ಅಪ್ರಾಪ್ತ ವಯಸ್ಕರು ಪ್ಯಾನ್ ಕಾರ್ಡ್ ಹೊಂದಿದ್ರೆ 18 ವರ್ಷ ತುಂಬಿದ ಕೂಡ್ಲೇ ಈ ಕೆಲ್ಸ ಮೊದ್ಲು ಮಾಡಿ

ಬ್ಯಾಂಕ್ ಅಕೌಂಟ್ ತೆರೆಯಲು, ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಹಾಗೂ ಆರ್ಥಿಕ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯ. ಆದರೆ ಅಪ್ರಾಪ್ತ ವಯಸ್ಕರು ಕೂಡ ತಮ್ಮ ಹೆಸರಿನಲ್ಲಿ ಹೂಡಿಕೆ ಅಥವಾ ಆಸ್ತಿ ಹೊಂದಿದ್ದರೆ ಪ್ಯಾನ್ ಕಾರ್ಡ್‌ಗೆ ಹೊಂದಬಹುದು. ಒಂದು ವೇಳೆ ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದ್ದರೆ ವಯಸ್ಸು 18 ತುಂಬಿದರೆ ಈ ದಾಖಲೆಯಲ್ಲಿ ತಮ್ಮ ಫೋಟೋ ಹಾಗೂ ಸಹಿಯನ್ನು ನವೀಕರಿಸಬೇಕು. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಪ್ರಾಪ್ತ ವಯಸ್ಕರು ಪ್ಯಾನ್ ಕಾರ್ಡ್ ಹೊಂದಿದ್ರೆ 18 ವರ್ಷ ತುಂಬಿದ ಕೂಡ್ಲೇ ಈ ಕೆಲ್ಸ ಮೊದ್ಲು ಮಾಡಿ
ಪ್ಯಾನ್‌ ಕಾರ್ಡ್‌
Image Credit source: aajtak.intoday.in

Updated on: Nov 01, 2026 | 7:54 PM

ಮುಖ್ಯಾಂಶಗಳು

  • ಪ್ಯಾನ್‌ ಕಾರ್ಡ್‌ ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಡುವ 10 ಅಕ್ಷರಗಳ ವಿಶಿಷ್ಟ ಗುರುತಿನ ಸಂಖ್ಯೆ
  • ಹಣಕಾಸಿನ ವಹಿವಾಟು, ತೆರಿಗೆ ಪಾವತಿ ಮತ್ತು ಬ್ಯಾಂಕ್ ಖಾತೆ ತೆರೆಯಲು ಈ ದಾಖಲೆ ಅಗತ್ಯ
  • ಅಪ್ರಾಪ್ತ ವಯಸ್ಕರು ವಯಸ್ಸು 18 ವರ್ಷ ತುಂಬಿದ ಕೂಡ್ಲೇ ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡುವುದು ಕಡ್ಡಾಯ

ಪ್ಯಾನ್ ಕಾರ್ಡ್ (Pan Card) ಅಥವಾ ಶಾಶ್ವತ ಖಾತೆ ಸಂಖ್ಯೆ ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಡುವ 10 ಅಕ್ಷರಗಳ ವಿಶಿಷ್ಟ ಗುರುತಿನ ಸಂಖ್ಯೆ ಇದು. ಅಪ್ರಾಪ್ತ ವಯಸ್ಕರು ಪ್ಯಾನ್ ಕಾರ್ಡ್ ಹೊಂದಿದ್ದರೆ 18 ವರ್ಷ ತುಂಬಿದ ಬಳಿಕ ಅಪ್ಡೇಟ್ ಮಾಡುವುದು ಕಡ್ಡಾಯ. ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆದರೆ ಈ ಪ್ಯಾನ್ ಕಾರ್ಡ್ ನಲ್ಲಿ ಫೋಟೋ, ಸಹಿ ಸೇರಿದಂತೆ ಅಗತ್ಯ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ.

ಪ್ಯಾನ್ ಕಾರ್ಡ್ ಅಪ್ಡೇಟ್‌ಗೆ ಈ ದಾಖಲೆಗಳು ಅಗತ್ಯ

  •  ಗುರುತಿನ ಮತ್ತು ವಿಳಾಸದ ಪುರಾವೆಯಾದ ಆಧಾರ್ ಕಾರ್ಡ್
  • ಫೋಟೋ ಹಾಗೂ ಸಹಿ: ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ ಮತ್ತು ಬಿಳಿ ಕಾಗದದ ಮೇಲೆ ಮಾಡಿದ ಸಹಿ

ಅಪ್ರಾಪ್ತ ವಯಸ್ಕರ ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ?

