AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market LIVE: ನಿಫ್ಟಿ 150 ಪಾಯಿಂಟ್ಸ್​ಗೂ ಹೆಚ್ಚು ಏರಿಕೆ, 54 ಸಾವಿರ ಪಾಯಿಂಟ್ಸ್ ಗಡಿ ದಾಟಿದ ಸೆನ್ಸೆಕ್ಸ್

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಮತ್ತೊಮ್ಮೆ ಹೊಸ ಎತ್ತರಕ್ಕೆ ಏರಿ ದಾಖಲೆ ಬರೆದಿವೆ. ಆಗಸ್ಟ್​ 4ರಂದು ಭರ್ಜರಿ ಗಳಿಕೆ ದಾಖಲಿಸಿವೆ.

Stock Market LIVE: ನಿಫ್ಟಿ 150 ಪಾಯಿಂಟ್ಸ್​ಗೂ ಹೆಚ್ಚು ಏರಿಕೆ, 54 ಸಾವಿರ ಪಾಯಿಂಟ್ಸ್ ಗಡಿ ದಾಟಿದ ಸೆನ್ಸೆಕ್ಸ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Aug 04, 2021 | 11:04 AM

Share

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ (Sensex) ಹಾಗೂ ನಿಫ್ಟಿ (Nifty-50) ಬುಧವಾರ (ಆಗಸ್ಟ್ 4, 2021) ಕೂಡ ಏರಿಕೆಯ ಓಟವನ್ನು ಮುಂದುವರಿಸಿವೆ. ನಿಫ್ಟಿ-50 ಸೂಚ್ಯಂಕವು ಬೆಳಗ್ಗೆ ಈ ವರದಿ ಬರೆಯುವ ಹೊತ್ತಿಗೆ 150.90 ಪಾಯಿಂಟ್ಸ್ ಅಥವಾ ಶೇ 0.94ರಷ್ಟು ಮೇಲೇರಿ 16,281.65 ಪಾಯಿಂಟ್ಸ್​ನೊಂದಿಗೆ ವ್ಯವಹಾರ ನಡೆಸುತ್ತಿತ್ತು. ಇನ್ನು ಬಿಎಸ್​ಇ ಸೆನ್ಸೆಕ್ಸ್ 581.92 ಪಾಯಿಂಟ್ಸ್ ಅಥವಾ ಶೇ 1.08ರಷ್ಟು ಹೆಚ್ಚಳವಾಗಿ 54,405.28 ಪಾಯಿಂಟ್ಸ್​ನೊಂದಿಗೆ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ ಬ್ಯಾಂಕ್ 621.85 ಪಾಯಿಂಟ್ಸ್​ ಹೆಚ್ಚಳವಾಗಿ, 35,829.30 ಪಾಯಿಂಟ್ಸ್​ನಲ್ಲಿತ್ತು. ಈಕ್ವಿಟಿ ಮಾರ್ಕೆಟ್​ನಲ್ಲಿ ಹೂಡಿಕೆದಾರರಿಗೆ ಉತ್ಸಾಹ ಮೂಡುವಂಥ ಬೆಳವಣಿಗೆ ಆಗುತ್ತಿದ್ದರೆ ಅಮೆರಿಕದ ಡಾಲರ್​ ವಿರುದ್ಧ ರೂಪಾಯಿ 13 ಪೈಸೆ ಗಳಿಕೆ ಕಂಡು, 74.15ರೊಂದಿಗೆ ವ್ಯವಹಾರ ಆರಂಭಿಸಿತು. ಮಂಗಳವಾರ ದಿನದ ಕೊನೆಗೆ 74.28 ಇತ್ತು. ಅದೇ ಸೋಮವಾರದ ಕೊನೆಗೆ 74.34ರಲ್ಲಿ ವ್ಯವಹಾರ ಮುಗಿಸಿತ್ತು.

