಾಡುವಾಗ ಆಗಿರುವಂಥ ತಪ್ಪಿದು. ಅದಕ್ಕಾಗಿ ವಿಷಾದಿಸುತ್ತೇವೆ,” ಎಂದು ಎಚ್​ಡಿಎಫ್​ಸಿ ವಕ್ತಾರರು ಟ್ವಿಟ್ಟರ್ ಬಳಕೆದಾರರೊಬ್ಬರಿಗೆ ಆಗಸ್ಟ್​ 3ನೇ ತಾರೀಕಿನಂದು ಪ್ರತಿಕ್ರಿಯಿಸಿದ್ದಾರೆ.

ಆ ವಕ್ತಾರರು ಇನ್ನೂ ಮುಂದುವರಿದು, ವಯೋಮಿತಿಯ ಮಾನದಂಡವನ್ನು ಪೂರ್ತಿಗೊಳಿಸುವುದಾದರೆ ಯಾವುದೇ ವರ್ಷ ಪದವಿ ಪಡೆದಂಥವರು ಸಹ ಅರ್ಜಿ ಹಾಕಿಕೊಳ್ಳಬಹುದು ಎಂದು ಸಹ ಹೇಳಿದ್ದಾರೆ. ಮದುರೈನಲ್ಲಿ 28 ವರ್ಷದೊಳಗಿನವರನ್ನು ವಾಕ್-ಇನ್ ಸಂದರ್ಶನಕ್ಕಾಗಿ ಕರೆದಂಥ ನಿಯತಕಾಲಿಕೆ ಜಾಹೀರಾತಿನಲ್ಲಿ ಈ ಅಂಶ ಒಳಗೊಂಡಿದೆ. “ನಾವು ಈಗಾಗಲೇ ಸರಿಯಾದ ಜಾಹೀರಾತನ್ನು ಇಲ್ಲಿ ಹಂಚಿಕೊಂಡಿದ್ದೇವೆ,” ಎಂದು ಎಚ್​ಡಿಎಫ್​ಸಿಯಿಂದ ಹೇಳಲಾಗಿದೆ. ಆದರೆ ಈ ಸ್ಪಷ್ಟನೆ ನೀಡುವ ಹೊತ್ತಿಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಈ ಜಾಬ್ ಅಡ್ವರ್ಟೈಸ್​ಮೆಂಟ್ ಸಿಕ್ಕಾಪಟ್ಟೆ ಸದ್ದು ಮಾಡಿಯಾಗಿತ್ತು.

ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2020-21ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ನೇರವಾಗಿ ಶಿಕ್ಷಣ ಪಡೆಯಲು ಸಾಧ್ಯವಾಗಿಯೇ ಇಲ್ಲ. ಪರೀಕ್ಷೆಗಳು ಸರಿಯಾಗಿ ನಡೆದಿಲ್ಲ. ಮತ್ತೆ ಕೆಲವು ಕಡೆ ಪಠ್ಯಕ್ರಮದ ಪ್ರಮಾಣವನ್ನೇ ಇಳಿಕೆ ಮಾಡಿ, ಪರೀಕ್ಷೆಗಳನ್ನು ನಡೆಸಿ, ಪಾಸ್ ಮಾಡಲಾಗಿದೆ. ಈ ಪರೀಕ್ಷೆ ಹಾಗೂ ಪಾಸ್ ಮಾಡುವ ವಿಧಾನದ ಬಗ್ಗೆಯೇ ಗೇಲಿ, ತಮಾಷೆ ಹಾಗೂ ಲೇವಡಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್​ಡಿಎಫ್​ಸಿಯ ಉದ್ಯೋಗ ನೇಮಕಾತಿ ಸುತ್ತೋಲೆಯನ್ನು ನೋಡಿದಾಗ, ಮತ್ತೂ ಹೆಚ್ಚಿನ ಚರ್ಚೆಗೆ ಹಾದಿ ಮಾಡಿಕೊಟ್ಟಿದೆ.

ಇದನ್ನೂ ಓದಿ: HDFC Bank: 2013ರಿಂದ 2020ರ ಮಧ್ಯೆ ಎಚ್​ಡಿಎಫ್​ಸಿ ಬ್ಯಾಂಕ್ ವಾಹನ ಸಾಲ ಪಡೆದವರಿಗೆ ಒಂದಿಷ್ಟು ಹಣ ರೀಫಂಡ್; ಯಾರಿಗೆ?

(2021 Passed Out Candidates Are Not Eligible Goes Viral On Social Media Here Is The Clarification By HDFC)

Published On - 12:55 pm, Wed, 4 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