ಹಂತ 1: ಪ್ಯಾನ್‌ ಕಾರ್ಡ್‌ನಲ್ಲಿ ವಿವರಗಳನ್ನು ತಿದ್ದುಪಡಿ ಮಾಡಲು ಅಧಿಕೃತ ‘ಪ್ರೋಟೀನ್ ಇ-ಗವ್’ ಅಥವಾ ‘ಯುಟಿಐಐಟಿಎಸ್‌ಎಲ್’ ಪೋರ್ಟಲ್‌ಗೆ ಭೇಟಿ ನೀಡಿ

ಹಂತ 2: ಈ ಸೈಟ್ ನ ಮುಖಪುಟದಲ್ಲಿ ಕಾಣುವ ‘ಪ್ಯಾನ್ ಕರೆಕ್ಷನ್’ ಅಥವಾ ತಿದ್ದುಪಡಿ ಆಯ್ಕೆಯನ್ನು ಕ್ಲಿಕ್ ಮಾಡಿ

ಹಂತ 3: ಪ್ರಸ್ತುತ ಇರುವ ಪ್ಯಾನ್ ಸಂಖ್ಯೆ ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿ.

ಹಂತ 4: ಮುಖ್ಯ ದಾಖಲೆಯಾದ ಆಧಾರ್ ಕಾರ್ಡ್, ಸ್ವಂತ ಸಹಿ ಮತ್ತು ಇತ್ತೀಚಿಗಿನ ಭಾವಚಿತ್ರವನ್ನು ಅಪ್ಲೋಡ್ ಮಾಡಿ

ಹಂತ 5: ಈ ಪ್ರಕ್ರಿಯೆ ಮುಗಿದ ನಂತರದಲ್ಲಿ ನಿಗದಿತ ಶುಲ್ಕವನ್ನು ಆನ್‌ಲೈನ್ ನಲ್ಲಿ ಪಾವತಿಸಿ ಅರ್ಜಿ ಸಲ್ಲಿಸಿ.

ಹಂತ 6: ಅರ್ಜಿ ಸಲ್ಲಿಸಿದ ಬಳಿಕ ಪರದೆಯ ಮೇಲೆ ಕಾಣುವ ಸ್ವೀಕೃತಿ ಸಂಖ್ಯೆ ನಿಮ್ಮ ಬಳಿಯಿರಲಿ. ಈ ಸಂಖ್ಯೆ ಮೂಲಕ ಅಪ್ಲಿಕೇಶನ್ ಸ್ಟೇಟಸ್ ಪರೀಕ್ಷಿಸಿ ಡೌನ್ಲೋಡ್‌ ಮಾಡಿಕೊಳ್ಳಿ.

ಇದನ್ನೂ ಓದಿ: ಯುಪಿಐ ಹೊಸ ಮೈಲಿಗಲ್ಲು; ಅಕ್ಟೋಬರ್​ನಲ್ಲಿ 1 ಲಕ್ಷ ಕೋಟಿ ರೂ ದಾಟಿದ ದೈನಂದಿನ ಸರಾಸರಿ ಪೇಮೆಂಟ್ ಮೌಲ್ಯ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಪ್ಯಾನ್‌ ಕಾರ್ಡ್ ಯಾಕೆ ಅಷ್ಟೊಂದು ಅವಶ್ಯಕ?

ಉತ್ತರ: ಹಣಕಾಸಿನ ವಹಿವಾಟು, ತೆರಿಗೆ ಪಾವತಿ ಮತ್ತು ಬ್ಯಾಂಕ್ ಖಾತೆ ತೆರೆಯಲು ಇದು ಅವಶ್ಯಕ ದಾಖಲೆಯಾಗಿದೆ.

ಪ್ರಶ್ನೆ: ಅಪ್ರಾಪ್ತ ವಯಸ್ಕರು ವಯಸ್ಸು 18 ವರ್ಷ ತುಂಬಿದ ಬಳಿಕ ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡುವುದು ಮುಖ್ಯ ಯಾಕೆ?

ಉತ್ತರ: ಮೈನರ್ ಪ್ಯಾನ್ ಕಾರ್ಡ್‌ನಲ್ಲಿ ಪೋಷಕರ ವಿವರಗಳಿರುತ್ತವೆ. ಹೀಗಾಗಿ ವಯಸ್ಕರಾದ ನಿಮ್ಮ ಸ್ವಂತ ವೈಯಕ್ತಿಕ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ.

ಪ್ರಶ್ನೆ: ಪ್ಯಾನ್‌ ಕಾರ್ಡ್ ಮರು ಪಡೆಯುವುದು ಹೇಗೆ?

ಉತ್ತರ: ಪ್ಯಾನ್‌ ಕಾರ್ಡ್ ಮರು ಪಡೆಯಲು ಆದಾಯ ತೆರಿಗೆ ಇಲಾಖೆಯಲ್ಲಿ ಮರುಮುದ್ರಣಕ್ಕೆ ಅರ್ಜಿ ಸಲ್ಲಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 7:53 pm, Sun, 1 November 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us