ಸೆನ್ಸೆಕ್ಸ್ ಸೂಚ್ಯಂಕವು ಮಂಗಳವಾರದ ಕೊನೆಗೆ 53,823.36 ಪಾಯಿಂಟ್ಸ್​ನೊಂದಿಗೆ ದಿನಾಂತ್ಯ ಕಂಡಿತ್ತು. ಬುಧವಾರ ಬೆಳಗ್ಗೆ 54,071 ಪಾಯಿಂಟ್ಸ್​ನೊಂದಿಗೆ ವಹಿವಾಟು ಶುರು ಮಾಡಿ, ಇಂಟ್ರಾಡೇನಲ್ಲಿ ಸಾರ್ವಕಾಲಿಕ ಗರಿಷ್ಠ ಎತ್ತರವಾದ 54,440.80 ಪಾಯಿಂಟ್ಸ್ ದಾಖಲು ಮಾಡಿದೆ. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 54 ಸಾವಿರ ಪಾಯಿಂಟ್ಸ್ ಗಡಿ ದಾಟಿದೆ. ಇನ್ನು ನಿಫ್ಟಿ- 50 ಮಂಗಳವಾರ 16 ಸಾವಿರ ಪಾಯಿಂಟ್ಸ್ ಗಡಿ ದಾಟಿ ಹೊಸ ದಾಖಲೆಯನ್ನು ಬರೆದಿತ್ತು. ಮಂಗಳವಾರ ದಿನಾಂತ್ಯಕ್ಕೆ 16,130.75 ಪಾಯಿಂಟ್ಸ್​ನೊಂದಿಗೆ ವ್ಯವಹಾರ ಮುಗಿಸಿದ್ದ ನಿಫ್ಟಿ, ಬುಧವಾರ ಬೆಳಗ್ಗೆ 16,195.25 ಪಾಯಿಂಟ್ಸ್​ನೊಂದಿಗೆ ಶುರು ಮಾಡಿತು ಹಾಗೂ ದಿನದ ಹಾಗೂ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 16,288.15 ಪಾಯಿಂಟ್ಸ್​ ಅನ್ನು ಮುಟ್ಟಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಎಚ್​ಡಿಎಫ್​ಸಿ ಶೇ 4.08 ಐಸಿಐಸಿಐ ಬ್ಯಾಂಕ್ ಶೇ 2.86 ಕೊಟಕ್ ಮಹೀಂದ್ರಾ ಶೇ 2.28 ಆಕ್ಸಿಸ್ ಬ್ಯಾಂಕ್ ಶೇ 1.92 ಎಚ್​ಡಿಎಫ್​ಸಿ ಬ್ಯಾಂಕ್ ಶೇ 1.83

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -1.39 ಟೈಟನ್ ಕಂಪೆನಿ ಶೇ -0.95 ಸನ್​ ಫಾರ್ಮಾ ಶೇ -0.80 ಟೆಕ್ ಮಹೀಂದ್ರಾ ಶೇ -0.68 ಒಎನ್​ಜಿಸಿ ಶೇ -0.68

ಇದನ್ನೂ ಓದಿ: Stock Market Expert Tips: ಷೇರು ಮಾರ್ಕೆಟ್​ನಲ್ಲಿ ಬದಲಾವಣೆ ಗುರುತಿಸಿ ಲಾಭ ಮಾಡೋದು ಹೇಗೆ ಅನ್ನೋದನ್ನು ನಿತಿನ್ ಹೇಳ್ತಾರೆ

ಇದನ್ನೂ ಓದಿ: Investments In IPO: ಬ್ಯಾಂಕ್​ಗಳಿಂದ ಐಪಿಒಗಳ ಮೇಲಿನ ಹೂಡಿಕೆ 4 ವರ್ಷಗಳ ಗರಿಷ್ಠ ಮಟ್ಟಕ್ಕೆ

(Opening Bell: Nifty Gains More Than 150 Points And Sensex Crosses 54000 Points In Early Session Of Trading)

Published On - 11:03 am, Wed, 4 August 21

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